ನಾಡಿನ ಸಂಸ್ಕೃತಿ-ಸಂಸ್ಕಾರಗಳನ್ನು ಯುವ ಪೀಳಿಗೆಗೆ ಪರಿಚಯಿಸಬೇಕು: ವಿನೋದಾ ಡಿ. ಶೆಟ್ಟಿ

ತುಳು ವೆಲ್ಫೇರ್ ಅಸೋಸಿಯೇಶನ್‌ ಮಹಿಳಾ ವಿಭಾಗದಿಂದ ಆಟಿದ ನೆಂಪು ಕಾರ್ಯಕ್ರಮ

Team Udayavani, Sep 23, 2021, 2:48 PM IST

ನಾಡಿನ ಸಂಸ್ಕೃತಿ-ಸಂಸ್ಕಾರಗಳನ್ನು ಯುವ ಪೀಳಿಗೆಗೆ ಪರಿಚಯಿಸಬೇಕು: ವಿನೋದಾ ಡಿ. ಶೆಟ್ಟಿ

ಡೊಂಬಿವಲಿ: ಡೊಂಬಿವಲಿ ಪಶ್ಚಿಮದ ತುಳು ವೆಲ್ಫೇರ್ ಅಸೋಸಿಯೇಶನ್‌ನ ಮಹಿಳಾ ವಿಭಾಗದ ವತಿಯಿಂದ ಅಟಿದ ನೆಂಪು ವಿಶೇಷ ಕಾರ್ಯಕ್ರಮವು ಇತ್ತೀಚೆಗೆ ಸಂಸ್ಥೆಯ ಕಾರ್ಯಾಲಯದಲ್ಲಿ ಜರಗಿತು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನೋದಾ ಡಿ. ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ತುಳುನಾಡಿನ ಸಂಸ್ಕೃತಿ, ಅಚಾರ, ವಿಚಾರಗಳನ್ನು ಮಹಾ ನಗರದಲ್ಲಿರುವ ಯುವ ಪೀಳಿಗೆಗೆ ತಿಳಿ ಸುವ ಪ್ರಯತ್ನವನ್ನು ಮಾಡಬೇಕಾಗಿದೆ. ಅದರೊಂದಿಗೆ ಕೆಲವೊಂದು ಸಂಘ, ಸಂಸ್ಥೆ ಆಯೋಜಿಸಿದ ಅಟಿಡೊಂಜಿದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಬೇಕು.

ವರ್ಷಕ್ಕೊಮ್ಮೆ ಇಂತಹ ಕಾರ್ಯಕ್ರಮ ಅಯೋಜಿಸಿದ್ದಲ್ಲಿ ನಮ್ಮವರ ತಿಂಡಿ ತಿನಿಸುಗಳನ್ನು ಆಸ್ವಾದಿಸುವ ಅವಕಾಶಗಳು ಸಿಗುತ್ತದೆ. ಕೊರೊನಾ ಮಹಾಮಾರಿಯ ಈ ಸಂದರ್ಭದಲ್ಲೂ ಹೆಚ್ಚಿನ ಸಂಖ್ಯೆಯ ಮಹಿಳೆಯರು ವೈವಿಧ್ಯಮಯ ತಿಂಡಿ-ತಿನಿಸುಗಳನ್ನು ತಯಾರಿಸಿ ತಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದನ್ನು ಕಂಡು ಸಂತೋಷವಾಗಿದೆ ಎಂದರು.

ಸಂಘದ ಅದ್ಯಕ್ಷ ಯು. ಲಕ್ಷ್ಮಣ್‌ ಸುವರ್ಣ ಮಾತಾನಾಡಿ, ಮಹಿಳಾ ವಿಭಾಗ ಸಂಘದ ಪ್ರತಿಯೊಂದು ಕಾರ್ಯಕ್ರಮ ದಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿರು ವುದರೊಂದಿಗೆ ಮಹಿಳಾ ವಿಭಾಗ ತನ್ನದೇ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಇಂದು ಅಟಿದ ನೆಂಪು ಕಾರ್ಯಕ್ರಮ ದಲ್ಲೂ ಮಹಿಳೆಯರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ. ತುಳುಶ್ರೀ ಕ್ರೆಡಿಟ್‌ ಸೊಸೈಟಿಗೂ ಮಹಿಳೆಯರ ಸಹಕಾರ ದೊರೆಯಲಿ ಎಂದರು.

ಇದನ್ನೂ ಓದಿ:ಅರ್ಚಕರಿಗೆ, ದೇಗುಲ ನೌಕಕರಿಗೆ ಆರೋಗ್ಯ ವಿಮೆ ಜಾರಿಗೆ ಶೀಘ್ರ ಕ್ರಮ: ಶಶಿಕಲಾ ಜೊಲ್ಲೆ

ಮುಖ್ಯ ಅತಿಥಿ ರವಿ ಸನಿಲ್‌ ಮತಾನಾಡಿ, ನಾನು ಚಿಕ್ಕಂದಿನಿಂದಲೇ ತುಳುನಾಡಿನ ಅಚಾರ ವಿಚಾರಗಳನ್ನು ತಾಯ್ನಾಡಿನಲ್ಲೆ ತಿಳಿದು ಕೊಂಡಿದ್ದೇನೆ. ಹಿಂದಿನ ಕಾಲದಲ್ಲಿ ಕಷ್ಟ ಇದ್ದರೂ ಪ್ರತಿಯೊಬ್ಬರೂ ನೆಮ್ಮದಿಯಿಂದ ಬದುಕುತ್ತಿದ್ದರು. ಇಂದು ಎಲ್ಲ ಸೌಕರ್ಯಗಳಿದ್ದರೂ ನೆಮ್ಮದಿ ಮಾಯಾವಾಗಿದೆ. ಮಾಯಾ ನಗರಿಯಲ್ಲಿ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವ ಮಹಿಳೆಯರಿಗೆ ವಂದನೆಗಳು ಎಂದರು.

ಸಂಸ್ಥೆಯ ಕಾರ್ಯದರ್ಶಿ ಲಕ್ಷ್ಮಣ್‌ ಮೂಲ್ಯ ಮತಾನಾಡಿ, ಮಹಾಮಾರಿಯಿಂದಾಗಿ ಹೆಚ್ಚಿನ ಸಂಖ್ಯೆಯ ಮಹಿಳೆಯರನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಿಲ್ಲ. ಮುಂದಿನ ದಿನಗಳಲ್ಲಿ ಮಹಾಮಾರಿ ದೂರವಾದರೆ ಎಲ್ಲರಿಗೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವ ಕಾಶ ನಿಡೋಣ. ಅಟಿ ತಿಂಗಳಲ್ಲಿ ಮಳೆಯ ಅನಂದವೇ ಬೇರೆ ಆ ದಿನಗ‌ಳಲ್ಲಿ ಎಷ್ಟು ಕಷ್ಟವಿದ್ದರೂ ಒಬ್ಬರಿಗೊಬ್ಬರು ಸಹಾಯ, ಸಹಕಾರ ನೀಡುತ್ತಿದ್ದರು ಎಂದರು.

ಸಂಘದ ಸಲಹೆಗಾರರಾದ ದೇವದಾಸ್‌ ಕುಲಾಲ್‌ ಮತನಾಡಿ, ತುಳುನಾಡಿನ ಅಚಾರ, ವಿಚಾರ ವಿಶ್ವಕ್ಕೆ ಮಾದರಿಯಾಗಿದೆ. ತುಳುವರು ಜಗತ್ತಿನ ಯಾವ ಮೂಲೆಗೆ ಹೋದರೂ ನಮ್ಮ ಸಂಸ್ಕೃತಿಯನ್ನು ಬಿಡುವುದಿಲ್ಲ. ಮಹಾನಗರದಲ್ಲಿ ತುಳು-ಸಂಘ ಸಂಸ್ಥೆಗಳು ಹೆಚ್ಚಿನ ಸಂಖ್ಯೆ ಯಲ್ಲಿದ್ದು ಪ್ರತಿಯೊಂದು ಸಂಘ, ಸಂಸ್ಥೆ, ನಮ್ಮ ಸಂಸ್ಕೃತಿಯನ್ನು ಯುವ ಪೀಳಿಗೆಗೆ ತಿಳಿಸುವ ಪ್ರಯತ್ನವನ್ನು ಮಾಡುತ್ತಿದೆ. ಮಹಿಳಾ ವಿಭಾಗದ ಇಂತಹ ಕಾರ್ಯಕ್ರಮಗಳು ಅಭಿನಂದನೀಯ ಎಂದರು.

ವಸಂತ ಸುವರ್ಣ ಅವರು ಮಾತನಾಡಿ, ಹೆಚ್ಚಿನ ಸಂಘ-ಸಂಸ್ಥೆಗಳು ಅಟಿ ತಿಂಗಳ ಆಚರಣೆಯನ್ನು ಮಾಡುವುದರಿಂದ ವಿವಿಧ ತಿಂಡಿ ತಿನಸುಗಳ ಹೆಸರು ಇತಿಹಾಸ ಪುಟಕ್ಕೆ ಸೇರುವುದನ್ನು ತಪ್ಪಿಸಿದ್ದಾರೆ. ಹಿಂದಿನ ದಿನಗಳಲ್ಲಿ ಮಳೆಗಾಲದಲ್ಲಿ ಬಹಳ ಕಷ್ಟದ ದಿನ. ಅದರೆ ಇಂದು ಎಲ್ಲರೂ ಕಷ್ಟದಿಂದ ಸ್ವಲ್ಪ ಹೊರ ಬಂದಿದ್ದಾರೆ. ಇಂತಹ ಕಾರ್ಯಕ್ರಮದ ಮೂಲಕ ನಮ್ಮ ತಿಂಡಿಗಳ ರುಚಿಯನ್ನು ಒಂದೇ ಸ್ಥಳದಲ್ಲಿ ಸವಿಯುವ ಅವಕಾಶ ಸಿಕ್ಕಿದೆ ಎಂದರು.

ಗಂಗಾದರ ಶೆಟ್ಟಿಗಾರ್‌ ಹಾಲೆ ಮರದ ಕೆತ್ತೆಯ ಮದ್ದಿನ ವಿಶೇಷತೆಯನ್ನು ತಿಳಿಸುದರೊಂದಿಗೆ ಮನೆಯಲ್ಲಿ ಮಾಡಬಹುದಾದ ಹಲವು ಮದ್ದಿನ ವಿವರಗಳನ್ನು ನೀಡಿದರು. ವಿನೋದಾ ಪದ್ಮ ಶೇಖರ್‌ ಪುತ್ರನ್‌ ಅವರು ಅಟಿ ತಿಂಗಳ ಮಹತ್ವವನ್ನು ಸವಿಸ್ತಾರವಾಗಿ ಸಭೆಗೆ ತಿಳಿಸಿದರು.

ಶಾಂತಾ ಅಮೀನ್‌ ಮತ್ತು ಶೋಭಾ ಶೆಟ್ಟಿ ಅವರ ಪ್ರಾರ್ಥನೆಯೊಂದಿಗೆ ಸಂಘದ ಗೌರವಾಧ್ಯಕ್ಷ ಯು. ಲಕ್ಷ್ಮಣ್‌ ಸುವರ್ಣ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುನಂದಾ ಶೆಟ್ಟಿ ಮತ್ತು ಜಯಂತಿ ಶೆಟ್ಟಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ತಾರಾನಾಥ ಕುಂದರ್‌, ವಿನೋದಾ ದೇವದಾಸ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ವಿನೋದಾ ಪದ್ಮಶೇಖರ್‌ ಪುತ್ರನ್‌ ಅವರು ಕಾರ್ಯಕ್ರಮ ನಿರ್ವಹಿಸಿದರು.

ಟಾಪ್ ನ್ಯೂಸ್

cOurt

Putturu: ಬಾಲಕಿಯೊಂದಿಗೆ ಅನುಚಿತ ವರ್ತನೆ: ಆರೋಪಿಗೆ ಶಿಕ್ಷೆ, ದಂಡ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-putthige-2

State Formation: ಶ್ರೀ ಕೃಷ್ಣ ಬೃಂದಾವನ ಹೂಸ್ಟನ್ ಶಾಖೆಯಲ್ಲಿ ಸಂಸ್ಥಾಪನಾ ದಿನಾಚರಣೆ

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

cOurt

Putturu: ಬಾಲಕಿಯೊಂದಿಗೆ ಅನುಚಿತ ವರ್ತನೆ: ಆರೋಪಿಗೆ ಶಿಕ್ಷೆ, ದಂಡ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.