ರಾವಲ್ಪಾಡಾದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ: ಧಾರ್ಮಿಕ ಸಭೆ
Team Udayavani, Feb 13, 2018, 3:30 PM IST
ಮುಂಬಯಿ: ನೈತಿಕ, ಸಿದ್ಧಾಂತ, ಸನ್ನಡೆಯಿಂದ ಬಾಳಲು ದೇವಸ್ಥಾನಗಳ ಪಾತ್ರ ಮಹತ್ವದ್ದಾಗಿದೆ. ಇಲ್ಲಿ ಜರಗುವ ಪೂಜಾ ಕೈಂಕರ್ಯ, ಪ್ರವಚನ, ಭಜನೆ ಇತ್ಯಾದಿಗಳು ಆತ್ಮಸ್ಥೈರ್ಯವನ್ನು ಹೆಚ್ಚಿಸಿ ಧನಾತ್ಮಕ ಚಿಂತನೆಯನ್ನು ಮೂಡಿಸುತ್ತವೆ. ದೇವಸ್ಥಾನಗಳು ಊರಿನ ಅಭಿವೃದ್ಧಿಯನ್ನು ಪ್ರೇರೇಪಿಸುತ್ತದೆ ಎಂದು ದಹಿಸರ್ ಕರ್ನಾಟಕ ಸಂಘದ ಅಧ್ಯಕ್ಷ ಎಂ.ಜಿ. ಶೆಟ್ಟಿ ನುಡಿದರು.
ಫೆ. 3ರಂದು ದಹಿಸರ್ ಪೂರ್ವದ ರಾವಲ್ಪಾಡಾದ ಶ್ರೀ ದುರ್ಗಾಪರಮೇಶ್ವರಿ, ಶ್ರೀ ಶನೀಶ್ವರ ದೇವಸ್ಥಾನದ 32ನೇ ವಾರ್ಷಿಕ ಮಹಾಪೂಜೆ, ಬಲಿ ಉತ್ಸವ, ಕಟ್ಟೆಪೂಜೆ, ಧಾರ್ಮಿಕ ಸಭೆ, ಸಮ್ಮಾನ-ಸಾಂಸ್ಕೃತಿಕ ಕಾರ್ಯ
ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಧಾರ್ಮಿಕ ಸೇವಾ ಕಾರ್ಯದೊಂದಿಗೆ ಪರಿಸರದ ಮಕ್ಕಳ ಶಿಕ್ಷಣಕ್ಕಾಗಿ ನೆರವು ನೀಡಿ ಗೌರವಿಸುತ್ತಿರುವುದು ಶ್ಲಾಘನೀಯವಾಗಿದೆ. ದೇವರ ಹಾಗೂ ಮಾತಾಪಿತರ ಸೇವೆಯಿಂದ ನಮ್ಮ ಜೀವನವನ್ನು ಸಾರ್ಥಕಗೊಳಿಸಿ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗುವಂತೆ ವಿನಂತಿಸಿದರು.
ಇದೇ ಸಂದರ್ಭದಲ್ಲಿ ದೇವಸ್ಥಾನದ ಪ್ರಗತಿಗಾಗಿ ಸಹಕರಿಸಿದ ಕೃಷ್ಣ ಆಚಾರ್ಯ, ದಂಪತಿ ಮತ್ತು ರಾಜ್‌ಕುಮಾರ್ ಎ. ಪೂಜಾರಿ ಅವರನ್ನು ಗಣ್ಯರು ಸಮ್ಮಾನಿಸಿದರು. ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಅಂಧೇರಿ ಸ್ಥಳೀಯ ಕಚೇರಿಯ ಕಾರ್ಯದರ್ಶಿ ಹರೀಶ್ ಶಾಂತಿ, ಭಾರತ್ ಬ್ಯಾಂಕ್‌ನ ನಿರ್ದೇಶಕ ದಾಮೋದರ್ ಕುಂದರ್, ಜಯಲಕ್ಷ್ಮೀ ಕೋ. ಆಪರೇಟಿವ್ ಸೊಸೈಟಿಯ ಕಾರ್ಯಾಧ್ಯಕ್ಷ ರಂಗಪ್ಪ ಗೌಡ ಅವರು ಮಾತನಾಡಿ ಶುಭ ಹಾರೈಸಿದರು.
ಸಮಾಜ ಸೇವಕ, ಮಲಾಡ್ ಶ್ರೀ ದುರ್ಗಾ ಪರಮೇಶ್ವರಿ ಮಂದಿರದ ಅಧ್ಯಕ್ಷ ಶೇಖರ್ ಕೆ. ಪೂಜಾರಿ, ಸಮಿತಿಯ ಅಧ್ಯಕ್ಷ ಸಿ. ಎನ್. ಪೂಜಾರಿ, ಕಾರ್ಯ ದರ್ಶಿ ಜಯರಾಮ್ ಎನ್. ಮೆಂಡನ್, ಕೋಶಾಧಿಕಾರಿ ದೀಪಕ್ ಕೆ. ಪೂಜಾರಿ ಅವರು ಉಪಸ್ಥಿತರಿದ್ದರು. ಪದಾಧಿಕಾರಿಗಳಾದ ಚಂದ್ರ ಶೇಖರ ಪೂಜಾರಿ, ಪ್ರಕಾಶ್ ಅಮೀನ್, ರವಿ ಎಂ. ಅಮೀನ್ ಅವರನ್ನು ಗಣ್ಯರನ್ನು ಗೌರವಿಸಿದರು. ಲಕ್ಷ್ಮಣ್ ಪೂಜಾರಿ ಸಮ್ಮಾನಿತರನ್ನು ಪರಿಚಯಿಸಿ ದರು. ಚಲನಚಿತ್ರ ಮತ್ತು ರಂಗನಟ ಜಿ. ಕೆ. ಕೆಂಚನಕೆರೆ ಅವರು ನಿರ್ವಹಿಸಿ ವಂದಿಸಿದರು. ಬ್ರಹ್ಮಶ್ರೀ ಶಂಕರ ನಾರಾಯಣ ತಂತ್ರಿ, ಗುರು ಶಂಕರ್ ಭಟ್, ಶಂಕರ್ ಗುರು ಭಟ್ ಅವರ ಪೌರೋಹಿತ್ಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿತು. ಸುರೇಶ್ ಭಟ್ ಕುಂಟಾಡಿ ಇವರಿಂದ ದೇವರ ಬಲಿ ಉತ್ಸವ ಮೂರ್ತಿಯೊಂದಿಗೆ ಕಟ್ಟೆಪೂಜೆ ನಡೆಯಿತು. ದೇವಿ ಪಾತ್ರಿ ಸಿ.ಎನ್. ಪೂಜಾರಿ ಅವರಿಂದ ದೇವಿ ಆವೇಶ ಜರಗಿತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮಕ್ಕಳಿಂದ ನೃತ್ಯ ವೈಭವ, ಸಿ. ಎನ್. ಪೂಜಾರಿ ಅವರ ಸೇವಾರ್ಥಕವಾಗಿ ಗುರುನಾರಾಯಣ ಯಕ್ಷಗಾನ ಮಂಡಳಿಯವರಿಂದ ಶಬರಿಮಲೆ ಶ್ರೀ ಅಯ್ಯಪ್ಪ ಯಕ್ಷಗಾನ ಬಯಲಾಟ ಪ್ರದರ್ಶನ ಗೊಂಡಿತು. ಅಪರಾಹ್ನ ಹಾಗೂ ರಾತ್ರಿ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ನೆರವೇರಿತು. ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಚಿತ್ರ-ವರದಿ : ರಮೇಶ್ ಅಮೀನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.