ಶ್ರೀ ವಿನಾಯಕ ಯಕ್ಷಕಲಾ ತಂಡ ಕೆರೆಕಾಡು 5ನೇ ವರ್ಷದ ಯಕ್ಷಗಾನ ಸಪ್ತಾಹ 


Team Udayavani, Oct 5, 2018, 3:14 PM IST

0410mum10.jpg

ಮುಂಬಯಿ: ನಗರದ ಕಲಾ ಪ್ರೇಮದಿಂದಾಗಿ ಇಂದು ಊರಿನ ಕಲಾವಿದರಿಗೆ ಇಲ್ಲಿ ತುಂಬು ಹೃದಯದ ಪ್ರೋತ್ಸಾಹ ದೊರೆಯುತ್ತಿದೆ. ಊರಿನ ಕಲಾವಿದರನ್ನು ಕರೆಸಿ ಇಲ್ಲಿ ವೇದಿಕೆಯನ್ನು ನೀಡುತ್ತಿರುವುದು ಅಭಿನಂದನೀಯವಾಗಿದೆ. ವಿ. ಕೆ. ಸುವರ್ಣ ಅವರಂತಹ ಕಲಾಪ್ರೇಮಿ ಸಂಘಟಕರು ಶ್ರೀ ವಿನಾಯಕ ಯಕ್ಷ ಕಲಾ ತಂಡ ಮಕ್ಕಳ ಮೇಳ ಕೆರೆಕಾಡು ಇವರನ್ನು ಕಳೆದ ವರ್ಷಗಳಿಂದ ಮುಂಬಯಿಗೆ ಕರೆಸಿ, ಮಕ್ಕಳ ಯಕ್ಷಗಾನಕ್ಕೆ ಪ್ರೋತ್ಸಾಹ ನೀಡಿ ಕಲೆಯ ಮೇಲಿನ ಆಸಕ್ತಿಯನ್ನು ಹೆಚ್ಚುವಂತೆ ಮಾಡಿದೆ ಎಂದು ವಿದ್ಯಾವಿಹಾರ್‌ನ ಗಾಂವೆªàವಿ ಅಂಬಿಕಾ ಶ್ರೀ ಆದಿನಾಥೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ವಿದ್ವಾನ್‌ ಪೆರ್ಣಂಕಿಲ ಹರಿದಾಸ್‌ ಭಟ್‌ ಅವರು ನುಡಿದರು.

ಅ.2 ರಂದು ವಿದ್ಯಾವಿಹಾರ್‌ ಪಶ್ಚಿಮದ ಶ್ರೀ ಗಾಂವೆªàವಿ ಅಂಬಿಕಾ ಶ್ರೀ ಆದಿನಾಥೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಶ್ರೀ ವಿನಾಯಕ ಯಕ್ಷಕಲಾ ತಂಡ ಕೆರೆಕಾಡು ಮುಲ್ಕಿ ಇದರ ಮುಂಬಯಿಯಲ್ಲಿ 5ನೇ ವರ್ಷದ ಯಕ್ಷಗಾನ ಸಪ್ತಾಹವನ್ನು ದೀಪಪ್ರಜ್ವಲಿಸಿ ಉದ್ಘಾಟಿಸಿ ಮಾತ ನಾಡಿದ ಇವರು, ಶ್ರೀ ಕ್ಷೇತ್ರದಲ್ಲಿ ಕಲೆಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದ್ದೇವೆ. ಇನ್ನು ಮುಂದೆಯೂ ಕ್ಷೇತ್ರದಲ್ಲಿ ಕಲಾವಿದರಿಗೆ ತುಂಬು ಹೃದ ಯದ ಪ್ರೋತ್ಸಾಹವು ದೊರೆಯುತ್ತದೆ ಎಂದರು. 

ಸಮಾರಂಭದಲ್ಲಿ ಪೆರ್ಣಂಕಿಲ ಹರಿದಾಸ್‌ ಭಟ್‌ ಅವರನ್ನು ಕಾರ್ಯಕ್ರ ಮದ ವ್ಯವಸ್ಥಾಪಕರು ಮತ್ತು ಅತಿಥಿ ಗಳು ಗೌರವಿಸಿದರು. 

ಅತಿಥಿಯಾಗಿ ಉಪಸ್ಥಿತರಿದ್ದ ಹಿರಿಯ ತಾಳಮದ್ದಳೆ ಅರ್ಥದಾರಿ ಕೆ. ಕೆ. ಶೆಟ್ಟಿ ಅವರು ಮಾತನಾಡಿ, ಮಕ್ಕಳ ಮೇಳವನ್ನು ಕಟ್ಟಿ ಬೆಳೆಸುವುದು  ಸುಲಭದ ಕೆಲಸವಲ್ಲ. ಅವರ ವಿದ್ಯಾಭ್ಯಾಸದ ಕಡೆಗೂ ಗಮನ ಹರಿಸಬೇಕಾಗುತ್ತದೆ. ಆದರೆ ಶ್ರೀ ವಿನಾಯಕ ಯಕ್ಷಕಲಾ ತಂಡದ ಮಕ್ಕಳು ಕಲೆಯೊಂದಿಗೆ ವಿದ್ಯೆಯಲ್ಲಿಯೂ ಮುಂದಿದ್ದು, ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುತ್ತಾರೆ ಎಂಬುವುದು ತಿಳಿದು ಸಂತೋಷವಾಗುತ್ತಿದೆ. ಈ ಕಾರ್ಯಕ್ಕೆ ಮೇಳದ ಯಜಮಾನ ಜಯಂತ್‌ ಅಮೀನ್‌ ಅವರನ್ನು ಅಭಿ ನಂದಿಸಬೇಕು ಎಂದು ನುಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನೆರೂಲ್‌ ಶ್ರೀ ಶನೀಶ್ವರ ಮಂದಿರದ ಧರ್ಮದರ್ಶಿ ರಮೇಶ್‌ ಎಂ. ಪೂಜಾರಿ ಇವರು ಮಾತನಾಡಿ, ಮಕ್ಕಳಿಗೆ ಯಕ್ಷಗಾನವನ್ನು ಕಲಿಸಿ, ಅದರೊಂದಿಗೆ ಅವರ ವಿದ್ಯೆಗೂ ನೆರವಾಗುತ್ತಿರುವುದು ಅನುಕರಣೀಯ. ಜಯಂತ್‌ ಅಮೀನ್‌ ಅವರು ಈ  ಮೇಳದೊಂದಿಗೆ ಕಾರ್ಯನಿರ್ವಹಿಸಿ ಒಂದು ಯಶಸ್ವಿ ಯಕ್ಷಗಾನ ಮೇಳವಾಗಿ ರೂಪಿಸಿರುವುದು ಅಭಿನಂದನೀಯ. ಅವರು ಕೆಲವೇ ವರ್ಷಗಳಲ್ಲಿ ಮಾಡಿದ ಈ ಸಾಧನೆಗೆ ಕಲಾದೇವತೆಯ ಅನುಗ್ರಹ ಹಾಗೂ ಎಲ್ಲರ ಪ್ರೋತ್ಸಾಹ ಸದಾಯಿರಲಿ ಎಂದು ನುಡಿದರು.

ವಿನಾಯಕ ಕಲಾತಂಡದ ವ್ಯವಸ್ಥಾಪಕರಾದ ಜಯಂತ್‌ ಅಮೀನ್‌ ಅವರು ಮಾತನಾಡಿ, 980 ಬಾರಿ ಪ್ರದರ್ಶನವನ್ನು ಇಲ್ಲಿಯವರೆಗೆ ನೀಡಲಾಗಿದೆ. ಇದು ಎಲ್ಲರ ಸಹಕಾರ, ಪ್ರೋತ್ಸಾಹದಿಂದಲೇ ಸಾಧ್ಯವವಾಯಿತು. ಕಳೆದ ಐದು ವರ್ಷಗಳಿಂದ ಮುಂಬಯಿಗರ ಪ್ರೋತ್ಸಾಹದಿಂದ ಯಶಸ್ವಿ ಪ್ರದರ್ಶನ ವನ್ನು ನೀಡಿದೆ. ಇನ್ನು ಮುಂದೆಯೂ ಎಲ್ಲರ ಪ್ರೋತ್ಸಾಹ ಬೆಂಬಲವು ಸದಾ ಸಿಗುತ್ತಿರಲಿ ಎಂದು ನುಡಿದರು.

ವೇದಿಕೆಯಲ್ಲಿ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಹರಿದಾಸ್‌ ಗೋಪಾಲ್‌ ಶೆಟ್ಟಿ, ಮೇಳದ ಮುಂಬಯಿ ವ್ಯವಸ್ಥಾಪಕರಾದ ವಿ. ಕೆ. ಸುವರ್ಣ, ಪ್ರಭಾಕರ ಹೆಗ್ಡೆ ಅವರು ಉಪಸ್ಥಿತರಿದ್ದರು. ಕಲಾ ಸಂಘಟಕ ಜಗದೀಶ್‌ ಶೆಟ್ಟಿ ಪನ್ವೇಲ್‌ ಕಾರ್ಯ ಕ್ರಮ ನಿರ್ವಹಿಸಿದರು. ಮೇಳದ ಮಕ್ಕಳಿಂದ ಶ್ರೀದೇವಿ ಲಲಿತಾಂಬಿಕೆ ಯಕ್ಷಗಾನ ಪ್ರದರ್ಶನಗೊಂಡಿತು. ಕಲಾಭಿಮಾನಿ ಗಳು ಉಪಸ್ಥಿತರಿದ್ದರು. 

ಐವತ್ತಕ್ಕಿಂತಲೂ ಅಧಿಕ ಮಕ್ಕಳನ್ನು ತರಬೇತಿ ಗೊಳಿಸಿ ಅವರ ಪ್ರತಿಭೆಗಳನ್ನು ಪ್ರದರ್ಶಿಸಲು ಅವಕಾಶ ಮಾಡಿ ಕೊಡುವುದು ಸುಲಭದ ಮಾತಲ್ಲ. ಶ್ರೀ ವಿನಾಯಕ ಯಕ್ಷಕಲಾ ತಂಡದ ಕಾರ್ಯ ನಿಜವಾಗಿಯೂ ಅಭಿನಂದ ನೀಯ. ಮೇಳಕ್ಕೆ ಇನ್ನಷ್ಟು ಯಶಸ್ಸು, ಪ್ರೋತ್ಸಾಹ ದೊರೆಯುತ್ತಿರಲಿ.
– ತಾರಾನಾಥ ಶೆಟ್ಟಿ ಪುತ್ತೂರು,
 ಅಧ್ಯಕ್ಷರು, ರಂಗಭೂಮಿ 
ಫೈನ್‌ಆರ್ಟ್ಸ್, ನವಿಮುಂಬಯಿ

ಮುಂಬಯಿಯಲ್ಲಿ ಕಲಾ ಸಂಘಟಗಳು ಹಣ ಸಂಪಾದಿಸುವ ಉದ್ದೇಶದಿಂದ ಕಲೆಯನ್ನು ವ್ಯಾಪಾರೀಕರಣ ಗೊಳಿಸುವುದಿಲ್ಲ. ಕಲೆಯ ಮೇಲಿನ ಪ್ರೀತಿಯಿಂದ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸು ತ್ತಿದ್ದಾರೆ. ಈ ಮಕ್ಕಳ ಮೇಳವನ್ನು ಎಲ್ಲರೂ ಸಹಕರಿಸಬೇಕು.
-ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ,
ಗೌರವ ಪ್ರಧಾನ ಕಾರ್ಯದರ್ಶಿ, ರಂಗಭೂಮಿ ಫೈನ್‌ ಆರ್ಟ್ಸ್, ನವಿಮುಂಬಯಿ

ಯಕ್ಷಗಾನ ಇಂದು ಕೇವಲ ಗಂಡು ಕಲೆಯಾಗಿ ಉಳಿದಿಲ್ಲ. ಮಹಿಳೆಯರು ಹಾಗೂ ಮಕ್ಕಳು ತಮ್ಮ ಪ್ರತಿಭೆಯನ್ನು ತೋರಿಸುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಯಕ್ಷಗಾನವು ಇಂದು ಜನಪ್ರಿಯ ಕಲಾಪ್ರಕಾರಗಳಲ್ಲಿ ಒಂದಾಗಿದ್ದು, ದೇಶ-ವಿದೇಶಗಳಲ್ಲೂ ಪ್ರಸಿದ್ಧಿಯನ್ನು ಪಡೆದಿದೆ.
-ನ್ಯಾಯವಾದಿ ಸುಭಾಶ್‌ ಶೆಟ್ಟಿ, ಅಧ್ಯಕ್ಷರು, ಬೋಂಬೆ ಬಂಟ್ಸ್‌ ಅಸೋಸಿಯೇಶನ್‌

ಚಿತ್ರ-ವರದಿ: ಸುಭಾಶ್‌ ಶಿರಿಯಾ

ಟಾಪ್ ನ್ಯೂಸ್

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

court

Kasaragod; ಯುವಕನ ಕೊಲೆ: 6 ಮಂದಿಗೆ ಜೀವಾವಧಿ

death

Puttur: ಅಪಘಾತದಲ್ಲಿ ಗಾಯಾಳಾಗಿದ್ದ ಬೈಕ್‌ ಸಹ ಸವಾರ ಸಾವು

arrested

BC Road; ಎರಡು ತಂಡಗಳ ಮಧ್ಯೆ ಮಾರಾಮಾರಿ: ಇಬ್ಬರ ಬಂಧನ

1-bhatru

Subrahmanya: ಅರ್ಚಕರ ಮನೆಯಿಂದ ನಗ-ನಗದು ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.