ಜಯ ಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ : ಜಾರ್ಜ್ ಹುಟ್ಟುಹಬ್ಬ ಆಚರಣೆ
Team Udayavani, Jun 7, 2017, 4:09 PM IST
ಮುಂಬಯಿ: ಕಾರ್ಮಿಕರ ಉದ್ಧಾರಕ್ಕಾಗಿ ಹಗಲಿರುಳು ಶ್ರಮಿಸಿದ ಕೊಂಕಣ ರೈಲ್ವೇಯ ರೂವಾರಿ ಜಾರ್ಜ್ ಫೆರ್ನಾಂಡಿಸ್ ಅವರು ಮುಂಬಯಿಯಲ್ಲಿ ಕಾರ್ಮಿಕರಿಗೋಸ್ಕರ ತಮ್ಮ ಜೀವ ಮತ್ತು ಜೀವನವನ್ನೇ ಮುಡಿಪಾಗಿಟ್ಟವರು. ಕಾರ್ಮಿಕ ವರ್ಗಕ್ಕೆ ಅನ್ಯಾಯವಾದಾಗ ಹೋರಾಟದ ಮುಖಾಂತರ ನ್ಯಾಯ ದೊರಕಿಸಿಕೊಟ್ಟವರು. ಆ ಸಂದರ್ಭದಲ್ಲೇ ಅವರು ತುಳು-ಕನ್ನಡಿಗರೊಂದಿಗೆ ಎಲ್ಲಾ ಭಾಷಿಗ ಜನರ ಹೃದಯವನ್ನು ಗೆದ್ದಿದ್ದರು. 1974 ರಲ್ಲಿ ರೈಲಿಗಾಗಿ ದೇಶದಾದ್ಯಂತ ರೈಲ್ವೇ ಪ್ರತಿಭಟನೆಯನ್ನು ಮಾಡಿ ಲಕ್ಷಾಂತರ ಮಂದಿಯ ಗಮನ ಸೆಳೆದಿದ್ದರು. ಅವರ ನೇತೃತ್ವದ ಈ ಪ್ರತಿಭಟನೆಯು ಇಂದಿಗೂ ವಲ್ಡ್ ರೆಕಾರ್ಡ್ ಆಗಿ ಉಳಿದಿರುವುದು ಅವರ ಸಂಘಟನಾಶಕ್ತಿಗೆ ಸಾಕ್ಷಿಯಾಗಿದೆ. ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದಾಗ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸೆರೆಮನೆವಾಸ ಅನುಭವಿಸಿದರೂ ರಾಜಕಾರಣ ಮತ್ತು ಸಂಘಟನೆಯಿಂದ ದೂರ ಸರಿದವರಲ್ಲ. ಈ ಸಂದರ್ಭದಲ್ಲಿ 11 ದೇಶಗಳು ಜಾರ್ಜ್ ಫೆರ್ನಾಂಡಿಸ್ ಅವರನ್ನು ಬಿಡುಗಡೆ ಗೊಳಿಸುವಂತೆ ಅವರ ಪರವಾಗಿ ನಿಂತಿರುವುದು ಇತಿಹಾಸ. ಶಿಸ್ತುಬದ್ಧತೆ, ಪರಿಶ್ರಮದಿಂದ ಬದುಕು ಕಟ್ಟಿಕೊಂಡವರು ಅವರು. ದೇಶದ ರೈಲ್ವೇ ಸಚಿವರಾಗಿ ಅವರು ಮಾಡಿದ ಸಾಧನೆಯನ್ನು ಹೇಳಲು ಮಾತುಗಳು ಹೊರಡುತ್ತಿಲ್ಲ. ಜಿಲ್ಲೆಗೆ ಕೊಂಕಣ ರೈಲ್ವೇಯ ಚಿತ್ರಣವನ್ನು ರೂಪಿಸಿ ಅದರ ನನಸಿಗೆ ಹಗಲಿರುಳು ಹೋರಾಡಿದ್ದಾರೆ. ಅವರ ಸಾಧನೆಗಳು ದೇಶದ ಇತಿಹಾಸದ ಪುಟಗಳಲ್ಲಿ ಸೇರ್ಪಡೆಗೊಳಿಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕಾಧ್ಯಕ್ಷ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಅವರು ನುಡಿದರು.
ಜೂ. 3 ರಂದು ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಪಣತೊಟ್ಟಿರುವ ಏಕೈಕ ಸರಕಾರೇತರ ಸಂಸ್ಥೆಯಾಗಿರುವ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮುಂಬಯಿ ವತಿಯಿಂದ ಆಯೋಜಿಸಲಾಗಿದ್ದ ಕೊಂಕಣ ರೈಲ್ವೆಯ ರೂವಾರಿ, ನಿಷ್ಠಾವಂತ ರಾಜಕಾರಣಿ, ಕಾರ್ಮಿಕ ವರ್ಗದ ಮುಂದಾಳು ಜಾರ್ಜ್ ಫೆರ್ನಾಂಡಿಸ್ ಅವರ 88 ನೇ ಹುಟ್ಟುಹಬ್ಬ ಆಚರಣೆಯನ್ನು ದೀಪಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಕೈಗಾರಿಕಾ ಸಚಿವರಾಗಿ, ಟೆಲಿಕಾಂ ಸಚಿವರಾಗಿ ಅವರು ಮಾಡಿದ ಸೇವೆ ಅನುಪಮವಾಗಿದೆ. ಕೇಂದ್ರ ರಕ್ಷಣ ಸಚಿವರಾಗಿ ನಿಷ್ಠೆಯಿಂದ ಕಾರ್ಯನಿರ್ವಹಿಸಿದ ಅವರು ದೇಶದ ಹಿಮಪ್ರದೇಶವಾಗಿರುವ ಸಿಯಾಚಿನ್‌ಗೆ 17 ಬಾರಿ ಭೇಟಿ ನೀಡಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ದೇಶದ ರಕ್ಷಣ ಪಡೆಗಳ, ಸೈನಿಕರ ವಲಯದಲ್ಲಿ ಬದಲಾವಣೆಗಳನ್ನು ತಂದವರು ಅವರಾಗಿದ್ದಾರೆ. ಅವರು ಕೇಂದ್ರ ರಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಗೆ, ಜಿಲ್ಲೆಯ ಬೆಳವಣಿಗೆಗೆ ಸಹಕಾರಿಯಾಗಿ ಬೆನ್ನೆಲುಬಾಗಿ ನಿಂತಿದ್ದರು. ಅವಿಭಜಿತ ಜಿಲ್ಲೆಯ ಇತರ ಸಚಿವರೊಂದಿಗೆ ಜಾರ್ಜ್ ಫೆರ್ನಾಂಡಿಸ್ ಅವರು ಸಮಿತಿಯ ಮುಖಾಂತರ ಜಿಲ್ಲೆಯ ಸರ್ವಾತೋಮುಖ ಯಶಸ್ಸಿಗೆ ಸಹಕರಿಸಿದರು. ಅವರ ಮಾರ್ಗದರ್ಶನದೊಂದಿಗೆ ಇಂದಿಗೂ ಸಮಿತಿಯು ಅಭಿವೃದ್ಧಿಪರ ಕಾರ್ಯಗಳನ್ನು ಮಾಡುತ್ತಿದೆ ಎನ್ನಲು ಸಂತೋಷವಾಗುತ್ತಿದೆ. ಜಾರ್ಜ್ ದೇಶ ಕಂಡ ಅಪ್ರತಿಮ ಹೋರಾಟಗಾರರಾಗಿದ್ದು, ಪ್ರಸ್ತುತ ನೆನಪಿನ ಶಕ್ತಿಯ ಕೊರತೆಯಿಂದ ಅನಾರೋಗ್ಯದಿಂದಿರುವುದು ನಮ್ಮ ಸಮಿತಿಗೆ ಬಹುದೊಡ್ಡ ನಷ್ಟವಾಗಿದೆ. ಅವರಿಗೆ ಮತ್ತೆ ಆರೋಗ್ಯ ಭಾಗ್ಯವನ್ನು ದೇವರು ಕರುಣಿಸಿ, ಅವರ ಮಾರ್ಗದರ್ಶನ ಸಮಿತಿಗೆ ಸದಾ ದೊರೆಯುವಂತಾಗಲಿ ಎಂದರು.
ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷ, ಬಿಲ್ಲವ ಮಹಾ ಮಂಡಳದ ಅಧ್ಯಕ್ಷ ಜಯ ಸಿ. ಸುವರ್ಣ ಅವರು, ಜಾರ್ಜ್ ಫೆರ್ನಾಂಡಿಸ್ ಅವರ ಸಿದ್ಧಿ-ಸಾಧನೆಗಳನ್ನು ವಿವರಿಸಿ, ಅವರ ಆರೋಗ್ಯ ಭಾಗ್ಯ ವೃದ್ಧಿಗೊಂಡು ನೂರ್ಕಾಲ ವರ್ಷ ಬಾಳಲಿ ಎಂದು ನುಡಿದು ಹುಟ್ಟುಹಬ್ಬಕ್ಕೆ ಶುಭಹಾರೈಸಿದರು.
ಆರೋಗ್ಯವನ್ನು ದೇವರು ಕರುಣಿಸಲಿ
ತೀಯಾ ಸಮಾಜ ಮುಂಬಯಿ ಇದರ ಗೌರವಾಧ್ಯಕ್ಷ ರೋಹಿದಾಸ್ ಬಂಗೇರ ಅವರು ಮಾತನಾಡಿ, ಜಾರ್ಜ್ ಫೆರ್ನಾಂಡಿಸ್ ಅವರೊಂದಿಗೆ ಇದ್ದ ಸಂಬಂಧವನ್ನು ಮೆಲುಕು ಹಾಕಿ, ಜಾರ್ಜ್ ಫೆರ್ನಾಂಡಿಸ್ ಅವರಂತಹ ರಾಜಕೀಯ ಧುರೀಣರು ಇರುವುದು ಬಹಳ ಕಡಿಮೆ. ಅವರಿಂದ ಇನ್ನಷ್ಟು ಅಭಿವೃದ್ಧಿಪರ ಕಾರ್ಯಗಳು ಆಗಲು ಅವರಿಗೆ ಆರೋಗ್ಯವನ್ನು ದೇವರು ಕರುಣಿಸಲಿ ಎಂದರು.
ಪತ್ರಕರ್ತ, ರಿಲಾಯನ್ಸ್ ಕಮ್ಯೂನಿಕೇಷನ್ ಇದರ ಉಪಾಧ್ಯಕ್ಷ ದಯಾಸಾಗರ್ ಚೌಟ ಅವರು ಮಾತನಾಡಿ, ಜಾರ್ಜ್ ಫೆರ್ನಾಂಡಿಸ್ ಅವರ ಬಾಲ್ಯದ ದಿನಗಳಿಂದ ಹಿಡಿದು ಪ್ರಸ್ತುತ ದಿನಗಳವರೆಗಿನ ಚಿತ್ರಣವನ್ನು ವಿವರಿಸಿ, ಜಿಲ್ಲೆಯಲ್ಲಿ ಹುಟ್ಟಿದರೂ ದೇಶದ ಪ್ರಮುಖ ನಗರದಲ್ಲಿ ಹೋರಾಟ ನಡೆಸಿ ರಾಜಕೀಯದಲ್ಲಿ ಭ್ರಷ್ಟಾಚಾರ ರಹಿತ ರಾಜಕಾರಣಿಯಾಗಿ ಜಿಲ್ಲೆಗೆ ಕೀರ್ತಿ ತಂದವರು. ಅವರ ಸಿದ್ಧಿ-ಸಾಧನೆಗಳು, ರಾಜಕೀಯ ಜೀವನ ಶೈಲಿ, ಅವರು ಮಾಡಿದ ದೇಶದ ಅಭಿವೃದ್ಧಿಯ ಕಾರ್ಯಗಳು ಮುಂದಿನ ಪೀಳಿಗೆಗೆ ತಿಳಿಯುವಂತಾಗಲು ದಾಖಲೆ ರೂಪದಲ್ಲಿ ಕೃತಿಗಳು ಮೂಡಿ ಬರಬೇಕು ಎಂದು ಸಲಹೆ ನೀಡಿದರು.
ಗೌರವ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಬೆಳ್ಚಡ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಧ್ಯೇಯೋದ್ಧೇಶಗಳನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಸಮಿತಿಯ ಉಪಾಧ್ಯಕ್ಷರುಗಳಾದ ಎಲ್. ವಿ. ಅಮೀನ್, ನಿತ್ಯಾನಂದ ಡಿ. ಕೋಟ್ಯಾನ್, ಪುತ್ತೂರು ಧನಂಜಯ ಶೆಟ್ಟಿ, ಚಿತ್ರಾ ಆರ್. ಶೆಟ್ಟಿ ಕಲ್ಯಾಣ್, ಕಾರ್ಯದರ್ಶಿಗಳಾದ ಜಿ. ಟಿ. ಆಚಾರ್ಯ, ಹಿರಿಯಡ್ಕ ಮೋಹನ್‌ದಾಸ್, ತೋನ್ಸೆ ಸಂಜೀವ ಪೂಜಾರಿ, ಜತೆ ಕೋಶಾಧಿಕಾರಿ ಹ್ಯಾರಿ ಸಿಕ್ವೇರ ಉಪಸ್ಥಿತರಿದ್ದರು.
ಇತರ ಪದಾಧಿಕಾರಿಗಳಾದ ವಿಶ್ವನಾಥ ಮಾಡಾ, ಡಾ| ಪ್ರಭಾಕರ ಶೆಟ್ಟಿ, ಶ್ಯಾಮ್ ಎನ್. ಶೆಟ್ಟಿ, ರಾಮಚಂದ್ರ ಗಾಣಿಗ, ಚಿತ್ರಾಪು ಕೆ. ಎಂ. ಕೋಟ್ಯಾನ್, ಎಸ್. ಕೆ. ಶ್ರೀಯಾನ್ ಉಪಸ್ಥಿತರಿದ್ದರು. ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಚಂದ್ರಶೇಖರ ಬೆಳ್ಚಡ ಅವರು ವಂದಿಸಿದರು. ಇದೇ ಸಂದರ್ಭದಲ್ಲಿ ರೋಹಿದಾಸ್ ಬಂಗೇರ, ಪತ್ರಕರ್ತ ದಯಾ ಸಾಗರ್ ಚೌಟ ಮೊದಲಾದವರನ್ನು ಸಮಿತಿಯ ವತಿಯಿಂದ ಸಂಸ್ಥಾಪಕಾಧ್ಯಕ್ಷ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಅವರು ಪುಷ್ಪಗುತ್ಛವನ್ನಿತ್ತು ಸ್ವಾಗತಿಸಿ ಅಭಿನಂದಿಸಿ ಶುಭಹಾರೈಸಿದರು.
ದೇಶ ಕಂಡ ಅಪರೂಪದ ವ್ಯಕ್ತಿ ಜಾರ್ಜ್ ಫೆರ್ನಾಂಡಿಸ್ ಅವರು 88 ಸಂವತ್ಸರಗಳನ್ನು ಪೂರೈಸಿಕೊಂಡ ತುಳು-ಕನ್ನಡಿಗರ ಹೆಮ್ಮೆಯ ವ್ಯಕ್ತಿ. ಅವರು ತುಳು-ಕನ್ನಡಿಗರಿಗೆ ಆದರ್ಶಪ್ರಾಯರಾಗಿದ್ದಾರೆ. ನಾಯಕತ್ವ ಏನೆಂಬುವುದನ್ನು ಅವರು ದೇಶಕ್ಕೆ ತೋರಿಸಿಕೊಟ್ಟಿದ್ದಾರೆ. ಅವರು ಆರೋಗ್ಯವಂತರಾಗಿ ಅವರ ಮಾರ್ಗದರ್ಶನದಲ್ಲಿ ಇನ್ನಷ್ಟು ಅಭಿವೃದ್ಧಿಪರ ಕಾರ್ಯಗಳು ನಡೆಯಬೇಕು. ಪರಿಸರ ಪ್ರೇಮಿ ಹೋರಾಟ ಸಂದರ್ಭದಲ್ಲೂ ಸದಾ ಮಾರ್ಗದರ್ಶನ, ಸಹಕಾರ ನೀಡಿದ ಮಹಾನ್ ಶಕ್ತಿ ಅವರಾಗಿದ್ದಾರೆ. ಅವರ ಮಾರ್ಗದರ್ಶನ ಸಮಿತಿಗೆ ಸದಾ ಬೇಕಾಗಿದೆ. ಮುಂದಿನ ಪೀಳಿಗೆಗೆ ಅವರ ಸಾಧನೆಗಳ ಬಗ್ಗೆ ಅರಿವು ಮೂಡಿಸಬೇಕಾದ ಅನಿವಾರ್ಯದೆ ಇದೆ
– ಧರ್ಮಪಾಲ ಯು. ದೇವಾಡಿಗ (ಅಧ್ಯಕ್ಷರು : ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮುಂಬಯಿ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mahakumbh Mela: ಪ್ರಯಾಗ್ ರಾಜ್ ಚಲೋ-ಮಹಾಕುಂಭ ಮೇಳಕ್ಕೆ ಅಡ್ಡಿ: ಉ*ಗ್ರ ಪನ್ನು ಬೆದರಿಕೆ
HMPV: ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಿಎಂ ಸಿದ್ದರಾಮಯ್ಯ
Daskath ಮೆಚ್ಚಿದ ಪ್ರೇಕ್ಷಕರಿಗೆ ಬಿಗ್ ನ್ಯೂಸ್ ಕೊಟ್ಟ ಚಿತ್ರತಂಡ
BBK11: ಮಂಜು ನೋಡಿ ʼಥೂ..ʼ ಎಂದ ತ್ರಿವಿಕ್ರಮ್; ದೊಡ್ಮನೆಯಲ್ಲಿ ಮತ್ತೆ ಹೋಗೋ ಬಾರೋ ಗಲಾಟೆ
Chhattisgarh: ನಕ್ಸಲೀಯರ ಅಟ್ಟಹಾಸ- ಐಇಡಿ ಸ್ಫೋಟಕ್ಕೆ 9 ಯೋಧರ ದೇಹ ಛಿದ್ರ, ಛಿದ್ರ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.