ವಡಾಲದ ಶ್ರೀರಾಮ ಮಂದಿರ: 63ನೇ ಸಾರ್ವಜನಿಕ ಗಣೇಶೋತ್ಸವ
Team Udayavani, Aug 29, 2017, 12:15 PM IST
ಮುಂಬಯಿ: ಕರ್ನಾಟಕ ಕರಾವಳಿಯಿಂದ ಮುಂಬಯಿಗೆ ಆಗಮಿಸಿ ಸಾರ್ವಜನಿಕ ಶ್ರೀ ಗಣಪತಿ ಉತ್ಸವಕ್ಕೆ ವಿಶ್ವ ಪ್ರಸಿದ್ಧಿ ಪಡೆದ ಮಹಾರಾಷ್ಟ್ರ ಹಾಗೂ ರಾಷ್ಟ್ರದಲ್ಲಿನ ಶ್ರೀಮಂತ ಗಣೇಶ ಪ್ರಸಿದ್ಧಿಯ ಮುಂಬಯಿಯ ವಡಾಲದ ಶ್ರೀ ರಾಮಮಂದಿರ ದ್ವಾರಕಾನಾಥ ಭವನದಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಗೋವಾ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಸ್ವಾಮೀಜಿ ಹಾಗೂ ಪಟ್ಟಶಿಷ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರ ಆಶೀರ್ವಚನ ಮತ್ತು ಮಾರ್ಗದರ್ಶನಗಳೊಂದಿಗೆ ಜಿಎಸ್‌ಬಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಆ. 25ರಂದು 63ನೇ ಸಾರ್ವಜನಿಕ ಗಣೇಶೋತ್ಸವಕ್ಕೆ ಚಾಲನೆ ನೀಡಲಾಯಿತು.
ವಿಜಯನಾಮ ಸಂವತ್ಸರದ ಭಾದ್ರಪದ ಶುಕ್ಲ ಚೌತಿಯ ಶುಕ್ರವಾರದ ಮುಂಜಾನೆಯಿಂದಲೇ ಪುರೋಹಿತರರು ವಿಧಿ ವತ್ತಾಗಿ ಗಣೇಶ ಚತುರ್ಥಿ ಹಬ್ಬಕ್ಕೆ ಚಾಲನೆಯಿತ್ತರು. ಕನಕ-ಬೆನಕ ಅಥವಾ ಬಂಗಾರದ ವಿನಾಯಕ ಅಥವಾ ಸ್ವರ್ಣ ಗಣಪತಿ ಎಂದೇ ಸಂಬೋದಿಸಲ್ಪಡುವ ಈ ಸ್ವರ್ಣಮಯ “ಗಜಮುಖ’ನ ದರ್ಶನ ಭಾಗ್ಯ ಪಡೆಯಲು ಲಕ್ಷಾಂತರ ಭಕ್ತರು ಕಾತುರತೆಯಿಂದ ಕಾದು ವಿನಾಯಕನ ದರ್ಶನ ಪಡೆದು ವಿಘ್ನವಿನಾಯಕನನ್ನು ಸ್ತುತಿಸಿದರು. ಪೂರ್ವಾಹ್ನ ಅರ್ಚಕ ವೇದ ಮೂರ್ತಿ ಸುಧಾಮ ಅನಂತ ಭಟ್ ಮತ್ತು ಸಹ ವಿದ್ವಾನ್‌ಗಳ ಪೌರೋಹಿತ್ಯದಲ್ಲಿ ವಿಶೇಷವಾದ ಅಷೊuàತ್ತರ ಗಣಯಾಗ, ನಿತ್ಯ ವಿನಾಯಕ ಪೂಜೆ ನೆರವೇರಿತು.
ಈ ಸಂದರ್ಭದಲ್ಲಿ ಜಿಎಸ್‌ಬಿ ಸಾರ್ವಜನಿಕ ಗಣೇಶೋತ್ಸವ ಉತ್ಸವ ಸಮಿತಿ ವಿಶ್ವಸ್ಥ ಕಾರ್ಯಾಧ್ಯಕ್ಷ ಎನ್. ಎನ್. ಪಾಲ್, ಅಧ್ಯಕ್ಷ ಉಲ್ಲಾಸ್ ಡಿ.ಕಾಮತ್, ಮುಖ್ಯ ಸಂಚಾಲಕ ಗೋವಿಂದ್ ಎಸ್.ಭಟ್, ಸುಭಾಶ್ ಪೈ, ಅಕ್ಷಯ್ ಎಂ.ಪೈ, ಸುನೀಲ್ ಪೈ. ಕಮಲಾಕ್ಷ ಜಿ.ಸರಾಫ್ ಸೇರಿದಂತೆ ನೂರಾರು ಸೇವಾಕರ್ತರು, ಭಕ್ತರು ಉಪಸ್ಥಿತರಿದ್ದು, ಗಜಮುಖ ದೇವರನ್ನು ಆರಾಧಿಸಿದರು. ಈ ಬಾರಿಯ ವಾರ್ಷಿಕ ಗಣೇಶೋತ್ಸವವು ಸಾಂಸ್ಕೃತಿಕ ಹಾಗೂ ಧಾರ್ಮಿಕ ವೈವಿಧ್ಯತೆಗಳೊಂದಿಗೆ ಸೆ. 5ರ ಮಂಗಳವಾರ ಅನಂತ ಚತುರ್ಧಶಿ ದಿನ ಸಮಾಪ್ತಿ ಕಾಣಲಿದೆ ಎಂದು ಎನ್.ಎನ್ ಪಾಲ್ ತಿಳಿಸಿದರು.
ಮುಂಬಯಿಯಲ್ಲಿನ ಗೌಡ ಸಾರಸ್ವತ ಬ್ರಾಹ್ಮಣರು (ಜಿಎಸ್‌ಬಿ) ಪ್ರಥಮವಾಗಿ 1955ನೇ ಇಸವಿಯಲ್ಲಿ ಸಣ್ಣ ಪ್ರಮಾಣದಲ್ಲಿ ಪೂಜಿಸಿ ಈ ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿದ್ದರು. 2014ರಲ್ಲಿ ಸಂಸ್ಥಾಪನಾ ವಜ್ರಮಹೋತ್ಸವ ಸಂಭ್ರಮಿಸಿ ಇದೀಗ ಸುಮಾರು ಆರುವರೆ ದಶಕಗಳ ಮುನ್ನಡೆಯಲ್ಲಿ ಗಣೇಶೋತ್ಸವ ಆಚರಿಸಿ ಸಾರ್ವಜನಿಕ ಶ್ರೀ ಗಣಪತಿ ಮಂಡಲಗಳಲ್ಲೇ ಜಗತ್‌ಪ್ರಸಿದ್ಧಿ ಪಡೆದಿದೆ.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.