ಆಂಗ್ಲ ನಾಡಿಗೆ ಬಂದ  “ಸುಂದರಾಂಗ ಯೋಗ’!

ಯೋಗೇನ ಚಿತ್ತಸ್ಯ ಪದೇನ ವಾಚಾ ||ಮಲಂ ಶರೀರಸ್ಯಂಚ ವೈದ್ಯಕೇನ||

Team Udayavani, Dec 12, 2020, 4:09 PM IST

YOGA

ಯೋಪಾಕರೋತ್ತಂ ಪ್ರವರಂ ಮುನೀನಾಂ||ಪತಂಜಲಿ ಪ್ರಾಂಜಲಿರಾನತೋಸ್ಮಿ||ಕೊರೊನಾದಿಂದಾಗಿ ವರ್ಚುವಲ್‌ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ವರ್ಷದ ಜುಲೈ ತಿಂಗಳಲ್ಲಿ ಸದ್ಯ ದುಬೈನಲ್ಲಿ ವಾಸಿಸುತ್ತಿರುವ ಕನ್ನಡತಿ ಡಾ| ಭಾಗೀರಥಿ  ಅವರು, ಕನ್ನಡಿಗರು ಯುಕೆ ಸಂಪರ್ಕಕ್ಕೆ ಬಂದು ಉಚಿತ ಯೋಗಾಭ್ಯಾಸ ಶಿಬಿರವನ್ನು ನಡೆಸುವ ಪ್ರಸ್ತಾಪ ಮಾಡಿದಾಗ ಮಹಾಮಾರಿಯಿಂದ ನೊಂದ ಯುನೈಟೆಡ್‌ ಕಿಂಗ್ಡಮ್‌ನ ಅನಿವಾಸಿ ಕನ್ನಡಿಗರಿಗೆ ಆಶಾಕಿರಣವಾಗಿ ಒಂದು ಒಳ್ಳೆಯ ಸದವಕಾಶ ದೊರಯಿತು ಎನ್ನುತ್ತಾರೆ ಕನ್ನಡಿಗರು ಯುಕೆಯ ಕಾರ್ಯಕಾರಿ ಸಮಿತಿ ಸದಸ್ಯ ಗಣಪತಿ ಭಟ್‌.

ಜು. 10ರಂದು ಮೊದಲ ಶಿಬಿರದ ಉದ್ಘಾಟನೆ ಮಾಡಿದ್ದ ಸಚಿವ ಸಿ. ಟಿ. ರವಿ ಅವರು ಶುಭ ಹಾರೈಸಿದರು. ಮೊದಲ ಹಂತದಲ್ಲಿ 100 ಕ್ಕೂ ಹೆಚ್ಚು ಪರಿವಾರಗಳು ನೋಂದಣಿಯಾಗಿದ್ದವು. ಕನ್ನಡಿಗರು ಯುಕೆ ಸಂಸ್ಥೆಯು ಅತೀ ಕಡಿಮೆ ಶುಲ್ಕಕ್ಕೆ  ಇಡೀ ಕುಟುಂಬದವರೂ, ಮಕ್ಕಳೂ  ಸೇರಲು ಅವಕಾಶ ಮಾಡಿಕೊಡಲಾಯಿತು.

1952ರಲ್ಲಿ  ಯುಕೆ ಗೆ ಬಂದ ಬಿ.ಕೆ.ಎಸ್‌. ಅಯ್ಯಂಗಾರ್‌ ಅವರು, ಭಾರತೀಯ ಯೋಗಶಾಲೆಯನ್ನು ತೆರೆದ 50 ವರ್ಷಗಳ ಅನಂತರ ಯುಕೆ ನಿವಾಸಿಗಳಿಗೆ ಒಬ್ಬ ಕನ್ನಡತಿ ಯೋಗಾಭ್ಯಾಸವನ್ನು ಆನ್‌ಲೈನ್‌ ಮೂಲಕ ಮನೆಮನೆಗೆ ಬಂದು ಯೋಗ-ಪ್ರಾಣಾಯಾಮ ಮತ್ತು ಧ್ಯಾನದ ಕುರಿತು ಹೇಳಿಕೊಟ್ಟರು. ಹಿಂದಿನ ಪರಂಪರೆಯಲ್ಲಿ ಶಿಷ್ಯಂದಿರು ಗುರುಕುಲದಲ್ಲಿದ್ದುಕೊಂಡು ಇದನ್ನು ಕಲಿತುಕೊಳ್ಳಬೇಕಾಗಿತ್ತು. ಈ ವಿದ್ಯೆ ಈಗ ನಮ್ಮ ಮನೆಗೇ ಬಂದಿದೆ ಎಂದು ಅವರ ಶಿಷ್ಯ ಮತ್ತು ಯುಕೆಯ  ಹಿರಿಯ ನಾಗರಿಕ ವಿಜಯ ಬಡಿಗಾರ್‌ ತಿಳಿಸಿದರು.

ಡಾ| ಭಾಗೀರಥಿಯವರು  ಪಾಠ್ಯಕ್ರಮದಲ್ಲಿ ಒಂದೇ ಷರತ್ತು ವಿಧಿಸಿದರು. ಅದೇನೆಂದರೆ ಎಲ್ಲರೂ ಪಾಠ ಪೂರ್ತಿಯಾಗುವವರೆಗೆ ಜೂಮ್‌ ಕೆಮರಾದಲ್ಲಿ ಕಾಣಿರಬೇಕು ಮತ್ತು ಆಡಿಯೋ ಮ್ಯೂಟ್‌ನಲ್ಲಿಡಬೇಕು. ಅಂದರೆ ಯೋಗಾಭ್ಯಾಸ ಮಾಡುವಾಗ ಗುರುಗಳಿಗೆ ಶಿಷ್ಯರ ಮೇಲೆ ಕಣ್ಣಿಡಬಹುದು ಮತ್ತು ತಪ್ಪುಗಳನ್ನು ತಿದ್ದಬಹುದು ಎಂದು.

ಮೊದಲ ಆರು ವಾರ ಈ ತರಗತಿಗಳು ಎಷ್ಟು ಜನಪ್ರಿಯವಾದವು ಮತ್ತು ಎಲ್ಲರಿಂದಲೂ ಎಷ್ಟು ಬೇಡಿಕೆ ಬಂದಿತೆಂದರೆ ಅವಧಿ ಮುಗಿಯುತ್ತ ಬಂದಂತೆ ಮತ್ತೆ ಮುಂದುವರಿಸುವ ಯೋಜನೆ ಕೈಗೊಂಡು ಕನ್ನಡಿಗರು ಯುಕೆ ಸಂಸ್ಥೆಯವರು ತತ್‌ಕ್ಷಣ ಮುಂದಿನ 14 ಕ್ಲಾಸ್‌ಗಳ ಶಿಬಿರಕ್ಕೆ ಅಣಿಯಾಯಿತು.

ಇದಕ್ಕೆ ಕಾರಣ ಭಾಗೀರಥಿಯವರ ಪ್ರಾವೀಣ್ಯತೆ. 20 ವರ್ಷಗಳಿಗೂ ಮೇಲ್ಪಟ್ಟು ಯೋಗ ಕಲಿಸಿದ ಅನುಭವ. ಕಲಿಸುವ ಪದ್ಧತಿ, ಅವರ ಸಂವಹನ, ಜತೆಗೆ ಸೂಚನೆಯನ್ನು ಕೊಡುವ ಕಲೆ. ಆಂಗ್ಲ ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಸುಲಲಿತವಾಗಿ ಮಾತನಾಡುವ ಅವರು ಎರಡು ಮೂರು ವಾರಗಳಲ್ಲೆ ಎಲ್ಲರಿಗೂ ಆತ್ಮೀಯರಾಗಿಬಿಟ್ಟಿದ್ದರು. ವಯಸ್ಸಿನ ಕಾರಣ ಶಾರೀರಿಕ ನಿರ್ಬಂಧತೆಗಳಿಂದ ಬದ್ಧರಾದ ಕೆಲವು ಹಿರಿಯರಿಗೂ ಸಮಜಾಯಿಷಿ ಸುಲಭ ಸೂತ್ರದ ಯೋಗ ವಿಧಾನಗಳನ್ನು ಅಳವಡಿಸಿದ್ದು ಶಿಬಿರದ ಸಾಫ‌ಲ್ಯಕ್ಕೆ ಕಾರಣವಾಯಿತು.

ಶಿಸ್ತಿನಿಂದ ಪಾಠ ಕೇಳಬೇಕಿತ್ತು. ತಪ್ಪಿದರೆ ಮಾತಿನ ಛಡಿಯೇಟು ಸಿಗುತ್ತಿತ್ತು. ಹೀಗಾಗಿ ಎಲ್ಲರೂ ಅವರು ಹೇಳಿದ ನಿಯಮವನ್ನು ಪಾಲಿಸುತ್ತಿದ್ದರು. ಕೊನೆಯ ದಿನ ಕೊರೋನಾ ಕಾಲದಲ್ಲಿ ತಮ್ಮ ಸ್ವಾಸ್ಥ್ಯ ವರ್ಧಿಸಿದ್ದಕ್ಕೆ ಇಲ್ಲಿಯ ಅವರ ಶಿಷ್ಯಂದಿರೆಲ್ಲ ಕೃತಜ್ಞತೆ ಸಲ್ಲಿಸಿದರು. ಗುರುಮಾ ಭಾಗೀರಥಿ ಅವರ ಕನ್ನಡವನ್ನು ನಿರಂತರ ಕೇಳುತ್ತಲೇ ಇರಬೇಕು ಎಂದೆನಿಸುತ್ತದೆ ಎಂದು ವಿಜಯ್‌ ಬಡಿಗೇರ ಹೇಳಿದರು.

ಮಮತಾ ಗೌಡ ಮಾತನಾಡಿ, ಆ ಒಂದು ತಾಸಿನ ಯೋಗಾಭ್ಯಾಸದ ವರ್ಗವೋ ಕ್ಷಣದಲ್ಲಿ ಮುಗಿದಂಥ ಅನುಭವ ಆಗುತ್ತಿತ್ತು. ಆಸನಗಳು, ಧ್ಯಾನ ಕಲಿಸುವ ಪರಿ, ಅವರು ಉಪಯೋಗಿಸುವ ಭಾಷೆ, ಅದರಿಂದ ರೂಪಿಸುವ ಪ್ರತಿಮೆಗಳು ನಮ್ಮನ್ನು ಮಂತ್ರಮೂಢರನ್ನಾಗಿ ಮಾಡಿಸಿತ್ತು ಎಂದರು.

ಯೋಗವೆಂದರೆ ಬರೀ ದೈಹಿಕವಲ್ಲದೇ ಮಾನಸಿಕ ಚಿಕಿತ್ಸೆ ಕೂಡ. ದುಬೈನಲ್ಲಿ ಕೋರಾನಾದಿಂದಾಗಿ ಹದಗೆಟ್ಟ ಆಸ್ಥಿಕ ಮತ್ತು ಮಾನಸಿಕ ಪರಿಸ್ಥಿತಿಯಿಂದ ಸಂತ್ರಸ್ತರಾದ ಕೂಲಿ ಕೆಲಸ ಮಾಡುತ್ತಿದ್ದ ನೂರಾರು ಕಾರ್ಮಿಕರನ್ನು ಪ್ರೋತ್ಸಾಹಿಸುತ್ತಿದ್ದಾರೆ ಈ ಭಾಗೀರಥಿ.

ಈವರೆಗೆ ವಿವಿಧ ಪ್ರಕಾರದ ಯೋಗ, ಪ್ರಾಣಾಯಾಮ ಮತ್ತು ಧ್ಯಾನ ಪದ್ಧತಿಗಳಲ್ಲಿ ಅವರಿಗೆ ಅನುಭವ ಮತ್ತು ಡಿಗ್ರಿ ಇದೆ. ಗೌರವ ಡಾಕ್ಟರೇಟ್‌ ಸಹ ಲಭಿಸಿದೆ. ಆದರೆ ಯೋಗವನ್ನು ಜನರಿಗೆ ತಲುಪಿಸುವುದಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಅವರು ಯಾವ ಧನ- ಧಾನ್ಯದ ಆಮಿಷವಿಲ್ಲದೆ ಸಂಪೂರ್ಣ ಸೇವಾವೃತ್ತಿಯಲ್ಲಿ ತೊಡಗಿಸಿಕೊಂಡು ಭಾರತಾದ್ಯಂತ ದೂರ ದೂರದ ಹಳ್ಳಿಗಳಿಗೆ ಸಹ ಹೋಗಿ ಕಳೆದ ಎರಡಕ್ಕೂ ಹೆಚ್ಚಿನ ದಶಕಗಳಲ್ಲಿ ಲಕ್ಷಾಂತರ ಜನರು ಯೋಗಾಭ್ಯಾಸದ ಲಾಭ ಪಡೆಯಲು ಸಾಧ್ಯವಾಯಿತು ಎಂದು ನನಗಿತ್ತ ಟೆಲಿಫೋನು ಸಂದರ್ಶನದಲ್ಲಿ ಹೇಳಿದರು.

ಇದರ ಜತೆಗೆ ಕನ್ನಡೇತರರಿಗೆ ಕನ್ನಡ ಕಲಿಸುವ ಅಭಿಯಾನದಲ್ಲಿ, 20 ಸಾವಿರಕ್ಕೂ ಹೆಚ್ಚಿನ ಜನರಿಗೆ ಕಲಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಮೆಚ್ಚುಗೆ ಪಡೆದಿದ್ದಾರೆ. ಅವರಿಗೆ ಸಂದ ಅನೇಕ ಪ್ರಶಸ್ತಿಗಳಲ್ಲಿ ಭಾರತ ಸರಕಾರದ ಯೋಗ ಭೂಷಣ ಪ್ರಶಸ್ತಿ- 2016, ಕರ್ನಾಟಕ ಸರಕಾರದ ಕೆಂಪೇಗೌಡ ಪ್ರಶಸ್ತಿ- 2018, ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ- 2019 ಪ್ರಮುಖವಾದದ್ದು.

ಈಗಾಗಲೇ 25 ದೇಶಗಳಲ್ಲಿ ಯೋಗವನ್ನು ತೆಗೆದುಕೊಂಡು ಹೋಗಿರುವ ಭಾಗೀರಥಿ ಅವರು ತಮ್ಮ ಅನುಭವ ಮತ್ತು ಯೋಗಾಭ್ಯಾಸವನ್ನು ಇನ್ನೂ ಹೆಚ್ಚು ಜನರಿಗೆ ತಲುಪಿಸುವುದೇ ಅವರ ಧ್ಯೇಯ ಎಂದು ಹೇಳುತ್ತಾರೆ.

– ಡಾ| ಶ್ರೀವತ್ಸ ದೇಸಾಯಿ, ಡೋಂಕಾಸ್ಟರ್‌, ಯು ಕೆ.

ಟಾಪ್ ನ್ಯೂಸ್

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

7-lokayuktha

Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

6-ptr

Puttur: ಬಸ್ – ಬೈಕ್‌ ಅಪಘಾತ; ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

Baharain1

ಮೊಗವೀರ್ಸ್‌ ಬಹ್ರೈನ್‌ ಪ್ರೊ ಕಬಡ್ಡಿ;ತುಳುನಾಡ್‌ ತಂಡ ಪ್ರಥಮ,ಪುನಿತ್‌ ಬೆಸ್ಟ್‌ All ರೌಂಡರ್‌

ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ

ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

6

Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

5(1

Kota: ಕಸ ಎಸೆಯುವ ಜಾಗದಲ್ಲಿ ನಿರ್ಮಾಣವಾಯಿತು ಪೌರ ಕಾರ್ಮಿಕನ ಪಾರ್ಕ್‌!

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

4

Karkala: ಈ ರಸ್ತೆಯಲ್ಲಿ ಬಸ್‌ ತಂಗುದಾಣಗಳೇ ಇಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.