ಶ್ರೀ ಶಾಸ್ತ ಸೇವಾ ಸಮಿತಿಯ ರಜತ ಮಹೋತ್ಸವ ಮಹಾಮಂಡಲ ಪೂಜೆ


Team Udayavani, Dec 13, 2017, 4:31 PM IST

11-Mum09b.jpg

ಮುಂಬಯಿ: ವಿದ್ಯಾವಿಹಾರ್‌ ಪೂರ್ವದ ಸ್ಟೇಷನ್‌ರೋಡ್‌ ಸಮೀಪದ ಶ್ರೀ ಶಾಸ್ತ ಸೇವಾ ಸಮಿತಿಯ ರಜತ ಮಹೋತ್ಸವದ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಮಂಡಲ ಸೇವಾ ಪೂಜೆಯು ಡಿ. 10 ರಂದು ವಿದ್ಯಾವಿಹಾರ್‌ ಪೂರ್ವದ ಸ್ಟೇಷನ್‌ರೋಡ್‌, ಹೊಟೇಲ್‌ ನಟರಾಜ್‌ ಬಾರ್‌ ಸಮೀಪದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.

ಪರಮಪೂಜ್ಯ ದಿ| ಶ್ರೀ ಪಿ. ಆರ್‌. ಸೂರ್ಯನಾರಾಯಣ ಮೂರ್ತಿ ಗುರುಸ್ವಾಮಿ ಮುಲುಂಡ್‌ ಇವರ ಶುಭಾಶೀರ್ವಾದಗಳೊಂದಿಗೆ 25 ನೇ ವಾರ್ಷಿಕ ಮಹಾಮಂಡಲ ಪೂಜೆಯು ಶ್ರೀ ಗುರುದೇವದತ್ತ ಸಂಸ್ಥಾನಂ ಶ್ರೀ ಕ್ಷೇತ್ರ ಒಡಿಯೂರು ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿ ಹಾಗೂ ಶುಭಾಶೀರ್ವಾದಗಳೊಂದಿಗೆ, ಡೊಂಬಿವಲಿ ಪೂರ್ವದ  ಆಜೆªಪಾಡಾ ಅಯ್ಯಪ್ಪ ದೇವಸ್ಥಾನದ ಹೆಬ್ರಿ ಶ್ರೀ ನಾರಾಯಣ ಗುರುಸ್ವಾಮಿ ಇವರ ಮಾರ್ಗದರ್ಶನದೊಂದಿಗೆ, ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಪ್ರಧಾನ ಅರ್ಚಕ ಗುರುಪ್ರಸಾದ್‌ ಭಟ್‌ ಇವರ ಪೌರೋಹಿತ್ಯದಲ್ಲಿ ಪೂಜಾ ವಿಧಿ-ವಿಧಾನಗಳು ನೆರವೇರಿತು.

ಧಾರ್ಮಿಕ ಕಾರ್ಯಕ್ರಮವಾಗಿ ಮುಂಜಾನೆ 5 ರಿಂದ ನಾರಿಕೇಲ ಗಣಹೋಮ ಮತ್ತು ಶರಣುಘೋಷ, ಮುಂಜಾನೆ 6 ರಿಂದ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಬೆಳಗ್ಗೆ 7 ರಿಂದ ಐರೋಲಿಯ ಭಕ್ತ ವೃಂದದವರಿಂದ ವಿಷ್ಣು ಸಹಸ್ರನಾಮ, ಬೆಳಗ್ಗೆ 7.30 ರಿಂದ ಶ್ರೀ ಸತ್ಯನಾರಾಯಣ ಮಹಾಪೂಜೆ ನಡೆಯಿತು.  ಬೆಳಗ್ಗೆ 9 ರಿಂದ ದೀಪಾರಾಧನೆ, ಅಯ್ಯಪ್ಪ ಸಹಸ್ರ ನಾಮಾರ್ಚನೆ,  ಪೂರ್ವಾಹ್ನ 10 ರಿಂದ ಕಿಸನ್‌ ನಗರ ಚಂದ್ರಶೇಖರ್‌ ಸ್ಯಾಕೊÕàಫೋನ್‌ ವಾದ್ಯ ಬಳಗದಿಂದ ವಾದ್ಯ ಸಂಗೀತ, ಪೂರ್ವಾಹ್ನ 11 ರಿಂದ ದಿ|  ಪಿ. ಆರ್‌. ಸೂರ್ಯನಾರಾಯಣ ಮೂರ್ತಿ ಗುರುಸ್ವಾಮಿ ಮುಲುಂಡ್‌ ಇವರ ಶಿಷ್ಯ ವೃಂದದವರಿಂದ ಸಂಕೀರ್ತನೆ, ಮಧ್ಯಾಹ್ನ 12.45 ರಿಂದ ಮಹಾಪೂಜೆ, ಮಹಾಮಂಗಳಾರತಿ ಜರಗಿತು. ಮಧ್ಯಾಹ್ನ ದಿ| ತ್ಯಾಂಪು ಶೆಟ್ಟಿ ಯಾನೆ ಬಾಬು ಶೆಟ್ಟಿ ಮರವೂರು ಬೀಡು ಇವರ ಮಕ್ಕಳ ಸೇವಾರ್ಥಕವಾಗಿ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿದ್ದು, ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿದರು.

ಅಪರಾಹ್ನ ಧಾರ್ಮಿಕ ಕಾರ್ಯಕ್ರಮ ಮತ್ತು ಗುರುವಂದನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಸತತ 18 ನೇ ಬಾರಿ ಶಬರಿಮಲೆ ಯಾತ್ರೆಗೈಯುತ್ತಿರುವ ಸ್ವಾಮಿಗಳಿಗೆ ಹಾಗೂ ಸಾಧಕರಿಗೆ ಗೌರವಾರ್ಪಣೆ ನಡೆಯಿತು. ಸಂಜೆ ಸಂತದಾಸ ಶಿಬರೂರು ಸುರೇಶ್‌ ಎಸ್‌. ಶೆಟ್ಟಿ ಅವರಿಂದ ಹಾಗೂ ಶ್ರೀ ಮಣಿಕಂಠ ಭಜನ ಮಂಡಳಿ ಪನ್ವೇಲ್‌, ಶ್ರೀ ಮಹಾಕಾಳೇಶ್ವರ ಭಜನ ಮಂಡಳಿ ನೆರೂಲ್‌, ಶ್ರೀ ಶಾಸ್ತಸೇವಾ ಸಮಿತಿ ಭಜನ ಮಂಡಳಿ ವಿದ್ಯಾವಿಹಾರ್‌ ಸತೀಶ್‌ ಇರ್ವತ್ತೂರು ಇವರಿಂದ ಭಜನ ಕಾರ್ಯಕ್ರಮ ನಡೆಯಿತು. ರಾತ್ರಿ ಅಯ್ಯಪ್ಪ ಅಲಂಕಾರ ಪೂಜೆ, ಆರತಿ, ರಾತ್ರಿ 9.30 ರಿಂದ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ, ನೆರೂಲ್‌ ಶ್ರೀ ಶನೀಶ್ವರ ಮಂದಿರದ ಅಧ್ಯಕ್ಷ ಧರ್ಮದರ್ಶಿ ರಮೇಶ್‌ ಎಂ. ಪೂಜಾರಿ, ರಮೇಶ್‌ ಗುರುಸ್ವಾಮಿ, ಚಂದ್ರಹಾಸ್‌ ಗುರುಸ್ವಾಮಿ, ಲಕ್ಷ್ಮೀನಾರಾಯಣ
ರಾವ್‌, ಜಗದೀಶ್‌ ಶೆಟ್ಟಿ ನಂದಿಕೂರು, ಸದಾನಂದ ಶೆಟ್ಟಿ, ಸತೀಶ್‌ ಶೆಟ್ಟಿ, ತುಳುಕೂಟ ಐರೋಲಿ ಅಧ್ಯಕ್ಷ ಹರೀಶ್‌ ಶೆಟ್ಟಿ ಪಡುಬಿದ್ರೆ ಮೋಹನ್‌ ಕುಮಾರ್‌ ಗೌಡ, ನಾರಾಯಣ ಶೆಟ್ಟಿ ನಂದಳಿಕೆ ಮೊದಲಾದವರು ಉಪಸ್ಥಿತರಿದ್ದರು.

ಶ್ರೀ ಶಾಸ್ತಾ ಸೇವಾ ಸಮಿತಿ ವಿದ್ಯಾವಿಹಾರ್‌ ಇದರ ಅಧ್ಯಕ್ಷ ಅಡ್ವೆ ದಿವಾಕರ ಶೆಟ್ಟಿ, ಉಪಾಧ್ಯಕ್ಷ ಹೆಜಮಮಾಡಿ ಸುಕೇಶ್‌ ಶೆಟ್ಟಿ, ಕಾರ್ಯದರ್ಶಿ ಗಿರೀಶ್‌ ಆರ್‌. ಶೆಟ್ಟಿ ಭಾಂಡೂಪ್‌, ಕೋಶಾಧಿಕಾರಿ ಪುತ್ತೂರು ಚಂದ್ರಶೇಖರ ರೈ, ಜತೆ ಕೋಶಾಧಿಕಾರಿ ಎಳತ್ತೂರು ಪ್ರಸಾದ್‌ ಶೆಟ್ಟಿ, ಜತೆ ಕಾರ್ಯದರ್ಶಿ ಬೆಳ್ಳೆ ಸಂದೀಪ್‌ ಶೆಟ್ಟಿ, ಸದಸ್ಯರಾದ ಅನೆಲಾ ಮಂಟಮೇ ಸದಾಶಿವ ಶೆಟ್ಟಿ, ಬೆಳ್ಮಣ್‌ ಪಾಂಡು ಶೆಟ್ಟಿ, ಪೆರ್ಡೂರು ಸದಾನಂದ ಕುಲಾಲ್‌, ಕೊಲ್ಲೂರು ವೆಂಕಟೇಶ್‌ ಶೆಟ್ಟಿ, ಕಾಂಜೂರ್‌ಮಾರ್ಗ ಮಲ್ಲಿಕಾರ್ಜುನ ಸ್ವಾಮಿ,ಬೋಳ ಸಂತೋಷ್‌ ಸಾಲ್ಯಾನ್‌, ಎಲ್ಲೂರು ಶೇಖರ ಸಾಲ್ಯಾನ್‌, ಮರವೂರು ಸುದೇಶ್‌ ಶೆಟ್ಟಿ,ಶಿರ್ಲಾಲ್‌ ದಿನೇಶ್‌ ಪೂಜಾರಿ, ನಿಡ್ಡೋಡಿ ವಿನೋದ್‌ಶೆಟ್ಟಿ, ಪುರುಷೋತ್ತಮ ಆಚಾರ್ಯ ಮೈಸೂರು, ಇರ್ವತ್ತೂರು ಸತೀಶ್‌ ಪೂಜಾರಿ ಅವರ ಉಪಸ್ಥಿತಿಯಲ್ಲಿ ರಜತ ಮಹೋತ್ಸವ ಪೂಜಾ ಕೈಂಕರ್ಯಗಳು ನೆರವೇರಿದವು. ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. 

  ಚಿತ್ರ-ವರದಿ: ಸುಭಾಷ್‌ ಶಿರಿಯಾ

ಟಾಪ್ ನ್ಯೂಸ್

cOurt

Putturu: ಬಾಲಕಿಯೊಂದಿಗೆ ಅನುಚಿತ ವರ್ತನೆ: ಆರೋಪಿಗೆ ಶಿಕ್ಷೆ, ದಂಡ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-putthige-2

State Formation: ಶ್ರೀ ಕೃಷ್ಣ ಬೃಂದಾವನ ಹೂಸ್ಟನ್ ಶಾಖೆಯಲ್ಲಿ ಸಂಸ್ಥಾಪನಾ ದಿನಾಚರಣೆ

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

cOurt

Putturu: ಬಾಲಕಿಯೊಂದಿಗೆ ಅನುಚಿತ ವರ್ತನೆ: ಆರೋಪಿಗೆ ಶಿಕ್ಷೆ, ದಂಡ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.