ಥಾಣೆ ಚಾಮುಂಡೇಶ್ವರಿ ಸೇವಾ ಸಮಿತಿ ವಾರ್ಷಿಕ ಮಹಾಪೂಜೆ ಸಂಪನ್ನ
Thane Chamundeshwari Seva Samithi is an annual celebration
Team Udayavani, Jun 8, 2019, 4:58 PM IST
ಥಾಣೆ: ಥಾಣೆ ಪಶ್ಚಿಮದ ವೀರ ಸಾವರ್ಕರ್ ನಗರದಲ್ಲಿರುವ ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿಯ 7ನೇ ವಾರ್ಷಿಕ ಮಹಾಪೂಜೆಯು ಮೇ 16 ರಂದು ಸಮಿತಿಯ ಸಂಸ್ಥಾಪಕರು ಹಾಗೂ ಜ್ಯೋತಿಷಿ ಶಿವಪ್ರಸಾದ್ ಪೂಜಾರಿ ಪುತ್ತೂರು ಇವರ ಮುಂದಾಳತ್ವ ಹಾಗೂ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭಕ್ತಿಪೂರ್ವಕವಾಗಿ ಜರಗಿತು.
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 7.30ರಿಂದ ಜಗದೀಶ್ ತಂತ್ರಿ ಮತ್ತು ಬಳಗ
ದವರಿಂದ ಗಣಹೋಮ, ಪೂರ್ವಾಹ್ನ 10ರಿಂದ ಶ್ರೀ ಸತ್ಯನಾರಾಯಣ ಮಹಾಪೂಜೆ, ಮಧ್ಯಾಹ್ನ 12.30ರಿಂದ ಮಹಾ ಮಂಗಳಾರತಿ ಹಾಗೂ ಮಧ್ಯಾಹ್ನ ಮಹಾ ಪ್ರಸಾದದ ರೂಪದಲ್ಲಿ ಅನ್ನ ಸಂತರ್ಪಣೆ ಜರಗಿತು.
ಅಪರಾಹ್ನ 3 ರಿಂದ ಓಂಕಾರ ಭಜನಾ ಮಂಡಳಿ ಮೀರಾರೋಡ್ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಸಂಜೆ 5.30 ರಿಂದ 6.30 ರವರೆಗೆ ಪ್ರಸಾದ್ ಸಾಲ್ಯಾನ್ ರವರಿಂದ ಶ್ರೀ ದೇವಿ ಚಾಮುಂಡೇಶ್ವರಿ ಅಮ್ಮನ ದರ್ಶನ ಆವೇಶ ಸೇವೆ ತದನಂತರ ದೈವ ಪಾತ್ರಿಗಳಾದ ಸನ್ನಿಧ್ ಪೂಜಾರಿ ಕಟಪಾಡಿ ಹಾಗೂ ಶುಭಕರ ಪೂಜಾರಿ ಇವರಿಂದ ಮಂತ್ರ ಕಲ್ಲುರ್ಟಿ-ಕವಡೆಯ ಪಂಜುರ್ಲಿ ದೈವಗಳ ಆವೇಶ ಸೇವೆಯು ಭಕ್ತಿ ಪೂರ್ವಕವಾಗಿ ಜರುಗಿತು.
ವಾಲಗದಲ್ಲಿ ರಾಮದಾಸ್ ಕೋಟ್ಯಾನ್ ಬಳಗದವರು ಹಾಗೂ ಮಧುಕರ್ತರಾಗಿ ಯಕ್ಷಗಾನ ಭಾಗವತರಾದ ಮುದ್ದಣ್ಣ ಪೂಜಾರಿ ಸಹಕರಿಸಿದರು. ಈ ಸಂದರ್ಭದಲ್ಲಿ ಅನೇಕ ಭಕ್ತಾಭಿಮಾನಿಗಳು ಪಾಲ್ಗೊಂಡು ಶ್ರೀದೇವಿ ಹಾಗೂ ದೈವದೇವರ ಕೃಪೆಗೆ ಪಾತ್ರರಾದರು. ಮಂದಿರದ ರೂವಾರಿ ಶಿವಪ್ರಸಾದ್ ಪೂಜಾರಿ ಇವರು ವಾರ್ಷಿಕ ಪೂಜೆಯ ಕಾಯಕ್ರಮವು ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ಹಾಗೂ ನೆರೆದ ಭಕ್ತಾದಿಗಳಿಗೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಅನುಗ್ರಹ ಸದಾ ಇರಲೆಂದು ಹರಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.