ತೆನೆಹಬ್ಬ ಮನುಕುಲಕ್ಕೆ ಸಮೃದ್ಧಿಯ ಪ್ರಸಾದ: ಫಾ| ಪ್ರಕಾಶ್‌

Team Udayavani, Sep 11, 2017, 4:10 PM IST

11-MUM-1.jpg

ಮುಂಬಯಿ: ಕೊಂಕಣಿ ಕಪಲ್ಸ್‌ ಫಾರ್‌ ಕ್ರೈಸ್ಟ್‌ (ಸಿಎಫ್‌ಸಿ) ಮತ್ತು ಸೈಂಟ್‌ ಜೋನ್‌ ಕೊಂಕಣಿ ಸಮುದಾಯ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಅಂಧೇರಿ ಪೂರ್ವದ ಮರೋಲ್‌ನ ಸೈಂಟ್‌ ಜೋನ್‌ ಎವಂಜಲಿಸ್ಟ್‌ ಚರ್ಚ್‌ನಲ್ಲಿ ಸೆ. 9ರಂದು ಸಂಜೆ “ಮೊಂತಿ ಫೆಸ್ತ್-2017′ ಸಂಭ್ರಮವು ನಡೆಯಿತು.

ರೆ| ಫಾ| ಪ್ರಕಾಶ್‌ ಮೊರಾಯಸ್‌ ಸಿದ್ಧಕಟ್ಟೆ ಅವರು ಸಂಭ್ರಮಿಕ ಕೃತಜ್ಞತ ದಿವ್ಯಪೂಜೆ ನೆರವೇರಿಸಿ ಭತ್ತದ ತೆನೆ, ಪೈರುಗಳನ್ನು ಆಶೀರ್ವದಿಸಿ ಮಾತನಾಡಿ, ಶ್ರಮಕ್ಕೆ ಪ್ರತಿಫಲ ನೀಡಿದ ಪ್ರಕೃತಿಮಾತೆಯನ್ನು ಅಭಿವಂದಿಸುವ ಸಂಭ್ರಮವೇ ಮೊಂತಿಹಬ್ಬ. ಈ ಉತ್ಸವವು ಏಸುಕ್ರಿಸ್ತರ ತಾಯಿ ಮಾತೆ ಮರಿಯಮ್ಮರ ಹುಟ್ಟುಹಬ್ಬದ ಮೂಲಕ ಅಖಂಡ ಕುಟುಂಬವನ್ನೇ ಒಗ್ಗೂಡಿಸುವ ಸುದಿನವೂ ಹೌದು. ಆದ್ದರಿಂದ ತೆನೆಹಬ್ಬ ಮಾನವಕುಲಕ್ಕೆ ಸಮೃದ್ಧಿಯ ಪ್ರಸಾದವಾಗಿ ಪರಿಗಣಿಸಲಾತ್ತಿದೆ. ಪ್ರಭು ಏಸುಕ್ರಿಸ್ತರ ಜನನಿದಾತೆ ಕನ್ಯಾಮರಿಯಮ್ಮರ ಜನ್ಮೋತ್ಸವವನ್ನು ಕುಟುಂಬ ಸದಸ್ಯರೆಲ್ಲರೂ ಒಗ್ಗೂಡಿ ಸಂಭ್ರಮಿಸಿದರೆ ಮಾತ್ರ ಹಬ್ಬವು ಅರ್ಥಪೂರ್ಣ. ಇಂತಹ ಪಾವಿತ್ರ್ಯತೆಯ ಹಬ್ಬ ಎಲ್ಲರ ಹೊಣೆಯಾಗಿದೆ ಎಂದು ನುಡಿದು ಶುಭಹಾರೈಸಿದರು.
ಫಾ| ಗ್ಲೆನ್‌ ಡಿಮೆಲ್ಲೋ ಪೂಜೆಯಲ್ಲಿ ಸಹಕರಿಸಿದರು.

ಜೋಯ್ಸ ಮಾರ್ಟಿನ್‌ ಪ್ರಸ್ತಾವನೆಗೈದರು. ರೋಕಿ ಡಿಸಿಲ್ವಾ ಮತ್ತು ನಾನ್ಸಿ ಲೂಯಿಸ್‌ ಅವರು ಬೈಬಲ್‌ ಪಠಿಸಿದರು. ಬಳಿಕ ಅಲಂಕೃತ ಮಾತೆಯ ಪ್ರತಿಮೆಯೊಂದಿಗೆ ಪ್ರಕೃತಿಮಾತೆಯ ಸ್ಮರಣೆಗೈದು ಭವ್ಯ ಮೆರವಣಿಗೆಯಲ್ಲಿ ಎವಂಜಲಿಸ್ಟ್‌ ಶಾಲಾ ಸಭಾಗೃಹದಲ್ಲಿ ಭಕ್ತರು ನೆರೆದರು.
ಇದೇ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸೈಂಟ್‌ ಜೋನ್‌ ಇಗರ್ಜಿಯ ಪ್ರಧಾನ ಧರ್ಮಗುರು ರೆ| ಫಾ| ಕ್ಲೆಮೆಂಟ್‌ ಡಿಲಿಮಾ, ಸಹಾಯಕ ಗುರು ರೆ| ಫಾ| ಎಸ್‌.ಲೊನಪ್ಪನ್‌, ರೆ| ಫಾ| ಪ್ಯಾಟ್ರಿಕ್‌ ಡಿಮೆಲ್ಲೋ, ಫಾ| ಗ್ಲೆನ್‌ ಡಿಮೆಲ್ಲೋ, ಕೊಂಕಣಿ ಭಾಷಾ
ಮಂಡಳ್‌ ಮಹಾರಾಷ್ಟ್ರ ಇದರ ಕಾರ್ಯಕಾರಿ ಸಮಿತಿಯ ಸದಸ್ಯ ಅನಂತ ಅಮ್ಮೆಂಬಳ್‌, ಸಮಾಜ ಸೇವಕ ಗೋಡ್‌ ಫ್ರಿ ಪಿಮೆಂಟಾ, ಮರಾಠಿ ಅಸೋಸಿಯೇಶನ್‌ನ ಜ್ಯೂಲಿ ಶಿಂಧೆ, ಸಂಗೀತಕಾರ ಪ್ರಶಾಂತ್‌ ಸೆರಾವೋ, ಸಬೆಸ್ಟಿಯನ್‌ ಫೆರ್ನಾಂಡಿಸ್‌, ಸವಿಯೋ ಡಿಸೋಜಾ, ಪೀಟರ್‌
ಲೋಪೆಸ್‌ ಹಾಗೂ ಸ್ಟೇಫನ್‌ ಲೂಯಿಸ್‌ ಮೊದಲಾದವರು ಉಪಸ್ಥಿತರಿದ್ದರು.

ಸಾಂ. ಜುವಾಂವ್‌ (ಸೈಂಟ್‌ ಜೋನ್‌) ಕೊಂಕಣಿ ಸಮುದಾಯ ಸಂಸ್ಥೆಯ ಅಧ್ಯಕ್ಷ ಆಗಸ್ಟಿನ್‌ ಸುವಾರಿಸ್‌, ಉಪಾಧ್ಯಕ್ಷೆಯರಾದ ಸುನೀತಾ ಸುವಾರಿಸ್‌ ಮತ್ತು ಜೆಸ್ಸಿ ಫೆರ್ನಾಂಡಿಸ್‌, ಕಾರ್ಯದರ್ಶಿ ಮೇರಿ ಫೆರ್ನಾಂಡಿಸ್‌, ಜೊತೆ ಕಾರ್ಯದರ್ಶಿ ತೋಮಾಸ್‌ ಪಿರೇರಾ, ಕೋಶಾಧಿಕಾರಿ ಜೇಮ್ಸ್‌ ಡೆಸಾ, ಜೊತೆ ಕೋಶಾಧಿಕಾರಿ ಕ್ಲೆಮೆಂಟ್‌ ಡಿಸಿಲ್ವಾ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಐಡಾ ಪಿಂಟೋ, ರೊಬಿನ್‌ ರೋಡ್ರಿಗಸ್‌, ರೀಟಾ ಡಿಸೋಜಾ, ಕ್ಲೋಡಿ ಮೊಂತೇರೊ ಮೊಡಂಕಾಪು, ತೆಲ್ಮಾ ಡೆಸಾ, ಲೀನಾ ಲಸ್ರಾದೊ, ವಿಲ್ಫೆಫ್ರಿಡ್‌ ಮಸ್ಕರೇನ್ಹಾಸ್‌, ತೋನ್ಸೆ ಲಾರೇನ್ಸ್‌ ಡಿಸೋಜಾ, ಸುನೀತಾ ಎ. ಸುವಾರೆಸ್‌, ಬ್ರ| ಲಾರೇನ್ಸ್‌ ಡಿಸೋಜಾ ಮರೋಲ್‌, ಎಲಿಯಸ್‌ ಫೆರ್ನಾಂಡಿಸ್‌ ಮತ್ತಿತರರು ಉಪಸ್ಥಿತರಿದ್ದರು. ಅತಿಥಿಗಳು ಕಾರ್ಯಕ್ರಮ ಸಂಸ್ಥೆಯ ಸಂಘಟಕರಿಗೆ, ಪ್ರತಿಭಾನ್ವಿತರಿಗೆ ಪುಷ್ಪಗುಚ್ಚವನ್ನಿತ್ತು ಗೌರವಿಸಿ ಶುಭಹಾರೈಸಿದರು. 

ರಿಯೋನಾ ಪಿಂಟೋ, ಜೆನ್ನಿಫರ್‌ ಪಾಯ್ಸ, ಮತ್ತು ಸರ್ಹಾ ಡಿಸೋಜಾ ಪ್ರಾರ್ಥನಾ ನೃತ್ಯಗೈದರು. ಮಕ್ಕಳು ಪ್ರಾರ್ಥನಾಗೀತೆ ಮತ್ತು ನೃತ್ಯ ಪ್ರದರ್ಶಿಸಿದರು. ಮಹಿಳೆಯರಿಂದ ಮತ್ತು ಸದಸ್ಯರು ಸಮೂಹ ನೃತ್ಯ,  ಪ್ರಹಸನ ಪ್ರಸ್ತುತ ಪಡಿಸಿದರು. ಪ್ರಮೀಳಾ ಡಿ. ಅಲ್ಮೇಡಾ ಸ್ವಾಗತಿಸಿದರು. ಆಗ್ನೇಸ್‌ ಮಸ್ಕರೇನ್ಹಾಸ್‌ ಕಾರ್ಯಕ್ರಮ ನಿರೂಪಿಸಿದರು. ವಾಲ್ಟರ್‌ ಲಸ್ರಾದೋ ಲೋರೆಟ್ಟೊ ಮತ್ತು ಲೀನಾ ಲಸ್ರಾದೋ ಅವರು ಸ್ವಾಗತಿಸಿದರು. ಆಗಸ್ಟಿನ್‌ ಸುವಾರಿಸ್‌ ವಂದಿಸಿದರು. 

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ

Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್‌ ಭಾಗ್ವತ್

ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್‌ ಭಾಗ್ವತ್

Belagavi: C.T. Ravi arrest case shifted to Bengaluru

Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

Baharain1

ಮೊಗವೀರ್ಸ್‌ ಬಹ್ರೈನ್‌ ಪ್ರೊ ಕಬಡ್ಡಿ;ತುಳುನಾಡ್‌ ತಂಡ ಪ್ರಥಮ,ಪುನಿತ್‌ ಬೆಸ್ಟ್‌ All ರೌಂಡರ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Koppala ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ

Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ

Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ

Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್‌ ಭಾಗ್ವತ್

ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್‌ ಭಾಗ್ವತ್

24-pavagada

Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.