ಪುಣೆ ಶ್ರೀ ಗುರುದೇವ ಸೇವಾ ಬಳಗ ಶ್ರೀ ಹನುಮ ಜಯಂತಿ ಆಚರಣೆ


Team Udayavani, Apr 3, 2018, 4:01 PM IST

0204mum07b.jpg

ಪುಣೆ: ಶ್ರೀ  ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಪುಣೆ ಇದರ ವತಿಯಿಂದ  ಹನುಮ ಜಯಂತಿ ಆಚರಣೆಯು ಪುಣೆ ಶ್ರೀ  ಗುರುದೇವ ಸೇವಾ ಬಳಗದ ಸಲಹೆಗಾರ, ಮಾಜಿ ಅಧ್ಯಕ್ಷ ನಾರಾಯಣ ಕೆ.  ಶೆಟ್ಟಿ  ನೇತೃತ್ವದಲ್ಲಿ  ಹಡಪ್ಸರ್‌ ಭೋಸ್ಲೆ ನಗರದ ಅಮರ್‌ ಕಾಟೇಜ್‌,  ಸಾಯಿ ನಿಲಯ 123 ಇಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ  ಜರಗಿತು.

ಧಾರ್ಮಿಕ ಕಾರ್ಯಕ್ರಮವಾಗಿ ಸಂಜೆ ವೇ|ಮೂ|   ಹರೀಶ್‌  ಐತಾಳ್‌ ಇವರ ನೇತೃತ್ವದಲ್ಲಿ ಶ್ರೀ ರಾಮಾಂಜನೇಯ ಕಲೊ³àಕ್ತ ಪೂಜೆ ಜರಗಿತು. ಪ್ರಖ್ಯಾತ್‌ ಶೆಟ್ಟಿ ಮತ್ತು ಸ್ನೇಹಲ್‌ ಪ್ರಖ್ಯಾತ್‌ ಶೆಟ್ಟಿ ದಂಪತಿ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು.  ಬಳಗದ ಭಜನ ಪ್ರಮುಖರಾದ ದಾಮೋದರ ಬಂಗೇರ ಇವರ ಮಾರ್ಗದರ್ಶನದಲ್ಲಿ ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಸದಸ್ಯೆಯರು ಹಾಗೂ ಶ್ರೀ  ಗುರುದೇವ ಸೇವಾ ಬಳಗದ ಸದಸ್ಯರಿಂದ  ಭಜನ ಕಾರ್ಯಕ್ರಮ  ನಡೆಯಿತು.

ಅನಂತರ ಸೇರಿದ ಎಲ್ಲ  ಭಕ್ತರ ಸಮ್ಮುಖದಲ್ಲಿ  ಹನುಮಾನ್‌ ಚಾಲಿಸ್‌ ಹಾಗೂ ರಾಮಸ್ತೋತ್ರ ಪಠಿಸಲಾಯಿತು.  ಮಹಾಪೂಜೆ, ಮಂಗಳಾರತಿ,  ಪ್ರಸಾದ  ವಿತರಣೆ ಜರಗಿತು. ಸುಧಾ ನಾರಾಯಣ  ಶೆಟ್ಟಿ ದಂಪತಿ, ಬಳಗದ ಅಧ್ಯಕ್ಷ ಸದಾನಂದ ಶೆಟ್ಟಿ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಪ್ರೇಮಾ ಎಸ್‌. ಶೆಟ್ಟಿ ಮತ್ತು ಸದಸ್ಯರು  ಶ್ರೀ ಹನುಮಾನ್‌ ದೇವರ ಅಲಂಕೃತ ಮಂಟಪಕ್ಕೆ  ಮಹಾಮಂಗಳಾರತಿಗೈದರು.

ಪುಣೆ ಶ್ರೀ ಗುರುದೇವ ಸೇವಾ ಬಳಗದ  ಅಧ್ಯಕ್ಷ ಸದಾನಂದ ಕೆ. ಶೆಟ್ಟಿ ಇವರು ಹನುಮ ಜಯಂತಿಯ ವಿಶೇಷತೆ, ಹನುಮ ಸೇವೆ ಹಾಗೂ ಗುರುದೇವಾ ಸೇವಾ ಬಳಗದ ಸೇವಾ ಕಾರ್ಯಗಳ  ಬಗ್ಗೆ ಸಭೆಗೆ   ತಿಳಿಸಿದರು. ತ್ಯಾಗ ಮತ್ತು ಸೇವೆಗೆ ನಾವು  ಹನುಮಾನ್‌ ದೇವರನ್ನು ಮೊದಲಾಗಿ ಸ್ಮರಿಸುತ್ತೇವೆ. ಧೈರ್ಯ, ಸಾಹಸದಿಂದ ಯಾವುದೇ ಕಾರ್ಯಸಾಧನೆ ಸಾಧ್ಯ. ಜೀವನದಲ್ಲಿ ನಮ್ಮಲ್ಲಿ ಕೂಡ ನಾವು ನಮ್ಮಿಂದಾಗುವ  ಸೇವಾ  ಕಾರ್ಯಗಳನ್ನು ಮಾಡುವಂತಹ ಪರಂಪರೆಯನ್ನು ರೂಢಿಸಿಕೊಳ್ಳಬೇಕು. ಒಡಿಯೂರು ಶ್ರೀಗಳು ಇಂದು ಸಮಾಜಮುಖೀ  ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಗ್ರಾಮ ಗ್ರಾಮಗಳಲ್ಲಿ ಅಭಿವೃದ್ಧಿಯ  ಸಂಕಲ್ಪವನ್ನು ತೊಟ್ಟು ಸೇವಾ ಕಾರ್ಯಗಳನ್ನು  ಮಾಡುತ್ತಿ¨ªಾರೆ.  ಅವರ ಸೇವಾ ಕಾರ್ಯಗಳಲ್ಲಿ ನಾವೆಲ್ಲರೂ ಭಾಗಿಯಾಗಬೇಕು. ಸಮಾಜ ಸೇವೆಯಿಂದ ಆತ್ಮತೃಪ್ತಿ ದೊರಕುತ್ತದೆ. ನಾವು   ಶುದ್ಧ ಮನಸ್ಸಿನಿಂದ ಭಕ್ತಿ ಭಾವದಿಂದ ಮಾಡುವ ಪ್ರತಿಯೊಂದು ಧಾರ್ಮಿಕ ಕಾರ್ಯಗಳು   ಭಗವಂತನಿಗೆ ಪ್ರಿಯವಾಗುತ್ತವೆ ಎಂದು ನುಡಿದು, ಹನುಮ ಜಯಂತಿಯ  ಪೂಜಾ ಕಾರ್ಯದ ವ್ಯವಸ್ಥಾಪನೆಗೈದ ಸುಧಾ ಎನ್‌. ಶೆಟ್ಟಿ ಮತ್ತು ನಾರಾಯಣ ಶೆಟ್ಟಿ ದಂಪತಿಗೆ ಹಾಗೂ ಬಳಗದ  ಮುಖಾಂತರ ಮಾಡುವ ನಮ್ಮ ಧಾರ್ಮಿಕ, ಸಾಮಾಜಿಕ ಸೇವೆಯಿಂದ 

ನಮಗೆಲ್ಲರಿಗೂ ಶ್ರೇಯೋಭಿವೃದ್ಧಿಯನ್ನು ಭಗವಂತ ಕರುಣಿಸಲಿ  ಎಂದು ಆಶಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಕೊನೆಯಲ್ಲಿ ಪ್ರಸಾದ ರೂಪದಲ್ಲಿ ಅನ್ನದಾನ ನೆರವೇರಿತು. ಶ್ರೀ ಗುರುದೇವ ಬಳಗದ ಪ್ರಮುಖರಾದ   ಪುಣೆ ಬಳಗದ ಮಾಜಿ ಅಧ್ಯಕ್ಷ, ಸಲಹೆಗಾರ  ಉಷಾ ಕುಮಾರ್‌ ಶೆಟ್ಟಿ, ಪ್ರಭಾಕರ ಶೆಟ್ಟಿ ತಮನ್ನ, ವಿಜಯ ಶೆಟ್ಟಿ, ಶಿವರಾಮ ಶೆಟ್ಟಿ ಸಾಯಿ ಸಾಗರ್‌, ಶೇಖರ್‌ ಶೆಟ್ಟಿ ಯಾತ್ರಿಕ್‌, ವಿಟuಲ್‌ ಶೆಟ್ಟಿ ಪೂನಾ ಕೆಫೆ, ಸುಧಾಕರ್‌ ಶೆಟ್ಟಿ ಕೆಇಎಂ, ನಾರಾಯಣ ಶೆಟ್ಟಿ, ವಿಟuಲ್‌ ಶೆಟ್ಟಿ, ಸತೀಶ್‌ ರೈ, ಸುಧೀರ್‌ ಶೆಟ್ಟಿ,  ಉಮೇಶ್‌ ಶೆಟ್ಟಿ, ನಾಗರಾಜ್‌ ಶೆಟ್ಟಿ, ಸುರೇಶ್‌  ಶೆಟ್ಟಿ, ಜಗದೀಶ್‌ ಹೆಗ್ಡೆ, ಬಾಲಕೃಷ್ಣ ಶೆಟ್ಟಿ ಮತ್ತು ಸದಸ್ಯರು ಹಾಗೂ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಪ್ರಮುಖರಾದ  ವೀಣಾ ಪಿ. ಶೆಟ್ಟಿ, ಜಯಲಕ್ಷ್ಮೀ ಪಿ. ಶೆಟ್ಟಿ, ಶೋಭಾ ಯು. ಶೆಟ್ಟಿ, ಸರೋಜಿನಿ ಬಂಗೇರ, ಲೀಲಾ ಶೆಟ್ಟಿ, ಶಾರದಾ ಹೆಗ್ಡೆ, ಸುಜಾತಾ ಶೆಟ್ಟಿ, ಉಷಾ ಯು. ಶೆಟ್ಟಿ, ಶ್ವೇತಾ ಎಚ್‌. ಎಂ., ಸೋನಿ ಶೆಟ್ಟಿ, ಸ್ವರ್ಣಲತಾ ಜೆ. ಹೆಗ್ಡೆ  ಹಾಗೂ ಹೆಚ್ಚಿನ ಸಂಖ್ಯೆಯ  ಭಕ್ತರು ಉಪಸ್ಥಿತರಿದ್ದರು.

ಚಿತ್ರ- ವರದಿ: ಹರೀಶ್‌ ಮೂಡಬಿದ್ರಿ ಪುಣೆ

ಟಾಪ್ ನ್ಯೂಸ್

Shiggavi-candidate

By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್‌ ಪಠಾಣಗೋ?

Kalinga-King-cobra

King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!

Mysuru-Nirmala

Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’

DKS–HDD-HDK

By Election: ಚನ್ನಪಟ್ಟಣದಲ್ಲಿ ಎಚ್‌.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್‌ ಮೇಕೆದಾಟು ಜಟಾಪಟಿ

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

Paper-Reader

Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

9-desi

Kannada Alphanbets: “ಕ’ ಕಾರದಲ್ಲಿನ ವಿಶೇಷ:‌ ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ

8-

ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Shiggavi-candidate

By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್‌ ಪಠಾಣಗೋ?

Kalinga-King-cobra

King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!

Mysuru-Nirmala

Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’

DKS–HDD-HDK

By Election: ಚನ್ನಪಟ್ಟಣದಲ್ಲಿ ಎಚ್‌.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್‌ ಮೇಕೆದಾಟು ಜಟಾಪಟಿ

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.