ಮುಂಬಯಿ ಮಹಾನಗರ; ಹೋಂ ಐಸೋಲೇಶನ್: 14 ಸಾವಿರ ಮಂದಿಗೆ ಚಿಕಿತ್ಸೆ
ಬಿಎಂಸಿ ಈ ಉಪಕ್ರಮದ ವಿವರಗಳನ್ನು ಇತರ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲು ಯೋಜಿಸಿದೆ.
Team Udayavani, Sep 3, 2020, 4:56 PM IST
ಮುಂಬಯಿ, ಸೆ. 2: ಜುಲೈ 9ರಿಂದ 21,250ಕ್ಕೂ ಅಧಿಕ ಹೋಂ ಐಸೋಲೇಶನ್‌ನಲ್ಲಿದ್ದ ಕೊರೊನಾ ಸೋಂಕಿತರನ್ನು ಸಂಪರ್ಕಿಸಿ, ಅವರಲ್ಲಿ 14,800 ಮಂದಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಮುಂಬಯಿ ಮಹಾನಗರ ಪಾಲಿಕೆಯು ತಿಳಿಸಿದೆ.
ಕೆಲವು ಸೋಂಕಿತರು ಚೇತರಿಸಿಕೊಂಡ ಬಳಿಕ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದ್ದು, ಇನ್ನೂ ಕೆಲವರಿಗೆ ಬಿಎಂಸಿ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆಯನ್ನು ನೀಡುತ್ತಿದೆ. ಸೋಂಕಿತರ ಆರೋಗ್ಯ ಸ್ಥಿತಿಯನ್ನು ಪತ್ತೆಹಚ್ಚಲು ಸರಕಾರೇತರ ಸಂಸ್ಥೆ (ಎನ್ ಜಿಒ) ಪ್ರಾಜೆಕ್ಟ್ ಮುಂಬಯಿ ಮತ್ತು ಆರೋಗ್ಯ ಕಂಪೆನಿ ಪೋರ್ಟಿಯಾ ಮೆಡಿಕಲ್ ಸಹಯೋಗದೊಂದಿಗೆ ಮುಂಬಯಿ ಮೈತ್ರಿ ಯೋಜನೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಉಪಕ್ರಮದ ಭಾಗವಾಗಿ ಸೋಂಕಿತರಿಗಾಗಿ 022-62676897 ಎಂಬ ಮೀಸಲಾದ ಸಂಖ್ಯೆಯನ್ನು ಪ್ರಾರಂಭಿಸಲಾಗಿದೆ.
ಇದೇ ರೀತಿ ಮಾನಸಿಕ ಒತ್ತಡದ ಸಂದರ್ಭದಲ್ಲಿ ಸೋಂಕಿತರು ಮತ್ತು ಅವರ ಕುಟುಂಬಗಳು 18001024040 ಸಂಖ್ಯೆಯನ್ನು ಸಂಪರ್ಕಿಸಿ ಮಾನಸಿಕ ಆರೋಗ್ಯ ಸಲಹೆಗಾರರಿಂದ ಸಲಹೆಯನ್ನು ಪಡೆಯಬಹುದು. ಈ ಯೋಜನೆಯಡಿಯಲ್ಲಿ ರಿಮೋಟ್ ಮೇಲ್ವಿಚಾರಣೆ ಮೂಲಕ ಎಲ್ಲ ವಾರ್ಡ್ ಗಳು ನಿಯಂತ್ರಣ ಕೊಠಡಿಯೊಂದಿಗೆ ಸಂಪರ್ಕದಲ್ಲಿರಲಿದ್ದು, ಸೋಂಕಿತರಿಗೆ ಅಗತ್ಯವಿದ್ದರೆ ಆಸ್ಪತ್ರೆಗಳ ಹಾಸಿಗೆಗಳು, ಆ್ಯಂಬುಲೆನ್ಸ್‌ಗಳ ಅಗತ್ಯವನ್ನು ತಿಳಿಸುತ್ತದೆ.
ಈ ಯೋಜನೆಯಡಿ ಕೊಮೊರ್ಬಿಡ್ ಮತ್ತು 55 ವರ್ಷಕ್ಕಿಂತ ಮೇಲ್ಪಟ್ಟ ಅಪಾಯದ ಸೋಂಕಿತರ ಮೇಲೆ ಗಮನ ಹರಿಸಲಾಗುವುದು. ಈ ಯೋಜನೆ ವಾರ್ಡ್ ಮಟ್ಟದ ನಿಯಂತ್ರಣ ಕೊಠಡಿ ಕೆಲಸಗಳಿಗೆ ಪೂರಕವಾಗಿರುತ್ತದೆ. ಇದರಿಂದ ಅವರ ಕೆಲಸದ ಹೊರೆಯೂ ಕಡಿಮೆಯಾಗುತ್ತದೆ ಮತ್ತು ಹಾಸಿಗೆ ನಿರ್ವಹಣೆ ಮೇಲೆ ಹೆಚ್ಚು ಗಮನ ಹರಿಸುವ ಸಾಮರ್ಥ್ಯವನ್ನು ಕೊಡುತ್ತದೆ.
ಬಿಎಂಸಿ ಈ ಉಪಕ್ರಮದ ವಿವರಗಳನ್ನು ಇತರ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲು ಯೋಜಿಸಿದೆ. ಇದರಲ್ಲಿ ವೈದ್ಯಕೀಯ ಕೇಂದ್ರಗಳು ಮತ್ತು ಹೋಂ
ಕ್ವಾರಂಟೈನ್ ಸೇರಿದಂತೆ ಕೋವಿಡ್ ಆರೈಕೆ ಎಲ್ಲ ಸೋಂಕಿತರನ್ನು ತಲುಪುತ್ತದೆ ಎಂದು ಬಿಎಂಸಿ ಹೇಳಿದೆ. ಮುಂದಿನ ಮೂರು ತಿಂಗಳುಗಳಲ್ಲಿ ಈ
ಉಪಕ್ರಮದ ವಿವರಗಳನ್ನು ಇತರ ನಗರಗಳು ಮತ್ತು ಜಿಲ್ಲಾಡಳಿತಗಳೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಮುಂಬಯಿ ಮಹಾನಗರ ಪಾಲಿಕೆಯ
ಆಯುಕ್ತ ಚಾಹಲ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಕಾರು ಢಿಕ್ಕಿ; ಸ್ಕೂಟರ್ ಸವಾರನಿಗೆ ಗಾಯ
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.