ಶ್ರೀ ರಜಕ ಸಂಘ ಮುಂಬಯಿ: ಪುಣೆ ಶಾಖೆ ಉದ್ಘಾಟನೆ
Team Udayavani, Mar 23, 2018, 2:50 PM IST
ಮುಂಬಯಿ: ಶ್ರೀ ರಜಕ ಸಂಘ ಮುಂಬಯಿ ಇದರ ಪುಣೆ ಶಾಖೆಯ ಉದ್ಘಾಟನ ಸಮಾರಂಭವು ಮಾ. 18ರಂದು ಖಡಿRಯ ರೈಲ್ವೇ ನಿಲ್ದಾಣ ಸಮೀಪದ ಮೌಂಟ್-ವರ್ಟೆ-ಪ್ರಿಸ್ಟೈನ್ ಕಾಂಪ್ಲೆಕ್ಸ್‌ನ ಕ್ಲಬ್‌ಹೌಸ್‌ನಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ರಜಕ ಸಂಘ ಮುಂಬಯಿ ಅಧ್ಯಕ್ಷ ಸತೀಶ್ ಸಾಲ್ಯಾನ್ ಇವರು, ಜಾತಿಗಿಂತ ನೀತಿ ಮಹತ್ವದ್ದಾಗಿದೆ. ನಿಸ್ವಾರ್ಥ ಭಾವನೆಯಿಂದ ಮಾನವನ ಏಳ್ಗೆಗಾಗಿ ತಮ್ಮಿಂದಾದಷ್ಟು ಸಹಕಾರವನ್ನು ನೀಡಿದಾಗ ಭಗವಂತ ಸದಾ ನಮ್ಮನ್ನು ರಕ್ಷಿಸುತ್ತಾನೆ. ಸಂಘಟನೆಯು ಶಿಸ್ತುಬದ್ಧವಾಗಿ, ಅಚ್ಚುಕಟ್ಟಾಗಿ ನಡೆಯಲು ಎಲ್ಲರೂ ಸಹಕರಿಸಬೇಕು. ಸಮಾಜದ ಋಣ ತೀರಿಸಲು ಸಮಾಜ ಸೇವೆಯೇ ಮುಖ್ಯ ವಾಗಿದೆ ಎಂದು ನುಡಿದು ನೂತನ ಶಾಖೆಗೆ ಶುಭಹಾರೈಸಿದರು.
ಆರಂಭದಲ್ಲಿ ಕುಲದೇವರನ್ನು ಪ್ರಾರ್ಥಿಸಿ ಪೂಜೆ ಸಲ್ಲಿಸಿ, ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರಜಕ ಸಂಘ ಮುಂಬಯಿ ಗೌರವ ಪ್ರಧಾನ ಕಾರ್ಯದರ್ಶಿ ಸುಮಿತ್ರಾ ಪಲಿಮಾರ್ ಇವರು ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷರಾದ ದಾಸು ಸಿ. ಸಾಲ್ಯಾನ್, ಮಾಜಿ ಅಧ್ಯಕ್ಷರುಗಳು ಮತ್ತು ಹಿರಿಯ ಸದಸ್ಯರುಗಳಾದ ಲೋಕನಾಥ್ ಕುಂದರ್ ಮತ್ತು ಪೂವ ಎಂ. ಸಾಲ್ಯಾನ್, ಮಹಿಳಾ ವಿಭಾಗದ ಅಧ್ಯಕ್ಷೆ ಸರೋಜಿನಿ ಕುಂದರ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪುಣೆ ಶಾಖೆಯ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಧನಂಜಯ್ ಗುಜರನ್, ಉಪಾಧ್ಯಕ್ಷರಾಗಿ ಕದ್ರಿ ಗಣೇಶ್ ಕುಮಾರ್, ಗೌರವ ಕಾರ್ಯದರ್ಶಿಯಾಗಿ ಅನಿಲ್ ಗುಜರನ್, ಜತೆ ಕಾರ್ಯದರ್ಶಿಯಾಗಿ ಪ್ರಶಾಂತ್ ರಾವ್ ಮತ್ತು ಗೌರವ ಕೋಶಾಧಿಕಾರಿಯಾಗಿ ಸಂತೋಷ್ ಸಾಲ್ಯಾನ್ ಹಾಗೂ ಸಂಜಯ್ ಸಾಲ್ಯಾನ್ ಇವರನ್ನು ನೇಮಿಸಲಾಯಿತು. ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಕೃಷ್ಣ ಸಾಲ್ಯಾನ್, ಸತೀಶ್ ಸಾಲ್ಯಾನ್, ನಿಷಾ ಸಾಲ್ಯಾನ್ ಇವರನ್ನು ಆಯ್ಕೆ ಮಾಡಲಾಯಿತು.
ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ಭವ್ಯಾ ಸಾಲ್ಯಾನ್, ಉಪಾಧ್ಯಕ್ಷೆಯಾಗಿ ಸೌಮ್ಯಾ ರಾವ್, ಗೌರವ ಕಾರ್ಯದರ್ಶಿಯಾಗಿ ರಶ್ಮಿ ಗುಜರನ್ ಇವರು ಆಯ್ಕೆಯಾದರು. ನೂತನ ಪದಾಧಿಕಾರಿಗಳು ಮಾತನಾಡಿ, ಪುಣೆ ಶಾಖೆಯನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುವುದಾಗಿ ಭರವಸೆ ನೀಡಿದರು.
ಮುಂಬಯಿಯಿಂದ ಆಗಮಿಸಿದ ಶ್ರೀ ರಜಕ ಸಂಘದ ಸುಮಿತಾ ಸಾಲ್ಯಾನ್, ದಯಾನಂದ ಸಾಲ್ಯಾನ್, ಸೀನ ಸಾಲ್ಯಾನ್, ಕುಮಾರ್ ಬಂಗೇರ, ಸಂಜೀವ ಎಕ್ಕಾರು , ರಮೇಶ್ ಪಲಿಮಾರು, ಪಾಂಡು ಮಡಿವಾಳ, ಸುದೇಶ್ ಸಾಲ್ಯಾನ್, ರಾಜಶ್ರೀ ಸಾಲ್ಯಾನ್, ಜಯ ಮಡಿವಾಳ, ಬಾಲಕೃಷ್ಣ ಸಾಲ್ಯಾನ್, ಶಶಿಧರ ಸಾಲ್ಯಾನ್, ರತ್ನಾಕರ ಕುಂದರ್, ಸಂತೋಷ್ ಸಾಲ್ಯಾನ್, ಸರಿತಾ ಕುಂದರ್ ಮೊದಲಾದವರು ಶುಭಹಾರೈಸಿದರು.
ನೂತನ ಅಧ್ಯಕ್ಷರಾಗಿ ನೇಮಕಗೊಂಡ ಧನಂಜಯ್ ಗುಜರನ್ ಇವರು ಮಾತನಾಡಿ, ಇಂತಹ ಸಮಾಜ ಸೇವೆ ಮಾಡುವ ಭಾಗ್ಯ ತನ್ನ ಪಾಲಿಗೆ ಲಭಿಸಿರುವುದು ಅತೀವ ಸಂತೋಷವಾಗುತ್ತಿದೆ. ತಾನು ಖಂಡಿತವಾಗಿಯೂ ಸಮಾಜದ ಏಳ್ಗೆಗಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿ ಶಾಖೆಯ ಅಭಿವೃದ್ಧಿಗೆ ಪುಣೆಯ ಸಮಾಜ ಬಾಂಧವರು ಸಂಪೂರ್ಣ ಸಹಕಾರ, ಪ್ರೋತ್ಸಾಹ ಅಗತ್ಯವಾಗಿದೆ ಎಂದು ನುಡಿದು ಕೃತಜ್ಞತೆ ಸಲ್ಲಿಸಿದರು.
ಲಘು ಉಪಾಹಾರದ ವ್ಯವಸ್ಥೆ ಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದ ಕಾರ್ಯದರ್ಶಿ ಅನಿಲ್ ಗುಜರನ್ ಅವರನ್ನು ಅಭಿನಂದಿಸಲಾಯಿತು. ಪುಣೆ ವಿವಿಧೆಡೆಗಳಿಂದ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.