ಪ್ರತಿಭಾವಂತ ರಂಗ ಕಲಾವಿದ ರಹೀಂ ಸಚ್ಚರಿಪೇಟೆ ಅವರಿಗೆ ಗೌರವಾರ್ಪಣೆ
Team Udayavani, Jan 24, 2017, 4:05 PM IST
ನಗರದ ರಂಗಭೂಮಿ ಕಲಾವಿದ, ಯುವ ಪ್ರತಿಭೆ ರಹೀಂ ಸಚ್ಚರಿಪೇಟೆ ಅವರಿಗೆ ಸಮ್ಮಾನ ಸಮಾರಂಭವು ಜ. 30 ರಂದು ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ಜರಗಲಿದೆ.
ನಾಟಕ ಕಲಾವಿದ, ಕಲಾ ಸಂಘಟಕ, ರಂಗಮಿಲನ ನಿರೆಕರೆ ಕಲಾವಿದೆರ್ ತಂಡದ ಸಂಚಾಲಕ ಕಿಶೋರ್ ಶೆಟ್ಟಿ ಪಿಲಾರು ಅವರ ನೇತೃತ್ವದಲ್ಲಿ ಸಮಾರಂಭವು ಜರಗಲಿದೆ. ಶಿಸ್ತುಬದ್ಧವಾದ ನಟನೆ, ರಂಗ ಕಲ್ಪನೆ, ರಂಗಜ್ಞಾನವನ್ನು ತನ್ನಲ್ಲಿ ಕರಗತ ಮಾಡಿಕೊಂಡು ಕಳೆದ ಹಲವಾರು ವರ್ಷಗಳಿಂದ, ರಂಗ ಸೇವೆಗೈಯುವ ಓರ್ವ ಕ್ರಿಯಾಶೀಲ ನಟ, ನಿರ್ದೇಶಕರಾಗಿ ರಹೀಂ ಸಚ್ಚರಿಪೇಟೆ ಅವರು ಮುಂಬಯಿ ಮಹಾನಗರದಲ್ಲಿ ಗುರುತಿಸಿಕೊಂಡ ಓರ್ವ ಕಲಾರಾಧಕ ಎನ್ನುವುದರಲ್ಲಿ ಎರಡು ಮಾತಿಲ್ಲ. ರಂಗಭೂಮಿಯಲ್ಲಿ ಇವರದ್ದು ವಿಶಿಷ್ಟ ಸಾಧನೆ ಎನ್ನಬಹುದು. ತುಳು, ಕನ್ನಡ, ಬ್ಯಾರಿ, ಹಿಂದಿ ಭಾಷೆಗಳ ನಾಟಕಗಳಲ್ಲಿ ಅಭಿನಯಿಸಿ, ಬಹುಭಾಷಿಕ ನಟರಾಗಿ ಅವರು ಗುರುತಿಸಿಕೊಂಡಿದ್ದಾರೆ.
ಮುಂಬಯಿ ಮಹಾನಗರದ ನಾಮಾಂಕಿತ ನಟ, ನಿರ್ದೇಶಕರ ಗರಡಿಯಲ್ಲಿ ಪಳಗಿದ ಅವರು ರಂಗಕರ್ಮಿ ಅಶೋಕ್ ಕುಮಾರ್ ಕೊಡ್ಯಡ್ಕ ಅವರ ಮುಖೇನ ಮುಂಬಯಿ ರಂಗಕ್ಕೆ ಪರಿಚಯಗೊಂಡವರು. ಕಲಾರಂಗದ ಗುರು ಇಂದ್ ಎಸ್. ಮಂಗಳೂರು ಅವರ ನಮ್ಮ ಭಾರತ ದೇಶ ಮತ್ತು ರಾತ್ರಿ ಶಾಲೆ ಕನ್ನಡ ನಾಟಕಗಳ ಮೂಲಕ ರಂಗಕ್ಕೆ ಪಾದಾರ್ಪಣೆ ಮಾಡಿದ ಅವರು ದೇವದಾಸ ಸಾಲ್ಯಾನ್ ಅವರ “ಗುಡ್ ಬೈ ಕುಡ್ಲ’, “ಏರೆಗ್ ಏರಾÉ ಇಜ್ಜಿ’, “ಕುಲುª ಪಾತೆರ್ಗಾ’, ಮನೋಹರ ಶೆಟ್ಟಿ ನಂದಳಿಕೆ ನಿರ್ದೇಶನದ “ಏರೆಗಾದ್’, ಚಿತ್ರನಟ ಚಂದ್ರಕಾಂತ್ ಸಾಲ್ಯಾನ್ ನಿರ್ದೇಶನದ “ತಂಬಿಲ’, “ಮದಿಮೆದ ಮನದಾನಿ’, ಕನ್ನಡ ಸೇವಾ ಸಂಘ ಪೊವಾಯಿ ಈ ತಂಡದ ಲೇಖಕ, ನಿರ್ದೇಶಕ ನಾಗರಾಜ್ ಗುರುಪುರ ಅವರ “ಪಬ್ಲಿಕ್ ಪ್ರಾಸಿಕ್ಯೂಟರ್’ ಕನ್ನಡ ನಾಟಕ, ಅಭಿನಯ ಮಂಟಪದ ಕರುಣಾಕರ ಕಾಪು ಅವರ “ಪರ್ಬ’, ಬ್ಯಾರಿ ಭಾಷೆಯಲ್ಲಿ ಎಂ. ಕೆ. ಮಠ ಅವರ ನಿರ್ದೇಶನದಲ್ಲಿ “ಪಾಸಿರೊ ಬಲ್ಲಿ’, ಅಭಿನಯಶ್ರೀ ಉಮೇಶ್ ಹೆಗ್ಡೆ ಅವರ ನಿರ್ದೇಶನದಲ್ಲಿ “ತೆಲಿಕೆ-ನಲಿಕೆ’, “ಅಬ್ಬು’, “ಆತ್ಮ’ ಇತ್ಯಾದಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ಅಖೀಲ ಭಾರತ ಕುವೆಂಪು ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿದ ಬಹುಭಾಷಾ ನಟ ರಹೀಂ ಸಚ್ಚರಿಪೇಟೆ ಅವರು ಇತ್ತೀಚೆಗೆ ಬಿಲ್ಲವರ ಅಸೋಸಿಯೇಶನ್ ಆಯೋಜಿಸಿದ್ದ ನಾಟಕ ಸ್ಪರ್ಧೆಯಲ್ಲಿ ಮೀರಾರೋಡ್ ಸ್ಥಳೀಯ ಸಮಿತಿಯಿಂದ ಪ್ರದರ್ಶನಗೊಂಡ ನಾಗರಾಜ ಗುರುಪುರ ರಚಿತ “ಯಕ್ಷನಿಲಯ’ನಾಟಕದ ನಿರ್ದೇಶನ ಹಾಗೂ ಬಿಲ್ಲವರ ಅಸೋಸಿಯೇಶನ್ ನಲಸೋಪರ ಕಲಾವಿದರು ಅಭಿನಯಿಸಿದ “ದೋಲು’ ನಾಟಕಕ್ಕೆ ನಿರ್ದೇಶನಗೈದ ಹೆಗ್ಗಳಿಕೆ ಅವರಿಗಿದೆ.
ಅಪ್ಪಟ ಕಲಾರಾಧಕರಾಗಿರುವ ಅವರು, ತನ್ನ ಕರ್ತವ್ಯ ನಿಷ್ಠೆಯನ್ನು ಕಾಪಾಡಿಕೊಂಡು ಎಳೆಯ ವಯಸ್ಸಿನ ಕಲಾವಿದರನ್ನು ರಂಗದಲ್ಲಿ ದುಡಿಸಿಕೊಳ್ಳುವಲ್ಲಿ ನಿಪುಣರಾಗಿದ್ದಾರೆ. ಕರ್ನಾಟಕ ಸರಕಾರದ ಬ್ಯಾರಿ ಸಾಹಿತ್ಯ ಅಕಾಡೆಮಿಯ ಗೌರವ ಪುರಸ್ಕೃತರಾದ ಅವರು ರಂಗಮಿಲನ ಕಲಾ ಸಂಸ್ಥೆಯ ಕಾರ್ಯದರ್ಶಿಯಾಗಿ, ನವೋದಯ ಕಲಾರಂಗದ ಕೋಶಾಧಿಕಾರಿಯಾಗಿ ಸೇವೆಗೈಯುತ್ತಿದ್ದಾರೆ. ಅವರ ಸಿದ್ಧಿ-ಸಾಧನೆಗಳನ್ನು ಗುರುತಿಸಿ ಕನ್ನಡ ವೆಲ್ಫೆàರ್ ಸೊಸೈಟಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ, ಬಿಲ್ಲವರ ಅಸೋಸಿಯೇಶನ್ ನಲಸೋಪರ ಸ್ಥಳೀಯ ಸಮಿತಿ ಇತ್ಯಾದಿ ಸಂಘ-ಸಂಸ್ಥೆಗಳು ಗೌರವಿಸಿವೆ. ಪ್ರಸ್ತುತ ಪತ್ನಿ ಸನಾ ಹಾಗೂ ಪುತ್ರ ತನೀಮ್ ಅವರೊಂದಿಗೆ ನಲಸೋಪರದಲ್ಲಿ ನೆಲೆಸಿದ್ದಾರೆ.
ಸ್ನೇಹಲತಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.