ಥಾಣೆ ಬಂಟ್ಸ್ ಅ.ಅಧ್ಯಕ್ಷರಾಗಿ ಕುಶಲ್ ಸಿ.ಭಂಡಾರಿ
Team Udayavani, Sep 27, 2017, 2:37 PM IST
ಥಾಣೆ: ನಗರದ ಪ್ರತಿಷ್ಠಿತ ಜಾತೀಯ ಸಂಸ್ಥೆಯಗಳಲ್ಲೊಂದಾದ ಥಾಣೆ ಬಂಟ್ಸ್ ಅಸೋಸಿಯೇಶನ್ ಇದರ ನೂತನ ಅಧ್ಯಕ್ಷರಾಗಿ ಉದ್ಯಮಿ, ಸಮಾಜ ಸೇವಕ ಕುಶಲ್ ಸಿ. ಭಂಡಾರಿ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಸೆ. 23 ರಂದು ಥಾಣೆ ಪಶ್ಚಿಮದ ವುಡ್‌ಲ್ಯಾಂಡ್ ರೀಟ್ರೀಟ್ ಹೊಟೇಲ್ ಸಭಾಗೃಹದಲ್ಲಿ ಥಾಣೆ ಬಂಟ್ಸ್ ಅಸೋಸಿಯೇಶನ್ ಇದರ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಅಸೋಸಿಯೇಶನ್‌ನ 13 ನೇ ವಾರ್ಷಿಕ ಮಹಾಸಭೆಯಲ್ಲಿ ಚುನಾವಣ ಅಧಿಕಾರಿ ನ್ಯಾಯವಾದಿ ಪದ್ಮನಾಭ ಶೆಟ್ಟಿ ಅವರು ಪ್ರಸ್ತುತ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಕುಶಲ್ ಸಿ. ಭಂಡಾರಿ ಅವರನ್ನು 2017-2019 ನೇ ಸಾಲಿಗೆ ನೂತನ ಅಧ್ಯಕ್ಷರನ್ನಾಗಿ ಘೋಷಿಸಿದರು.
ಮಹಿಳಾ ವಿಭಾಗದ ಉಪಾಧ್ಯಕ್ಷೆಯಾಗಿದ್ದ ಸುಮತಿ ಕರುಣಾಕರ್ ಶೆಟ್ಟಿ ಅವರು ಮಹಿಳಾ ನೂತನ ಕಾರ್ಯಾಧ್ಯಕ್ಷೆಯಾಗಿ ಹಾಗೂ ಯುವ ವಿಭಾಗದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ರಂಜನ್ ರಾಜು ಶೆಟ್ಟಿ ಅವರನ್ನು ನೂತನ ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಕುಶಲ್ ಸಿ. ಭಂಡಾರಿ ಅವರನ್ನು ನಿರ್ಗಮನ ಅಧ್ಯಕ್ಷ ಚಂದ್ರಹಾಸ ಎಸ್. ಶೆಟ್ಟಿ ಅವರು ಪುಷ್ಪಗುಚ್ಚವನ್ನಿತ್ತು ಸ್ವಾಗತಿಸಿ ಶುಭಹಾರೈಸಿದರು. ಮಹಿಳಾ ವಿಭಾಗದ ನೂತನ ಕಾರ್ಯಾಧ್ಯಕ್ಷೆ ಸುಮತಿ ಕರುಣಾಕರ್ ಶೆಟ್ಟಿ ಅವರನ್ನು ನಿರ್ಗಮನ ಕಾರ್ಯಾಧ್ಯಕ್ಷೆ ರೇವತಿ ಸದಾನಂದ ಶೆಟ್ಟಿ ಅವರು ಅಭಿನಂದಿಸಿ ಶುಭಹಾರೈಸಿದರು.
ಯುವ ವಿಭಾಗದ ನೂತನ ಕಾರ್ಯಾಧ್ಯಕ್ಷ ರಂಜನ್ ಆರ್. ಶೆಟ್ಟಿ ಅವರನ್ನು ನಿರ್ಗಮನ ಕಾರ್ಯಾಧ್ಯಕ್ಷೆ ಪ್ರಿಯಾಂಕಾ ಆರ್. ಶೆಟ್ಟಿ ಅವರು ಪುಷ್ಪಗುಚ್ಚವನ್ನಿತ್ತು ಶುಭಹಾರೈಸಿದರು. ಅಸೋಸಿಯೇಶನ್‌ನ ಕಾರ್ಯದರ್ಶಿ ವೇಣುಗೋಪಾಲ್ ಎಲ್. ಶೆಟ್ಟಿ, ಕೋಶಾಧಿಕಾರಿ ಸುನೀಲ್ ಜೆ. ಶೆಟ್ಟಿ, ಜತೆ ಕಾರ್ಯದರ್ಶಿ ಭಾಸ್ಕರ ಎನ್. ಶೆಟ್ಟಿ, ಜತೆ ಕೋಶಾಧಿಕಾರಿ ಅಶೋಕ್ ಎಂ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕುಶಲ್ ಸಿ. ಭಂಡಾರಿ
ಸುರತ್ಕಲ್ ಸಮೀಪದ ಬಾಳಮೇಗಿನ ಮನೆ ಚಂದ್ರಹಾಸ ಭಂಡಾರಿ ಮತ್ತು ಐಕಳ ಭಾವ ದಿ| ಗುಲಾಬಿ ಸಿ. ಭಂಡಾರಿ ದಂಪತಿಯ ಪುತ್ರರಾಗಿರುವ ಕುಶಲ್ ಸಿ. ಭಂಡಾರಿ ಅವರು ಥಾಣೆ ಬಂಟ್ಸ್‌ನ ಸಕ್ರಿಯ ಕಾರ್ಯಕರ್ತರಾಗಿ, ಪದಾಧಿಕಾರಿಯಾಗಿ, ಪ್ರಸ್ತುತ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸುರತ್ಕಲ್‌ನ ವಿದ್ಯಾದಾಯಿನಿ ಹೈಸ್ಕೂಲ್‌ನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪೂರೈಸಿ, ಮುಂಬಯಿಗೆ ಆಗಮಿಸಿ ಟಾಟಾದ ನೆಲ್ಕೋ ಎಲೆಕ್ಟಾÅನಿಕ್ ಕಂಪೆನಿಯಲ್ಲಿ ಎರಡು ವರ್ಷ ದುಡಿದು, ಮುಂದೆ ಹೊಟೇಲ್ ಉದ್ಯಮದತ್ತ ತೆರಳಿ ಹಂತ ಹಂತವಾಗಿ ಉದ್ಯಮದಲ್ಲಿ ಯಶಸ್ಸಿನ ಮೆಟ್ಟಿಲ್ಲನ್ನೇರಿ ಪ್ರಸ್ತುತ ಓರ್ವ ಪ್ರತಿಷ್ಠಿತ ಉದ್ಯಮಿಯಾಗಿ ಕಂಗೊಳಿಸುತ್ತಿದ್ದಾರೆ.
ಥಾಣೆ ಹೊಟೇಲ್ ಓನರ್ ಅಸೋಸಿಯೇಶನ್‌ನಲ್ಲಿ ಕಳೆದ 10 ವರ್ಷಗಳಿಂದ ಕ್ರಿಯಾಶೀಲ ಕಾರ್ಯಕರ್ತರಾಗಿರುವ ಇವರು ಪ್ರಸ್ತುತ ಉಪಾಧ್ಯಕ್ಷರಾಗಿದ್ದಾರೆ. ಐಕಳ ಬಾ ಕಾಂತಾಬಾರೆ-ಬೂದಾಬಾರೆ ಕಂಬಳ ಮುಂಬಯಿ ಸಮಿತಿಯ ಅಧ್ಯಕ್ಷರಾಗಿ, ಬಾಳ ನಾಗಬ್ರಹ್ಮ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ, ಗೌರವ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವುದಲ್ಲದೆ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಅನೇಕ ಬಡ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸಿ ಅವರ ಬಾಳಿಗೆ ನೆರವಾಗುತ್ತಿದ್ದಾರೆ. ಪ್ರಸ್ತುತ ಪತ್ನಿ ಕುಳವೂರುಗುತ್ತು ವಿಲಾಸಿನಿ ಭಂಡಾರಿ, ಪುತ್ರ ಯಶ್‌ರಾಜ್ ಭಂಡಾರಿ ಅವರೊಂದಿಗೆ ಥಾಣೆಯಲ್ಲಿ ನೆಲೆಸಿದ್ದಾರೆ.
ಚಿತ್ರ-ವರದಿ : ಸುಭಾಷ್ ಶಿರಿಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.