ಥಾಣೆ ಬಂಟ್ಸ್ ಅಸೋಸಿಯೇಶನ್ ಸಾಹಿತ್ಯ ಸಮಿತಿ: 9 ಕೃತಿಗಳ ಲೋಕಾರ್ಪಣೆ
Team Udayavani, Nov 28, 2018, 5:10 PM IST
ಥಾಣೆ: ಥಾಣೆ ಬಂಟ್ಸ್ ಅಸೋಸಿಯೇ ಶನ್ ಇದರ ಸಾಹಿತ್ಯ ಸಮಿತಿಯ ಕಾರ್ಯಾಧ್ಯಕ್ಷ, ಸಾಹಿತಿ ಡಾ| ಕರುಣಾಕರ ಶೆಟ್ಟಿ ಪಣಿಯೂರು ಮತ್ತು ಅವರ ಪುತ್ರಿ ಶ್ರುತಿ ಅಭಿಷೇಕ್ ಶೆಟ್ಟಿ ಅವರು ಬರೆದ ಒಂಬತ್ತು ಕೃತಿಗಳ ಬಿಡುಗಡೆ ಸಮಾರಂಭವು ನ. 17ರಂದು ಸಂಜೆ ಥಾಣೆ ಪಶ್ಚಿಮದ ಚೆಕ್‌ನಾಕಾ ಸಮೀಪದ ಹೊಟೇಲ್ ವುಡ್‌ಲ್ಯಾಂಡ್ ಸಭಾಗೃಹದಲ್ಲಿ ವಿವಿಧ ಸಾಹಿತ್ಯಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಥಾಣೆ ಬಂಟ್ಸ್ ಗೌರವ ಪ್ರಧಾನ ಕಾರ್ಯದರ್ಶಿ ಸುನೀಲ್ ಜೆ. ಶೆಟ್ಟಿ ಅವರು ಮಾತನಾಡಿ, ಸಂಸ್ಥೆಯ ಮಾಜಿ ಅಧ್ಯಕ್ಷ ದಿ| ಪ್ರೊ| ಸೀತಾ ರಾಮ್ ಶೆಟ್ಟಿ ಅವರ ಮುಂದಾಳತ್ವದಲ್ಲಿ ಥಾಣೆ ಬಂಟ್ಸ್ ಅಸೋಸಿಯೇಶನ್ ಸಾಹಿತ್ಯ ಬಳಗ ಹುಟ್ಟಿಕೊಂಡಿದೆ. ಅವರ ಯೋಗದಾನವನ್ನು ಮರೆ ಯುವಂತಿಲ್ಲ. ಥಾಣೆ ಬಂಟ್ಸ್ ಅಸೋಸಿಯೇಶನ್‌ನಲ್ಲಿ ಬರೆಹಗಾರರಿಗೆ, ಸಾಹಿತ್ಯಾಭಿಮಾನಿಗಳಿಗೆ, ಕವಿಗಳಿಗೆ ಖಂಡಿತವಾಗಿಯೂ ಕೊರತೆಯಿಲ್ಲ. ಡಾ| ಕರುಣಾಕರ ಶೆಟ್ಟಿ ಪಣಿಯೂರು ಸಹಿತ ಬಹಳಷ್ಟು ಸಾಹಿತಿಗಳು ನಮ್ಮ ಸಂಸ್ಥೆಯಲ್ಲಿದ್ದಾರೆ ಎನ್ನಲು ಹೆಮ್ಮೆಯಾಗುತ್ತದೆ. ಸಾಹಿತಿಗಳ, ಕವಿಗಳ ಪಾಲಿಗೆ ಓದುಗರೇ ಜೀವಾಳ. ಹೆಚ್ಚು ಓದುಗರು ಸೃಷ್ಟಿಯಾದಾಗ ಬರೆಯುವವರಿಗೆ ಉತ್ಸಾಹ ಮೂಡುತ್ತದೆ. ಓದುಗರಿಂದ ಸಾಹಿತ್ಯ ಲೋಕ ಸಮೃದ್ಧವಾಗಿ ಬೆಳೆಯಲಿ. ಡಾ| ಕರುಣಾಕರ ಶೆಟ್ಟಿ ಅವರು ಇಂದು 9 ಕೃತಿಗಳನ್ನು ಬಿಡುಗಡೆಗೊಳಿಸಿ ದಾಖಲೆ ನಿರ್ಮಿಸಿದ್ದಾರೆ. ಅಲ್ಲದೆ ತಮ್ಮ ಪುತ್ರಿ ಯನ್ನೂ ಸಾಹಿತ್ಯ ವಲಯಕ್ಕೆ ಪರಿಚಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರೀರ್ವರಿಂದ ಇನ್ನಷ್ಟು ಕೃತಿಗಳು ಪ್ರಕಟಗೊಂಡು ಸಾಹಿತ್ಯ ಕ್ಷೇತ್ರ ಶ್ರೀಮಂತಗೊಳ್ಳಲಿ ಎಂದು ಹಾರೈಸಿದರು.
ಸಾಹಿತಿ ಡಾ| ಕರುಣಾಕರ ಶೆಟ್ಟಿ ಪಣಿಯೂರು ಮತ್ತು ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಪ್ರಮೋದಾ ಮಾಡಾ ಅವರ ಮುಂದಾಳತ್ವದಲ್ಲಿ ನಡೆದ ಸಮಾರಂಭದಲ್ಲಿ ಡಾ| ಕರುಣಾಕರ ಶೆಟ್ಟಿ ಪಣಿಯೂರು ಅವರ “ಅನುಬಂಧ’ ಕಿರು ಕಾದಂಬರಿ, “ಹೊಸ ಹೆಜ್ಜೆ’ ಕವನ ಸಂಕಲನ, “ಬಣ್ಣದ ಹೂ’ ಮಕ್ಕಳ ಹಾಡುಗಳ ಸಂಕಲನ, “ವಿಚಾರ-ವಿಮರ್ಶೆ-3′ ಲೇಖನಗಳ ಸಂಗ್ರಹದ ಸಂಕಲನ, “ಪ್ರದೀಪಾವರಣ’ ಡಾ| ಪ್ರದೀಪ್ ಕುಮಾರ್ ಹೆಬ್ರಿಯವರ ಕೆಲವು ಕೃತಿಗಳ ಸಂಗ್ರಹ, “ಸಮಚಿತ್ತದ ಸಾಧಕ ಅಣ್ಣಾವರ ಶಂಕರ ಶೆಟ್ಟಿ’ ವ್ಯಕ್ತಿ ಪರಿಚಯ ಹಾಗೂ ಡಾ| ಕರುಣಾಕರ ಶೆಟ್ಟಿ ಅವರ ಸಂಪಾದಕತ್ವದ “ಕವಿಗಳು ಕಂಡ ಕುರ್ಕಾಲರು’ ಕಾವ್ಯ ಕವನ, “ಪಣಿಯೂರಿನ ಪಲ್ಲವಿ’ ಡಾ| ಕರುಣಾಕರ ಶೆಟ್ಟಿ ಬದುಕು-ಬರಹ ಮತ್ತು ಡಾ| ಕರುಣಾಕರ ಶೆಟ್ಟಿ ಪಣಿಯೂರು ಅವರ ಪುತ್ರಿ ಶ್ರುತಿ ಅಭಿಷೇಕ್ ಬರೆದ “ಅಬ್‌ಸ್ಟ್ರಾಕ್ಟ್ ಪೀಸ್ ಆಫ್ ಮೈ ಮೈಂಡ್’ ಇಂಗ್ಲಿಷ್ ಕೃತಿ ಸೇರಿದಂತೆ ಒಟ್ಟು ಒಂಬತ್ತು ಕೃತಿಗಳನ್ನು ಏಕಕಾಲದಲ್ಲಿ ಅಧ್ಯಕ್ಷ ಸುನೀಲ್ ಶೆಟ್ಟಿ ಅವರು ಬಿಡುಗಡೆಗೊಳಿಸಿದರು.
ಕವಿ, ರಂಗಕರ್ಮಿ ಸಾ. ದಯಾ, ಪುಣೆಯ ಕವಿ ಮಹೇಶ್ ಹೆಗ್ಡೆ, ಕವಿ ಅಶೋಕ್ ವಳದೂರು, ಸಾಹಿತಿ ಡಾ| ಜಿ. ಪಿ. ಕುಸುಮಾ ಅವರು ಕೃತಿಗಳನ್ನು ಪರಿಚಯಿಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಥಾಣೆ ಬಂಟ್ಸ್ ಸ್ಥಾಪಕಾಧ್ಯಕ್ಷ ಡಿ.ಜಿ. ಬೋಳಾರ್ ಅವರು, ಪುಸ್ತಕಗಳು ಸಮಾಜವನ್ನು ತಿದ್ದುವ ಕಾರ್ಯವನ್ನು ಮಾಡುತ್ತಿದ್ದು, ಸಾಹಿತಿಗಳು ದೇಶದ ದೊಡ್ಡ ಸಂಪ ತ್ತಾಗಿದ್ದಾರೆ. ಉತ್ತಮ ನಾಗರಿಕರನ್ನಾಗಿ ಸೃಷ್ಟಿಸುವಲ್ಲಿ ಬರೆಹಗಾರರ ಪಾತ್ರ ಮಹತ್ತರವಾಗಿದೆ. ಯುವ ಜನಾಂಗಕ್ಕೆ ಡಾ| ಕರುಣಾಕರ ಶೆಟ್ಟಿ ಅವರು ಮಾದರಿಯಾಗಿದ್ದಾರೆ ಎಂದರು.
ಇನ್ನೋರ್ವ ಅತಿಥಿ ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಉಪಕಾರ್ಯಾಧ್ಯಕ್ಷ ಆನಂದ ಶೆಟ್ಟಿ ಎಕ್ಕಾರು ಮಾತನಾಡಿ, ಡಾ| ಕರುಣಾಕರ ಶೆಟ್ಟಿ ಅವರು ಸರಳ, ಸಜ್ಜನ ವ್ಯಕ್ತಿತ್ವದ ಕವಿ. ಅವರ ಏನೇ ಅನಿಸಿಕೆ, ಚಿಂತನೆಗಳಿದ್ದರೂ ಅದನ್ನು ತನ್ನ ಪೆನ್ನಿನ ಮೂಲಕ ಕೃತಿರೂಪಕ್ಕಿಳಿಸಿ ಶ್ರೇಷ್ಠರೆನಿಸಿಕೊಂಡವರು. ಅವರ ಬರವಣಿಗೆಯಿಂದ ಹೊರಹೊಮ್ಮುವ ಎಲ್ಲ ಲೇಖನಗಳು ಸಮಾಜಕ್ಕೆ ಮಾದರಿಯಾಗಲಿ ಎಂದು ನುಡಿದರು.
ಅತಿಥಿಯಾಗಿ ಆಗಮಿಸಿದ ಥಾಣೆ ಬಂಟ್ಸ್ ಮಾಜಿ ಅಧ್ಯಕ್ಷ ಚಂದ್ರಹಾಸ್ ಎಸ್. ಶೆಟ್ಟಿ ಅವರು ಮಾತನಾಡಿ, ಯುವ ಜನಾಂಗಕ್ಕೆ ಮೊಬೈಲ್ ಮಾರಕವಾಗಿದ್ದು, ಅದನ್ನು ಹಿತಮಿತದಲ್ಲಿ ಬಳ ಸುವತ್ತ ಪಾಲಕರು ಗಮನ ಹರಿಸಬೇಕು. ಮಕ್ಕಳು ಕೃತಿಗಳನ್ನು ಓದುವಲ್ಲೂ ಆಸಕ್ತರಾಗಬೇಕು. ಇದರಿಂದ ಸಾಹಿತ್ಯ ಬೆಳಗಲು ಸಾಧ್ಯವಿದೆ ಎಂದು ನುಡಿದು ಡಾ| ಕರುಣಾಕರ ಶೆಟ್ಟಿ ಮತ್ತು ಶ್ರುತಿ ಅಭಿಷೇಕ್ ಅವರನ್ನು ಅಭಿನಂದಿಸಿದರು.
ಥಾಣೆ ಬಂಟ್ಸ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಮತಿ ಕೆ. ಶೆಟ್ಟಿ ಶುಭಹಾರೈಸಿದರು.
ಕೃತಿ ಪರಿಚಯಿಸಿದ ಕವಿ, ರಂಗಕರ್ಮಿ ಸಾ. ದಯಾ, ಪುಣೆಯ ಕವಿ ಮಹೇಶ್ ಹೆಗ್ಡೆ, ಕವಿ ಅಶೋಕ್ ವಳದೂರು, ಸಾಹಿತಿ ಡಾ| ಜಿ. ಪಿ. ಕುಸುಮಾ, ಥಾಣೆ ಬಂಟ್ಸ್ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಪ್ರಮೋದಾ ಎಸ್. ಮಾಡಾ ಉಪಸ್ಥಿತರಿದ್ದರು. ಲೇಖಕಿ ಶ್ರುತಿ ಎ. ಶೆಟ್ಟಿ ಪ್ರಾರ್ಥನೆಗೈದರು. ಗಣ್ಯರು, ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಾಜಿ ಅಧ್ಯಕ್ಷರುಗಳು, ಸ್ಥಾಪಕ ಸದಸ್ಯರು, ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅವರು ದೀಪ ಪ್ರಜ್ವಲಿಸಿದರು.
ಥಾಣೆ ಬಂಟ್ಸ್‌ನ ಕೋಶಾಧಿಕಾರಿ ಭಾಸ್ಕರ ಎನ್. ಶೆಟ್ಟಿ ಸ್ವಾಗತಿಸಿದರು. ಅತಿಥಿಗಳನ್ನು ಡಾ| ಕರುಣಾಕರ ಶೆಟ್ಟಿ ಅವರು ಗೌರವಿಸಿದರು. ಕೃತಿಗಳನ್ನು ಪರಿಚಯಿಸಿದವರನ್ನು ಅಧ್ಯಕ್ಷ ಸುನಿಲ್ ಜೆ. ಶೆಟ್ಟಿ ಅವರು ಅಭಿನಂದಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಸಾಹಿತಿಗಳನ್ನು, ವಿವಿಧ ಸಂಘಟನೆಗಳ ಪದಾಧಿಕಾರಿಗಳನ್ನು, ಸದಸ್ಯರನ್ನು ಗೌರವಿಸಲಾಯಿತು. ಥಾಣೆ ಬಂಟ್ಸ್‌ನ ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ಪ್ರಮೋದಾ ಎಸ್. ಮಾಡಾ ಅವರು ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿ ಸಿದರು. ಕೋಶಾಧಿಕಾರಿ ಭಾಸ್ಕರ ಎನ್. ಶೆಟ್ಟಿ ವಂದಿಸಿದರು.
ಹಿಂದೊಮ್ಮೆ ಐದು ಕೃತಿಗಳನ್ನು ಏಕಕಾಲದಲ್ಲಿ ಲೋಕಾರ್ಪಣೆಗೊಳಿಸಿದ್ದೆ. ಇಂದು 9 ಕೃತಿಗಳು ಹೊರ ಹೊಮ್ಮಿರುವುದು ಸಂತೋಷ ತಂದಿದೆ. ಅದರ ಜೊತೆಗೆ ನನ್ನ ಮುದ್ದಿನ ಮಗಳು ಕೂಡಾ ನನ್ನ ಸಾಹಿತ್ಯಾಭಿರುಚಿಯನ್ನು ಜೀವಂತವಾಗಿ ಮುನ್ನಡೆಸುವ ಭರವಸೆಯನ್ನು ಮೂಡಿಸಿದ್ದಾಳೆ. ಇದು ನನ್ನ ಪಾಲಿಗೆ ಮತ್ತಷ್ಟು ಪ್ರೇರಣೆಯನ್ನು ನೀಡಿದೆ. ಈ ಕಾರ್ಯದ ಹಿಂದೆ ಗುರುಸ್ಥಾನದಲ್ಲಿರುವವರನ್ನು, ಹೆಚ್ಚಿನ ಸಹಕಾರ, ಸಹಾಯವನ್ನು ಮಾಡಿದವರನ್ನು ಹಾಗೂ ನನ್ನ ಪ್ರತಿಯೊಂದು ಸಾಧನೆಯ ಹಿಂದಿರುವ ಧರ್ಮಪತ್ನಿಯನ್ನು ಮರೆಯಲು ಸಾಧ್ಯವಿಲ್ಲ. ನಿಮ್ಮೆಲ್ಲರ ಪ್ರೀತಿ, ಅಭಿಮಾನ, ಗೌರವಕ್ಕೆ ಋಣಿಯಾಗಿದ್ದೇನೆ. ಸಹೃದಯರ ಸಹಕಾರ, ಪ್ರೋತ್ಸಾಹ ಇದೇ ರೀತಿಯಲ್ಲಿ ಸದಾಯಿರಲಿ.
-ಡಾ| ಕರುಣಾಕರ ಶೆಟ್ಟಿ ಪಣಿಯೂರು, ಕೃತಿಕಾರರು
ಇದೇ ಮೊದಲ ಬಾರಿಗೆ ನನ್ನ ಕೃತಿಯೊಂದು ಬೆಳಕು ಕಾಣುತ್ತಿರುವುದು ಸಂತೋಷ ತಂದಿದೆ. ಇದರ ಹಿಂದೆ ನನ್ನ ತಂದೆ ಮತ್ತು ಅನೇಕರ ಸಹಕಾರವಿದೆ. ಅದೇ ರೀತಿಯಲ್ಲಿ ಮುಂದಿನ ದಿನಗಳಲ್ಲಿ ತಮ್ಮೆಲ್ಲರ ಸಹಕಾರ, ಸಹಾಯ, ಮಾರ್ಗದರ್ಶನ ನನಗಿರಲಿ. ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು.
-ಶ್ರುತಿ ಅಭಿಷೇಕ್ ಶೆಟ್ಟಿ, ಕೃತಿಕಾರರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belthangady: ಬೈಕ್ ಸವಾರ ಸಾವು ಪ್ರಕರಣ; ಸರಕಾರಿ ಬಸ್ ಚಾಲಕನಿಗೆ ಶಿಕ್ಷೆ;ದಂಡ
Egg Thrown: ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ: ಬಿಜೆಪಿ ನಾಯಕರು ಗರಂ
New Products KMF: ಮಾರುಕಟ್ಟೆಗೆ ಬಂತು “ನಂದಿನಿ’ ಇಡ್ಲಿ, ದೋಸೆ ಹಿಟ್ಟು
GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.