ಪುಣೆಯ ಅಭಿನಂದನ್ ಶೆಟ್ಟಿಗೆ “ಸ್ಟೂಡೆಂಟ್ ಆಫ್ ದ ಇಯರ್ ಅವಾರ್ಡ್
Team Udayavani, Mar 14, 2019, 5:19 PM IST
ಪುಣೆ: ನಗರದ ಸಿಂಹಘಡ್ ಕಾಲೇಜಿನಲ್ಲಿ ಬಿಬಿಎ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಪುಣೆಯ ಕನ್ನಡಿಗ ಅಭಿನಂದನ್ ಶೇಖರ್ ಶೆಟ್ಟಿ ಅವರು ಕಲಿಕೆಯಲ್ಲಿ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತನ್ನನ್ನು ಶಿಸ್ತುಬದ್ಧವಾಗಿ ತೊಡಗಿಸಿಕೊಂಡು ಆದರ್ಶ ವಿದ್ಯಾರ್ಥಿಯಾಗಿ ರೂಪುಗೊಂಡು ಪ್ರಸ್ತುತ ವರ್ಷದ ‘ಸ್ಟೂಡೆಂಟ್ ಆಫ್ ದ ಇಯರ್ ಅವಾರ್ಡ್ -2019’ ನ್ನು ಕಾಲೇಜಿನಿಂದ ಪಡೆದುಕೊಂಡಿದ್ದಾರೆ.
ಕಾಲೇಜಿನ ಶಿಕ್ಷಕರ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿ ಪ್ರಶಂಸೆಯನ್ನು ಗಿಟ್ಟಿಸಿಕೊಂಡಿರುವ ಇವರು, ಬಾಲ್ಯದಿಂದಲೇ ಪ್ರತಿಭಾವಂತ ವಿದ್ಯಾರ್ಥಿಯಾಗಿ ಗುರುತಿಸಿಕೊಂಡು ಗಮನ ಸೆಳೆಯುತ್ತಿದ್ದು, ಕೆಜಿ ತರಗತಿಯಿಂದ 4 ನೇ ತರಗತಿಯವರೆಗೆ ಪ್ರತೀ ವರ್ಷ ರಜಾ ದಿನಗಳನ್ನು ಬಿಟ್ಟು ಉಳಿದೆಲ್ಲ ದಿನಗಳಲ್ಲಿ ಪೂರ್ಣ ಹಾಜರಾತಿಯೊಂದಿಗೆ ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿಯಾಗಿ ಪ್ರಶಂಸೆಗಳಿಸಿದ್ದರು.
12ನೇ ತರಗತಿಯಲ್ಲಿ ಪುಣೆ ಜಿÇÉಾ ಪರಿಷತ್ ಕ್ರಿಕೆಟ್
ಟೂರ್ನಮೆಂಟ್‌ನಲ್ಲಿ ಭಾಗವಹಿಸಿ ಅತ್ಯುತ್ತಮ ಕ್ರೀಡಾಪಟು ವಾಗಿ ಬಹುಮಾನವನ್ನು ಗಳಿಸಿದ್ದರು. ಕಲಿಕೆಯೊಂದಿಗೆ ಕ್ರಿಕೆಟ್, ನೃತ್ಯ ಪ್ರದರ್ಶನ, ಚಿತ್ರಕಲೆ, ನಾಟಕ ಮುಂತಾದ ಚಟು ವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಹುಮುಖ ಪ್ರತಿಭೆಯಾಗಿ ಗಮನ ಸೆಳೆಯುತ್ತಿರುವ ವಿದ್ಯಾರ್ಥಿ ಯಾಗಿ¨ªಾರೆ. ಉತ್ತಮ ಕ್ರಿಕೆಟ್ ಆಟಗಾರನಾಗಿರುವ ಇವರು ಸತತ ಎರಡು ವರ್ಷ ಸಿಂಹಘಡ್ ಕಾಲೇಜಿನ ಕ್ರಿಕೆಟ್ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಿ¨ªಾರೆ.
ಪುಣೆ ಬಂಟರ ಸಂಘದ ಯುವ ವಿಭಾಗದ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸಕ್ರಿಯರಾಗಿ ಗುರುತಿಸಿಕೊಂಡು ಉತ್ತಮ ಕಾರ್ಯವನ್ನು ಮಾಡುತ್ತಿ¨ªಾರೆ. ಪುಣೆ ಬಂಟರ ಸಂಘದ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಗುರುತಿಸಿ ಕೊಂಡಿದ್ದಲ್ಲದೆ ನೃತ್ಯ ಪ್ರದರ್ಶನ, ಕ್ರಿಕೆಟ್, ಚಿತ್ರ ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನ ಸೆಳೆಯುತ್ತಿ¨ªಾರೆ. ಪುಣೆ ಬಂಟರ ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ, ಹೊಟೇಲ್ ಉದ್ಯಮಿ ಮೂಲತಃ ಮಡಿಕೇರಿಯ ಶೇಖರ್ ಸಿ. ಶೆಟ್ಟಿ ಮತ್ತು ಲತಾ ಎಸ್. ಶೆಟ್ಟಿ ದಂಪತಿಯ ಪುತ್ರ.
ವರದಿ: ಕಿರಣ್ ಬಿ. ರೈ ಕರ್ನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.