ದೇವಾಡಿಗ ಸಂಘ ಶ್ರೀರಾಮ ಭಜನ ಮಂಡಳಿ: ಶ್ರೀರಾಮ ನವಮಿ ಆಚರಣೆ


Team Udayavani, Apr 23, 2022, 11:59 AM IST

Untitled-1

ನವಿಮುಂಬಯಿ: ದೇವಾಡಿಗ ಸಂಘ ಮುಂಬಯಿ ಇದರ ಶ್ರೀರಾಮ ಭಜನ ಮಂಡಳಿ ವತಿಯಿಂದ ಹತ್ತನೇ ವಾರ್ಷಿಕ ಶ್ರೀರಾಮ ನವಮಿ ಆಚರಣೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಎ. 10ರಂದು ನೆರೂಲ್‌ನ ದೇವಾಡಿಗ ಭವನದಲ್ಲಿ  ನಡೆಯಿತು.

ನವಿಮುಂಬಯಿ ಮತ್ತು ಮುಂಬಯಿಯ ಆಹ್ವಾನಿತ 17 ವಿವಿಧ ಭಜನ ತಂಡಗಳಿಂದ 12 ಗಂಟೆಗಳ ಕಾಲ ಕುಣಿತ ಭಜನೆ ನೆರವೇರಿತು. ಶ್ರೀರಾಮ ನವಮಿ ಪ್ರಯುಕ್ತ ಭವನದಲ್ಲಿ  ಸ್ಥಾಪಿಸಲ್ಪಟ್ಟ ಶ್ರೀರಾಮ ದೇವಸ್ಥಾನವನ್ನು ಹೂವಿನಿಂದ ಅಲಂಕರಿಸಲಾಗಿತ್ತು. ಬೆಳಗ್ಗೆ 8ಕ್ಕೆ ಶ್ರೀರಾಮ ದೇವರ ಪೂಜೆ ನಡೆಸಿ ಬಳಿಕ ಶಂಖ, ಜಾಗಟೆ, ಚಂಡೆ, ಭಜನೆಯೊಂದಿಗೆ ಮಂಡಳಿಯ ಮುಖ್ಯಸ್ಥ ನ್ಯಾಯವಾದಿ ಪ್ರಭಾಕರ ದೇವಾಡಿಗ, ಅರ್ಚಕ ಭೋಜ ದೇವಾಡಿಗ, ಹಿರಿಯ ಭಜಕ ಶಂಕರ ದೇವಾಡಿಗ, ಚಂದ್ರಶೇಖರ್‌ ದೇವಾಡಿಗ ಮೊದಲಾದವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ರಾತ್ರಿ 9.30ಕ್ಕೆ ಅಸಲ್ಪಾದ ಶ್ರೀ ಚಾಮುಂಡೇಶ್ವರೀ ಭಜನ ಮಂಡಳಿ ಸಾಕಿನಾಕಾ ಮುಖ್ಯಸ್ಥೆ ರಂಜನಿ ಶೆಟ್ಟಿ  ಮಾರ್ಗದರ್ಶನಲ್ಲಿ  ನಂದಾದೀಪವನ್ನು ವಿಸರ್ಜಿಸಿ, ಶ್ರೀರಾಮ ದೇವರಿಗೆ ಮಹಾ ಆರತಿ, ಮಂಗಳದೊಂದಿಗೆ ಶ್ರೀರಾಮ ನವಮಿ ಮಹೋತ್ಸವಕ್ಕೆ ಮಂಗಳ ಹಾಡಲಾಯಿತು. ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನದಾನ ನಡೆಯಿತು. ಸಂಘದ ಮಾಜಿ ಅಧ್ಯಕ್ಷ ಎಚ್‌. ಮೋಹನ್‌ದಾಸ್‌ ಅವರು ಕಾರ್ಯಕ್ರಮದ ಪ್ರಮುಖ ಆಯೋಜಕರಾದ ನ್ಯಾಯವಾದಿ ಪ್ರಭಾಕರ ದೇವಾಡಿಗ ಮತ್ತು ಅವರಿಗೆ ಸಹಕರಿಸಿದ ಸಂಘದ ಎಲ್ಲ ಸ್ಥಳೀಯ ಸಮಿತಿಗಳನ್ನು ಹಾಗೂ ಭಜನ ಮಂಡಳಿಗಳನ್ನು ಶ್ಲಾಘಿಸಿ. ಶ್ರೀರಾಮ ನವಮಿ ಮಹೋತ್ಸವ ಆಚರಣೆಯಲ್ಲಿ  ಉತ್ಸಾಹದಿಂದ ಭಾಗವ ಹಿಸಿದ ಎಲ್ಲರಿಗೂ ಅಭಿನಂದನೆಗಳು, ಆಚರಣೆ ಅದ್ಧೂರಿಯಾಗಿ ಯಶಸ್ವಿಯಾಗಿದೆ ಎಂದು ತಿಳಿಸಿ ಶುಭ ಹಾರೈಸಿದರು.

ಶ್ರೀರಾಮನ ಬೋಧನೆ, ವಿಚಾರ ಧಾರೆ ಪ್ರತಿಯೊಬ್ಬರು ಅನುಸರಿಸಬೇಕು. ಶ್ರೀರಾಮ ನವಮಿ ಆಚರಣೆ ಶ್ರೀರಾಮನ ಸಂದೇಶವನ್ನು ಜನಸಾಮಾನ್ಯರಲ್ಲಿ ಹರಡುವ ಪ್ರಯತ್ನವಾಗಿದೆ ಎಂದು ಪ್ರಭಾಕರ ದೇವಾಡಿಗ ಹೇಳಿದರು.

ಸಮಾರಂಭದಲ್ಲಿ ಅಖೀಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಹಾಗೂ ಸಂಘದ ಮಾಜಿ ಅಧ್ಯಕ್ಷ ಧರ್ಮಪಾಲ್‌ ದೇವಾಡಿಗ, ಸಂಘದ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ದೇವಾಡಿಗ, ಭಾÅಮರಿ ಯಕ್ಷ ನೃತ್ಯ ಕಲಾ ನಿಲಯ ಚಾರಿಟೆಬಲ್‌ ಟ್ರಸ್ಟ್‌ ಇದರ ನೆರೂಲ್‌ ಒಂದರ ವಿಭಾಗ ಪ್ರಮುಖೆ ಪೂರ್ಣಿಮಾ ದೇವಾಡಿಗ ಮತ್ತು ನೆರೂಲ್‌ ಎರಡನೇ ವಿಭಾಗ ಪ್ರಮುಖೆ ತಾರಾ ಶೆಟ್ಟಿ  ಮತ್ತು ಇವರ ನೇತೃತ್ವದ ಕಲಾವಿದ ಮಕ್ಕಳು ಕುಣಿತ ಭಜನೆಯಲ್ಲಿ ಪಾಲ್ಗೊಂಡಿದ್ದರು. ಸಂಘದ ಜತೆ ಕಾರ್ಯದರ್ಶಿ ಮಾಲತಿ ಜೆ. ಮೊಲಿ, ಮಹಿಳಾ ವಿಭಾಗದ ಅಧ್ಯಕ್ಷೆ ರಂಜಿನಿ ದೇವಾಡಿಗ, ವ್ಯವಸ್ಥಾಪನ ಸಮಿತಿ, ಸ್ಥಳೀಯ ಸಮನ್ವಯ ಸಮಿತಿ, ಉಪಸಮಿತಿ ಹಾಗೂ ಯುವ ಘಟಕದ ಸದಸ್ಯರು ಸಂಭ್ರಮಾಚರಣೆಯಲ್ಲಿ  ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಲತಾ ಮತ್ತು ಆನಂದ್‌ ಶೇರಿಗಾರ್‌ ಖಾರ್‌ಘರ್‌, ಸರಸ್ವತಿ ಮತ್ತು ಭೋಜ ದೇವಾಡಿಗ ವಾಶಿ, ಪೂರ್ಣಿಮಾ ಮತ್ತು ದಯಾನಂದ ದೇವಾಡಿಗ ನೆರೂಲ…, ಶುಭಾವತಿ ಮತ್ತು ಚಂದ್ರಶೇಖರ ದೇವಾಡಿಗ ಉಳ್ವೆ, ವಿಟuಲ್‌ ದೇವಾಡಿಗ ಐರೋಲಿ, ಸುರೇಶ್‌ ದೇವಾಡಿಗ ಬಾಕೂìರು, ಸುರೇಶ್‌ ದೇವಾಡಿಗ ಹಳೆಯಂಗಡಿ, ಶಂಕರ್‌ ದೇವಾಡಿಗ ಐರೋಲಿ, ಶಾಂತಾ ಪಿ. ದೇವಾಡಿಗ, ಸುಂದರಿ ದೇವಾಡಿಗ, ಗೀತಾ ಮತ್ತು ಹರೀಶ್‌ ದೇವಾಡಿಗ, ಕಲಾ ಜಿ. ಶೇರಿಗಾರ್‌, ಅಂಬಿಕಾ ಮತ್ತು ಜನಾರ್ದನ ದೇವಾಡಿಗ, ಆಶಾ ದೇವಾಡಿಗ ಸಾನಾ³ಡಾ, ಶಾಂತಾ ದೇವಾಡಿಗ ನೆರೂಲ…, ತನ್ವಿ ಡಿ. ದೇವಾಡಿಗ, ಕ್ಷಿತಿ ಜೆ. ದೇವಾಡಿಗ, ಶ್ವೇತಾ ದೇವಾಡಿಗ, ರಮೇಶ್‌ ಐರೋಲಿ, ರವಿಕಲಾ ದೇವಾಡಿಗ, ವನಿತಾ ಆರ್‌. ದೇವಾಡಿಗ, ಆಶಾ. ದೇವಾಡಿಗ ನೆರೂಲ…, ಅಶ್ವಿ‌ನಿ ಮತ್ತು ಕರಣ್‌ ದೇವಾಡಿಗ ಐರೋಲಿ, ಶಾಂಭವಿ ದೇವಾಡಿಗ ವಾಶಿ, ಪ್ರಿಯಾ ದೇವಾಡಿಗ ಖಾರ್‌ಘರ್‌, ಸಚಿನ್‌ ದೇವಾಡಿಗ ಐರೋಲಿ, ಜಾರಪ್ಪ ಮೊಲಿ ಸಹಿತ ಅನೇಕ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಪ್ರಭಾಕರ್‌ ದೇವಾಡಿಗ ಅವರು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಕುಣಿತ ಭಜನೆ :  ಅತಿಥಿ ತಂಡಗಳಾದ  ಶ್ರೀ ಚಾಮುಂಡೇಶ್ವರೀ ಭಜನ ಮಂಡಳಿ ಸಾಕಿನಾಕಾ, ಶ್ರೀ ಅಯ್ಯಪ್ಪ ಸೇವಾ ಭಜನ ಮಂಡಳಿ ಐರೋಲಿ, ಜೈ ಅಂಬೆ ಚಾರಿಟೆಬಲ್‌ ಟ್ರಸ್ಟ್‌ ಸಾನ್‌ಪಾಡಾ, ಬಿಎಸ್‌ಕೆಬಿ ಗೋಕುಲ ಭಜನ ಮಂಡಳಿ ಸಯನ್‌, ಶ್ರೀ ಶನೀಶ್ವರ ಭಜನ ಮಂಡಳಿ ನೆರೂಲ್‌, ಶ್ರೀ ಗಣೇಶ ಅಯ್ಯಪ್ಪ ದುರ್ಗಾ ಕ್ಷೇತ್ರ ನೆರೂಲ್‌, ಗುರುವಂದನ ಭಜನ ಮಂಡಳಿ, ಕುಲಾಲ ಸಂಘ ಇವರು ತಮ್ಮ ಪಾರಂಪರಿಕ ಭಜನೆ ಮತ್ತು ಕುಣಿತ ಭಜನೆ ಪ್ರದರ್ಶಿಸಿದರು.

ಭಜನ ಕಾರ್ಯಕ್ರಮ :

ಸಂಘದ 10 ಸ್ಥಳೀಯ ಸಮನ್ವಯ ಸಮಿತಿಗಳ ಹತ್ತು ಭಜನ ತಂಡಗಳ ಅಧ್ಯಕ್ಷರಾದ ಅಶೋಕ್‌ ದೇವಾಡಿಗ ಡೊಂಬಿವಲಿ, ಬಾಲಚಂದ್ರ ದೇವಾಡಿಗ ಸಿಟಿ, ಯೋಗೇಶ್‌ ಎಸ್‌. ದೇವಾಡಿಗ ಅಸಲ್ಪಾ, ಭಾಸ್ಕರ್‌ ದೇವಾಡಿಗ ಬೊರಿವಲಿ, ಎಂ. ಸಿ. ಹೆಮ್ಮಾಡಿ ಮೀರಾರೋಡ್‌, ಯೋಗೇಶ್‌ ಶ್ರೀಯಾನ್‌ ಜೋಗೇಶ್ವರಿ, ವಿಶ್ವನಾಥ ಪಿ. ದೇವಾಡಿಗ ಭಾಂಡೂಪ್‌, ಪ್ರವೀಣ್‌ ಸಾಲ್ಯಾನ್‌ ಥಾಣೆ, ಯಶವಂತ ದೇವಾಡಿಗ ಚೆಂಬೂರು ತಂಡಗಳಿಂದ ಭಜನ ಕಾರ್ಯಕ್ರಮ ನೆರವೇರಿತು.

ಟಾಪ್ ನ್ಯೂಸ್

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-koneru

Chess player; ಕುಟುಂಬ ಸಮೇತ ಮೋದಿ ಭೇಟಿಯಾದ ಕೊನೆರು ಹಂಪಿ

death

Kinnigoli: ಔಷಧ ಸಿಂಪಡಿಸುವಾಗ ಕುಸಿದು ಬಿದ್ದು ಕೃಷಿಕ ಸಾವು

4

Uppinangady: ತೆಂಗಿನಮರದಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಮೃತ್ಯು

Maski ಅಕ್ರಮ‌ ಮರಂ ಸಾಗಾಣಿಕೆ: ಎರಡು ಟಿಪ್ಪರ್ ವಶಕ್ಕೆ

Maski ಅಕ್ರಮ‌ ಮರಂ ಸಾಗಾಣಿಕೆ: ಎರಡು ಟಿಪ್ಪರ್ ವಶಕ್ಕೆ

11

Mangaluru: ಗಾಂಜಾ ಮಾರಾಟ; ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.