ಪ್ರತಿಯೊಬ್ಬ ಅರ್ಹರಿಗೆ ಲಸಿಕೆ ನೀಡಲು ರಾಜ್ಯ ಸರಕಾರ ಬದ್ಧ: ಅಜಿತ್ ಪವಾರ್
Team Udayavani, Jun 1, 2021, 10:43 AM IST
ಪುಣೆ: ಕೋವಿಡ್ ಲಸಿಕೆ ಗರಿಷ್ಠ ಸಂಖ್ಯೆಯಲ್ಲಿ ಲಭ್ಯವಾಗುವಂತೆ ಮಾಡಲು ರಾಜ್ಯ ಸರಕಾರ ಎಲ್ಲ ಹಂತಗಳಲ್ಲಿಯೂ ಪ್ರಯತ್ನಗಳನ್ನು ಮಾಡುತ್ತಿದ್ದು, ರಾಜ್ಯದ ಪ್ರತಿಯೋರ್ವ ಅರ್ಹ ನಾಗರಿಕರಿಗೆ ಲಸಿಕೆ ನೀಡಲು ಸರಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ.
ವ್ಯಾಕ್ಸಿನೇಶನ್ ನೀಡುವುದರಲ್ಲಿ ಪುಣೆ ಜಿಲ್ಲೆ ಮುಂಚೂಣಿಯಲ್ಲಿದೆ. ಪುಣೆ ನಗರದಲ್ಲಿನ ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಸುಲಭವಾದ ಪದ್ಧತಿಯಲ್ಲಿ ಲಸಿಕಾ ಸೌಲಭ್ಯ ಒದಗಿಸಲು ಹಡಪ್ಸರ್ ಪ್ರದೇಶದಲ್ಲಿ ಡ್ರೈ ಇನ್ ವ್ಯಾಕ್ಸಿನೇಶನ್ ಸೆಂಟರ್ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಅಜಿತ್ ಪವಾರ್ ಹೇಳಿದ್ದಾರೆ. ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಕಡಿಯಾಗುತ್ತಿದೆ ಎಂಬುದು ತೃಪ್ತಿಯ ವಿಷಯವಾಗಿದ್ದರೂ ಸಂಭವನೀಯ ಮೂರನೇ ಅಲೆಯನ್ನು ಗಮನದಲ್ಲಿಟ್ಟುಕೊಂ ಡು ಎಚ್ಚರಿಕೆ ವಹಿಸಬೇಕಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಸಚಿವಾಲ ಯದ ಉಪ ಮುಖ್ಯಮಂತ್ರಿ ಕಚೇ ರಿಯ ಸಮಿತಿ ಸಭಾಂಗಣದಿಂದ ಆನ್‌ಲೈನ್ ಮೂಲಕ ಹಡಪ್ಸರ್‌ನಲ್ಲಿ ಮೊದಲ ಡ್ರೈವ್ ಇನ್ ವ್ಯಾಕ್ಸಿನೇಶನ್ ಸೆಂಟರ್ ಅನ್ನು ಉದ್ಘಾಟಿಸಿದರು.
ರಾಜ ಮಾತೇ ಅಹಲ್ಯ ದೇವಿ ಹೊಲ್ಕರ್ ಅವರ ಜನ್ಮ ದಿನಾಚರಣೆ ಸಂದರ್ಭ ಅವರ ಕೆಲಸ ಮತ್ತು ಆಲೋಚ ನೆಗಳನ್ನು ಸ್ಮರಿಸಿದ ಉಪಮುಖ್ಯಮಂತ್ರಿ ಪವಾರ್, ರಾಜ್ಯದ ವೈದ್ಯರು, ದಾದಿಯರು ಸಹಿತ ಆರೋಗ್ಯ ವ್ಯವಸ್ಥೆ ತನ್ನೆಲ್ಲ ಶಕ್ತಿಯನ್ನು ಮೀರಿ ಕೊರೊನಾ ವಿರುದ್ಧ ಹೋರಾಡುತ್ತಿದೆ ಎಂದರು.
ಕೊರೊನಾ ಬಿಕ್ಕಟ್ಟು ನಿವಾರಿಸಲು ಪ್ರತಿ ಯೊಬ್ಬ ನಾಗರಿಕರಿಗೆ ಲಸಿಕೆ ನೀಡಲು ಸರಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ. ವಿದೇಶ ದಿಂದ ಲಸಿಕೆಗಳನ್ನು ಖರೀದಿಸಲು ಸರಕಾರ ಸಿದ್ಧ ವಾಗಿದೆ. ಲಸಿಕೆ ತಯಾರಕ ಭಾರತ್ ಬಯೋ ಟೆಕ್‌ನ ತಾಣವನ್ನು ಪುಣೆಯಲ್ಲಿ ತತ್‌ಕ್ಷಣ ಲಭ್ಯ ಗೊಳಿ ಸಲಾಗಿದ್ದು, ಶೀಘ್ರದÇÉೇ ಇಲ್ಲಿ ಲಸಿಕೆ ಉತ್ಪಾದನೆ ಪ್ರಾರಂಭವಾಗಲಿದೆ. ಆ ಮೂಲಕ ರಾಜ್ಯ ಸರಕಾರ ಕೊರೊನಾ ಲಸಿಕೆ ಚುರುಕುಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.
ಪುಣೆ ನಗರದ ಹಡಪ್ಸರ್‌ನಲ್ಲಿ ಪ್ರಾರಂಭವಾದ ಡ್ರೈವ್ ಇನ್ ವ್ಯಾಕ್ಸಿನೇಶನ್ ಸೆಂಟರ್ ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸಲಿದೆ. ಕೊರೊನಾ ಎರಡನೇ ಅಲೆಯ ಆತಂಕವನ್ನು ನಾವು ಯಶಸ್ವಿಯಾಗಿ ನಿಭಾಯಿಸುತ್ತಿದ್ದೇವೆ. ಸಂಭ ವನೀಯ ಮೂರನೇ ಅಲೆ ಭೀತಿಯನ್ನು ಪರಿಗಣಿಸಿ ರಾಜ್ಯ ಸರಕಾರವು ಮಕ್ಕಳ ವೈದ್ಯರ ಕಾರ್ಯ ಪಡೆ ಯನ್ನೂ ರಚಿಸಿದೆ ಎಂದು ತಿಳಿಸಿದ ಉಪ ಮುಖ್ಯ ಮಂತ್ರಿ ಅಜಿತ್ ಪವಾರ್, ಮಳೆಗಾಲ ದಲ್ಲಿ ಕೊರೊನಾದೊಂದಿಗೆ ಇತರ ಸಾಂಕ್ರಾ ಮಿಕ ಕಾಯಿಲೆಗಳ ಲಕ್ಷಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನಾಗರಿಕರು ಆರೋ ಗ್ಯದ ಬಗ್ಗೆ ಕಾಳಜಿ ವಹಿಸುವುದರ ಜತೆಗೆ ಸಮಯ ದಲ್ಲಿ ಚಿಕಿತ್ಸೆ ಪಡೆಯಬೇಕು. ಇದರ ಜತೆಗೆ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ನಾಗರಿಕರಲ್ಲಿ ಮನವಿ ಮಾಡಿದರು.
ಈ ಸಂದರ್ಭ ಸಂಸದೆ ವಂದನಾ ಚವಾಣ್, ಸಂಸದ ಡಾ| ಅಮೋಲ್ ಕೊಲ್ಹೆ, ಶಾಸಕ ಚೇತನ್ ತುಪೆ, ಪುಣೆ ಮನಪಾ ಆಯುಕ್ತ ವಿಕ್ರಮ್ ಕುಮಾರ್, ಹೆಚ್ಚುವರಿ ಆಯುಕ್ತ ರುಬೆಲ್ ಅಗರ್ವಾಲ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Surathkal: ಸಿಲಿಂಡರ್ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
Kasaragod: ಎಟಿಎಂಗೆ ತುಂಬಿಸಲು ತಂದ 50 ಲಕ್ಷ ರೂ. ಕಳವು ಮಾಡಿದ ಸೂತ್ರಧಾರನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.