ಸುಜಾತಾ ಶೆಟ್ಟಿ ಅವರ “ಕಾನನದ ಹೂವು’ ಕವನ ಸಂಕಲನ ಬಿಡುಗಡೆ
Team Udayavani, Apr 15, 2018, 4:05 PM IST
ಮುಂಬಯಿ: ಕವಯಿತ್ರಿ ಸುಜಾತಾ ಶೆಟ್ಟಿ ಅವರ ಕಾನನದ ಹೂವು ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷನನ್ನಾಗಿ ನನಗೆ ಅವಕಾಶ ನೀಡಿದ್ದ ಕೃತಜ್ಞತೆಗಳು. ಸುಜಾತಾ ಶೆಟ್ಟಿ ಅವರು ಭೇಟಿಯಾದಾಗಲೆಲ್ಲ ನಿಮ್ಮ ಕವನ ಸಂಕಲನ ಯಾವಾಗ ಬಿಡುಗಡೆಗೊಳ್ಳುತ್ತದೆ ಎಂದು ಪ್ರಶ್ನಿಸುತ್ತಿದ್ದೆ. ಇದೀಗ ಕಾಲ ಕೂಡಿ ಬಂದಿದೆ. ಈ ಕೃತಿ ಹೊರ ಬರಲು ಸೃಜನಾ ಬಳಗ ಕಾರಣ ಎಂದು ನಾನು ಭಾವಿಸಿದ್ದೇನೆ. ನಾವು ನೆಲೆ ನಿಂತಿರುವುದು ಮರಾಠಿ ನೆಲದಲ್ಲಾದರೂ ವಾಟ್ಸಪ್, ಫೇಸ್‌ಬುಕ್ ಯುಗದಲ್ಲಿ ನಿತ್ಯ ಮುಂಬಯಿ ಕನ್ನಡಿಗರು ಕವನ, ಲೇಖನಗಳನ್ನು ಬರೆಯುತ್ತಿರುವುದು ಅಭಿಮಾನದ ಸಂಗತಿ. ಅಲ್ಲದೆ ಇಲ್ಲಿಯ ಲೇಖಕರ ಕೃತಿಗಳು, ಕವನಗಳು ನಿರಂತರವಾಗಿ ಬಿಡುಗಡೆಗೊಳ್ಳುತ್ತಿವೆ. ನಾವು ಕರ್ನಾಟಕದಲ್ಲಿಯೇ ಇದ್ದೇವೆ ಎಂದು ಭಾವಿಸಲಾಗುತ್ತಿದೆ. ಯುವ ಬರಹಗಾರರ ಸೃಷ್ಟಿ ಕನ್ನಡದ ಬೆಳವಣಿಗೆಗೆ ಪೂರಕವಾಗಿದೆ. ನಾವು ಬರೆಯಬೇಕು, ಇನ್ನೊಬ್ಬರು ಬರೆಯುವಂತಾಗಬೇಕು. ಅಂತಹ ಅವಕಾಶ ಮುಂಬಯಿಯಲ್ಲಿದೆ ಎಂದು ಸಾಹಿತಿ, ಕವಿ ಡಾ| ಕರುಣಾಕರ ಶೆಟ್ಟಿ ಪಣಿಯೂರು ಅವರು ನುಡಿದರು.
ಎ. 8ರಂದು ಗೋರೆಗಾಂವ್ ಕರ್ನಾಟಕ ಸಂಘದ ಕಿರು ಸಭಾಗೃಹದಲ್ಲಿ ನಡೆದ ಪೃಥ್ವಿ ಪ್ರಕಾಶನ ಪ್ರಕಟಿತ ಕವಯಿತ್ರಿ, ಲೇಖಕಿ ಸುಜಾತಾ ಶೆಟ್ಟಿ ಅವರ “ಕಾನನದ ಹೂವು’ ಚೊಚ್ಚಲ ಕವನ ಸಂಕಲನ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಶುಭಹಾರೈಸಿದರು.
ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ವ್ಯಂಗ್ಯಚಿತ್ರಕಾರ ಪಂಜು ಗಂಗೊಳ್ಳಿ ಇವರು, ಕವಿತೆಗಳು ಹೂವಿನ ಅಂತರಾಳ, ಸುವಾಸನೆಯನ್ನು ಹೂವುಗಳ ಬಯಸುವುದಾ ದರೆ, ಇನ್ನೊಂದು ಕಡೆ ಬದುಕಿನ ಅನ್ಯಾಯಗಳನ್ನು ಪ್ರತಿಭಟಿಸುವ ಒಂದು ಪರಿಣಾಮಕಾರಿ ಮಾಧ್ಯಮವಾಗಿದೆ ಎಂದರು.
ಸಮಾಜದಲ್ಲಿ ಶೇ. 99ರಷ್ಟು ಜನ ಸಾಮಾನ್ಯ ರಾದರೆ, ಕೇವಲ ಶೇ. 1ರಷ್ಟು ಮಂದಿ ಮಾತ್ರ ಸಾಧಕರಾಗುತ್ತಾರೆ. ಈ ಸಾಧಕರ ಕ್ಷೇತ್ರ ಸಾಹಿತ್ಯ, ವೈದ್ಯಕೀಯ, ಸಂಗೀತ, ಕಲೆ, ವಿಜ್ಞಾನ ಇನ್ನಾವುದೇ ಆಗಿರಬಹುದು. ತಮ್ಮ ಪ್ರಥಮ ಕವನ ಸಂಕಲನದ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಪದಾರ್ಪಣೆಗೈದ ಸುಜಾತಾ ಶೆಟ್ಟಿ ಅವರಿಗೆ ಅಭಿನಂದನೆ ಸಲ್ಲಿಸಿ, ಅವರಿಂದ ಇನ್ನಷ್ಟು ಕೃತಿಗಳು ಹೊರಬರಲಿ ಎಂದು ನುಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಸಾಹಿತಿ ರತ್ನಾಕರ ಶೆಟ್ಟಿ ಅವರು ಮಾತನಾಡಿ, ಸೃಜನಶೀಲ ಕವಿಯ ಮನಸ್ಸು ಸಮಕಾಲೀನ ತಲ್ಲಣಗಳಿಗೆ ಸ್ಪಂದಿಸುತ್ತದೆ. ಸುಜಾತಾ ಶೆಟ್ಟಿ ಅವರ ಕವನಗಳು ಸಹಜವಾದ ಪ್ರಕ್ರಿಯೆಯಿಂದ ಸುಂದ ರವಾಗಿ ಮೂಡಿ ಬಂದಿವೆ. ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಉಜ್ವಲವಾದ ಭವಿಷ್ಯವಿದೆ ಎಂದರು.
ಗೋರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷ ಪಯ್ನಾರು ರಮೇಶ್ ಶೆಟ್ಟಿ ಇವರು ಮಾತನಾಡಿ, ಸುಜಾತಾ ಶೆಟ್ಟಿ ಅವರ ಕವಿತೆಗಳನ್ನು ಆಲಿಸಿಕೊಂಡಿದೆ. ಅವರಂತಹ ಪ್ರತಿಭಾವಂತ ಕವಯಿತ್ರಿಗಳು, ಲೇಖಕಿಯರು ಬಹಳಷ್ಟು ಮಂದಿ ಇದ್ದಾರೆ. ಅವರ ಪ್ರತಿಭೆಯನ್ನು ಗುರುತಿಸುವಲ್ಲಿ ಎಲ್ಲರೂ ಪ್ರೋತ್ಸಾಹ ನೀಡಬೇಕು. ಸುಜಾತಾ ಶೆಟ್ಟಿ ಅವರು ಕಾವ್ಯಲೋಕದಲ್ಲಿ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.
ಕೃತಿ ಪರಿಚಯಿಸಿದ ಕವಿ ಡಾ| ಜಿ. ಪಿ. ಕುಸುಮಾ ಇವರು, ಒಂದು ನಿರ್ಲಕ್ಷಿತ ಹೂವಿನ ಬದುಕಿನ ಚಿತ್ರಣ ಸುಂದರವಾಗಿ ಕಲಾಕೃತಿಯಲ್ಲಿ ಮೂಡಿಬಂದಿದೆ. ಆ ಹೂವು ಕವಯಿತ್ರಿಗೆ ಕಾನನದಲ್ಲಿ ನಿರ್ಲಕ್ಷ್ಯಕ್ಕೆ ಒಳಪಟ್ಟಿದೆ ಎಂದು ಗೋಚರಿಸುತ್ತಿದೆ. ಯಾರು ಈ ಹೂವನ್ನು ಮುಡಿಗೇರಿಸುತ್ತಾರೆ, ದೇವರಿಗೆ ಯಾವಾಗ ಅದು ಸಮರ್ಪಿತವಾಗುತ್ತದೆ ಎಂಬ ಆಶಾಭಾವನೆ ಅವರ ಕವನದಲ್ಲಿ ಮೂಡಿಬಂದಿದೆ ಎಂದರು.
ಕವಿ, ಲೇಖಕ ಪೇತ್ರಿ ವಿಶ್ವನಾಥ ಶೆಟ್ಟಿ ಇವರು ಕಾರ್ಯಕ್ರಮ ನಿರ್ವಹಿಸಿದರು. ಸುಮತಿ ಶೆಟ್ಟಿ ಪ್ರಾರ್ಥನೆಗೈದರು. ಉಮೇಶ್ ಶೆಟ್ಟಿ, ಶರತ್ ಶೆಟ್ಟಿ, ವಸಂತ್ ಶೆಟ್ಟಿ ಇವರು ಅತಿಥಿಗಳನ್ನು ಗೌರವಿಸಿದರು. ಸುಜಾತಾ ಶೆಟ್ಟಿ ಅವರ ಪತಿ ಉಮೇಶ್ ಶೆಟ್ಟಿ, ಪುತ್ರಿ ಪೃಥ್ವಿ ಶೆಟ್ಟಿ ಹಾಗೂ ಸುಜಾತಾ ಶೆಟ್ಟಿ ಅವರ ಕುಟುಂಬಿಕರು, ಹಿತೈಷಿಗಳು ಉಪಸ್ಥಿತರಿದ್ದರು.
ಬೋಂಬೆ ಬಂಟ್ಸ್ ಅಸೋಸಿಯೇಶನ್ ಮಾಜಿ ಅಧ್ಯಕ್ಷ ಎನ್. ಸಿ. ಶೆಟ್ಟಿ ದಂಪತಿ, ದೇವಲ್ಕುಂದ ಭಾಸ್ಕರ ಶೆಟ್ಟಿ, ನಿವೃತ್ತ ಎಸಿಪಿ ಸುಶೀಲಾ ಶೆಟ್ಟಿ, ಗೋರೆಗಾಂವ್ ಕರ್ನಾಟಕ ಸಂಘದ ಕಾರ್ಯದರ್ಶಿ ನಾರಾಯಣ ಮೆಂಡನ್, ಕವಿ, ಲೇಖಕ ಗೋಪಾಲ್ ತ್ರಾಸಿ, ಎಸ್. ಕೆ. ಸುಂದರ್, ಚಿತ್ರಾಪು ಕೆ. ಎಂ. ಕೋಟ್ಯಾನ್, ರಮೇಶ್ ಶಿವಪುರ, ರಘುನಾಥ ಎನ್. ಶೆಟ್ಟಿ, ಎಸ್. ಎಂ. ಶೆಟ್ಟಿ, ಗೋರೆಗಾಂವ್ ಕರ್ನಾಟಕ ಸಂಘದ ಮಹಿಳಾ ವಿಭಾಗದ ಪದಾಧಿಕಾರಿಗಳು, ಸದಸ್ಯರು, ಕುಂಚ ಕಲಾವಿದ ದೇವದಾಸ್ ಶೆಟ್ಟಿ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಗಣೇಶ್ ಎರ್ಮಾಳ್ ಮತ್ತು ಲಕ್ಷ್ಮೀ ಸತೀಶ್ ಶೆಟ್ಟಿ ಇವರಿಂದ ಗಾಯನ ಕಾರ್ಯಕ್ರಮ ನಡೆಯಿತು.
ಇಂದಿನ ಸಮಾರಂಭದಲ್ಲಿ ಪಾಲ್ಗೊಂಡ ಎಲ್ಲರನ್ನು ಕಂಡಾಗ ಸಂತೋಷವಾಯಿತು. 2015 ರಲ್ಲಿ ಗೋರೆಗಾಂವ್ ಕರ್ನಾಟಕ ಸಂಘದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದೆ. ನನ್ನೆಲ್ಲ ಊಹೆಗಳು, ಚಿಂತನೆಗಳು, ಸುತ್ತಮುತ್ತಲಲ್ಲಿ ನಡೆದ ಘಟನೆಗಳಿಗೆ ಸ್ಪಂದಿಸಿದಾಗ ಹೃದಯಕ್ಕೆ ತಟ್ಟುವ ಮಾತುಗಳು ಅಕ್ಷರ ರೂಪವಾಗಿ ರೂಪುಗೊಳ್ಳುತ್ತವೆ. ಇವೆಲ್ಲವನ್ನು ಭಾವನಾತ್ಮಕವಾಗಿ ಬರಹಕ್ಕೆ ಇಳಿಸಿದಾಗ ಕವಿ, ಲೇಖಕರಿಂದ ಸಾಹಿತ್ಯ ರೂಪುಗೊಳ್ಳುತ್ತದೆ. ಕೆಲವರಲ್ಲಿ ಕಲೆಯಾಗಿ ಹೊರಹೊಮ್ಮುತ್ತದೆ. ಕೆಲವರಲ್ಲಿ ಮದ, ಮತ್ಸರ, ಮೋಹ, ಮಾಯೆಯ ರೂಪದಲ್ಲಿ ಹೊರ ಬೀಳುತ್ತದೆ. ಇದು ಒಂದು ರೀತಿಯ ಅಭಿವ್ಯಕ್ತಿಯಾಗಿದೆ. ಭಾವನೆಯು ಅಭಿವ್ಯಕ್ತಿಯ ಕಲೆಯಾದರೆ, ಕವನವೂ ಒಂದು ಅದರ ಮಾಧ್ಯಮವಾಗಿದೆ. ನನ್ನ ಮೇಲಿನ ಪ್ರೀತಿಯಿಂದ ಆಗಮಿಸಿದ ಎಲ್ಲರಿಗೂ ಕೃತಜ್ಞತೆಗಳ. – ಸುಜಾತಾ ಶೆಟ್ಟಿ, ಕವಯಿತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.