ತೀಯಾ ಸಮಾಜ ಮುಂಬಯಿ ಇದರ 73ನೇ ವಾರ್ಷಿಕ ಮಹಾಸಭೆ


Team Udayavani, Sep 20, 2017, 12:40 PM IST

17-Mum07b.jpg

ಮುಂಬಯಿ: ತೀಯಾ ಸಮಾಜಕ್ಕೆ ನ್ಯಾಯಬದ್ಧ ಮತ್ತು ಸ್ವಶಕ್ತಿ ತುಂಬುವ ಉದ್ದೇಶದಿಂದ ನಮ್ಮ ಹಿರಿಯರು ಸ್ಥಾಪಿಸಿ ಬೆಳೆಸಿದ ತೀಯಾ ಸಂಸ್ಥೆ ಭವಿಷ್ಯತ್ತಿನ ತಲೆಮಾರಿಗೆ ಸಹಾಯಕವಾಗಬೇಕು. ವಿಶೇಷವಾಗಿ ಯುವಪೀಳಿಗೆಯಲ್ಲಿ ಸ್ವಸಮುದಾಯದ ಸಂಸ್ಕೃತಿ ಸಂಸ್ಕಾರ, ಸಂಪ್ರದಾಯವನ್ನು ಮೈಗೂಡಿಸಿ ಕೊಳ್ಳುವ ಜೊತೆಗೆ ಸಾಂಘಿಕ ಬದುಕು ರೂಪಿಸಿಕೊಳ್ಳುವಲ್ಲಿ ಸಹಾಯವಾಗಬೇಕು. ಇದಕ್ಕಾಗಿ ಸಮಾನ ಮನಸ್ಕರ ಮತ್ತು ಸಮಾನತೆಯ ಸೇವೆ ಒದಗಿಸುವ ನಿಸ್ವಾರ್ಥ ಬಂಧುಗಳ ಸಹಯೋಗ ಅತ್ಯವಶ್ಯಕವಿದೆ. ಪ್ರತಿಯೊಂದು ಸಂಸ್ಥೆಗೆ ತನ್ನದೇ ಆದ ಜವಾಬ್ದಾರಿ ಇದ್ದೇ ಇದೆ. ಅದಕ್ಕಾಗಿ ಸದಸ್ಯರು ಏಕತಾ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕು. ಸಮಾಜದ ಯೋಜನೆಗಳನ್ನು ಪ್ರಾದೇಶಿಕ ಸಮಿತಿಗಳ ಪರಿಪೂರ್ಣ ಸಹಯೋಗದಿಂದ ಮಾತ್ರ ವಿಸ್ತೃತ‌ಗೊಳಿಸಲು ಸಾಧ್ಯ. ಆದ್ದರಿಂದ  ಸಹಕಾರ  ಸಮನ್ವಯತೆಯಿಂದ ಕೂಡಿದ ಈ ಪ್ರಾದೇಶಿಕ ಸಮಿತಿಗಳ ಸಹಾಯ ಪ್ರಮುಖ ವಾಗಿದೆ. ಅವಾಗಲೇ ಸರ್ವರ ಪರಸ್ಪರ ಸಹಕಾರದಿಂದ ಸಂಘದ ಬಲಾಡ್ಯತೆ ಸಾಧ್ಯ ಎಂದು ತೀಯಾ ಸಮಾಜ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಆರ್‌. ಬೆಳ್ಚಡ ನುಡಿದರು.

ಸೆ. 17ರಂದು ಪೂರ್ವಾಹ್ನ ಸಾಂತಾಕ್ರೂಜ್‌ ಪೂರ್ವದ ಬಿಲ್ಲವರ ಭವನದ ಕಿರು ಸಭಾಗೃಹದಲ್ಲಿ ನಡೆದ ತೀಯಾ ಸಮಾಜ ಮುಂಬಯಿ ಇದರ 73ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ, ಕುಲದೇವತೆ ಭಗವತೀ ಮಾತೆ ಮತ್ತು ಕುಲಗುರು ಬ್ರಹ್ಮಶ್ರೀ  ಗುರು ನಾರಾಯಣರಿಗೆ ಪ್ರಾರ್ಥನೆಗೈದು ಮಹಾಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ನಾವೆಲ್ಲರೂ ಸಂಬಂಧಿಕರು, ತೀಯಾ ಬಂಧುಗಳೇ ಆಗಿದ್ದು, ನಮ್ಮಲ್ಲಿ ತಾರತಮ್ಯ, ಭೇದ-ಭಾವ ಸಲ್ಲದು. ಚಿಕ್ಕಪುಟ್ಟ ಕಾರಣಗಳನ್ನೆತ್ತಿ ಸಮಾಜದಲ್ಲಿ ವದಂತಿ ಸೃಷ್ಟಿಸುವುದು ಸರಿಯಲ್ಲ. ನಾವೆಲ್ಲರೂ ಬಾಂಧವರೇ ಆಗಿ ಮುನ್ನಡೆಯುವ ಅಗತ್ಯವಿದೆ. ಇದನ್ನೇ ನಮ್ಮ ಪೀಳಿಗೆ ಪರಿಪಾಲಿಸುವಂತೆ ಆಗಬೇಕು. ಏಕತೆಗಾಗಿ ದೋಷಾರೋಪ, ಸ್ಪರ್ಧೆ ಸರಿಯಲ್ಲ. ಬದಲಾಗಿ ಸೌಮ್ಯತೆ, ಬದ್ಧತೆಯಿಂದ ಸಮಾಜವನ್ನು ಬಲಪಡಿಸೋಣ ಎಂದರು.

ವಿಶ್ವಸ್ತ ಮಂಡಳಿ ಕಾರ್ಯಾಧ್ಯಕ್ಷ ರೋಹಿದಾಸ್‌ ಎಸ್‌. ಬಂಗೇರ, ವಿಶ್ವಸ್ತ ಸದಸ್ಯ ಬಾಬು ಟಿ. ಬಂಗೇರ, ಸಂಸ್ಥೆಯ ಉಪಾಧ್ಯಕ್ಷ ಸುಧಾಕರ್‌ ಉಚ್ಚಿಲ್‌, ಸ‌ಂಸ್ಥೆಯ ಮುಖವಾಣಿ ತೀಯಾ ಬೆಳಕು ಸಂಪಾದಕ ಶ್ರೀಧರ್‌ ಎಸ್‌. ಸುವರ್ಣ, ಪಶ್ಚಿಮ ವಲಯ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗಂಗಾಧರ್‌ ಕಲ್ಲಾಡಿ, ಮಹಿಳಾಧ್ಯಕ್ಷೆ ದಿವ್ಯಾ ಆರ್‌. ಕೋಟ್ಯಾನ್‌,  ಪೂರ್ವ ವಲಯ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಮೋಹನ್‌ ಬಿ. ಎಂ.,  ಮಹಿಳಾಧ್ಯಕ್ಷೆ ಪದ್ಮಿನಿ ಕೆ. ಕೋಟೆಕರ್‌, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ಪ್ರತಿಮಾ ಟಿ. ಬಂಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಹಿಳಾ ಸದಸ್ಯೆಯರ ಪ್ರಾರ್ಥನೆಯೊಂದಿಗೆ ಸಭೆ ಪ್ರಾರಂಭಗೊಂಡಿತು. ಗೌರವ ಕೋಶಾಧಿ ಕಾರಿ ರಮೇಶ್‌ ಎನ್‌. ಉಳ್ಳಾಲ್‌ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿ ಮುಂದಿನ ಸಾಲಿನ ಬಜೆಟ್‌ ಮಂಡಿಸಿದರು. ಬಳಿಕ ತೀಯಾ ಬೆಳಕು ಸಂಪಾದಕರನ್ನಾಗಿ  ಶ್ರೀಧರ್‌ ಎಸ್‌.ಸುವರ್ಣ ಅವರನ್ನು ಪುನರಾಯ್ಕೆಗೊಳಿಸ ಲಾಯಿತು.  2017-2018ರ ಅವಧಿಗೆ  8  ನೂತನ ಸದಸ್ಯರನ್ನು ಮತ್ತು ಸಭೆಯು ಆಯ್ಕೆ ಗೊಳಿಸಿತು. ಸಭಿಕರಲ್ಲಿನ ಸಾಗರ್‌ ಕಟೀಲ್‌, ಗಾಯತ್ರಿ ಮಂಜೇಶ್ವರ್‌, ಗೋಪಾಲ್‌ ಸಾಲ್ಯಾನ್‌, ಬಾಬು ಕೆ.ಬೆಳ್ಚಡ ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಈಶ್ವರ್‌ ಎಂ. ಐಲ್‌ ಸ್ವಾಗತಿಸಿ ಗತ ಮಹಾಸಭೆ ವರದಿ ವಾಚಿಸಿ, ವಾರ್ಷಿಕ ಕಾರ್ಯ ಚಟುವಟಿಕೆಗಳ ಮಾಹಿತಿ ನೀಡಿ ವಂದಿಸಿದರು.

ಸಭೆಯಲ್ಲಿ ವಿಶ್ವಸ್ತ ಸದಸ್ಯರಾದ ಅಪ್ಪುಂÿ ಕೆ. ಬಂಗೇರ, ಜಯ ಸಿ.ಸಾಲ್ಯಾನ್‌, ಸಂಸ್ಥೆಯ ಜೊತೆ ಕಾರ್ಯದರ್ಶಿ ಗಳಾದ ನ್ಯಾಯವಾದಿ ನಾರಾಯಣ ಬಿ. ಸುವರ್ಣ, ನ್ಯಾಯವಾದಿ ಬಿ. ಕೆ.  ಸದಾಶಿವ್‌, ಜೊತೆ ಕೋಶಾಧಿಕಾರಿ ಕೆ. ಬಿ. ಚಂದ್ರಶೇಖರ್‌, ಕಾರ್ಯಕಾರಿ ಸಮಿತಿಯ ಸದಸ್ಯರಾದ ಹರ್ಷದ್‌ ಸಿ. ಕರ್ಕೇರ, ಸುಂದರ್‌ ಬಿ. ಐಲ್‌, ಸುರೇಶ್‌ ಬಂಗೇರ, ನಾರಾಯಣ ಸಾಲ್ಯಾನ್‌, ಪುರಂದರ್‌ ಸಾಲ್ಯಾನ್‌, ಶಶಿಧರ್‌ ಬಿ. ಎಂ. ಸೇರಿದಂತೆ ಮುಂದಾಳುಗಳಾದ ರವೀಂದ್ರ ಎಸ್‌. ಮಂಜೇಶ್ವರ್‌, ಶಂಕರ್‌ ಸಿ. ಸಾಲ್ಯಾನ್‌, ತಿಮ್ಮಪ್ಪ ಕೆ. ಬಂಗೇರ, ಉಜ್ವಲಾ ಚಂದ್ರಶೇಖರ್‌, ವೃಂದಾ ದಿನೇಶ್‌, ಸುಜಾತಾ  ಎಸ್‌. ಉಚ್ಚಿಲ್‌ ಮತ್ತಿತರರು ಉಪಸ್ಥಿತರಿದ್ದರು. ಸಭೆಯ ಮಧ್ಯಾಂತರದಲ್ಲಿ ಪದಾಧಿಕಾರಿಗಳು ಪಶ್ಚಿಮ ವಲಯ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದ  ಕಾರ್ಯಾಧ್ಯಕ್ಷೆ ಆಗಿ ಅನನ್ಯ ಸೇವೆ ಸಲ್ಲಿಸಿದ ದಿವ್ಯಾ ಆರ್‌. ಕೋಟ್ಯಾನ್‌ ಮತ್ತು ರಾಮಚಂದ್ರ ಕೋಟ್ಯಾನ್‌ ದಂಪತಿಯನ್ನು ಶಾಲು ಹೊದೆಸಿ, ಪುಷ್ಪಗುತ್ಛ, ಸ್ಮರಣಿಕೆಯನ್ನಿತ್ತು ಸತ್ಕರಿಸಿ ಗೌರವಿಸಿದರು. ಸದಸ್ಯರ ಪ್ರತಿಭಾನ್ವಿತ ಮಕ್ಕಳನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಲಾಯಿತು. 

ಟಾಪ್ ನ್ಯೂಸ್

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-putthige-2

State Formation: ಶ್ರೀ ಕೃಷ್ಣ ಬೃಂದಾವನ ಹೂಸ್ಟನ್ ಶಾಖೆಯಲ್ಲಿ ಸಂಸ್ಥಾಪನಾ ದಿನಾಚರಣೆ

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.