ಅಭಿನವ ಮಂತ್ರಾಲಯ ಲೋಕಾರ್ಪಣೆ,ಬೃಂದಾವನ ಪುನಃಪ್ರತಿಷ್ಠಾಪನೆ

Team Udayavani, Mar 21, 2017, 4:25 PM IST

9.jpg

ಮುಂಬಯಿ: ಮುಂಬಾ ದೇವಿ ನೆಲೆಸಿದ ಮಹಾನಗರದಲ್ಲಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಮರು ಪ್ರತಿಷ್ಠಾಪನೆ ಹಿಂದೂ ಧರ್ಮದ ಸಾಮರಸ್ಯದ ಸಂಕೇತವಾಗಿ ಮಾರ್ಪಟ್ಟಿದ್ದು, ಅತೀವ ಸಂತೋಷ ತಂದಿದೆ. ಕಲಿಯುಗದ ಕಾಮಧೇನುವಾಗಿ ಬೃಂದಾವನದಲ್ಲಿ ನೆಲೆಸಿದರೂ ದೇಶ-ವಿದೇಶದಲ್ಲೂ ಭಕ್ತರು ಸಂಕಷ್ಟದಲ್ಲಿ ಕರೆದಾಗ ಮಗುವಿನ ಕೂಗಿಗೆ ತಾಯಿಯು ಪ್ರತಿಕ್ರಿಯಿಸುವಂತೆ ಬಂದು ಸಲಹುತ್ತಾರೆ. ದೇಶ-ವಿದೇಶಗಳಲ್ಲಿ ಸ್ಥಾಪಿಸಲ್ಪಟ್ಟ ಬೃಂದಾವನದಲ್ಲಿ ಮೂಲ ಬೃಂದಾವನದ ಮೃತ್ತಿಕವನ್ನು ವಿಶೇಷ ತೇಜೋರೋಪವಾಗಿ ಇಟ್ಟು ಪೂಜಿಸಲ್ಪಡುತ್ತದೆ. ಇದು ರಾಘವೇಂದ್ರ ಸ್ವಾಮಿಗಳು ಭಕ್ತರಿಗೆ ನೀಡುವ ಅನುಗ್ರಹವು ಹೌದು ಎಂದು ಶ್ರೀ ಮಂತ್ರಾಲಯ ಮೂಲಸಂಸ್ಥಾನದ ಪೀಠಾಧೀಪತಿ ಶ್ರೀ ಸುಭುದೇಂದ್ರ ತೀರ್ಥ ಸ್ವಾಮೀಜಿ ನುಡಿದರು.

ಮಾ. 20 ರಂದು ಮಂತ್ರಾಲಯ ಶ್ರೀ ಜೋಗೇಶ್ವರಿ ಮಠದಲ್ಲಿ ನೂತನ ಅಭಿನವ ಮಂತ್ರಾಲಯ ಪ್ರತಿಷ್ಠಾನಗೈದು ಆಶೀರ್ವಚನ ನೀಡಿದ ಅವರು, ಮುಂಬಯಿ ಮಹಾನಗರದಲ್ಲಿ 1971 ರಲ್ಲಿ ಅಂದಿನ ಪೀಠಾಧೀಪತಿಗಳಾದ ಶ್ರೀ ಸುಜಯೀಂದ್ರ ತೀರ್ಥರು ಮಹಾನಗರದ ಭಕ್ತರಿಗಾಗಿ ಬೃಂದಾವನವನ್ನು ಸ್ಥಾಪಿಸಿದರು. ಮೂಲ ಮೃತ್ತಿಕೆಯು ಮಂತ್ರಾಕ್ಷತೆಯ ಗಾತ್ರವನ್ನು ಅಂದು ಬೃಂದಾವನದಲ್ಲಿ ಅಳವಡಿಸಲಾಗಿದ್ದು, ಆನಂತರದ ಪೀಠಾಧಿಪತಿಗಳಾದ ಶ್ರೀ ಶುಶ್ಮೀಂದ್ರ, ತೀರ್ಥರು, ಶ್ರೀ ಸುಯತೀಂದ್ರ ತೀರ್ಥ ಮಹಾಸ್ವಾಮೀಜಿಗಳು ಈ ಬೃಂದಾವನಕ್ಕೆ ಆಗಮಿಸಿ ಆರಾಧನೆ ಮಾಡಿ, ಭಕ್ತರಿಗೆ ಆಶೀರ್ವಚನ ನೀಡುತ್ತಿದ್ದರು. ಮತ್ತೆ ಹಿರಿಯ ಯತಿಗಳ ಅನುಗ್ರಹದೊಂದಿಗೆ ಸ್ಥಾಪನೆಗೊಂಡ ಈ ನೂತನ ಅಭಿನವ ಮಂತ್ರಾಲಯದ ಲೋಕಾರ್ಪಣೆಗೈಯುವ ಪುಣ್ಯಕಾರ್ಯ ನನ್ನ ಪಾಲಿಗೆ ಒದಗಿ ಬಂದಿದೆ. ಇದೊಂದು ಅವಿಸ್ಮರಣೀಯ ದಿನವಾಗಿದೆ. ರಾಯರ ಭಕ್ತಿಯನ್ನು ಮಹಾರಾಷ್ಟ್ರದ ಮಹಾನಗರದಲ್ಲಿ ಭಕ್ತರಿಗೆ ಅರ್ಪಿಸುವ ಸೇವೆ ನನಗೆ ಒಲಿದು ಬಂದಿರುವುದು ದೈವಫಲ. ಈ ದೇಶದ, ಈ ರಾಜ್ಯದ, ಈ ಪ್ರದೇಶದ ಎಲ್ಲಾ ಭಕ್ತರಿಗೆ ಅಭಿನವ ಮಂತ್ರಾಲಯದ ಅನುಗ್ರಹ ದೊರೆಯಲಿ. ಈ ನೂತನ ಬೃಂದಾವನದಲ್ಲಿ ಶ್ರೀ ಜಗದ್ಗುರು, ವೆಂಕಟೇಶ್ವರ, ಮುಖ್ಯಪ್ರಾಣ, ರುದ್ರದೇವರು, ಶ್ರೀ ದುರ್ಗಾದೇವಿ ಮಂಚಾಲಮ್ಮ. ಗಣಪತಿ, ನವಗ್ರಹಗಳು ಕಲಿಯುಗದ ಕಾಮಧೇನು  ಈ ಬೃಂದಾವನದಲ್ಲಿ ವಿಧಿ-ವಿಧಾನಗಳಶೊಂದಿಗೆ ಇಂದು ಪ್ರತಿಷ್ಠಾಪನೆಗೊಂಡಿದೆ ಎಂದು ಹೇಳಿದರು.

ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಪೀಠಾಧಿಪತಿಗಳು ಪುರ ಪ್ರವೇಶದ ಮೂಲಕ ವಿಶೇಷ ಮೆರವಣಿಗೆಯೊಂದಿಗೆ ಬೃಂದಾವನಕ್ಕೆ ಸ್ವಾಗತಿಸಲಾಯಿತು. ಕಲಶ, ಡೋಲು, ಕೊಂಬು-ವಾದ್ಯಗಳ ಮೂಲಕ ಶ್ರೀಗಳನ್ನು ನೂತನ ಬೃಂದಾವನಕ್ಕೆ ಬರಮಾಡಿಕೊಳ್ಳಲಾಯಿತು. ಆನಂತರ ಅವರು ಅರ್ಚಕ ವೃಂದದವರ ಸಹಾಯದೊಂದಿಗೆ ಮರು ಪ್ರತಿಷ್ಠಾಪನೆಗೊಂಡ ರಾಯರ ಬೃಂದಾವನ. ವೆಂಕಟೇಶ್ವರ ವಿಗ್ರಹ, ಮುಖ್ಯಪ್ರಾಣ, ರುದ್ರ ದೇವರು, ಮಂಚಾಲಮ್ಮ ವಿಗ್ರಹಗಳಿಗೆ, ಶಂಖಕ್ಷೀರ, ತುಪ್ಪ, ಗಂಧ-ಫಲಾದಿಗಳನ್ನು ಅರ್ಪಿಸುವ ಮೂಲಕ ವಿಗ್ರಹಗಳನ್ನು ಪೂಜಿಸಿದರು. ರಾಯರ ನೂತನ ಬೃಂದಾವನಕ್ಕೆ ಮೂಲ ಮೃತ್ತಿಕೆಯನ್ನು ಸಮರ್ಪಿಸಿ ಪ್ರತಿಷ್ಠಾಪನೆಗೈದರು.

ಧಾರ್ಮಿಕ ಕಾರ್ಯಕ್ರಮದಲ್ಲಿ ಸ್ಥಳೀಯ ವಿಧಾನ ಸಭಾ ಸದಸ್ಯರು, ನಗರ ಸೇವಕರು, ಸಂಘಟಕರು ಪಾಲ್ಗೊಂಡು ಶ್ರೀಗಳು ಅನುಗ್ರಹ ಪಡೆದರು. ಮಠದ ಆಡಳಿತ ವರ್ಗದ ಪೂರ್ಣಚಂದ್ರ ವೆಂಕಟ್‌, ಪ್ರಬಂಧಕ ರಮಾಕಾಂತ್‌ ಮಾನ್ವಿ, ಅರ್ಚಕ ವೃಂದ ಹಾಗೂ ಮೂಲ ಸಂಸ್ಥಾನದ ಆಡಳಿತ ವರ್ಗದ ಸದಸ್ಯರು, ದಾನಿಗಳು, ಸಂಘಟಕರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಪ್ರತಿಷ್ಠಾಪನೆಯ ಆನಂತರ ಮೂಲ ರಾಮದೇವರ ಪೂಜೆಯನ್ನು ಶ್ರೀ ಸುಬುದೇಂದ್ರ ಶ್ರೀಗಳು ನೆರವೇರಿಸಿದರು. ಸಂಜೆ ಅನಂತ ಕುಲಕರ್ಣಿ ಮತ್ತು ಹುಸೈನ್‌ ಸಾಹೇಬ್‌ ಕನಕಗಿರಿ ಬಳಗದಿಂದ ಸಾಂಸ್ಕೃತಿಕ ಸಂಗೀತ ಕಾರ್ಯಕ್ರಮ ನಡೆಯಿತು. ಭಕ್ತಾದಿಗಳು ಅಧಿಕ  ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ನೂತನವಾಗಿ ನಿರ್ಮಿಸಲ್ಪಟ್ಟ ಬೃಂದಾನವು ವಿನೂತನ ಶಿಲ್ಪಕಲೆಯಿಂದ ನಿರ್ಮಿಸಲಾಗಿದ್ದು, ಭಕ್ತಾದಿಗಳ ಅನುಕೂಲಕ್ಕಾಗಿ ವಿವಿಧ ವಿಗ್ರಹ ಗಳನ್ನು ಸ್ಥಾಪಿಸಲಾಗಿದೆ. ಸನಾತನ‌ ಧರ್ಮ, ಸಂಸ್ಕೃತಿಯನ್ನು ಉಳಿಸುವುದರ ಜೊತೆಗೆ ವಿವಿಧ ಹೋಮ, ಹವನ, ಜಪತಪಗಳು, ಆಧ್ಯಾತ್ಮಿಕ ಕಾರ್ಯಕ್ರಮಗಳು ಬೃಂದಾವನದಲ್ಲಿ ನಿರಂತರವಾಗಿ ನಡೆಯಲಿದ್ದು, ಬೃಂದಾವನದ ಪಕ್ಕದಲ್ಲಿಯೇ ನೂತನ ಕಲ್ಯಾಣ ಮಂಟಪ, ಗ್ರಂಥಾಲಯ, ಆಡಿಟೋರಿಯಂ, ಅತಿಥಿಗೃಹ, ಗೋಶಾಲೆ, ಯೋಗಕೇಂದ್ರವು ಶೀಘ್ರದಲ್ಲೆ ಎಲ್ಲಾ ರೀತಿಯ ಆಧುನಿಕ ಸೌಕರ್ಯಗಳೊಂದಿಗೆ ಭಕ್ತರಿಗೆ ಸಮರ್ಪಣೆಗೊಳ್ಳಲಿದೆ.

ಮುಸ್ಲಿಂ ಬಾಂಧವರು ಸ್ವಯಂ ಸೇವಕರಾಗಿ 
ಜೋಗೇಶ್ವರಿಯಲ್ಲಿ ನೂತನವಾಗಿ ನಿರ್ಮಾಣ ಗೊಂಡಿರುವ ಅಭಿನವ ಮಂತ್ರಾಲಯವು ಮುಸ್ಲಿಂ ಬಾಹುಳ್ಯವನ್ನು ಹೊಂದಿರುವ ಸ್ಥಳದಲ್ಲಿ ಸ್ಥಾಪಿಸಲ್ಪಟ್ಟಿದ್ದು ವಿಶೇಷತೆಯಾಗಿದೆ. ಪರಿಸರದ ಮುಸ್ಲಿಂ ಬಾಂಧವರು ಸ್ವಯಂಸೇವಕರಾಗಿ ಉತ್ಸವದಲ್ಲಿ ದಿನಪೂರ್ತಿ ಕಾರ್ಯನಿರ್ವಹಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದರು. ಮಂದಿರದ ಸುತ್ತಮುತ್ತ ಮುಸ್ಲಿಂ ಧರ್ಮದ ನಾಯಕರು ಹಾಗೂ ನಿವಾಸಿಗಳು ಮುಖ್ಯದ್ವಾರ, ಸ್ವಾಗತ ಗೋಪುರಗಳನ್ನು ನಿರ್ಮಿಸಿ ಭಾವೈಕ್ಯತೆ ಮೆರೆದರು. ಸಂಭ್ರಮದಲ್ಲಿ ಇತರ ಧರ್ಮದವರೊಂದಿಗೆ ಮುಸ್ಲಿಂ ಸಮುದಾಯದವರ ಸಹಕಾರ ವಿಶೇಷತೆಯಾಗಿತ್ತು. ಮೂಲ ಮಂತ್ರಾಲಯದ ಸಂಸ್ಥಾನವು ಮುಸ್ಲಿಂ ರಾಜನು ಬಳುವಳಿಯಾಗಿ ನೀಡಿರುವುದನ್ನು ಇಲ್ಲಿ ನೆನಪಿಸಬಹುದು.

ಟಾಪ್ ನ್ಯೂಸ್

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Video: ತನ್ನ ಮನೆಯ ಮುಂದೆಯೇ ಚಾಟಿಯಿಂದ ಹೊಡೆದುಕೊಂಡ ಕೆ.ಅಣ್ಣಾಮಲೈ…

Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…

Madhya Pradesh Education Minister’s substitute statement sparks political storm

Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

2

Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

1(1

Puttur ನಗರಕ್ಕೂ ಬೇಕು ಟ್ರಾಫಿಕ್‌ ಸಿಗ್ನಲ್‌

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.