ಶ್ರೀ ಕೃಷ್ಣ ವಿಟ್ಠಲ ಪ್ರತಿಷ್ಠಾನ: ಸಾಧಕರಿಗೆ ಸಮ್ಮಾನ
Team Udayavani, Dec 20, 2018, 4:58 PM IST
ಮುಂಬಯಿ: ಶ್ರೀ ಕೃಷ್ಣ ವಿಟ್ಠಲ ಪ್ರತಿಷ್ಠಾನ ಮುಂಬಯಿ ಇದರ 21ನೇ ವಾರ್ಷಿಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವವು ಡಿ. 16ರಂದು ಮುಂಜಾನೆ 6ರಿಂದ ಅಪರಾಹ್ನ 3ರವರೆಗೆ ಅಂಧೇರಿ ಪಶ್ಚಿಮದ ಎಸ್. ವಿ. ರೋಡ್, ಫಯರ್ ಬ್ರಿಗೇಡ್ ಸಮೀಪದ ಶ್ರೀ ಅದಮಾರು ಮಠದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ಧಾರ್ಮಿಕ ಕಾರ್ಯಕ್ರಮವಾಗಿ ಅಷ್ಟೋತ್ತರ ಶತ ನಾಳಿಕೇರ ಮಹಾಗಣಪತಿ ಯಾಗ ಮತ್ತು ಶ್ರೀ ಲಕ್ಷ್ಮೀನಾರಾಯಣ ಮಹಾ ಪೂಜೆಯನ್ನು ಪರಮಪೂಜ್ಯ ಶ್ರೀ ಪೇಜಾವರ ಶ್ರೀಗಳ ಆಶೀರ್ವಾದಗಳೊಂದಿಗೆ ಸಂಸ್ಥೆಯ ಸಂಸ್ಥಾಪಕಾಧ್ಯಕ್ಷ ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಅವರ ನೇತೃತ್ವದಲ್ಲಿ ಯೋಗ್ಯ ವಿಪ್ರವೃಂದದೊಂದಿಗೆ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಶ್ರೀ ಕೃಷ್ಣ ವಿಟuಲ ಪ್ರತಿಷ್ಠಾನದ ಸಂಸ್ಥಾಪಕಾಧ್ಯಕ್ಷ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಸಮಾಜ ಸೇವಕ ವಿರಾರ್ ಶಂಕರ್ ಬಿ. ಶೆಟ್ಟಿ, ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ, ಸಂಗೀತ ಕ್ಷೇತ್ರದ ಸಾಧಕ ಡಾ| ಬಿ. ಇ. ಕಮಲ್ ಕುಮಾರ್ ಬೆಂಗಳೂರು, ಸಮಾಜ ಸೇವಕ ರಮೇಶ್ ಡಿ. ಸಾವಂತ್, ಧಾರ್ಮಿಕ ಚಿಂತಕ ರಮೇಶ್ ಗುರುಸ್ವಾಮಿ ಅಪ್ಪಾಜಿಬೀಡು ಇವರನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಮೈಸೂರು ಪೇಟ ತೊಡಿಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಬಿರುದು ಪ್ರದಾನಿಸಿ ಗೌರವಿಸಲಾಯಿತು.
ಸಮಾರಂಭದ ವೇದಿಕೆಯಲ್ಲಿ ಸೋನಿ ಅಪ್ಲೈಯನ್ಸಸ್ ಇದರ ಪಾಂಡುರಂಗ ಶೆಟ್ಟಿ, ದಕ್ಷಿಣ ಮುಂಬಯಿ ಬಿಜೆಪಿ ಅಧ್ಯಕ್ಷ ಸುಧೀರ್ ಕೆ. ಶೆಟ್ಟಿ, ಅಪೆಕ್ಸ್ ಗ್ರೂಪ್ ಮುಂಬಯಿ ಯಶವಂತ್ ಶೆಟ್ಟಿ ಬನ್ನಂಜೆ, ಬಂಟರ ಸಂಘ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ, ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಪೆರ್ಮುದೆ ಅಶೋಕ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಅವಿನಾಶ್ ಶಾಸಿŒ, ಟ್ರಸ್ಟಿಗಳಾದ ವಿರಾರ್ ಶಂಕರ್ ಬಿ. ಶೆಟ್ಟಿ, ಗೋಪಾಲ್ ಎಸ್. ಪುತ್ರನ್, ರಮೇಶ್ ಡಿ. ಸಾವಂತ್, ಸುಮಾ ವಿ. ಭಟ್, ಸುರೇಂದ್ರ ಎ. ಪೂಜಾರಿ, ಜತೆ ಕಾರ್ಯದರ್ಶಿಗಳಾದ ಶಶಿಧರ ಬಿ. ಶೆಟ್ಟಿ, ಕುಕ್ಕೆಹಳ್ಳಿ ಸದಾನಂದ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನಂದಾ ಎಸ್. ಉಪಾಧ್ಯಾಯ, ಕಾರ್ಯದರ್ಶಿ ಸುಶೀಲಾ ದೇವಾಡಿಗ, ಯುವ ವಿಭಾಗದ ಸಂಚಾಲಕ ನವೀನ್ ಪಡುಇನ್ನ ಇವರು ಉಪಸ್ಥಿತರಿದ್ದರು.
ಅಂಧೇರಿ ವಾರ್ಡ್ 82ರ ನಗರ ಸೇವಕ ಜಗದೀಶ್ ಕುಟ್ಟಿ ಅಮೀನ್, ಬಿಎಸ್‌ಕೆಬಿ ಅಸೋಸಿಯೇಶನ್ ಅಧ್ಯಕ್ಷ ಡಾ| ಸುರೇಶ್ ರಾವ್, ಹೊಟೇಲ್ ಉದ್ಯಮಿ ಜಗದೀಶ್ ಶ್ರೀನಿವಾಸ್ ಶೆಟ್ಟಿ, ಅವರು ಆಗಮಿಸಿದ್ದರು.
ರಂಗಕಲಾವಿದ ಅಶೋಕ್ ಪಕ್ಕಳ, ಕಲಾ ಸಂಘಟಕ ಕರ್ನೂರು ಮೋಹನ್ ರೈ ಅವರು ಕಾರ್ಯಕ್ರಮ ನಿರ್ವಹಿಸಿದರು. ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ತುಳು-ಕನ್ನಡಿಗರು ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಕು| ಐಶ್ವರ್ಯಾ ಸುಭಾಶ್ ಇವರಿಂದ ಭರತನಾಟ್ಯ ಮತ್ತು ಡಾ| ಬಿ. ಇ. ಕಮಲ್ ಕುಮಾರ್ ಅವರಿಂದ ಭಜನ ಸಂಗೀತ ಕಾರ್ಯಕ್ರಮ ನೆರವೇರಿತು. ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಸದಸ್ಯೆಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಚಿತ್ರ-ವರದಿ : ಸುಭಾಷ್ ಶಿರಿಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.