ತುಳು- ಕನ್ನಡಿಗರನ್ನು ಒಗೂಡಿಸುವುದೇ ಕ್ರೀಡಾಕೂಟದ ಉದ್ದೇಶ
Team Udayavani, Jan 24, 2020, 6:22 PM IST
ಡೊಂಬಿವಲಿ, ಜ. 23: ವಿವಿಧ ಭಾಷೆ, ಧರ್ಮ, ಸಂಸ್ಕೃತಿಯನ್ನು ಹೊಂದಿರುವ ತುಳು-ಕನ್ನಡಿಗರು ವಿವಿಧತೆಯಲ್ಲೂ ಏಕತೆಯನ್ನು ಕಾಣುವ ಹೃದಯ ಶ್ರೀಮಂತರಾಗಿದ್ದಾರೆ. ಸಮಸ್ತ ತುಳು-ಕನ್ನಡಿಗರನ್ನು ಒಗ್ಗೂಡಿಸುವುದೇ ಕ್ರೀಡಾಕೂಟ ಆಯೋಜನೆಯ ಮೂಲ ಉದ್ದೇಶವಾಗಿದೆ ಎಂದು ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ಅವರು ನುಡಿದರು.
ಜ. 19ರಂದು ಡೊಂಬಿವಲಿ ಕರ್ನಾಟಕ ಸಂಘದ ಕ್ರೀಡಾ ವಿಭಾಗದ ವತಿಯಿಂದ ಸ್ಥಳೀಯ ಜಿಮ್ಖಾನಾ ಮೈದಾನದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಕ್ರೀಡಾಕೂಟ “ದಂಗಲ್-2020′ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದಿನ ಈ ಅದ್ದೂರಿ ಕ್ರೀಡೋತ್ಸವದಲ್ಲಿ ನೀವು ಗೆದ್ದಿರಬಹುದು ಅಥವಾ ಸೋತಿರಬಹುದು. ಆದರೆ ನಾವು ಮಾತ್ರ ಗೆದ್ದಿದ್ದೇವೆ. ಕ್ರೀಡೋತ್ಸವದ ಯಶಸ್ಸಿನಲ್ಲಿ ಸಂಘದ ಆಡಳಿತ ಮಂಡಳಿಯ ಎರಡು ತಿಂಗಳ ಪರಿಶ್ರಮವಿದೆ. ಈ ಕ್ರೀಡೋತ್ಸವದ ಯಶಸ್ಸು ನಮಗೆ ಪ್ರೇರಣಾ ಶಕ್ತಿಯಾಗಿದೆ. ನಿಮ್ಮೆಲ್ಲರ ಸಹಾಯ, ಸಹಕಾರ ನಮಗೆ ಸದಾಯಿರಲಿ ಎಂದು ಆಶಿಸಿ ಶುಭಹಾರೈಸಿದರು.
ಅತಿಥಿಯಾಗಿ ಆಗಮಿಸಿದ ಬಂಟರ ಸಂಘ ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಸುಬ್ಬಯ್ಯ ಶೆಟ್ಟಿ ಅವರು ಮಾತನಾಡಿ, ಎಲ್ಲ ಸಮಾಜದ ಮನಸ್ಸುಗಳನ್ನು ಒಂದಾಗಿಸಿ ಅದ್ದೂರಿ ಕ್ರೀಡಾ ಮಹೋತ್ಸವವನ್ನು ಆಯೋಜಿಸಿದ ಡೊಂಬಿವಲಿ ಕರ್ನಾಟಕ ಸಂಘ ಒಗ್ಗಟ್ಟಿನ ಮಹತ್ವವನ್ನು ಸಾರಿ ಹೇಳಿದೆ. ಎಲ್ಲಾ ಸಮಾಜ ಬಾಂಧವರನ್ನು ಒಗ್ಗೂಡಿಸಿ ಕಾರ್ಯಕ್ರಮಗಳನ್ನು ಆಯೋಜಿಸಿ ಜನಮನ್ನಣೆಯನ್ನು ಪಡೆದಿದೆ. ಡೊಂಬಿವಲಿ ಮತ್ತು ನನಗೆ ಅವಿನಾಭಾವ ಸಂಬಂಧವಿದ್ದು, ಇಲ್ಲಿಯ ತುಳು ಕನ್ನಡಿಗರ ಕಾರ್ಯಕ್ರಮಗಳನ್ನು ಕಂಡಾಗ ಹೆಮ್ಮೆಯಾಗುತ್ತಿದೆ ಎಂದು ನುಡಿದರು.
ಹೊಟೇಲ್ ಉದ್ಯಮಿ ಅರುಣ್ ಎಸ್. ಶೆಟ್ಟಿ ಪಡುಕುಡೂರು ಅವರು ಮಾತನಾಡಿ, ಡೊಂಬಿವಲಿ ಕರ್ನಾಟಕ ಸಂಘದ ಕಾರ್ಯ ವೈಖರಿಯನ್ನು ಶ್ಲಾಘಿಸಿ ಶುಭಹಾರೈಸಿದರು. ಇನ್ನೋರ್ವ ಅತಿಥಿ ರತ್ನಾಕರ ಹೆಗ್ಡೆ ಅವರು ಮಾತನಾಡಿ, ಕ್ರೀಡೋತ್ಸವದ ಆಯೋಜನೆಯ ಮಹತ್ವವನ್ನು ವಿವರಿಸಿ ಕ್ರೀಡೋತ್ಸವದಲ್ಲಿ ಭಾಗವಹಿಸಿದ ಕ್ರೀಡಾಪಟುಗಳನ್ನು ಅಭಿನಂದಿಸಿ ಶುಭಹಾರೈಸಿದರು.
ಸಂಘದ ಕಾರ್ಯಾಧ್ಯಕ್ಷ ಸುಕುಮಾರ್ ಎನ್. ಶೆಟ್ಟಿ ಅವರು ಸ್ವಾಗತಿಸಿ ಮಾತನಾಡಿ, ಕ್ರೀಡೋತ್ಸವದಲ್ಲಿ ಭಾಗವಹಿಸಿದ ಸಮಸ್ತ ಕ್ರೀಡಾಪಟುಗಳನ್ನು ಅಭಿನಂದಿಸಿ, ಈ ಅದ್ದೂರಿ ಕ್ರೀಡಾಕೂಟಕ್ಕೆ ಸಹಕರಿಸಿದ ದಾನಿಗಳು ಹಾಗೂ ಹಗಲಿರುಳುಶ್ರಮಿಸಿದ ಸ್ವಯಂ ಸೇವಕರನ್ನು ಅಭಿನಂದಿಸಿ ತಮ್ಮೆಲ್ಲರ ಸಹಾಯ, ಸಹಕಾರ ಇದೇ ರೀತಿಯಲ್ಲಿ ಮುಂದುವರಿಯಲಿ ಎಂದು ಹೇಳಿದರು.
ಕ್ರೀಡೋತ್ಸವದಲ್ಲಿ ಉಪಸ್ಥಿತರಿದ್ದ ಗಣ್ಯರು ಹಾಗೂ ನಿರ್ಣಾಯಕರನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು. ಸ್ಥಳೀಯ ಜಗಜ್ಯೋತಿ ಕಲಾ ವೃಂದದ ಚಂದ್ರ ನಾಯಕ್, ಸಂತೋಷ್ ಶೆಟ್ಟಿ, ಬಾಬು ಮೊಗವೀರ ಹಾಗೂ ಸುರೇಂದ್ರ
ನಾಯಕ್ ಸಹಕರಿಸಿದರು. ವೇದಿಕೆಯಲ್ಲಿ ಜಗನ್ನಾಥ ಶೆಟ್ಟಿ, ಸಂಘದ ಪದಾಧಿಕಾರಿಗಳಾದ ಲೋಕನಾಥ ಶೆಟ್ಟಿ, ರಾಜೀವ ಭಂಡಾರಿ, ಡಾ| ವಿ. ಎಂ. ಶೆಟ್ಟಿ, ಡಾ| ದಿಲೀಪ್ ಕೋಪರ್ಡೆ, ದೇವದಾಸ್ ಕುಲಾಲ್, ಸುಷ್ಮಾ ಡಿ. ಶೆಟ್ಟಿ, ವಿಮಲಾ ವಿ. ಶೆಟ್ಟಿ ಉಪಸ್ಥಿತರಿದ್ದರು. ವಿಜೇತ ಕ್ರೀಡಾಪಟುಗಳನ್ನು ಹಾಗೂ ತಂಡಗಳನ್ನು ಗಣ್ಯರು ಬಹುಮಾನವಿತ್ತು ಗೌರವಿಸಿದರು. ಸಂಘದ ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ರಾಜೀವ ಎಂ. ಭಂಡಾರಿ ಸ್ವಾಗತಿಸಿದರು. ವಸಂತ ಸುವರ್ಣ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಸಂಘದ ಮಹಿಳಾ ವಿಭಾಗದ ಆಶಾ ಎಲ್. ಶೆಟ್ಟಿ, ಯೋಗಿನಿ ಶೆಟ್ಟಿ, ವಿದ್ಯಾ ಆಲಗೂರ, ಅರುಣಾ ಮೇಸ್ತಾ ಮೊದಲಾದವರು ಉಪಸ್ಥಿತರಿದ್ದು ಸಹಕರಿಸಿದರು.
ಚಿತ್ರ-ವರದಿ: ಗುರುರಾಜ ಪೋತನೀಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.