ಶ್ರೀ ಅಯ್ಯಪ್ಪ ಯಕ್ಷಕಲಾ ಪ್ರತಿಷ್ಠಾನ ಮುಂಬಯಿ 6ನೇ ವಾರ್ಷಿಕೋತ್ಸವ
Team Udayavani, Jan 19, 2018, 2:02 PM IST
ಮುಂಬಯಿ: ಕರ್ನಾಟಕ ಕರಾವಳಿ ಗಂಡುಕಲೆ ಯಕ್ಷಗಾನ ಮುಂಬಯಿ ಮಹಾನಗರದಲ್ಲಿ ಹೊಸ ಹೊಸ ಯಕ್ಷ ತಂಡದವರಿಂದ ಪ್ರದರ್ಶನಗೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಯಕ್ಷಗಾನದ ತವರೂರಾದ ಕರಾವಳಿಯಲ್ಲಿ ಈಗ ವರ್ಷವಿಡೀ ಯಕ್ಷಗಾನ ನೋಡುವ ಭಾಗ್ಯ ಬಂದಿದೆ ಎಂದರೆ ಯಕ್ಷಗಾನ ಇಂದು ತನ್ನ ಪ್ರೇಕ್ಷಕ ವರ್ಗವನ್ನು ಹೆಚ್ಚಿಸಿಕೊಂಡಿದೆ ಎಂದು ಅರ್ಥ. ಈ ವಾಣಿಜ್ಯ ನಗರದಲ್ಲಿ ಯಕ್ಷಗಾನ ನಿತ್ಯ ನಿರಂತರವಾಗಿ ಬೆಳಗಬೇಕಾದರೆ ಕಲಾಪೋಷಕರು, ದಾನಿಗಳ ಪ್ರೋತ್ಸಾಹ ಅತ್ಯಗತ್ಯ. ಅಯ್ಯಪ್ಪ ಯಕ್ಷಕಲಾ ಪ್ರತಿಷ್ಠಾನ ಮುಂಬಯಿ ಅನೇಕ ಯುವ ಪ್ರತಿಭೆಗಳ ಮೂಲಕ ಯಶಸ್ವಿ ಪ್ರದರ್ಶನ ನೀಡುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದು ಉದ್ಯಮಿ ನಿತಿನ್ ಶೆಟ್ಟಿ ಜಡ್ಡಾಡಿ ಅವರು ನುಡಿದರು.
ಇತ್ತೀಚೆಗೆ ಶ್ರೀ ಅಯ್ಯಪ್ಪ ಯಕ್ಷ ಕಲಾ ಪ್ರತಿಷ್ಠಾನ ಮುಂಬಯಿ ಇದರ 6ನೇ ವಾರ್ಷಿಕೋತ್ಸವ ನಿಮಿತ್ತ ಘಾಟ್ಕೊàಪರ್ ಅಸಲ್ಫಾದ ಗೀತಾಂಬಿಕಾ ಮಂದಿರದ ಸಭಾಂಗಣ ದಲ್ಲಿ ನಡೆದ ವೀರ ಅಭಿಮನ್ಯು ಯಕ್ಷಗಾನ ಪ್ರದರ್ಶನ ಮತ್ತು ಕಲಾಪೋಷಕ, ಉದ್ಯಮಿ ಸತೀಶ್ ಕೊಠಾರಿ ದಂಪತಿಗೆ ಸಮ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಮಾಳ ಶ್ರೀನಿವಾಸ ಭಟ್ ಅವರು, ಯಕ್ಷಗಾನಕ್ಕೆ ಪೌರಾಣಿಕ ಪ್ರಸಂಗವೇ ಜೀವಾಳ. ಸಾಮಾಜಿಕ, ಕಾಲ್ಪನಿಕ ಪ್ರಸಂಗಗಳು ಪುರಾಣದ ಆದರ್ಶವನ್ನು ಹೊಂದಿರಬೇಕು. ಇಂದು ಕಲಾ ಪ್ರೇಕ್ಷಕರು ಪೌರಾಣಿಕ ಪ್ರಸಂಗಗಳನ್ನೇ ಬಯಸುತ್ತಿದ್ದಾರೆ. ಪೌರಾಣಿಕ ಪ್ರಸಂಗಗಳ ಪ್ರದರ್ಶನಗಳಿಂದ ಯಕ್ಷಗಾನ ಶ್ರೀಮಂತಗೊಳ್ಳುತ್ತಿದೆ. ಬಡಗುತಿಟ್ಟಿನ ಯಕ್ಷಶೈಲಿಯ ಈ ಕಲಾತಂಡ ಇನ್ನೂ ಹೆಚ್ಚು ಕಾರ್ಯಕ್ರಮಗಳನ್ನು ನೀಡುತ್ತಾ, ಒಂದು ಯಶಸ್ವಿ ತಂಡವಾಗಿ ಹೊರಹೊಮ್ಮಲಿ ಎಂದು ಶುಭಹಾರೈಸಿದರು.
ಮುಖ್ಯ ಅತಿಥಿಗಳಾದ ಸಾನ್ವಿ ಸ್ಟಾರ್ ಹಾಸ್ಪಿಟಾಲಿಟಿ ಇದರ ನಿರ್ದೇಶಕ ಸಂತೋಷ್ ಶೆಟ್ಟಿ ಅವರು ಮಾತನಾಡಿ, ಯುವ ಪ್ರತಿಭಾನ್ವಿತ ಪ್ರತಿಭೆಗಳು ಭಾಗವಹಿಸುವುದರಿಂದ ಯಕ್ಷಗಾನ ಕಲೆ ಬೆಳೆಯುವುದರಲ್ಲಿ ಸಂದೇಹವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಉದ್ಯಮಿ ಎಂ. ಡಿ. ಸತೀಶ್ ಕೊಠಾರಿ ದಂಪತಿಯನ್ನು ಗಣ್ಯರು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿದರು. ವೇದಿಕೆಯಲ್ಲಿ ಕಲಾ ಪೋಷಕರುಗಳಾದ ಸುರೇಶ್ ಕೊಠಾರಿ, ರಾಜೀವ ಕೊಠಾರಿ, ರಾಜು ಮೆಂಡನ್ ವಂಡ್ಸೆ, ನಾಗರಾಜ ಪುತ್ರನ್, ರತ್ನಾಕರ ಶೆಟ್ಟಿ, ಜಯರಾಮ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಅಶೋಕ್ ಮರತೂರು ಮತ್ತು ಇತರ ಸದಸ್ಯರು ಅತಿಥಿಗಳನ್ನು ಗೌರವಿಸಿದರು.
ಪ್ರತಿಷ್ಠಾನದ ಕಾರ್ಯದರ್ಶಿ ಮಹೇಂದ್ರ ಶೆಟ್ಟಿ ನಂದೊÅಳ್ಳಿ ಸ್ವಾಗತಿಸಿದರು. ನಾಗರಾಜ ಅಪ್ಪೇಡಿ ಹೇರಂಜಾಲು ಕಾರ್ಯಕ್ರಮ ನಿರ್ವ ಹಿಸಿದರು. ಪ್ರತಿಷ್ಠಾನದ ಕಲಾವಿದ ರಿಂದ ಯಕ್ಷಗಾನ ಪ್ರದರ್ಶನ ಗೊಂಡಿತು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ
MUST WATCH
ಹೊಸ ಸೇರ್ಪಡೆ
Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
ತೀವ್ರ ಸ್ವರೂಪ ಪಡೆದ ಅತಿಥಿ ಶಿಕ್ಷಕರ ಪ್ರತಿಭಟನೆ; ಶಿಕ್ಷಕ ಅಸ್ವಸ್ಥ, ಆಸ್ಪತ್ರಗೆ ದಾಖಲು
Success: ಯಶಸ್ವಿ ಜೀವನಕ್ಕೆ ಸೂತ್ರಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.