ಫೆ. 11: ಶ್ರೀ ರಾಮಾಂಜನೇಯ-ಶಿವಪಂಚಾಕ್ಷರಿ ಯಕ್ಷಗಾನ ಪ್ರದರ್ಶನ
Team Udayavani, Jan 24, 2022, 11:12 AM IST
ಮುಂಬಯಿ: ನಗರದ ಹೊಟೇಲ್ ಉದ್ಯಮಿ, ಸಮಾಜ ಸೇವಕ, ಕಲಾಪೋಷಕ ದಿ| ಮರಾಠ ಸುರೇಶ್ ಶೆಟ್ಟಿ ಅವರ ಸ್ಮರಣಾರ್ಥ ಊರಿನ ತೆಂಕು -ಬಡಗು ತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಶ್ರೀ ರಾಮಾಂಜ ನೇಯ-ಶಿವಪಂಚಾಕ್ಷರಿ ಮಹಿಮೆ ಅದ್ದೂರಿ ಯಕ್ಷಗಾನ ಪ್ರದರ್ಶನವು ಫೆ. 11ರಂದು ಅಪರಾಹ್ನ 2ರಿಂದ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ನಡೆಯಲಿದೆ.
ಮೂಲತಃ ಹರ್ಕಾಡಿ ದೊಡ್ಮನೆ ಯವರಾದ ಸುರೇಶ್ ಶೆಟ್ಟಿ ಅವರು ತನ್ನ ಹೊಟೇಲ್ ಮರಾಠಾ ನಾಮದೊಂದಿಗೆ ಪ್ರಸಿದ್ಧಿಯನ್ನು ಪಡೆದು ಮರಾಠ ಸುರೇಶ್ ಶೆಟ್ಟಿ ಎಂದೇ ಚಿರಪರಿಚಿತರು. ಯಕ್ಷಗಾನದ ಅನನ್ಯ ಸೇವಕರಾಗಿ, ಅಪರಿಮಿತ ಗೌರವದೊಂದಿಗೆ ಕಲೆ-ಕಲಾವಿದರಿಗೆ ಬೆಲೆ-ನೆಲೆಯನ್ನು ನೀಡುತ್ತಾ ಕಲಾವಿದರ ಪಾಲಿನ ಆಶಾಕಿರಣವಾಗಿ ತನ್ನೂರ ಅಭಿವೃದ್ಧಿಯಲ್ಲೂ ವಿಶೇಷ ಕೊಡುಗೆ ನೀಡಿದ್ದಾರೆ. ಅವರ ಅಕಾಲಿಕ ನಿಧನ ಮುಂಬಯಿ ತುಳು-ಕನ್ನಡಿಗರಿಗೆ ಹಾಗೂ ಯಕ್ಷಗಾನ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಪ್ರತಿ ವರ್ಷ ತಿರುಪತಿಯನ್ನು ಸಂದರ್ಶಿಸುವ ತಿರುಪತಿ ಬಳಗ ಎಂದೇ ಗುರುತಿಸಿಕೊಂಡಿರುವ ಸುರೇಶ್ ಶೆಟ್ಟಿ ಅವರ ಆತ್ಮೀಯ ಮಿತ್ರರು ಒಂದಾಗಿ ಅವರ ಪ್ರಥಮ ಪುಣ್ಯಸ್ಮರಣೆ ಯನ್ನು ಅವಿಸ್ಮರಣೀ ಯವಾಗಿಸಲು ಮುಂದಾಗಿದ್ದಾರೆ.
ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರೊಂದಿಗೆ ಸಭೆ :
ಇತ್ತೀಚೆಗೆ ಮುಂಬಯಿಗೆ ಆಗಮಿಸಿದ ಪ್ರಸಿದ್ಧ ಭಾಗವತ, ಯಕ್ಷಧ್ರುವ ಪಟ್ಲ ಫೌಂಡೇಷನ್ ಇದರ ರೂವಾರಿ ಪಟ್ಲ ಸತೀಶ್ ಶೆಟ್ಟಿ ಅವರ ಜತೆ ತಿರುಪತಿ ಬಳಗದ ಸದಸ್ಯರಾದ ಮುಲುಂಡ್ ಬಂಟ್ಸ್‌ನ ಅಧ್ಯಕ್ಷ ವಸಂತ್ ಶೆಟ್ಟಿ ಪಲಿಮಾರು, ಬಂಟರ ಸಂಘ ಮುಂಬಯಿ ಇದರ ಉಪಾಧ್ಯಕ್ಷ ಉಳೂ¤ರು ಮೋಹನ್‌ದಾಸ್ ಶೆಟ್ಟಿ, ಮುಲುಂಡ್ ಬಂಟ್ಸ್‌ನ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಅಡ್ಯಂತಾಯ, ಯಕ್ಷಧ್ರುವ ಪಟ್ಲ ಫೌಂಡೇಷನ್ ಮುಂಬಯಿ ಸಮಿತಿಯ ಕಾರ್ಯದರ್ಶಿ ಕರ್ನೂರು ಮೋಹನ್ ರೈ ಅವರು ಕಾರ್ಯಕ್ರಮದ ಬಗ್ಗೆ ಪೂರ್ವಭಾವಿ ಸಭೆ ನಡೆಸಿ ಮಾತುಕತೆ ನಡೆಸಿದರು.
ಊರಿನ 35ಕ್ಕೂ ಅಧಿಕ ಪ್ರಸಿದ್ಧ ಕಲಾವಿದರ ಸಮಾಗಮ :
ಶ್ರೀ ರಾಮಾಂಜನೇಯ ಅದ್ದೂರಿ ಯಕ್ಷಗಾನ ಪ್ರದರ್ಶನದಲ್ಲಿ ಭಾಗವತರಾಗಿ ರಾಘವೇಂದ್ರ ಆಚಾರ್ಯ ಜನ್ಸಾಲೆ, ಸುರೇಶ್ ಶೆಟ್ಟಿ ಶಂಕರನಾರಾಯಣ, ವಿನಯ್ ಶೆಟ್ಟಿ ಬೆಂಗಳೂರು ಹಾಗೂ ಪ್ರಮುಖ ಪಾತ್ರಧಾರಿಗಳಾಗಿ ಶ್ರೀರಾಮನಾಗಿ ಆರೊYàಡು ಮೋಹನ್‌ದಾಸ್ ಶೆಣೈ, ಹನುಮಂತನಾಗಿ ಕುಮಟಾ ಗಣಪತಿ ನಾಯಕ್ ಸೇರಿದಂತೆ ಬಡಗುತಿಟ್ಟಿನ ಹೆಸರಾಂತ ಮೇಳಗಳ ಕಲಾವಿದರು ಭಾಗವಹಿಸಲಿದ್ದಾರೆ. ತೆಂಕುತಿಟ್ಟಿನ ಕಲಾವಿದರಿಂದ ಶಿವಪಂಚಾಕ್ಷರಿ ಮಹಿಮೆ ಯಕ್ಷಗಾನ ಪ್ರದರ್ಶನಗೊಳ್ಳಲಿದ್ದು, ಪಟ್ಲ ಸತೀಶ್ ಶೆಟ್ಟಿ ಅವರ ಸಹಿತ ತೆಂಕು ತಿಟ್ಟಿನ ಖ್ಯಾತ ಕಲಾವಿದರು ಭಾಗವಹಿಸಲಿದ್ದಾರೆ. ಹಾಸ್ಯದಲ್ಲಿ ಸೀತಾರಾಮ್ ಕುಮಾರ್ ಕಟೀಲು ಅವರು ತೆಂಕು-ಬಡಗು ತಿಟ್ಟಿನ ಎರಡು ಪ್ರಸಂಗಗಳಲ್ಲೂ ಭಾಗವಹಿಸಲಿದ್ದಾರೆ. ಊರಿನ 35ಕ್ಕೂ ಹೆಚ್ಚಿನ ಕಲಾವಿದರ ಸಮ್ಮಿಲನ ಸಮಾರಂಭದ ವಿಶೇಷತೆಯಾಗಿದೆ.
ಕಲಾವಿದರ ಪಾಲಿನ ಕಾಮಧೇನು :
ಮರಾಠ ಸುರೇಶ್ ಶೆಟ್ಟಿ ಅವರು ಹೊಟೇಲ್ ಉದ್ಯಮಿಯಾಗಿದ್ದುಕೊಂಡು ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಅಪಾರವಾಗಿದೆ. ಊರಿನಿಂದ ಬರುವ ಕಲಾವಿದರಿಗೆ ತನ್ನ ಮನೆ-ಹೊಟೇಲ್‌ಗಳಲ್ಲಿ ನಿಲ್ಲಲು ವ್ಯವಸ್ಥೆ ಮಾಡುತ್ತಿದ್ದ ಅವರು ಕಲಾವಿದರ ಪಾಲಿನ ಕಾಮಧೇನು ಎಂದೇ ಪ್ರಸಿದ್ಧರಾಗಿದ್ದರು. ಕಷ್ಟ ಎಂದು ಬಂದವರನ್ನು ಎಂದೂ ಕೈಬಿಟ್ಟವರಲ್ಲ. ಆರ್ಥಿಕವಾಗಿ ಹಿಂದುಳಿದ ಹೆಣ್ಮಕ್ಕಳ ಮದುವೆಗೆ ಆರ್ಥಿಕ ನೆರವು, ವೈದ್ಯಕೀಯ ನೆರವನ್ನು ಸಹಕರಿಸುತ್ತಿದ್ದರು. ಕಲಾವಿದರಾಗಿಯೂ ಗುರುತಿಸಿಕೊಂಡಿದ್ದ ಅವರು ತನ್ನ ಭಾಗವತಿಕೆಯ ಮೂಲಕ ಮಿತ್ರ ಬಳಗವನ್ನು ರಂಜಿಸುತ್ತಿದ್ದರು. ಯಕ್ಷಗಾನ ಕಲೆ, ಕಲಾವಿದರ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದ ಅವರು ಕಲೆಗೆ ನೀಡುತ್ತಿದ್ದ ಪ್ರೋತ್ಸಾಹ, ಕಲಾವಿದರಿಗೆ ನೀಡುತ್ತಿದ್ದ ಸಹಾಯಹಸ್ತ ಇತರರಿಗೆ ಮಾದರಿಯಾಗಿದೆ. ಅವರ ಸಮಾಜ ಸೇವೆ-ಕಲಾಸೇವೆಯನ್ನು ಉಳಿಸಿ -ಬೆಳೆಸುವುದರೊಂ ದಿಗೆ, ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ತುಳು -ಕನ್ನಡಿಗರು ಸಹಕರಿಸುವಂತೆ ತಿರುಪತಿ ಬಳಗದ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.