ಸಮಾಪ್ತಿಗೊಂಡ ಶ್ರೀನಿವಾಸ ಮಂಗಳೋತ್ಸವ
Team Udayavani, Nov 13, 2017, 5:03 PM IST
ಮುಂಬಯಿ: ಶ್ರೀ ಸಾಯಿಧಾಮ ಮಂದಿರ ಟ್ರಸ್ಟ್ ವಿರಾರ್ ಇವರು ಆಯೋಜಿಸಿದ ಐದನೇ ವಾರ್ಷಿಕ ಶ್ರೀನಿವಾಸ ಮಂಗಳೋತ್ಸವ ನ. 11ರಂದು ನಲಸೋಪರ ಪಶ್ಚಿಮದ ಶ್ರೀಪ್ರಸ್ಥ ಮೈದಾನದಲ್ಲಿ ವೈಭವೋಪೇತವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಲಕ್ಷಾಂತರ ಭಕ್ತರ ಜಯಘೋಷ ದೊಂದಿಗೆ ತಿರುಮಲ ತಿರುಪತಿ ದೇವಸ್ಥಾನ ಇದರ ಪೌರೋಹಿತ್ಯದಲ್ಲಿ ಸಮಾಜ ಸೇವಕ ವಿರಾರ್ ಶಂಕರ್ ಶೆಟ್ಟಿ ಅವರ ಮುಂದಾಳತ್ವದಲ್ಲಿ ದಿನಪೂರ್ತಿ ಜರಗಿದ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳು ಅದ್ದೂರಿಯಿಂದ ಜರಗಿದವು. ಶ್ರೀನಿವಾಸ ಮಂಗಳ್ಳೋತ್ಸವ ಕಾರ್ಯಕ್ರಮಕ್ಕೆ ಮೊದಲು ತಿರುಪತಿ ಯಿಂದ ತಂದ ಶ್ರೀನಿವಾಸ ಮತ್ತು ಶ್ರೀ ದೇವಿ-ಭೂದೇವಿಯ ಮೂರ್ತಿ ಯನ್ನು ಪ್ರತಿಷ್ಠಾಪಿಸಿ ಪೂಜೆಯನ್ನು ನೆರವೇರಿಸಿದರು. ತಿರುಪತಿ ದೇವಸ್ಥಾನದ ವಿಶ್ವಸ್ತರಾದ ಐಎಎಸ್ ಅಧಿಕಾರಿ ಶ್ರೀನಿವಾಸ ರಾಜ್ ಹಾಗೂ ತಿರುಪತಿಯ ಪುರೋಹಿತ ವೃಂದದವರು ವೇದ ಘೋಷ ಮೆರವಣಿಗೆಯೊಂದಿಗೆ ಮಂಗಳ್ಳೋತ್ಸವ ನೆರವೇರಿಸಿದರು.
ವಿದ್ವಾನ್ ಆನಂದತೀರ್ಥರ ನೇತೃತ್ವದಲ್ಲಿ ವಿದ್ವಾನ್ ಪ್ರಹ್ಲಾದ ಆಚಾರ್ಯ ನಾಗರಹಳ್ಳಿ, ವಿದ್ವಾನ್ ಗೋಪಾಲ್ ಆಚಾರ್ಯ ಉಪಸ್ಥಿತಿಯಲ್ಲಿ ವಿವಿಧ ಪೂಜೆ ಗಳು ನಡೆದವು. ಪುರೋಹಿತ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್ ಅವರ ನೇತೃತ್ವದಲ್ಲಿ ಶ್ರೀ ದೇವರಿಗೆ ಸ್ವಸ್ತಿ ಪುಣ್ಯಾಹವಾಚನ, ವಾಸ್ತುರಕ್ಷ, ಮಹಾಗಣಪತಿ ಹೋಮವು ನೆರವೇರಿತು.
ಮಂಗಳ್ಳೋತ್ಸವ ನೇತೃತ್ವದ ವಹಿಸಿದ ಭಾಯಿ ಠಾಕೂರ್ ಅವರು ಆಗಮಿಸಿ ಶ್ರೀದೇವರ ದರ್ಶದ ಪಡೆದರು. ಅಲ್ಲದೆ ರಾಜಕೀಯ ನೇತಾರರಾದ ಸಂಜಯ್ ರಾವುತ್, ಸಂಸದ ಗೋಪಾಲ್ ಶೆಟ್ಟಿ, ರಾಜನ್ ವಿಚಾರೆ, ಮನೀಷಾ ತಾಯಿ, ನರೇಂದ್ರ ಮೆಹ್ತಾ, ಪ್ರಕಾಶ್ ಸುರ್ವೇ, ಅರವಿಂದ ಎ. ಶೆಟ್ಟಿ, ಉಮೇಶ್ ನಾೖಕ್, ಬಿಎಸ್‌ಕೆಬಿ ಅಸೋಸಿಯೇಶನ್ ಅಧ್ಯಕ್ಷ ಡಾ| ಸುರೇಶ್ ರಾವ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಶ್ರೀ ಸಾಯಿಧಾಮ ಟ್ರಸ್ಟ್ ವತಿಯಿಂದ ಅವರನ್ನು ಶಾಲು ಹೊದೆಸಿ ಗೌರವಿಸಲಾಯಿತು.
ಮಂಗಳ್ಳೋತ್ಸವದ ಪ್ರಾರಂಭದಲ್ಲಿ ಶ್ರೀ ದೇವರ ಮೂರ್ತಿಯನ್ನು ಶೋಭಾಯಾತ್ರೆಯ ಮೂಲಕ ಶ್ರೀಪ್ರಸ್ಥ ಮೈದಾನದ ಭವ್ಯ ವೇದಿಕೆಗೆ ತರಲಾಯಿತು. ಮಹಿಳೆಯರು ಕಲಶ ದೊಂದಿಗೆ, ಮಹಾರಾಷ್ಟ್ರ ಹಾಗೂ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿ ಸುವ ಅನೇಕ ಸ್ತಬ§ಚಿತ್ರಗಳು ಹಾಗೂ ಮಹಾರಾಷ್ಟ್ರದ ಡೋಲು, ಕೇರಳದ ಚೆಂಡೆ, ತುಳುನಾಡಿನ ಹುಲಿವೇಷ, ಭಜನೆ ಹಾಗೂ ಸಾಂಸ್ಕೃತಿಕ ಉಡುಗೆ ತೊಡುಗೆಯ ಮೂಲಕ ವಿವಿಧ ಪ್ರದೇಶಗಳ ಭಕ್ತಾದಿಗಳು ಪಾಲ್ಗೊಂಡು ಮೆರವಣಿಗೆಗೆ ಮೆರುಗು ನೀಡಿದರು.
ಮೀರಾರೋಡ್‌ನಿಂದ ಡಹಾಣೂ ವಿನವರೆಗಿನ ವಿವಿಧ ಸಂಘ-ಸಂಸ್ಥೆಗಳು, ಪದಾಧಿಕಾರಿಗಳು, ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಬೇತಾಳ ನೃತ್ಯ, ನಾದಸ್ವರ ವಾದನ, ಜಂಬೋ ಸವಾರಿ, ಡೋಲು ಕುಣಿತ, ಯಕ್ಷಗಾನ ಪ್ರಾತ್ಯಕ್ಷಿಕೆ ವಿವಿಧ ಜಾನಪದ ನೃತ್ಯಗಳು ಶೋಭಾಯಾತ್ರೆಯಲ್ಲಿ ಭಕ್ತಾದಿಗಳನ್ನು ರಂಜಿಸಿತು. ರಸ್ತೆಯ ಎರಡೂ ಬದಿಯಲ್ಲೂ ಭಕ್ತಾದಿಗಳು ಹಾಗೂ ಮಹಿಳೆಯರು ನಿಂತು ಪುಷ್ಪವೃಷ್ಟಿಗೈದು ಶೋಭಾಯಾತ್ರೆಯನ್ನು ಸ್ವಾಗತಿಸಿದರು. ಶೋಭಾಯಾತ್ರೆಯಲ್ಲಿ ತಂದ ದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ ಬಳಿಕ ಮಂಗಳ್ಳೋತ್ಸವ ಕಾರ್ಯಗಳು ಆರಂಭಗೊಂಡಿತು. ಸಾವಿರಾರು ಮಂದಿ ಭಕ್ತಾದಿಗಳು ಪಾಲ್ಗೊಂಡು ಶ್ರೀನಿವಾಸ ಮಂಗಲೋತ್ಸವವನ್ನು ಕಣ್ತುಂಬಿಕೊಂಡರು. ಕೊನೆಯಲ್ಲಿ ಲಡ್ಡು ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಚಿತ್ರ-ವರದಿ: ಸುಭಾಷ್ ಶಿರಿಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sandalwood: ಪ್ರತಿಭೆ ಪ್ರದರ್ಶಿಸಲು ಕಲಾವಿದರಿಗೆ ಸೂಕ್ತ ವೇದಿಕೆ ಅಗತ್ಯ: ನಟ ಡಾಲಿ ಧನಂಜಯ
Navy: ಜ.15ಕ್ಕೆ ನೌಕಾಪಡೆಗೆ 2 ಯುದ್ಧ ನೌಕೆ, 1 ಸಬ್‌ಮರೀನ್ ಸೇರ್ಪಡೆ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
Hosanagara: ರಸ್ತೆ ಅಪಘಾತದಲ್ಲಿ ಪತಿ ಮೃತಪಟ್ಟ ಸುದ್ದಿ ಕೇಳಿ ಆತ್ಮಹತ್ಯೆಗೆ ಶರಣಾದ ಪತ್ನಿ
Poster Campaign: ಸಚಿವ ಪ್ರಿಯಾಂಕ್ ವಿರುದ್ಧ ಬಿಜೆಪಿ ಪೋಸ್ಟರ್ ಆಂದೋಲನ;ಎಫ್‌ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.