ಕಿರು ಸಭಾಗೃಹದ ಲೋಕಾರ್ಪಣೆ ಶ್ಲಾಘನೀಯ: ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ 


Team Udayavani, May 21, 2022, 12:11 PM IST

ಕಿರು ಸಭಾಗೃಹದ ಲೋಕಾರ್ಪಣೆ ಶ್ಲಾಘನೀಯ: ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ 

ಮುಂಬಯಿ: ಕಳೆದ ಇಪ್ಪತ್ತೋಂಬತ್ತು ವರ್ಷಗಳಿಂದ ಅಯ್ಯಪ್ಪ ಮಂಡಲ ಪೂಜೆಯನ್ನು ಅತೀ ವಿಜೃಂಭಣೆಯಿಂದ ಆಚರಿಸುತ್ತಾ ಬಂದಿರುವ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಐರೋಲಿಯು ನವಿಮುಂಬಯಿ ಪ್ರದೇಶದಲ್ಲಿ ಅತ್ಯಂತ ಪ್ರಚಲಿತ ವಾಗಿದೆ. ಪ್ರಸ್ತುತ ಅಧ್ಯಕ್ಷರಾಗಿರುವ ಹರೀಶ್‌ ಶೆಟ್ಟಿ ಪಡುಬಿದ್ರಿ ಅವರು ಈ ಶಿಬಿರದ ನವೀಕರಣದ ಕಾರ್ಯ ವನ್ನು ಕೈಗೆತ್ತಿಕೊಂಡು ಅದನ್ನು ಉತ್ತಮ ರೀತಿಯಲ್ಲಿ ಪೂರೈಸಿ ಎಲ್ಲ ಸೌಕರ್ಯವಿರುವ ಕಿರು ಸಭಾ ಗೃಹವನ್ನು ಲೋಕಾರ್ಪಣೆಗೊಳಿಸಿರುವುದು ನಿಜವಾಗಿಯು ಶ್ಲಾಘನೀಯ ಎಂದು ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದ ಅಧ್ಯಕ್ಷರು ಹಾಗೂ ಘನ್ಸೋಲಿ ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಹೇಳಿದರು.

ಶ್ರೀ ಅಯ್ಯಪ್ಪ ಸ್ವಾ,ಮಿ ಸೇವಾ ಸಮಿತಿ ಐರೋಲಿ ಇದರ 29 ವಾರ್ಷಿಕ ಮಹಾಸಭೆಯು ಮೇ 15ರಂದು ಬೆಳ್ಳಗ್ಗೆ 11ಕ್ಕೆ ಶ್ರೀ ಅಯ್ಯಪ್ಪ ಸಭಾಗೃಹದಲ್ಲಿ ಜರಗಿತು. ಮಹಾಸಭೆಯಲ್ಲಿ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರು ತಮ್ಮ ಮಾರ್ಗದರ್ಶನ ನೀಡುತ್ತಾ, ಹರೀಶ್‌ ಶೆಟ್ಟಿ ಪಡುಬಿದ್ರಿಯವರು ಯಾವುದೇ ಕಾರ್ಯವನ್ನು ಕೈಗೆತ್ತಿಕೊಂಡರು ಅದನ್ನು ಖಂಡಿತವಾಗಿಯು ಪೂರ್ಣ ಗೊಳಿಸುತ್ತಾರೆ ಎಂಬ ಭರವಸೆ ಎಲ್ಲರಿಗೂ ಇದೆ. ದೇವರು ಸದಾ ಹರಸಲಿ. ಮಧು ಕೋಟ್ಯಾನ್‌ರವರು ಈ ಶಿಬಿರ ಸ್ಥಾಪನೆಯಿಂದಲೂ ಅದರ ಏಳಿಗೆಗಾಗಿ ಶ್ರಮಿಸಿದವರು. ಶಿಬಿರದ ನೂತನೀಕರಣದ ವೇಳೆ ಗುತ್ತಿಗೆದಾರನಾಗಿ ಕಾರ್ಯನಿರ್ವಹಿಸಿ ಉತ್ತಮ ಕಟ್ಟಡ

ನಿರ್ಮಾಣಗೊಂಡಿರುವುದಕ್ಕೆ ಅವರಿಗೂ ಅಭಿನಂದನೆಗಳು. ಯಾವುದೇ ವ್ಯಕ್ತಿ ತಾನೊಬ್ಬನೆ ಎಲ್ಲ ಕಾರ್ಯವನ್ನು ಮಾಡಲು ಸಾಧ್ಯವಿಲ್ಲ. ಎಲ್ಲರ ಸಹಕಾರ ಪಡೆದು ಚಿತ್ತವನ್ನು ಶಾಂತವನ್ನಾಗಿಸಿ ಕಾರ್ಯಗಳನ್ನು ಕೈಗೆತ್ತಿಕೊಂಡರೆ ಅದು ಖಂಡಿತಾ ಸಫಲವಾಗುವುದು ಎಂದರು.

ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಅಧ್ಯಕ್ಷ ಹರೀಶ್‌ ಶೆಟ್ಟಿ ಪಡುಬಿದ್ರಿ ಮಾತನಾಡಿ, ಇಂದು ನನಗೆ ತುಂಬಾ ಸಂತಸವಾಗುತ್ತಿದೆ. ಕಳೆದ ಎರಡು ಅ ಕೊರೊನಾ ಸಂಕಷ್ಟದ ಕಾಲದಲ್ಲೂ ಕೂಡ ದಾನಿಗಳು ಈ ಶಿಬಿರದ ನವೀಕರಣಕ್ಕಾಗಿ ತಮ್ಮ ಶಕ್ತಿಮೀರಿ ಸಹಕರಿಸಿದ್ದಾರೆ. ನಿಜವಾಗಿಯು ಈ ಶಿಬಿರ ಶ್ರೀ ಅಯ್ಯಪ್ಪ ದೇವರ ಕೃಪೆ,ದಾನಿಗಳ ಸಂಪೂರ್ಣ ಸಹಕಾರ ಹಾಗೂ ನನ್ನ ಸಮಿತಿಯ ಸಹಯೋಗದಿಂದ ಪೂರ್ಣಗೊಂಡಿದೆ. ಭವಿಷ್ಯದಲ್ಲಿ ಈ ಸಮಿತಿಗೆ ಕಿರು ಸಭಾಗೃಹದ ಮುಖಾಂತರ ಆರ್ಥಿಕ ಸಹಾಯವಾಗಲಿದೆ. ನಾನು ಈ ಸಂದರ್ಭದಲ್ಲಿ ಸಭಾ ಭವನಕ್ಕೆ 100 ಕುರ್ಚಿಗಳ ವ್ಯವಸ್ಥೆಯನ್ನು ಕೈಗೆತ್ತಿಕೊಂಡ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿಯವರಿಗೆ, ವಧುವರರಿಗಾಗಿ ಕೊಠಡಿಯ ವ್ಯವಸ್ಥೆಯನ್ನು ಕೈಗೆತ್ತಿಕೊಂಡ ಶ್ರೀದೇವಿ ಹಾಸ್ಪಿಟಲಿಟಿ ಸರ್ವಿಸಸ್‌ನ ಅಶೋಕ್‌ ವಿ. ಶೆಟ್ಟಿ ಮತ್ತು ಒಂದು ವರ್ಷದ ಕಾಲಾವಧಿಗೆ ಶ್ರೀ ಅಯ್ಯಪ್ಪ ದೇವರಿಗೆ ಬೇಕಾದ ಹೂವಿನ ಖರ್ಚನ್ನು ವಹಿಸಿಕೊಂಡ ತಿರುಪತಿ ಎಲೆಕ್ಟ್ರಿಕಲ್ಸ್‌ನ ಮಾಲಕರಾದ ಶಶಿಕಾಂತ್‌ ಸುವರ್ಣ ಅವರಿಗೆ ಹಾಗೂ ಎಲ್ಲ ಕಾರ್ಯಗಳ ವೇಳೆ ನನಗೆ ಸಹಕ ರಿಸಿದ ಸಮಿತಿಯ ಎಲ್ಲ ಸದಸ್ಯರು, ಮುಖ್ಯವಾಗಿ ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಮಧು ಎನ್‌. ಕೋಟ್ಯಾನ್‌ರವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದರು.

ನೂತನ ಸಮಿತಿ ರಚನೆ :

ಮಹಾ ಸಭೆಯ ಕಾರ್ಯಕಲಾಪಗಳ ಅನಂತರ 2022- 2024ರ ಅವಧಿಗೆ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆ ಜರಗಿತು. ನೂತನ ಸಮಿತಿಯ ಅಧ್ಯಕ್ಷರಾಗಿ ಬಾಲಕೃಷ್ಣ ಶೆಟ್ಟಿ ಕಟೀಲು ಅವರನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಅವರನ್ನು ನಿರ್ಗಮನ ಅಧ್ಯಕ್ಷರಾದ ಹರೀಶ್‌ ಶೆಟ್ಟಿ ಪಡುಬಿದ್ರಿ ಅವರು ಪುಷ್ಪಗುತ್ಛ ನೀಡಿ ಅಧಿಕಾರ ಹಸ್ತಾಂತರಿಸಿದರು.

ನೂತನ ಸಮಿತಿಯ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಕಟೀಲು ಅವರು ಮಾತನಾಡಿ, ಹರೀಶ್‌ ಪಡುಬಿದ್ರಿ ಹಾಗೂ ಮಾಜಿ ಅಧ್ಯಕ್ಷರುಗಳ ಸಹಕಾರದೊಂದಿಗೆ ನನ್ನ ಕಾರ್ಯಾವಧಿಯಲ್ಲಿ ಉತ್ತಮ ಕಾರ್ಯವನ್ನು ಮಾಡುವ ಭರವಸೆಯನ್ನಿತ್ತರು. ಯಾವ ರೀತಿಯಲ್ಲಿ ಹರೀಶ್‌ ಶೆಟ್ಟಿ ಪಡುಬಿದ್ರಿಯವರಿಗೆ ತಾವೇಲ್ಲರೂ ಸಹರಿಸಿದ್ದೀರೋ ಅದೇ ರೀತಿ ನನಗೂ ಸಹಕರಿಸಿ ಎಂದು ಮನವಿ ಮಾಡಿದರು. ಈ ವೇಳೆ ಅವರು ನೂತನ ಪದಾಧಿಕಾರಿಗಳ ಯಾದಿಯನ್ನು ಓದಿದರು. ಗೌರವ ಅಧ್ಯಕ್ಷ ಹರೀಶ್‌ ಪಡುಬಿದ್ರಿ, ಉಪಾಧ್ಯಕ್ಷ ಅನಿಲ್‌ ಶೆಟ್ಟಿ ಪಾಂಗಳ, ಕಾರ್ಯದರ್ಶಿ ಗಂಗಾಧರ್‌ ಬಂಗೇರ ಬಂಟ್ವಾಳ, ಕೋಶಾಧಿಕಾರಿ ಉದಯ್‌ ಹೆಗ್ಡೆ, ಜತೆ ಕಾರ್ಯದರ್ಶಿ ರಮೇಶ್‌ ದೇವಾಡಿಗ ಸಾಣೂರು, ಜತೆ ಕೋಶಾಧಿಕಾರಿ ಪದ್ಮನಾಭ ಗೌಡ ಬೆಳ್ತಂಗಡಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಶಶಿಕಾಂತ್‌ ಸುವರ್ಣ, ಭಜನೆ ಹಾಗೂ ಧಾರ್ಮಿಕ ಚಟುವಟಿಕೆಗಳ ಕಾರ್ಯಾಧ್ಯಕ್ಷ ಶಂಕರ್‌ ದೇವಾಡಿಗ, ಸಾಂಸ್ಕೃ ತಿಕ ಕಾರ್ಯಕ್ರಮಗಳ ಕಾರ್ಯಾಧ್ಯಕ್ಷೆ ಮೋಹಿನಿ ಭೋಜ ಶೆಟ್ಟಿಯವರನ್ನು ಆಯ್ಕೆ ಮಾಡಲಾಗಿದೆ ಎಂದರು.

ಸಭೆಯಲ್ಲಿ ಶಿಬಿರ ನವೀಕರಣದ ಯೋಜನೆಗೆ ದೇಣಿಗೆ ನೀಡಿ ಸಹಕರಿಸಿದ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ, ಅಶೋಕ್‌ ವಿ. ಶೆಟ್ಟಿ, ಶಶಿಕಾಂತ್‌ ಸುವರ್ಣ ಅವರನ್ನು ಸಭಿಕರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು.

ವೇದಿಕೆಯಲ್ಲಿ ಹರೀಶ್‌ ಶೆಟ್ಟಿ ಪಡುಬಿದ್ರಿ, ಧರ್ಮದರ್ಶಿ ಅಣ್ಣಿ ಸಿ. ಗೌರವ ಅಧ್ಯಕ್ಷರಾದ ಕೃಷ್ಣ ವಿ, ಶೆಟ್ಟಿ ಎಕ್ಕಾರ್‌, ಬಾಲಕೃಷ್ಣ ಶೆಟ್ಟಿ ಕಟೀಲು, ಗಂಗಾಧರ ಬಂಗೇರ ಬಂಟ್ವಾಳ, ಮಾಜಿ ಅಧ್ಯಕ್ಷರಾದ ಮಧು ಎನ್‌. ಕೋಟ್ಯಾನ್‌, ಜಗನ್ನಾಥ್‌ ಎಸ್‌. ಶೆಟ್ಟಿ, ರಘು ಪಡವ್‌, ಗುರು ಸ್ವಾಮಿ ಶೇಖರ್‌ ಎನ್‌.ಶೆಟ್ಟಿ ಉಪಸ್ಥಿತರಿದ್ದರು. ಮುಂದಿನ ಎರಡು ವರ್ಷಗಳ ಕಾಲಾವಧಿಗೆ ಗುರುಸ್ವಾಮಿಗಳಾಗಿ ಶೇಖರ್‌ ಎನ್‌. ಶೆಟ್ಟಿ ಹಾಗೂ ಶಿಬಿರದ ಅರ್ಚಕರಾಗಿ ಅಣ್ಣಿ ಶೆಟ್ಟಿಯವರನ್ನು ಮರು ನೇಮಕ ಮಾಡಲಾಯಿತು. ಜತೆ ಕೋಶಾಧಿಕಾರಿ ಉದಯ್‌ ಹೆಗ್ಡೆ ಪ್ರಾರ್ಥನೆಗೈದರು. ಕೋಶಾಧಿಕಾರಿ ಗಂಗಾಧರ್‌ ಬಂಗೇರ ವಂದಿಸಿದರು. ಜತೆ ಕಾರ್ಯದರ್ಶಿ ವಾಸು ಪೂಜಾರಿಯವರು ಎಲ್ಲ ಕಾರ್ಯಗಳಿಗೆ ಸಹಕರಿಸಿದರು.

ಟಾಪ್ ನ್ಯೂಸ್

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Ambedkar row: Amit Shah gone mad, he should leave politics says Lalu Prasad Yadav

Ambedkar row: ಅಮಿತ್‌ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್

New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು

ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

Baharain1

ಮೊಗವೀರ್ಸ್‌ ಬಹ್ರೈನ್‌ ಪ್ರೊ ಕಬಡ್ಡಿ;ತುಳುನಾಡ್‌ ತಂಡ ಪ್ರಥಮ,ಪುನಿತ್‌ ಬೆಸ್ಟ್‌ All ರೌಂಡರ್‌

ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ

ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.