ಡೊಂಬಿವಲಿಯಲ್ಲಿ ಶ್ರೀನಿವಾಸ ಮಂಗಲ ಮಹೋತ್ಸವ


Team Udayavani, Dec 3, 2018, 12:47 PM IST

0112mum07.jpg

ಡೊಂಬಿವಲಿ: ವಿರಾರ್‌ ಶ್ರೀ ಸಾಯಿಧಾಮ ಮಂದಿರ ಟ್ರಸ್ಟ್‌ ವತಿಯಿಂದ ತಿರುಪತಿ ತಿರುಮಲ ದೇವಸ್ಥಾನದ ಪುರೋಹಿತರ ಪೌರೋಹಿತ್ಯದಲ್ಲಿ ಕಲ್ಯಾಣ್‌ನ ಸಂಸದ ಡಾ| ಶ್ರೀಕಾಂತ್‌ ಏಕನಾಥ್‌ ಶಿಂಧೆ ಮತ್ತು ಡೊಂಬಿವಲಿ ಶಾಸಕ ಸುಭಾಷ್‌ ಭೋಯಿರ್‌ ಅವರ ನೇತೃತ್ವದಲ್ಲಿ ಡಿ. 1 ರಂದು ಬೆಳಗ್ಗೆ ಡೊಂಬಿವಲಿ ಪೂರ್ವದ ಘಾರ್‌ಡಾ ಸರ್ಕಲ್‌, ಪೆಡೆ°àಕರ್‌ ಕಾಲೇಜು ಸಮೀಪದ ಸಾವಳರಾಮ್‌ ಮಹಾರಾಜ್‌ ಮ್ಹಾತ್ರೆ ಕ್ರೀಡಾಂಗಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀನಿವಾಸ ದೇವರ -ಪದ್ಮಾವತಿ ದೇವಿ-ಭೂದೇವಿಯ ಶ್ರೀನಿವಾಸ ಕಲ್ಯಾಣ ಮಹೋತ್ಸವಕ್ಕೆ ಅದ್ದೂರಿಯಾಗಿ ಚಾಲನೆಗೊಂಡಿತು.

ಸಮಾಜ ಸೇವಕ, ಉದ್ಯಮಿ ವಿರಾರ್‌ ಶಂಕರ್‌ ಶೆಟ್ಟಿ ಅವರ ಮುಂದಾಳತ್ವದಲ್ಲಿ, ಡೊಂಬಿವಲಿಯ ಹೊಟೇಲ್‌ ಅಸೋಸಿಯೇಶನ್‌ ಇದರ ಪದಾಧಿಕಾರಿಗಳು, ಡೊಂಬಿವಲಿ ಪರಿಸರದ ತುಳು-ಕನ್ನಡಿಗರ ಸಂಘ-ಸಂಸ್ಥೆಗಳ ಸಂಪೂರ್ಣ ಸಹಕಾರದೊಂದಿಗೆ ನಡೆದ ಮಹೋತ್ಸವದಲ್ಲಿ ಬೆಳಗ್ಗೆ 7 ರಿಂದ ತಿರುಪತಿ ತಿರುಮಲ ದೇವಸ್ಥಾನದ ಪ್ರಧಾನ ಅರ್ಚಕ ವಿದ್ವಾನ್‌ ಸಿ. ಆರ್‌. ಆನಂದ ತೀರ್ಥಾಚಾರ್ಯರ ನೇತೃತ್ವದಲ್ಲಿ, ಸುಪ್ರಭಾತಂ, ತೋಮುಲಾ ಸೇವಾ, ಕುಂಕುಮಾರ್ಚನೆ, ವಿಷ್ಣು ಸಹಸ್ರ ನಾಮಾರ್ಚನೆ, ತುಲಾಭಾರ ಸೇವೆ ನೆರವೇರಿತು. ತಿರುಪತಿಯಿಂದ ಆಗಮಿಸಿದ ಪುರೋಹಿತ ವರ್ಗದವರು ವಿವಿಧ ಪೂಜೆಗಳಲ್ಲಿ ಸಹಕರಿಸಿದರು.

2000ಕ್ಕೂ ಅಧಿಕ ದಂಪತಿ 
ಸುಪ್ರಭಾತಂ  ಪೂಜೆಯಲ್ಲಿ ಸುಮಾರು 2000ಕ್ಕೂ ಅಧಿಕ ದಂಪತಿಗಳು ಪಾಲ್ಗೊಂಡು ವ್ರತವನ್ನು ಕೈಗೊಂಡಿದ್ದರು.  ಅರ್ಚಕ ವಿದ್ವಾನ್‌ ಸಿ. ಆರ್‌. ಆನಂದ ತೀಥಾಚಾರ್ಯರು ಪೂಜೆಯ ಬಗ್ಗೆ ವಿವರಿಸಿ, ತಿರುಪತಿಯಲ್ಲಿ ಕಡಿಮೆ ಜನರಿಗೆ ನೋಡಲು ಸಿಗುವ ಸೇವೆ ಸುಪ್ರಭಾತಂ ಆಗಿದೆ. ಇದನ್ನು ಸರ್ವಜನತೆಯೂ ಕಾಣುವಂತಹ ಅವಕಾಶ ಇಲ್ಲಿ ಲಭಿಸಿದೆ. ತಿರುಪತಿಯ ಸುಪ್ರಭಾತಂ ಸೇವೆ ಏಳು ಬೆಟ್ಟಗಳಿಗೆ ಕೇಳುತ್ತದೆ. ಶ್ರೀ ವೆಂಕಟರಮಣ ಗೋವಿಂದ ಎನ್ನುವ ನಾಮಸ್ಮರಣೆ ಡೊಂಬಿವಲಿ ಮಹಾನಗರವನ್ನು ಪವಿತ್ರಗೊಳಿಸಿದೆ ಎಂದು ನುಡಿದರು.
ಶ್ರೀ ವೆಂಕಟರಮಣ ದೇವರ 108 ನಾಮ ಸ್ಮರಣೆ ಮಾಡುವುದರೊಂದಿಗೆ ತೋಮುಲಾ ಸೇವೆಯನ್ನು ಅರ್ಪಿಸಲಾಯಿತು. ಇದೇ ಸಂದರ್ಭದಲ್ಲಿ ನಡೆದ ಕುಂಕುಮಾರ್ಚನೆಯ ಬಗ್ಗೆ ಪುರೋಹಿತರು ವಿವರಣೆ ನೀಡಿದರು. ಸಂಸದ ಶ್ರೀಕಾಂತ್‌ ಏಕನಾಥ್‌ ಶಿಂಧೆ ಅವರು ತುಲಾಭಾರ ಸೇವೆಗೆ ಚಾಲನೆ ನೀಡಿದರು. ಬಳಿಕ ನೂರಾರು ಭಕ್ತರು ಇದರ ಪ್ರಯೋಜನವನ್ನು ಪಡೆದುಕೊಂಡರು.
ಉತ್ಸವದ ಅಂಗವಾಗಿ ಡೊಂಬಿವಲಿ ಪರಿಸರದ ಪ್ರಮುಖ ರಸ್ತೆಗಳನ್ನು ವಿದ್ಯುದೀಪಗಳಿಂದ ಅಲಂಕರಿಸಲಾಗಿದ್ದು ಭಕಾದಿಗಳನ್ನು ಉತ್ಸವ ಮಂಟಪದೆಡೆಗೆ ಕೈಬೀಸಿ ಕರೆಯುತ್ತಿದೆ.

ಮಂಗಳ ಮಹೋತ್ಸವದ ಬೆಳಗ್ಗೆಯ ಪೂಜಾ ಕಾರ್ಯಕ್ರಮಗಳಲ್ಲಿ ಸಚಿವ ರವೀಂದ್ರ ಚವಾಣ್‌, ಶಿವಸೇನ ಕಲ್ಯಾಣ್‌ ವಿಭಾಗದ ಸಂಘಟಕ ಗೋಪಾಲ್‌ ಲಾಂಡೆY, ಡೊಂಬಿವಲಿ ಹೊಟೇಲ್‌ ಓನರ್ ಅಸೋಸಿಯೇಶನ್‌ ಅಧ್ಯಕ್ಷ ಅಜಿತ್‌ ಶೆಟ್ಟಿ, ಉಪಾಧ್ಯಕ್ಷ ಪ್ರಭಾಕರ ಶೆಟ್ಟಿ, ರಾಜೀವ್‌ ಭಂಡಾರಿ, ಕಾರ್ಯದರ್ಶಿ ಸತ್ಯೇಶ್‌ ಶೆಟ್ಟಿ, ಪದಾಧಿಕಾರಿಗಳಾದ ವೇಣುಗೋಪಾಲ್‌ ಶೆಟ್ಟಿ, ವಿಜಿತ್‌ ಶೆಟ್ಟಿ, ಅಶೋಕ್‌ ಶೆಟ್ಟಿ, ಕರ್ನಾಟಕ ಸಂಘ ಡೊಂಬಿವಲಿ ಅಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ, ಮಾಜಿ ಅಧ್ಯಕ್ಷ ವಿಠuಲ್‌ ಶೆಟ್ಟಿ, ಕೋಶಾಧಿಕಾರಿ ಲೋಕನಾಥ್‌ ಶೆಟ್ಟಿ, ಜಗನ್ನಾಥ್‌ ಶೆಟ್ಟಿ, ಐಕಳ ಗಣೇಶ್‌ ಶೆಟ್ಟಿ, ಆನಂದ ಶೆಟ್ಟಿ ಎಕ್ಕಾರು, ಶೈಲೇಶ್‌ ಶೆಟ್ಟಿ, ಸತ್ಯನಾಥ್‌ ಶೆಟ್ಟಿ, ರಾಮಣ್ಣ ಶೆಟ್ಟಿ, ಪಶ್ಚಿಮ ವಿಭಾಗದ ನವರಾತ್ರಿ ಉತ್ಸವ ಮಂಡಳಿಯ ಗೋಪಾಲ್‌ ಶೆಟ್ಟಿ ಮತ್ತು ಪದಾಧಿಕಾರಿಗಳು, ಸದಸ್ಯರು, ಶಿವಸೇನೆ  ಸೌತ್‌ಸೆಲ್‌ನ ಅಧ್ಯಕ್ಷ ಜಯ ಪೂಜಾರಿ, ಸಮಾಜ ಸೇವಕ ಸುಭಾಷ್‌ ಶೆಟ್ಟಿ, ಶ್ರೀ ಮೂಕಾಂಬಿಕಾ ಫೌಂಡೇಷನ್‌ನ ಅಧ್ಯಕ್ಷೆ ಅನುಪಮಾ ಶೆಟ್ಟಿ, ಸಾಯಿನಾಥ ಮಿತ್ರ ಮಂಡಳಿಯ ಅಧ್ಯಕ್ಷ ಮಹೇಶ್‌ ಸಾಲ್ಯಾನ್‌ ಮತ್ತು ಪದಾಧಿಕಾರಿಗಳು, ಸದಸ್ಯರು, ಜಗಜ್ಯೋತಿ ಕಲಾವೃಂದದ ಉಪಾಧ್ಯಕ್ಷ ಜಯಕರ ಗೋಪಾಲ್‌ ಶೆಟ್ಟಿ ಪಡುಕುಡೂರು, ಯಕ್ಷಕಲಾ ಸಂಸ್ಥೆಯ ಸತೀಶ್‌ ಶೆಟ್ಟಿ ಶೃಂಗೇರಿ, ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ದೇವಾಡಿಗ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಹೇಮಾನಂದ ದೇವಾಡಿಗ, ಅನ್ನದಾನ ಸೇವೆಯು ಸುಸಾಂಗವಾಗಿ ನೆರವೇರುವುದರಲ್ಲಿ ಕಿಶೋರ್‌ ಶೆಟ್ಟಿ, ಸುರೇಶ್‌ ಶೆಟ್ಟಿ ಗುರ್ಮೆ, ಅರುಣ್‌ ಶೆಟ್ಟಿ, ಸೀತಾರಾಮ ಶೆಟ್ಟಿ ಪಡುಕುಡೂರು, ಭಾಸ್ಕರ ಶೆಟ್ಟಿ ಪಡುಕುಡೂರು, ಕಿಶೋರ್‌ ಶೆಟ್ಟಿ, ಕುಶಲಾ, ಯೋಗೇಶ್‌ ಶೆಟ್ಟಿ, ಮಹೇಶ್‌ ಶೆಟ್ಟಿ, ಮಂಜುನಾಥ್‌ ದೇವಾಡಿಗ ಮೊದಲಾದವ‌ರು ಸಹಕರಿಸಿದರು. 

5 ಸಾವಿರಕ್ಕೂ ಅಧಿಕ ಮಂದಿ 
ಸುಪ್ರಭಾತಂ ಸೇವೆಯು ಶ್ರೀ ಬಾಲಾಜಿ, ಶ್ರೀದೇವಿ-ಭೂದೇವಿಯರಿಗೆ ವೈಭವದಿಂದ ನಡೆಯಿತು. ಸುಮಾರು 5 ಸಾವಿರಕ್ಕೂ ಅಧಿಕ ಭಕ್ತಾದಿಗಳು  ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ತಿರುಪತಿಯಿಂದ ತಂದಿರುವ ಶ್ರೀನಿವಾಸ ದೇವರ ಮೂರ್ತಿ ಮತ್ತು ಶ್ರೀದೇವಿ-ಭೂದೇವಿಯ ಮೂರ್ತಿಯನ್ನು ಶಾಸ್ತೊÅàಕ್ತವಾಗಿ ಪ್ರತಿಷ್ಠಾಪಿಸಿ ಶ್ರೀನಿವಾಸ ಮಂಗಳ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

ಉತ್ಸವದಲ್ಲಿ  ಡೊಂಬಿವಲಿಯ ಪ್ರತಿಷ್ಠಿತ ಸಂಘ-ಸಂಸ್ಥೆಗಳಾದ ಡೊಂಬಿವಲಿ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳ, ಕರ್ನಾಟಕ ಸಂಘ ಡೊಂಬಿವಲಿ, ಬಂಟ್ಸ್‌ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ, ಬಿಲ್ಲವರ ಅಸೋಸಿಯೇಶನ್‌ ಡೊಂಬಿವಲಿ ಪ್ರಾದೇಶಿಕ ಸಮಿತಿ, ಕುಲಾಲ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ, ಶ್ರೀ ಸಾಯಿನಾಥ ಮಿತ್ರ ಮಂಡಳ, ಶ್ರೀ ರಾಧಾಕೃಷ್ಣ ಶನೀಶ್ವರ ಮಂದಿರ, ದುರ್ಗಾಂಬಿಕಾ ಭಜನಾ ಮಂಡಳ, ಶ್ರೀ ಮೂಕಾಂಬಿಕಾ ಸೋಶಿಯಲ್‌ ವೆಲ್ಫೆàರ್‌ ಫೌಂಡೇಷನ್‌, ಮುಂಬ್ರಾ ಮಿತ್ರ ಭಜನಾ ಮಂಡಳಿ, ಯಕ್ಷಕಲಾ ಸಂಸ್ಥೆ, ಶ್ರೀ ಮಾತಾ ಅಮೃತಾನಂದಮಯಿ ಸತ್ಸಂಗ, ಶ್ರೀ ಜಗದಂಬಾ ಮಂದಿರ ಡೊಂಬಿವಲಿ ಹಾಗೂ ಶ್ರೀ ದುರ್ಗಾಪರಮೇಶ್ವರಿ ಭಕ್ತ ಮಂಡಳಿ ಹಾಗೂ ಇನ್ನಿತರ ಸಂಘಟನೆಗಳ ಪದಾಧಿಕಾರಿಗಳು, ಪ್ರತಿನಿಧಿಗಳು, ತುಳು-ಕನ್ನಡಿಗ ಭಕ್ತಾದಿಗಳು ಉಪಸ್ಥಿತರಿದ್ದು ಸಹಕರಿಸಿದರು.

ಚಿತ್ರ-ವರದಿ : ರಮೇಶ್‌ ಉದ್ಯಾವರ

ಟಾಪ್ ನ್ಯೂಸ್

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.