ಕಲೆಯ ಉಳಿವಿಗೆ ಭ್ರಾಮರಿ ಸಂಸ್ಥೆ ಮಹತ್ತರ ಕೊಡುಗೆ: ಪಾಂಡು ಶೆಟ್ಟಿ
ಭ್ರಾಮರಿ ಯಕ್ಷನೃತ್ಯ ಕಲಾನಿಲಯ ಚಾರಿಟೆಬಲ್ ಟ್ರಸ್ಟ್ ದಶಮಾನೋತ್ಸವ ಸರಣಿ ಕಾರ್ಯಕ್ರಮ
Team Udayavani, Aug 7, 2019, 1:30 PM IST
ಮುಂಬಯಿ, ಆ. 6: ಭ್ರಾಮರಿ ಯಕ್ಷನೃತ್ಯ ಕಲಾನಿಲಯ ಚಾರಿಟೆಬಲ್ ಟ್ರಸ್ಟ್ ಮುಂಬಯಿ ಇದರ ದಶಮಾನೋತ್ಸವ ಸರಣಿ ಕಾರ್ಯಕ್ರಮ ಅಂಗವಾಗಿ ವಸಾಯಿ ನಾಲಸೋಪಾರ ಹಾಗೂ ವಿರಾರ್ ಪರಿಸರದ ಕಲಾಭಿಮಾನಿಗಳ ಸಹಕಾರದೊಂದಿಗೆ ಕಲಾ ಪ್ರಕಾಶ ಪ್ರತಿಷ್ಠಾನ ಮುಂಬಯಿ ಇದರ ಸಂಯೋಜನೆಯಲ್ಲಿ ಊರಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಭೀಷ್ಮ ಪರ್ವ ಎಂಬ ಕನ್ನಡ ಯಕ್ಷಗಾನ ತಾಳಮದ್ದಳೆಯು ಆ. 5ರಂದು ಸಂಜೆ ವಸಾಯಿ ಪಶ್ಚಿಮದ ಗೋಲ್ಡ್ ಕಾಯಿನ್ ಟೆರೆಸ್ ಹಾಲ್ನಲ್ಲಿ ಜರಗಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಸಾಯಿ ಕರ್ನಾಟಕ ಸಂಘದ ಅಧ್ಯಕ್ಷ ಪಾಂಡು ಎಲ್. ಶೆಟ್ಟಿ ಮಾತನಾಡಿ, ಮುಂಬಯಿ ಮಹಾನಗರದಲ್ಲಿ ಕಳೆದ 10 ವರ್ಷಗಳ ಆಂಗ್ಲ ಮಾಧ್ಯಮದಲ್ಲಿ ಕಲಿಯುತ್ತಿರುವ ತುಳು ಕನ್ನಡಿಗರ ಮಕ್ಕಳಿಗೆ ಯಕ್ಷಗಾನ ನೃತ್ಯ ತರಬೇತಿ ನೀಡುತ್ತಿರುವ ಭ್ರಾಮರಿ ಯಕ್ಷನೃತ್ಯ ಕಲಾನಿಲಯ ಚಾರಿಟೇಬಲ್ ಟ್ರಸ್ಟ್ ಯಕ್ಷಗಾನವನ್ನು ಉಳಿಸಿ ಬೆಳೆಸುವ ಮಹತ್ತರ ಕಾರ್ಯಗಳನ್ನು ಮಾಡಿ ತೋರಿಸಿದೆ. ಪರಿಶುದ್ದ ಭಾಷಾ ಜ್ಞಾನದೊಂದಿಗೆ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಯಕ್ಷಗಾನ ಬದುಕಿನ ದಾರಿ ದೀಪವಾಗಿದೆ. ನಾಡು ನುಡಿಯ ವಿವಿಧ ಕಲಾ ವೈಭವಗಳನ್ನು ಉಳಿಸುವ ಧ್ಯೇಯ ನಮ್ಮದಾಗಲಿ ಎಂದು ನುಡಿದು ಶುಭಹಾರೈಸಿದರು.
ಭ್ರಾಮರಿ ಯಕ್ಷನೃತ್ಯ ಕಲಾನಿಲಯದ ಸರ್ವಾಂಗೀಣ ಅಭಿವೃದ್ಧಿಗೆ ದುಡಿಯುತ್ತಿರುವ ಸಂಘಟಕ, ಕಲಾವಿದ, ಶ್ರೇಷ್ಠ ಕಾರ್ಯಕ್ರಮ ನಿರೂಪಕ ಸಂಸ್ಥೆಯ ಕಾರ್ಯದರ್ಶಿ ವಿಜಯ ಪಿ.ಶೆಟ್ಟಿ ಕುತ್ತೆತ್ತೂರು ಅವರನ್ನು ವೇದಿಕೆಯ ಗಣ್ಯರ ಸಮ್ಮುಖದಲ್ಲಿ ಸ್ಮರಣಿಕೆ, ಶಾಲು, ಫಲಪುಷ್ಪದೊಂದಿಗೆ ಸಮ್ಮಾನಿಸಲಾಯಿತು. ಯಕ್ಷಗುರು, ಸಂಸ್ಥೆಯ ಟ್ರಸ್ಟಿ ಕಟೀಲು ಸದಾನಂದ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಮ್ಮಾನಿತರನ್ನು ಪರಿಚಯಿಸಿದರು.
ಗೌರವ ಕಾರ್ಯದರ್ಶಿ ವಿಜಯ ಪಿ. ಶೆಟ್ಟಿ ಕುತ್ತೆತ್ತೂರು ಅವರು ಗಣ್ಯರನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿ ವಸಾಯಿ ಡಹಾಣು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಜಯಂತ ಆರ್. ಪಕ್ಕಳ, ವಸಾಯಿ ಶ್ರೀ ಕಟೀಲು ಯಕ್ಷಕಲಾ ವೇದಿಕೆಯ ಉಪ ಕಾರ್ಯಾಧ್ಯಕ್ಷ ದೇವೆಂದ್ರ ಬುನ್ನನ್, ವಸಾಯಿ ಶ್ರೀ ಗುರುನಾರಾಯಣ ಸೇವಾ ಸಮಿತಿಯ ಕಾರ್ಯದರ್ಶಿ ಒ. ಪಿ. ಪೂಜಾರಿ, ಕಲಾಪೋಷಕ ಮೋಹನ್ ಶೆಟ್ಟಿ, ಭ್ರಾಮರಿ ಯಕ್ಷನೃತ್ಯ ಕಲಾ ನಿಲಯ ಅಧ್ಯಕ್ಷೆ ಸುಶೀಲಾ ಸಿ. ಶೆಟ್ಟಿ, ಉಪಾಧ್ಯಕ್ಷೆ ಸುಮತಿ ಆರ್. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯಶೋಧರ ಕೋಟ್ಯಾನ್, ಮೋಹಿನಿ ಮಲ್ಪೆ, ಅನಿತಾ ಡಿ. ಬುನ್ನನ್ ಮೊದಲಾದವರು ಸಹಕರಿಸಿದರು. ಕಲಾ ಸಂಘಟಕ ಪ್ರಕಾಶ್ ಶೆಟ್ಟಿ ಸುರತ್ಕಲ್ ಅವರ ಆಯೋಜನೆಯಲ್ಲಿ ಭೀಷ್ಮಪರ್ವ ಎಂಬ ಕನ್ನಡ ಯಕ್ಷಗಾನ ತಾಳಮದ್ದಳೆಯಲ್ಲಿ ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆ, ಅತಿಥಿ ಭಾಗವತರಾಗಿ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಚೆಂಡೆ ವಾದಕರಾಗಿ ಗಣೇಶ್ ಮಯ್ಯ ವರ್ಕಾಡಿ, ಮದ್ದಳೆ ವಾದಕರಾಗಿ ದಯಾನಂದ್ ಶೆಟ್ಟಿಗಾರ್ ಮಿಜಾರು ಅವರು ಉಪಸ್ಥಿತರಿದ್ದರು. ಅರ್ಥಧಾರಿಗಳಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್, ಜಬ್ಟಾರ್ ಸಮೋ ಸಂಪಾಜೆ, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ ಮತ್ತು ಸುರೇಶ್ ಶೆಟ್ಟಿ ನಂದ್ರೊಳ್ಳಿ ಅವರು ಸಹಕರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು
Fraud Case: 3.25 ಕೋಟಿ ವಂಚನೆ ಕೇಸ್; ಐಶ್ವರ್ಯ ದಂಪತಿ ಮತ್ತೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.