ಅನಗತ್ಯ ಸಂಚಾರದ ವಿರುದ್ಧ ಕಠಿಣ ಕ್ರಮ: ರಾಜ್ಯ ಸರಕಾರ
Team Udayavani, Jul 1, 2020, 6:01 PM IST
ಸಾಂದರ್ಭಿಕ ಚಿತ್ರ
ಮುಂಬಯಿ, ಜೂ. 30: ರಾಜ್ಯದಲ್ಲಿ ಕೋವಿಡ್ ಹರಡುವುದನ್ನು ತಡೆಯಲು ನಾಗರಿಕರು ತಮ್ಮ ಮನೆಯಿಂದ 2 ಕಿ. ಮೀ. ವ್ಯಾಪ್ತಿಯನ್ನು ಮೀರಿ ಹೋಗುವುದನ್ನು ಮುಂಬಯಿ ಪೊಲೀಸರು ನಿಷೇಧಿಸಿದ್ದು, ಇದೊಂದು ಅತ್ಯಗತ್ಯ ನಡೆಯಾಗಿದೆ ಎಂದು ರಾಜ್ಯ ಸರಕಾರ ಹೇಳಿದೆ.
ಪೊಲೀಸರ ಮಾರ್ಗಸೂಚಿಗಳ ಪ್ರಕಾರ, ನಾಗರಿಕರು ಕೆಲಸಕ್ಕೆ ಹೋಗಬೇಕಾದರೆ ಅಥವಾ ಯಾವುದೇ ತುರ್ತು ಸಂದರ್ಭದಲ್ಲಿ ಮಾತ್ರ 2 ಕಿ.ಮೀ. ಮಿತಿ ವರೆಗೆ ಸಂಚರಿಸಬಹುದು. ಈ ನಿಯ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೂ ಎಂದು ರಾಜ್ಯ ಪೊಲೀಸ್ ಇಲಾಖೆ ಎಚ್ಚರಿಸಿದೆ. ರಸ್ತೆಗಳಲ್ಲಿ ಅನಿ ಯಂತ್ರಿತ ಮತ್ತು ಅನಗತ್ಯ ಜನಸಂದಣಿಯನ್ನು ತಡೆಹಿ ಡಿಯುವುದು ಇದರಉದ್ದೇಶವಾಗಿದೆ ಎಂದು ಉದ್ಧವ್ ಠಾಕ್ರೆ ಹೇಳಿದರು.
ಮುಂಬಯಿ ಮತ್ತು ಮುಂಬಯಿ ಮೆಟ್ರೋಪಾಲಿಟನ್ ಪ್ರದೇಶದಲ್ಲಿರುವ ಜನರು ಯಾವುದೇ ಕಾರಣ ವಿಲ್ಲದೆ ತಮ್ಮ ಮನೆಗಳಿಂದ ಹೊರಹೋಗುವುದನ್ನು ಕಾಣಬಹುದು. ಇದು ಜನಸಂದಣಿ ಮತ್ತು ಸಂಚಾರ ದಟ್ಟಣೆಗೆ ಕಾರಣ ವಾಗುತ್ತಿದೆ. ಜನರ ಈ ಮಡೆಯಿಂದ ಕೋವಿಡ್ ಹರಡುವುದನ್ನು ನಿಯಂತ್ರಣದಲ್ಲಿಡಲು ಮಾಡಿದ ಪ್ರಯತ್ನಗಳು ವ್ಯರ್ಥವಾಗುತ್ತದೆ. ಈ ಹಿನ್ನೆಲೆ ಇಂತಹ ಸಂದರ್ಭದಲ್ಲಿ ಮುಂಬಯಿ ಪೊಲೀಸರು ತೆಗೆದುಕೊಳ್ಳುವ ಕ್ರಮಗಳು ಅಗತ್ಯವಾಗಿರುತ್ತದೆ ಎಂದು ಠಾಕ್ರೆ ಪುನರುಚ್ಚಿರಿಸಿದ್ದಾರೆ.
ಪೊಲೀಸರ ಆದೇಶ ಗೊಂದಲಕ್ಕೆ ಕಾರಣವಾಯಿತು : ರಾಜ್ಯ ಸರಕಾರದ ಅಧಿಕಾರಿಗಳ ಪ್ರಕಾರ, ಈ ನಿರ್ಬಂಧಗಳನ್ನು ವಿಧಿಸಲು ಮುಂಬಯಿ ಪೊಲೀಸರಿಗೆ ಯಾವುದೇ ನಿರ್ದಿಷ್ಟ ನಿರ್ದೇಶನಗಳನ್ನು ನೀಡಿಲ್ಲ. ಕಾಲಕಾಲಕ್ಕೆ ಹೊರಡಿಸಿದ ಅಧಿಸೂಚನೆಗಳ ಮೂಲಕ ಅವರಿಗೆ ನೀಡಲಾದ ಅಧಿಕಾರವನ್ನು ಬಳಸಿಕೊಂಡು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆಜ್ಞೆಯು ಬಹಳಷ್ಟು ಗೊಂದಲಕ್ಕೆ ಕಾರಣವಾಯಿತು ಎಂಬುದು ನಿಜ. ಆದರೆ ಅದು ಅಗತ್ಯವಾಗಿತ್ತು. ಅವರು ನಾಗರಿಕರಲ್ಲಿ ಅಗತ್ಯ ಜಾಗೃತಿ ಮೂಡಿಸಿದ್ದರೆ, ಗೊಂದಲವನ್ನು ತಪ್ಪಿಸಬಹುದಿತ್ತು ಎಂದು ರಾಜ್ಯ ಸರಕಾರಿ ಅಧಿಕಾರಿಯೊಬ್ಬರು ಹೇಳಿದರು.
14,691 ವಾಹನಗಳು ವಶಕ್ಕೆ : ಜೋಗೇಶ್ವರಿ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಮಹೇಂದ್ರ ನೆರ್ಲೇಕರ್ ಮಾಹಿತಿ ನೀಡಿ, ಕಳೆದ 24 ಗಂಟೆಗಳಲ್ಲಿ ಮುಂಬಯಿ ಪೊಲೀಸರು ಸಂಚಾರ ಇಲಾಖೆಯೊಂದಿಗೆ 14,691 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ ಎಂದರು. ಜನರು ಅನಗತ್ಯವಾಗಿ ಸಂಚರಿ ಸುತ್ತಿದ್ದಾರೆ. ನಾವು ಅವರನ್ನು ತಡೆದಾಗ ಕ್ಷುಲ್ಲಕ ಕಾರಣಗಳನ್ನು ನೀಡಿ ದಾಖಲೆಗಳನ್ನು ನಮಗೆ ತೋರಿಸಲು ವಿಫಲರಾಗುತ್ತಾರೆ. ಅಂತವರ ವಿರುದ್ಧ ಕ್ರಮಕೈಗೊಳ್ಳಿತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.