ಶ್ರೀ ಆದಿಶಕ್ತಿ ಕನ್ನಡ ಶಾಲೆ: ಶಿಕ್ಷಕಿ ಸುಜಯಾ ಜೈನ್ ಬೀಳ್ಕೊಡುಗೆ
Team Udayavani, Jul 5, 2018, 4:33 PM IST
ಥಾಣೆ: ಶ್ರೀ ಆದಿಶಕ್ತಿ ಕನ್ನಡ ಸಂಘ ಸಂಚಾಲಿತ ಶ್ರೀ ಆದಿಶಕ್ತಿ ಕನ್ನಡ ಶಾಲೆಯಲ್ಲಿ ನಿರಂತರ ಮೂವತ್ತು ವರ್ಷಗಳಿಂದ ಸಹಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಸುಜಯಾ ಎಲ್. ಜೈನ್ ಅವರ ಬೀಳ್ಕೊಡುವ ಮತ್ತು ಸಮ್ಮಾನ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘ ಮತ್ತು ಶಾಲೆಯ ಅಧ್ಯಕ್ಷ ಭಾಸ್ಕರ ಎಂ. ಶೆಟ್ಟಿ ಅವರು, ಜಗತ್ತಿನಲ್ಲಿಯೇ ಶಿಕ್ಷಕರ ಸ್ಥಾನಮಾನ ಅತ್ಯಂತ ಪವಿತ್ರವಾದುದು. ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕ ರನ್ನಾಗಿ ರೂಪಿಸುವ ಮಹತ್ವದ ಹೊಣೆ ಗಾರಿಕೆಯನ್ನು ಸುಜಯಾ ಎಲ್. ಜೈನ್ ಅವರು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ವಿದ್ಯಾರ್ಥಿಗಳ ಏಳ್ಗೆಗಾಗಿ ಮುಡುಪಾಗಿಟ್ಟ ಅವರ ಸೇವೆಯನ್ನು ವಿದ್ಯಾರ್ಥಿಗಳು ಮತ್ತು ಸಂಸ್ಥೆಯು ಮರೆಯಲು ಸಾಧ್ಯವಿಲ್ಲ. ಶಿಕ್ಷಣ ಸಂಸ್ಥೆಯ ಅಭಿವೃದ್ಧಿಯಲ್ಲೂ ಅವರ ಯೋಗದಾನ ಬಹಳಷ್ಟಿದೆ ಎಂದು ನುಡಿದು ಶುಭಹಾರೈಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಶಾಲೆಯ ಮಾಜಿ ಮುಖ್ಯ ಶಿಕ್ಷಕ, ಸುಜಯಾ ಎಲ್. ಜೈನ್ ಅವರ ಪತಿ, ಲೋಕನಾಥ ಜೈನ್ ಅವರು ಮಾತನಾಡಿ, ಇದೊಂದು ಅಪರೂಪದ ಶಿಕ್ಷಣ ಸಂಸ್ಥೆ. ಮಕ್ಕಳ ಅಭಿವೃದ್ಧಿಯೇ ಮುಖ್ಯ ಧ್ಯೇಯ ಎಂಬುವುದಾಗಿ ಕರ್ತವ್ಯಬದ್ಧವಾಗಿ ತನ್ನ ಶಿಕ್ಷಕ ವೃತ್ತಿಯನ್ನು ಪೂರ್ಣಗೊಳಿಸಿದ್ದಾರೆ ಎಂದು ಹೇಳಲು ನನಗೆ ಹೆಮ್ಮೆಯಾಗುತ್ತಿದೆ. ತಮಗೆ ಸಹಕರಿಸಿದ ಸಂಘದ ಎಲ್ಲ ಪದಾಧಿಕಾರಿಗಳಿಗೆ ಹಾಗೂ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಈ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಭಾಗ್ಯವಂತರು. ಇದೇ ರೀತಿ ಈ ಶಾಲೆಯು ನೂರ್ಕಾಲ ಪ್ರಸಿದ್ಧಿಯನ್ನು ಪಡೆಯಲಿ. ವಿದ್ಯಾರ್ಥಿ ಗಳು ತಂದೆ-ತಾಯಿಯ ಸೇವೆಗೈಯುವು ದರೊಂದಿಗೆ ಶಾಲೆಯ ಋಣವನ್ನು ಮರೆಯಬಾರದು ಎಂದರು.
ವೇದಿಕೆಯಲ್ಲಿ ಗೌರವ ಕಾರ್ಯದರ್ಶಿ ವಾದಿರಾಜ ಶೆಟ್ಟಿ, ಜತೆ ಕಾರ್ಯದರ್ಶಿ ಏಕನಾಥ್ ಕುಂದರ್ ಇವರು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆಗೈದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರವೀಂದ್ರ ಬಿ. ಸ್ವಾಗತಿಸಿದರು. ಪಾಲಕ-ಶಿಕ್ಷಕರ ಸಂಘಟನೆಯ ವತಿಯಿಂದ ಅಶ್ವಿನಿ ಜವಳಗಿ ಮತ್ತು ರಾಧಿಕಾ ಮಡಪ್‌ಗೊàಲ್ ಮಾತನಾಡಿದರು. ಜತೆ ಕಾರ್ಯದರ್ಶಿ ಏಕನಾಥ್ ಕುಂದರ್,. ಸಂಘದ ಸಲಹೆಗಾರ ಹಾಗೂ ಮಾಜಿ ಅಧ್ಯಕ್ಷ ಜಯರಾಮ್ ಜಿ. ಶೆಟ್ಟಿ, ಇನ್ನೋರ್ವ ಮಾಜಿ ಅಧ್ಯಕ್ಷ ಶಿಮಂತೂರು ಶಂಕರ ಶೆಟ್ಟಿ, ಸಂಘದ ಸದಸ್ಯ ಮೇಘರಾಜ್, ರಾಮನಾಥ ಐಲ್ ಮಾತನಾಡಿ ಶುಭಹಾರೈಸಿದರು. ಶಾಲಾ ಶಿಕ್ಷಕರಾದ ವೆಂಕಟರಮಣ ಶೆಣೈ, ಪ್ರಮೋದಾ ಮಾಡಾ, ಮಮತಾ ಶೆಟ್ಟಿ, ಸಂತೋಷ್ ದೊಡ್ಡಮನೆ, ಪ್ರಕಾಶ್ ಚಿಂತಾಮಣಿ, ಪುಷ್ಪಾ ಕುಂಬ್ಳೆ, ನಳಿನಿ ಶೆಟ್ಟಿ, ನಿವೃತ್ತ ಶಿಕ್ಷಕ ಶಾಲಿನಿ ಶೆಟ್ಟಿ, ಚಂದ್ರಾವತಿ ಉದ್ಯಾವರ ಇವರು ಸುಜಯಾ ಎಲ್. ಜೈನ್ ಅವರ ಸಾಧನೆಗಳನ್ನು ವಿವರಿಸಿ ಶುಭಹಾರೈಸಿದರು.
ಹಳೆವಿದ್ಯಾರ್ಥಿಗಳಾದ ಸಂಗೀತಾ ಶೆಟ್ಟಿ, ನಿಶಾ ಪೂಜಾರಿ, ಪಪ್ಪು ರಾಥೋಡ್, ಅಖೀಲ ಭಾರತ ಜೈನ ಸಂಘದ ವತಿಯಿಂದ ಸುಪ್ರೀತಾ ಹೆಗ್ಡೆ ಅವರು ಮಾತನಾಡಿ ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ಸುಜಯಾ ಎಲ್. ಜೈನ್ ಅವರನ್ನು ಶಾಲೆ, ಹಳೆ ವಿದ್ಯಾರ್ಥಿಗಳ ವತಿಯಿಂದ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು. ಜೈನ ಸಂಘ ಹಾಗೂ ಗೋಪಾಲ ಗೌಡ ಅವರ ವತಿಯಿಂದ ಗೌರವಿಸಲಾಯಿತು.
ಸಮ್ಮಾನ ಸ್ವೀಕರಿಸಿ ಮಾತನಾಡಿದ ಸುಜಯಾ ಜೈನ್ ಅವರು, ಈ ಶಾಲೆಯಲ್ಲಿ ನಿರಂತರ 30 ವರ್ಷಗಳ ಕಾಲ ಸೇವೆ ಸಲ್ಲಿಸಲು ಸಹಕರಿಸಿದ ಎಲ್ಲರಿಗೂ ಋಣಿಯಾಗಿದ್ದೇನೆ. ಸಂಘದ ಹಿಂದಿನ ಹಾಗೂ ಪ್ರಸ್ತುತ ಪದಾಧಿಕಾರಿಗಳು ಸಹಕರಿಸಿದ್ದಾರೆ. ಸಹಶಿಕ್ಷಕ -ಶಿಕ್ಷಕಿಯರ ಸಹಕಾರ ವನ್ನು, ಹಳೆವಿದ್ಯಾರ್ಥಿಗಳು, ವಿದ್ಯಾರ್ಥಿಗಳನ್ನು ನಾನು ಜೀವನದಲ್ಲಿ ಮರೆಯುವಂತಿಲ್ಲ ಎಂದರು.
ವಿವಿಧ ಶಿಕ್ಷಕರ ಸಂದೇಶಗಳನ್ನು ಮಮತಾ ಶೆಟ್ಟಿ ಅವರು ವಾಚಿಸಿದರು. ಜೈನ ಸಂಘದ ಪವನಂಜಯ, ಶಿವ ಪ್ರಕಾಶ್ ಅವರ ಸಂದೇಶವನ್ನು ವೆಂಕಟರಮಣ ಶೆಣೈ ವಾಚಿಸಿದರು. ಮಾಜಿ ಕೋಶಾಧಿಕಾರಿ ಕೇಶವ ಆಳ್ವ, ಜಯರಾಮ್ ಕೆ. ಶೆಟ್ಟಿ, ಮನೋಜ್ ಹೆಗ್ಡೆ, ಧರ್ಮನಾಥ ಪೂಜಾರಿ, ಅಜಿತ್ ಕರ್ನಂತಾಯ, ವಿದ್ಯಾರ್ಥಿಗಳು, ಪಾಲಕರು, ಪೋಷಕರು, ಸುಜಯಾ ಎಲ್. ಜೈನ್ ಅವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ಪ್ರಕಾಶ್ ಚಿಂತಾಮಣಿ ಇವರು ವಂದಿಸಿದರು. ನಳಿನಿ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Writer’s audition: ಬರಹಗಾರರಾಗುವ ನಿಮ್ಮ ಕನಸನ್ನು ನನಸಾಗಿಸಲು ಇಲ್ಲಿದೆ ಉತ್ತಮ ವೇದಿಕೆ
Malpe: ಹೊಡೆದಾಟ ಪ್ರಕರಣ: ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ
Ayodhya: ಕನ್ನಡಕದಲ್ಲಿ ರಹಸ್ಯ ಕ್ಯಾಮರಾ ಬಳಸಿ ರಾಮಮಂದಿರದ ಒಳದೃಶ್ಯಗಳ ಸೆರೆಹಿಡಿದ ಯುವಕ!
Bidar: ಗುತ್ತಿಗೆದಾರರ ಬಿಲ್ ಬಾಕಿ ಉಳಿಯಲು ಬಿಜೆಪಿ ಕಾರಣ, ಗ್ಯಾರಂಟಿಯಲ್ಲ: ಜಾರಕಿಹೊಳಿ
Jaiswal: ಚಾಂಪಿಯನ್ಸ್ ಟ್ರೋಫಿಗೆ ಯಶಸ್ವಿ ಜೈಸ್ವಾಲ್; ಇಂಗ್ಲೆಂಡ್ ಸರಣಿಯಲ್ಲೇ ಪದಾರ್ಪಣೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.