ಬೆಳಕಿನ ಹಬ್ಬವು ಜ್ಞಾನದ ಸಂಕೇತ: ಈಶಪ್ರಿಯತೀರ್ಥ ಶ್ರೀ
Team Udayavani, Oct 28, 2019, 4:00 PM IST
ಮುಂಬಯಿ, ಅ. 27: ದೀಪಾವಳಿ ಅನ್ನುವುದು ದೀಪಗಳ ಸಮೂಹ. ಸಾಲು ಸಾಲು ದೀಪಗಳ ಸರದಿಗಳಾಗಿಸಿ ದೀಪಗಳ ಮೂಲಕ ದೇವರನ್ನು ಕಾಣುವ ಹಬ್ಬವಾಗಿದೆ.
ಇಂತಹ ಬೆಳಗುವ ಹಬ್ಬವನ್ನು ನಾವು ದಿನನಿತ್ಯ ಆಚರಿಸುವ ಅಗತ್ಯವಿದೆ. ಪೂರ್ವಜರು ದೀಪವನ್ನು ಜ್ಞಾನಕ್ಕೆ ಹೋಲಿಸಿದ್ದಾರೆ. ಏಕೆಂದರೆ ಬೆಳಕು ಕಷ್ಟಮುಕ್ತಗೊಳಿಸಿ ದಾರಿ ತೋರಿಸುವ ಸಾಧನವಾಗಿದ್ದು, ಹೇಗೆ ದೀಪದ ಬೆಳಕಿಲ್ಲದೆ ಪ್ರಾಣಿ ಸಂಕುಲಕ್ಕೆ ಏನೂ ಕಾಣದೋ ಅಂತೆಯೇ ಬದುಕು ಕೂಡಾ ದೀಪವಿನಃ ಕತ್ತಲಾಗಿರುತ್ತದೆ ಎಂದು ಉಡುಪಿ ಶ್ರೀ ಅದಮಾರು ಮಠದ ಕಿರಿಯ ಪಟ್ಟಾಧೀಶರಾದ ಶ್ರೀ ಈಶ ಪ್ರಿಯತೀರ್ಥ ಶ್ರೀಪಾದರು ಹೇಳಿದರು.
ಉಡುಪಿ ಶ್ರೀ ಕೃಷ್ಣ ಮಠದ 32ನೇ ಆವೃತ್ತಿಯ ಉಡುಪಿ ಪರ್ಯಾಯ ಪಟ್ಟಾಧೀಶ ದೀಕ್ಷೆ ಸ್ವೀಕಾರ ಪೂರ್ವ ಪರ್ಯಾಯ ಸಂಚಾರ ನಿಮಿತ್ತ ಅಂಧೇರಿ ಪಶ್ಚಿಮದ ಎಸ್. ವಿ. ರೋಡ್‌ನ ಇರ್ಲಾದ ಅದಮಾರು ಮಠದಲ್ಲಿ ವಾಸ್ತವ್ಯವಿರುವ ಶ್ರೀಗಳು ಅ. 27ರಂದು ಮಠದಲ್ಲಿನ ಶ್ರೀದೇವರಿಗೆ ಮತ್ತು ಭೂದೇವಿಗೆ ಎಣ್ಣೆ ಶಾಸ್ತ್ರದೂಂದಿಗೆ ಪೂಜೆ ನೆರವೇರಿಸಿ ಮಾತನಾಡಿದ ಅವರು, ಪ್ರಕೃತಿ ಸೃಷ್ಟಿಯ ಹಿನ್ನಲೆಯಲ್ಲಿ ದೀಪವು ಜ್ಞಾನದ ಸಂಕೇತವಾಗಿದ್ದು ಅಜ್ಞಾನ ದೂರಗೊಳಿಸುವ ಶಕ್ತಿಯಾಗಿದೆ. ಈ ಹಬ್ಬವು ಜ್ಞಾನದ ಬೆಳಕಲ್ಲಿ ಬೆಳಕಿನ ಅನುಸಂಧಾನ ಮಾಡುವ ಸಂಭ್ರಮವಾಗಬೇಕು. ಹೊರಗಿಡುವದೀಪಗಳು ಬರೇ ಬಾಹ್ಯ ಆಚರಣೆಗಳಾಗಿದ್ದು, ಮನುಷ್ಯನ ಅಂತರಾತ್ಮದ ಆಚರಣೆಯು ಸಾತ್ಕರದ ದೀಪಾವಳಿಯಾಗಬೇಕು. ಅಂದರೆ ದೇವರನ್ನು ತಿಳಿದು ಬಾಳುವ ಬುದುಕೇ ದೀಪಾವಳಿ ಆಗಬೇಕು. ಹಿಂದೂ ಧರ್ಮದ ಜಾಗತಿಕ ಸಂದೇಶ ಸಂಭ್ರಮವೇ ದೀಪಾವಳಿ.
ದೀಪಾವಳಿಯು ಕೇವಲ ಬೆಳಕಿನ ಹಬ್ಬವಲ್ಲದೆ, ಪರಸ್ಪರ ಒಬ್ಬರಿಗೊಬ್ಬರು ಪ್ರೀತಿ, ವಾತ್ಸಲ್ಯ, ಗೌರವದೊಂದಿಗೆ ಬದುಕುವಂತಾಗಬೇಕು. ಸಾಂಪ್ರದಾಯಿಕ ಆಚರಣೆಗಳಿಂದ ನಮ್ಮ ನಾಡಿನ ಆಚಾರ, ವಿಚಾರಗಳು ಉಳಿಯಲು ಸಾಧ್ಯವಿದೆ. ಮುಖ್ಯವಾಗಿ ದೀಪಾವಳಿಯ ಮಹತ್ವವನ್ನು ಇಂದಿನ ಯುವ ಪೀಳಿಗೆಗೆ ತಿಳಿಯಪಡಿಸುವ ಜವಾಬ್ದಾರಿ ಹಿರಿಯರ ಮೇಲಿದೆ. ಅಜ್ಞಾನದ ತಿಮಿರನ್ನು ಕಳಚಿ, ಸುಜ್ಞಾನದ ಬೆಳಕನ್ನು ಹರಿಸುವಮೂಲಕ ಬಾಳನ್ನು ಬೆಳಗಿಸೋಣ. ಪರಸ್ಪರ ಸೋದರತ್ವದ ಮೂಲಕ ಬದುಕ ಸಾಗಿಸೋಣ ಎಂದು ನುಡಿದ ಶ್ರೀಗಳು, ರುಕ್ಮಿಣಿ ಸತ್ಯಭಾಮಸಹಿತ ಹಳೆ ಸಂಪ್ರದಾಯಿಕ ಅರ್ಚನೆಗೈದು ತೈಲದೀಪದ ನಡುವೆ ಶ್ರೀ ಕೃಷ್ಣ ದೇವರಿಗೆ ಪೂಜೆ ನೆರವೇರಿಸಿ ಶುಭಹಾರೈಸಿದರು.
ಧಾರ್ಮಿಕ ಕಾರ್ಯಕ್ರಮವಾಗಿ ಶ್ರೀಗಳಿಂದ ಅಲಂಕಾರ ಪೂಜೆ, ಸಹಸ್ರನಾಮಾರ್ಚನೆ, ತೀರ್ಥಪೂಜೆ, ಧೂಪಪೂಜೆ ಮತ್ತು ಮಹಾಪೂಜೆ ನಡೆಯಿತು. ಆನಂತರ ಆರತಿಗೈದು ಬೆಳಕಿನ ಹಬ್ಬ ದೀಪಾವಳಿ ಸಂಭ್ರಮಿಸಿ ನೆರೆದ ನೆರೆದ ಸದ್ಭಕ್ತರಿಗೆ, ಮಂತ್ರಾಕ್ಷತೆ ನೀಡಿ ಅನುಗ್ರಹಿಸಿ ದೀಪಾವಳಿ ಸಂದೇಶವನ್ನಿತ್ತರು. ಕಾರ್ಯಕ್ರಮದಲ್ಲಿ ಪುರೋಹಿತರಾದ ವಾಸುದೇವ ಉಡುಪ, ಜನಾರ್ಧನ ಅಡಿಗ, ರಾಮ ವಿಠಲ ಕಲ್ಲೂರಾಯ, ಸರ್ವಜ್ಞ ಉಡುಪ, ಶಂಕರ ಕಲ್ಯಾಣಿತ್ತಾಯ, ರಾಘವೇಂದ್ರ ಉಡುಪ, ಅದಮಾರು ಮಠದ ಮುಂಬಯಿ ಶಾಖೆಯ ದಿವಾನ ಲಕ್ಷ್ಮಿನಾರಾಯಣ ಮುಚ್ಚಿಂತ್ತಾಯ, ವಾಣಿ ಆರ್.ಭಟ್, ಮಠದ ಮುಂಬಯಿ ಶಾಖಾ ವ್ಯವಸ್ಥಾಪಕ ಪಡುಬಿದ್ರಿ ವಿ. ರಾಜೇಶ್ ರಾವ್ ಉಪಸ್ಥಿತರಿದ್ದರು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀಗಳಿಂದ ಆಶೀರ್ವಾದ ಪಡೆದರು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.