ಥಾಣೆ ಬಂಟ್ಸ್ ಅಸೋಸಿಯೇಶನ್ : ಸೀರೆಗಳ ಪ್ರದರ್ಶನ ಮತ್ತು ಮಾರಾಟ
Team Udayavani, Oct 24, 2018, 4:35 PM IST
ಥಾಣೆ: ಥಾಣೆ ಬಂಟ್ಸ್ ಅಸೋಸಿಯೇಶನ್ ಇದರ ಮಹಿಳಾ ವಿಭಾಗದ ವತಿಯಿಂದ ವೈವಿಧ್ಯಮಯ ಸೀರೆಗಳ ಪ್ರದರ್ಶನ ಮತ್ತು ಮಾರಾಟವು ಅ. 21 ರಂದು ಥಾಣೆ ಪಶ್ಚಿಮದ ಹರಿನಿವಾಸ್ ವೃತ್ತ ಬಳಿಯಿರುವ ಥಾಣೆ ಬಂಟ್ಸ್ ಅಸೋಸಿಯೇಶನ್ ಕಚೇರಿಯ ಶ್ರೀಮತಿ ರಮಾ ಡಿ. ಬೋಳಾರ್ ಸಭಾಗೃಹದಲ್ಲಿ ಯಶಸ್ವಿಯಾಗಿ ನಡೆಯಿತು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಮತಿ ಕೆ. ಶೆಟ್ಟಿ ಅವರ ಮುಂದಾಳತ್ವದಲ್ಲಿ ಜರಗಿದ ಸೀರೆಗಳ ಪ್ರದರ್ಶನ ಮತ್ತು ಮಾರಾಟಕ್ಕೆ ನ್ಯಾಯವಾದಿ ಶೇಖರ್ ಶೆಟ್ಟಿ ಅವರ ಧರ್ಮಪತ್ನಿ ಅಂಜಲಿ ಶೇಖರ್ ಶೆಟ್ಟಿ ಮತ್ತು ಥಾಣೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಕುಶಲ್ ಸಿ. ಭಂಡಾರಿ ಅವರ ಧರ್ಮಪತ್ನಿ ವಿಲಾಸಿನಿ ಕುಶನ್ ಭಂಡಾರಿ ಅವರು ರಿಬ್ಬನ್ ಕತ್ತರಿಸಿ, ದೀಪಪ್ರಜ್ವಲಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಥಾಣೆ ಬಂಟ್ಸ್ ನ ಅಧ್ಯಕ್ಷ ಕುಶಲ್ ಸಿ. ಭಂಡಾರಿ, ಉಪಾಧ್ಯಕ್ಷ ವೇಣುಗೋಪಾಲ್ ಎಲ್. ಶೆಟ್ಟಿ, ಸ್ಥಾಪಕಾಧ್ಯಕ್ಷ ಡಿ. ಜಿ. ಬೋಳಾರ್, ಮಾಜಿ ಅಧ್ಯಕ್ಷ ಸಿಎ ಕರುಣಾಕರ ಶೆಟ್ಟಿ, ಸ್ಥಾಪಕ ಸದಸ್ಯ ಕೇಶವ ಎಂ. ಆಳ್ವ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಮತಿ ಕೆ. ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಕುಶಲಾ ಎನ್. ಶೆಟ್ಟಿ, ಕೋಶಾಧಿಕಾರಿ ಶರ್ಮಿಳಾ ಎಸ್. ಶೆಟ್ಟಿ, ಜೊತೆ ಕಾರ್ಯದರ್ಶಿ ಮೋಹಿನಿ ಆರ್. ಶೆಟ್ಟಿ, ಜತೆ ಕೋಶಾಧಿಕಾರಿ ತಾರಾ ಪಿ. ಶೆಟ್ಟಿ, ಮಾಜಿ ಕಾರ್ಯಾಧ್ಯಕ್ಷೆಯರಾದ ಸುಲೋಚನಾ ಶೆಟ್ಟಿ, ಪ್ರಮೋದಾ ಮಾಡಾ ಉಪಸ್ಥಿತರಿದ್ದರು.
ಥಾಣೆ ಬಂಟ್ಸ್‌ನ ಅಧ್ಯಕ್ಷ ಕುಶಲ್ ಸಿ. ಭಂಡಾರಿ ಮತ್ತು ಅತಿಥಿಗಳಾಗಿ ಆಗಮಿಸಿದ ಅಂಜಲಿ ಶೇಖರ್ ಶೆಟ್ಟಿ ಹಾಗೂ ವಿಲಾಸಿನಿ ಕುಶಲ್ ಸಿ. ಭಂಡಾರಿ ಅವರಿಗೆ ಥಾಣೆ ಬಂಟ್ಸ್‌ನ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಮತಿ ಕೆ. ಶೆಟ್ಟಿ ಅವರು ಪುಷ್ಪಗುತ್ಛವನ್ನಿತ್ತು ಗೌರವಿಸಿದರು. ಅಸೋಸಿಯೇಶನ್‌ನ ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಕುಶಲಾ ಎನ್. ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು.
ದಿನಪೂರ್ತಿ ನಡೆದ ಕಾರ್ಯಕ್ರಮದಲ್ಲಿ ಗ್ರಾಹಕರು, ಸದಸ್ಯರು ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ರಿಯಾಯಿತಿ ದರದಲ್ಲಿ ನಗರದ ಪ್ರತಿಷ್ಠಿತ ಸೀರೆ ಮಳಿಗೆಗಳ ಸೀರೆಗಳಲ್ಲದೆ, ರೆಡಿಮೆಡ್ ಡ್ರೆಸ್, ಸೆಮಿಸ್ಟಿಕ್ ಡ್ರೆಸ್, ಇಮಿಟೇಶನ್ ಜ್ಯುವೆಲ್ಲರಿ ಮತ್ತು ವಿವಿಧ ವಸ್ತುಗಳು ಮಾರಾಟ ಮತ್ತು ಪ್ರದರ್ಶನದಲ್ಲಿಡಲಾಗಿತ್ತು. ಹೆಚ್ಚಿನ ಗ್ರಾಹಕರು ಇದರ ಸದುಪಯೋಗವನ್ನು ಪಡೆದು ಕೊಂಡರು. ವಿಶೇಷ ಅತಿಥಿಯಾಗಿ ಸ್ಥಳೀಯ ನಗರ ಸೇವಕಿ ಸ್ನೇಹಾ ರಮೇಶ್ ಅಮ್ರೆ ದಂಪತಿ ಆಗಮಿಸಿದ್ದರು. ಥಾಣೆ ಪರಿಸರದ ಸಮಾಜ ಸೇವಕಿ ಪುಷ್ಪಾ ಶೆಟ್ಟಿ, ಸ್ಥಳೀಯ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಚಿತ್ರ -ವರದಿ : ಸುಭಾಷ್ ಶಿರಿಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.