ಮಲಾಡ್‌ ಇರಾನಿ ಕಾಲನಿ ಶ್ರೀ ಶನಿಮಹಾತ್ಮ ಪೂಜಾ ಸಮಿತಿ: ವಾರ್ಷಿಕ ಮಹಾಪೂಜೆ

Team Udayavani, Mar 15, 2022, 12:10 PM IST

ಮಲಾಡ್‌ ಇರಾನಿ ಕಾಲನಿ ಶ್ರೀ ಶನಿಮಹಾತ್ಮ ಪೂಜಾ ಸಮಿತಿ: ವಾರ್ಷಿಕ ಮಹಾಪೂಜೆ

ಮಲಾಡ್‌: ಪಶ್ಚಿಮ ಉಪನಗರಗಳ ಹಿರಿಯ ಧಾರ್ಮಿಕ ಸಂಘಟನೆಗಳಲ್ಲೊಂದಾದ ಮಲಾಡ್‌ ಪೂರ್ವದ ಇರಾನಿ ಕಾಲನಿಯಲ್ಲಿರುವ ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿಯ 67ನೇ ವಾರ್ಷಿಕ ಮಹಾಪೂಜೆ ಸಮಿತಿಯ ಶನಿಮಂದಿರದಲ್ಲಿ ಮಾ. 12ರಂದು ಜರಗಿತು.

ಪೂಜಾ ಕಾರ್ಯ ವೇ| ಮೂ| ಕೆ. ಗೋವಿಂದ ಮೂರ್ತಿ ಭಟ್‌ ಮಾರ್ಗದರ್ಶನದಲ್ಲಿ ಮಂದಿರದ ಅರ್ಚಕ ಸುಧಾಕರ ಎಂ. ಶೆಟ್ಟಿ ಹಾಗೂ ಭುವಾಜಿ ಎಸ್‌. ಯು. ಬಂಗೇರ ನೇತೃತ್ವದಲ್ಲಿ ನಡೆಯಿತು. ಬೆಳಗ್ಗೆ 8ರಿಂದ ಗಣಪತಿಹೋಮ, ಬಳಿಕ ಮಂದಿರದ ಅಶ್ವತ್ಥಕಟ್ಟೆ ಪೂಜೆ ನಡೆಯಿತು.

ಪೂರ್ವಾಹ್ನ 10.30ರಿಂದ ಮಹಾಪ್ರಸಾದ ಪೂಜೆ, ಪಲ್ಲಪೂಜೆ, 11.30ರಿಂದ ಶ್ರೀ ಶನಿದೇವರಿಗೆ ಮಹಾಮಂಗಳಾರತಿ, ಶನಿದೇವರ ಸ್ತೋತ್ರ ಪಠಣ ನೆರವೇರಿತು. ಮಹಾಗಣಪತಿಗೆ ವಿಶೇಷ ಪೂಜೆ ಹಾಗೂ ಜಗನ್ಮಾತೆ ದೇವಿಯ ಸ್ತೋತ್ರ ಪಠಣ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಮಹಾಅನ್ನಸಂತರ್ಪಣೆ ಜರಗಿತು. ಅಪರಾಹ್ನ 1.30ರಿಂದ ಕಲಶ ಪ್ರತಿಷ್ಠೆ, ಶನಿದೇವರ ಪ್ರತಿಬಿಂಬವನ್ನು ಮಂದಿರದಿಂದ ವಾಲಗದೊಂದಿಗೆ ಪುಷ್ಪವೃಷ್ಠಿಯ ಮೂಲಕ ಅಶ್ವತ್ಥಕಟ್ಟೆಯವರೆಗೆ ಬಲಿಮೂರ್ತಿ ಮೆರವಣಿಗೆ ನೆರವೇರಿತು. ಬಳಿಕ ಶನಿಗ್ರಂಥ ಪಾರಾಯಣ, ಸಮಿತಿಯ ಸದಸ್ಯರಿಂದ ಭಜನ ಕಾರ್ಯಕ್ರಮ, ಸಂಜೆ 5ರಿಂದ ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.

ಸಾವಿರಾರು ಭಕ್ತರು, ಉದ್ಯಮಿಗಳು, ಸಮಾಜ ಸೇವಕರು, ಸ್ಥಳೀಯ ಪೊಲೀಸ್‌ ಅಧಿಕಾರಿಗಳು, ದಾನಿಗಳು, ರಾಜಕೀಯ ನೇತಾರರು, ನಗರದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಶನಿದೇವರ ದರ್ಶನ ಪಡೆದು ಕೃತಾರ್ಥರಾದರು. ಭಕ್ತರು ಶ್ರೀದೇವರಿಗೆ ವಿವಿಧ ಪೂಜೆಗಳನ್ನು ಸಲ್ಲಿಸಿದರು.

ಅತಿಥಿಗಳನ್ನು ಸಮಿತಿಯ ಸದಸ್ಯರು ಮಹಾಪ್ರಸಾದವನ್ನಿತ್ತು ಗೌರವಿಸಿದರು. ಸಂಜೆ 6ರಿಂದ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯ ಕಲಾವಿದರಿಂದ ಸತ್ಯದ ಪೊಣ್ಣು ನಿರ್ಮಲೆ (ಬಂಗಾರª ತೊಟ್ಟಿಲ್‌) ಯಕ್ಷಗಾನ ಪ್ರದರ್ಶನಗೊಂಡಿತು.

ಕಾರ್ಯಕ್ರಮದಲ್ಲಿ ಶ್ರೀ ಶನಿ ಮಹಾತ್ಮ ಪೂಜಾ ಸಮಿತಿಯ ಗೌರವ ಕಾರ್ಯದರ್ಶಿ ಎಂ. ಎನ್‌. ಸುವರ್ಣ, ಗೌರವ ಕೋಶಾಧಿಕಾರಿಗಳಾದ ಕೆ. ಎನ್‌. ಸಾಲ್ಯಾನ್‌, ಅತುಲ್‌ ಎಂ. ಓಜಾ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಎಸ್‌. ಯು. ಸುವರ್ಣ, ಎಂ. ಎನ್‌. ಕೋಟ್ಯಾನ್‌, ಜಯ ಎಂ. ಬಂಗೇರ, ಕೆ. ಎನ್‌. ಸಿ. ಸಾಲ್ಯಾನ್‌, ಪಿ. ಆರ್‌. ಅಮೀನ್‌, ತನೋಜಾ ಕಪ್ಪನ್‌ಕಲ್‌, ಎಸ್‌. ಎ. ಸಾಲ್ಯಾನ್‌, ಬಿ. ಎಚ್‌. ಹೆಜಮಾಡಿ, ಯು. ವಿ. ರಾವ್‌ ಉಪಸ್ಥಿತರಿದ್ದರು.

ಕೊರೊನಾ ಸಂಕಷ್ಟದ ಸಮಯದಲ್ಲಿ ಹಲವಾರು ಸಾರ್ವಜನಿಕ ಸೇವೆ ಮಾಡಿದ ಆತ್ಮತೃಪ್ತಿ ನಮಗಿದೆ. ಆಧ್ಯಾತ್ಮಿಕ ಚಿಂತನೆಯ ಕ್ಷೇತ್ರವಾದ ಇಲ್ಲಿ ಕಳೆದ ಒಂದು ವರ್ಷದಿಂದ ಭಜನೆ ಕಾರ್ಯಕ್ರಮಗಳು ಜರಗುತ್ತಿದ್ದು, ಇದಕ್ಕೆ ಸ್ಥಳೀಯ ಪೊಲೀಸ್‌ ಇಲಾಖೆಯವರು ಸಹಕರಿಸುತ್ತಿದ್ದಾರೆ. ಇಂದು ಮತ್ತೆ ವಾರ್ಷಿಕ ಮಹಾಪೂಜೆ ಯಥಾಸ್ಥಿತಿಯಲ್ಲಿ ಜರಗುವುದರ ಮೂಲಕ ಮತ್ತೆ ಈ ಆಧ್ಯಾತ್ಮಿಕ ಕ್ಷೇತ್ರ ಎಂದಿನಂತೆ ಚಟುವಟಿಕೆಯಲ್ಲಿ  ತೊಡಗಿಸಿಕೊಂಡಿದೆ. -ಎಚ್‌. ಎಸ್‌. ಕರ್ಕೇರ, ಗೌರವ ಪ್ರಧಾನ ಕಾರ್ಯದರ್ಶಿ, ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿ ಮಲಾಡ್‌

ಸಾಂಕ್ರಾಮಿಕ ಕಾಲದಲ್ಲಿ  ದೇವಸ್ಥಾನದಲ್ಲಿ  ವಾರದ ಪೂಜೆ ಹೊರತು ಇತರ ಕಾರ್ಯಕ್ರಮಗಳು ಸ್ಥಗಿತಗೊಂಡಿದ್ದವು. ಆದರೂ ತೊಂದರೆಯಲ್ಲಿದ್ದವರಿಗೆ ತಥಾಸ್ತು ಫೌಂಡೇಶನ್‌ನ ಸಹಕಾರದೊಂದಿಗೆ ಆಹಾರ ಧಾನ್ಯಗಳನ್ನು ಒದಗಿಸಿ, ಆರ್ಥಿಕವಾಗಿ ಸಹಕರಿಸಿದ್ದೇವೆ. ಕಳೆದ ಒಂದು ವರ್ಷದಿಂದ ಭಜನೆ ಪ್ರಾರಂಭಗೊಂಡು ಇಂದು ಸಂಪೂರ್ಣವಾಗಿ 67ನೇ ವಾರ್ಷಿಕ ಮಹಾಪೂಜೆ ನಡೆಯುತ್ತಿರುವುದು ಶ್ರೀ ಶನಿದೇವರ ಅನುಗ್ರಹದಿಂದ ಎನ್ನಬಹುದು. ಶನಿಶಿಂಗ್ನಾಪುರ ಪದ್ಧತಿಯಲ್ಲೇ ಎಣ್ಣೆ ಸೇವೆಗಾಗಿ ಊರಿನಿಂದ ಅಭಿಷೇಕ ಮೂರ್ತಿಯನ್ನು ಇಂದು ಪ್ರತಿಷ್ಠಾಪಿಸಿದ್ದೇವೆ. ಇದರಿಂದ ಭಕ್ತರ ಬೇಡಿಕೆಯನ್ನು ಸಮಿತಿಯು ಪೂರೈಸಿದಂತಾಗಿದೆ.-ಮೋಹನ್‌ ಜಿ. ಬಂಗೇರ  ಅಧ್ಯಕ್ಷರು, ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿ ಮಲಾಡ್‌

-ಚಿತ್ರ-ವರದಿ : ರಮೇಶ್‌ ಉದ್ಯಾವರ್‌  

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಂಡನ್: ಶ್ರೀ ರಾಘವೇಂದ್ರ ತೀರ್ಥರ ಹೊಸ ಆವರಣಕ್ಕೆ ಸಂಗೀತ ನೃತ್ಯ ಸೇವೆ

ಲಂಡನ್: ಶ್ರೀ ರಾಘವೇಂದ್ರ ತೀರ್ಥರ ಹೊಸ ಆವರಣಕ್ಕೆ ಸಂಗೀತ ನೃತ್ಯ ಸೇವೆ

Desi Swara: ವಾರಾಣಸಿಯಲ್ಲಿನ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರ ಮನೆ

Desi Swara: ವಾರಾಣಸಿಯಲ್ಲಿನ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರ ಮನೆ

Desi Swara: ತಪ್ಪು ಮಾಡದವ್ರು ಯಾರವ್ರೆ, ತಪ್ಪೇ ಮಾಡದವ್ರು ಎಲ್ಲವ್ರೇ ?

Desi Swara: ತಪ್ಪು ಮಾಡದವ್ರು ಯಾರವ್ರೆ, ತಪ್ಪೇ ಮಾಡದವ್ರು ಎಲ್ಲವ್ರೇ ?

Desi Swara: ಪ್ರಸಿದ್ಧ ದುಬೈ ಗಡಿನಾಡ ಉತ್ಸವ ಸಂಭ್ರಮ

Desi Swara: ಪ್ರಸಿದ್ಧ ದುಬೈ ಗಡಿನಾಡ ಉತ್ಸವ ಸಂಭ್ರಮ

Desi Swara: ನ್ಯೂಯಾರ್ಕ್‌-“ಮಿಸ್‌ ಇಂಡಿಯಾ’ ಕಿರೀಟ ಗೆದ್ದ ಮೊದಲ ಕನ್ನಡತಿ ಜೀವಿಕಾ

Desi Swara: ನ್ಯೂಯಾರ್ಕ್‌-“ಮಿಸ್‌ ಇಂಡಿಯಾ’ ಕಿರೀಟ ಗೆದ್ದ ಮೊದಲ ಕನ್ನಡತಿ ಜೀವಿಕಾ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.