ಚಿಣ್ಣರ ಬಿಂಬದ ಬೆಳವಣಿಗೆಯಲ್ಲಿ ಹಳೆ ವಿದ್ಯಾರ್ಥಿಗಳ ಪಾತ್ರ ಮಹತ್ತರ:  ಪ್ರಕಾಶ್ ಭಂಡಾರಿ


Team Udayavani, Dec 31, 2020, 5:52 PM IST

ಚಿಣ್ಣರ ಬಿಂಬದ ಬೆಳವಣಿಗೆಯಲ್ಲಿ ಹಳೆ ವಿದ್ಯಾರ್ಥಿಗಳ ಪಾತ್ರ ಮಹತ್ತರ:  ಪ್ರಕಾಶ್ ಭಂಡಾರಿ

ಮುಂಬಯಿ: ಚಿಣ್ಣರ ಬಿಂಬ ಮುಂಬಯಿ ಇದರ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಸಂಭ್ರಮವು ಡಿ. 25ರಂದು ಸಂಜೆ 4.30ರಿಂದ ಡಿಜಿಟಲ್‌ ಪ್ಲಾಟ್‌ ಫಾರ್ಮ್ ಮೂಲಕ ನಡೆಸಲಾಗಿತ್ತು.

ಚಿಣ್ಣರ ಬಿಂಬದ ರೂವಾರಿ ಪ್ರಕಾಶ್‌ ಭಂಡಾರಿ ಅವರು ಹಳೆ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಚಿಣ್ಣರ ಬಿಂಬದ ಎಲ್ಲ ಕಾರ್ಯಕ್ರಮಗಳು ಪ್ರತಿವರ್ಷವು ನಿರಂತರವಾಗಿ ನಡೆಯುತ್ತಿತ್ತು.

ಆದರೆ ಈ ಬಾರಿ ಎಲ್ಲ ಶಿಬಿರಗಳಲ್ಲಿ ಆನ್‌ಲೈನ್‌ ಕ್ಲಾಸ್‌ ಗಳು ಉತ್ತಮವಾಗಿ ನಡೆಯುತ್ತಿವೆ. ಚಿಣ್ಣರ ಬಿಂಬ ಸಂಸ್ಥೆಯ ಬೆಳವಣಿಗೆಯಲ್ಲಿ ಹಳೆ ವಿದ್ಯಾರ್ಥಿಗಳ ಪಾತ್ರ ಮಹತ್ತರವಾದುದು ಎಂದು ತಿಳಿಸಿದರು. ಹಳೆ ವಿದ್ಯಾರ್ಥಿಗಳ ಸಂಘಟನೆ ಮಾಡೋಣ. ಅದರಲ್ಲಿ ನೀವೆಲ್ಲರೂ ಕೈ ಜೋಡಿಸಿರುವಿರಿ ಎಂದುಕೊಳ್ಳುವೆ. ಪ್ರತಿಭಾವಂತರಾಗಿರುವ ನೀವು ಈಗಿನ ಮಕ್ಕಳಿಗೆ ದಾರಿದೀಪ. ಈ ವರ್ಷ ಯಾವುದೇ ಸಾಂಸ್ಕೃತಿಕ ಚಟುವಟಿಕೆಗಳು ನಡೆಸಲು ಆಗಲಿಲ್ಲ.

ನೀವೆಲ್ಲರೂ ಆನ್‌ಲೈನ್‌ ಸಂಪರ್ಕದಲ್ಲಿ ಇರಬೇಕೆಂಬುದು ನನ್ನ ಅನಿಸಿಕೆ. ಅದಕ್ಕಾಗಿ ಹಳೆ ವಿದ್ಯಾರ್ಥಿಗಳ ವಿಶೇಷ ಸಭೆಯನ್ನು ಕರೆಯಲಾಯಿತು. ಎಲ್ಲರೂ ಉತ್ಸಾಹದಿಂದ ಭಾಗವಹಿಸಿರುವುದನ್ನು ಕಂಡು ಸಂತೋಷವಾಗಿದೆ. ಚಿಣ್ಣರ ಬಿಂಬದ ಎಲ್ಲ ಹಳೆ ವಿದ್ಯಾರ್ಥಿಗಳಿಗೆ ಈ ಸಂಸ್ಥೆಯ ಮೇಲಿರುವ ಅಭಿಮಾನ, ಗೌರವವನ್ನು ಕಂಡು ಮನ ತುಂಬಿ ಬಂದಿದೆ. ಎಲ್ಲರೂ ಜತೆಯಾಗಿ ಚಿಣ್ಣರ ಬಿಂಬದೊಂದಿಗೆ ಬೆಸೆಯುವ ಕೊಂಡಿಯಾಗಬೇಕು ಎಂಬುವುದು ಈ ಸಂಸ್ಥೆಯ ಆಶಯ ಎಂದರು.

ಹಳೆ ವಿದ್ಯಾರ್ಥಿನಿ ಮೇಘನಾ, ಪೇಜಾವರ ಶಿಬಿರದ ಸಮೀಕ್ಷಾ ಕೋಟ್ಯಾನ್‌, ಮೀರಾರೋಡ್‌ ಶಿಬಿರದ ಹಸ್ತಾ ಶೆಟ್ಟಿ, ಮಲಾಡ್‌ ಶಿಬಿರದ ವಿಕ್ರಮ್‌ ಪಾಟ್ಕರ್‌, ಎಸ್‌. ಎಂ. ಶೆಟ್ಟಿ ಶಿಬಿರದ ವಿದ್ಯಾರ್ಥಿ ಅಪೇಕ್ಷಾ ಶೆಟ್ಟಿ, ಘೋಡ್‌ಬಂದರ್‌ ಶಿಬಿರದ ಪ್ರಶುಲ್‌ ಶೆಟ್ಟಿ, ಎಸ್‌. ಎಂ. ಶೆಟ್ಟಿ ಶಿಬಿರದ ವಿದ್ಯಾರ್ಥಿ ನಿಲೀಶಾ ಶೆಟ್ಟಿ, ಐರೋಲಿ ಶಿಬಿರದ ಅನೀಶಾಹೇರಳ, ಮೀರಾರೋಡ್‌ ಶಿಬಿರದ ಪ್ರಖ್ಯಾತ್‌ ಶೆಟ್ಟಿ, ಪ್ರತೀಕ್ಷಾ, ಐರೋಲಿ ಶಿಬಿರದ ನೇಹಾ ಶೆಟ್ಟಿ, ಸೌಮ್ಯಾ ಪ್ರಭು, ಥಾಣೆ ಶಿಬಿರದ ಕೀರ್ತಿ ಶೆಟ್ಟಿ, ಕಾಂದಿವಿಲಿ ಶಿಬಿರದ ಗೌರಿ ಶೆಟ್ಟಿ, ಮೀರಾರೋಡ್‌ ಶಿಬಿರದ ಸಿಯಾ ಶೆಟ್ಟಿ, ಪ್ರಜ್ಯೋತ್‌ ಪಿ. ಶೆಟ್ಟಿ, ಶಿರ್ಷಿ ಶೆಟ್ಟಿ ಕಲ್ವ, ದೃಶ್ಯ ಹೆಗ್ಡೆ, ವಿಘ್ನೇಶ್‌ ಶೆಟ್ಟಿ, ನಮೃತಾ, ವಿಕ್ಕಿ ಆರ್‌. ಶೆಟ್ಟಿ, ಆಕ್ಷಾಂಕಾ ಶೆಟ್ಟಿ ಹಾಗೂ ಅನಿರುದ್ಧ್ ಶೆಟ್ಟಿ, ಐರೋಲಿ, ಉಮಾಮಹೇಶ್ವರಿ ಶಿಬಿರದ ಸಂಯುಕ್ತ ಶೆಟ್ಟಿ, ಪ್ರಜ್ವಲ್‌ ಶೆಟ್ಟಿ ಹೀಗೆ ಎಲ್ಲ ಹಳೆ ವಿದ್ಯಾರ್ಥಿಗಳು ಚಿಣ್ಣರ ಬಿಂಬದ ಸುಂದರ ಅನುಭವಗಳನ್ನು ತುಂಬಾ ಉತ್ತಮ ರೀತಿಯಲ್ಲಿ ಹಂಚಿಕೊಂಡರಲ್ಲದೆ, ಅವರ ಪಾಲಕರು ತಮಗಾದ ಅನುಭವವನ್ನು ತುಂಬು ಹೃದಯದಿಂದ ಹಂಚಿಕೊಂಡರು.

ಚಿಣ್ಣರ ಬಿಂಬದ ಸೆಂಟ್ರಲ್‌ ಕಮಿಟಿಯ ಸದಸ್ಯೆ ರೇಣುಕಾ ಭಂಡಾರಿ ಮತ್ತು ಚಿಣ್ಣರ ಬಿಂಬದ ಮೊದಲ ಫೌಂಡೇಶನ್‌ ಚಿಣ್ಣರ ಗೌರವಾಧ್ಯಕ್ಷೆ ಪೂಜಾ ಭಂಡಾರಿ, ವಿಜಯ್‌ ಕೋಟ್ಯಾನ್‌ ಅವರು ಉಪಸ್ಥಿತರಿದ್ದರು. ಚಿಣ್ಣರ ಬಿಂಬದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ| ಪೂರ್ಣಿಮಾ ಶೆಟ್ಟಿ ಅವರಿಗೆ ಎಲ್ಲ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ವಂದನೆ ಸಲ್ಲಿಸಿ, ಕನ್ನಡ ಕಲಿಕೆ ಮತ್ತು ನಿರೂಪಣೆ ಮಾಡಲು ಕಲಿಸಿ ಕೊಟ್ಟದ್ದನ್ನು ಸ್ಮರಿಸಿಕೊಂಡರು.

ಸೆಂಟ್ರಲ್‌ ಕಮಿಟಿಯ ಸದ್ಯಸೆ ಗೀತಾ ಹೇರಳ ಮಾತಾನಾಡಿ, ಹದಿನೆಂಟು ವರ್ಷಗಳ ಹಿಂದೆ ವಿದ್ಯಾರ್ಥಿಗಳು ಚಿಣ್ಣರಾಗಿದ್ದರು. ಇಂದು ಒಳ್ಳೆಯ ಉದ್ಯೋಗ, ಉತ್ತಮ ಕಲಿಕೆಯನ್ನು ಮಾಡುವ ಚಿಣ್ಣರ ಬಿಂಬದ ಮಕ್ಕಳನ್ನು ಕಂಡಾಗ ಪ್ರಕಾಶ್‌ ಅಣ್ಣನವರಿಗೆ ತುಂಬಾ ಖುಷಿಯಾಯಿತು. ಅಲ್ಲದೆ ನಮಗೆಲ್ಲರಿಗೂ ಎಲ್ಲ ಮಕ್ಕಳ ಆತ್ಮೀಯತೆ ನೋಡುವಾಗ ಸಂತೋಷವಾಗುತ್ತದೆ. ನಮ್ಮ ಸಂಸ್ಥೆಗೆ ನಿಮ್ಮ ಸಹಕಾರ ಹೀಗೆಯೇ ಮುಂದುವರಿಯಲಿ ಎಂದರು. ನೂರು ಮಂದಿ ಹಳೆ ವಿದ್ಯಾರ್ಥಿಗಳು, ಸೆಂಟ್ರಲ್‌ ಕಮಿಟಿಯ ಸದಸ್ಯರು, ಕನ್ನಡ ಶಿಕ್ಷಕಿಯರು, ಶಿಬಿರ ಮುಖ್ಯಸ್ಥರು, ಸಾಂಸ್ಕೃತಿಕ ಮುಖ್ಯಸ್ಥರು, ಭಜನೆ ಶಿಕ್ಷಕಿಯರು ಹಾಗೂ ಪಾಲಕರು ಭಾಗವಹಿಸಿದ್ದರು.

ಪೇಜಾವರ ಶಿಬಿರದ ಪವಿತ್ರಾ ದೇವಾಡಿಗ ಅವರು ಸ್ವಾಗತ ಭಾಷಣದ ಜತೆಗೆ ಅನುಭವವನ್ನು ಹಂಚಿಕೊಂಡರು. ಥಾಣೆ ಶಿಬಿರದ ಕೀರ್ತಿ ಶೆಟ್ಟಿಯವರು ಪ್ರಾರ್ಥನೆ ಗೀತೆ ಹಾಡಿದರು. ಘನ್ಸೋಲಿ ಶಿಬಿರದ ಪ್ರತೀಕ್ಷಾ ಭಟ್‌ ಅವರು ಅನುಭವದ ಜತೆಗೆ ಸಭೆಗೆ ಬಂದಿರುವ ಎಲ್ಲ ಚಿಣ್ಣರ ಬಂಧುಗಳಿಗೆ ವಂದಿಸಿದರು. ಎಸ್‌. ಎಂ. ಶೆಟ್ಟಿ ಶಿಬಿರದ ಶಿಕ್ಷಕಿ ಅನಿತಾ ಎಸ್‌. ಶೆಟ್ಟಿ ಸಹಕರಿಸಿದರು.

ಇದನ್ನೂ ಓದಿ:ಜ.15ರಿಂದ ಪ್ರಥಮ ಪಿಯುಸಿ, 9 ನೇ ತರಗತಿ ಆರಂಭಿಸುವ ಸಾಧ್ಯತೆ: ಸುರೇಶ್ ಕುಮಾರ್

ನಿಮ್ಮೆಲ್ಲರ ಸಹಕಾರವಿದ್ದರೆ ಚಿಣ್ಣರ ಬಿಂಬದ ಮಾಸಿಕ ಪತ್ರಿಕೆಯನ್ನು ಡಿಜಿಟಲ್‌ ರೀತಿಯಲ್ಲಿ ತರಬಹುದು. ಅದರ ಕುರಿತು ಚಿಂತನೆ ಮಾಡೋಣ. ಅದರಂತೆಯೇ ಎಲ್ಲ ಹಳೆ ವಿದ್ಯಾರ್ಥಿಗಳು ತಿಂಗಳಿಗೊಮ್ಮೆ ಡಿಜಿಟಲ್‌ ಪ್ಲಾಟ್‌ಫಾರ್ಮ್ ಮುಖಾಂತರ ಸೇರಿ ಒಳ್ಳೆಯ ವಿಷಯಗಳನ್ನು ಯಾವುದೇ ಭಾಷೆಯಲ್ಲಿ ಬೇಕಾದರೂ ಮಂಡಿಸಲು ಅವಕಾಶ ಕಲ್ಪಿಸಿ, ಸದಾ ಕಾರ್ಯ ಚಟುವಟಿಕೆಯಲ್ಲಿ ಇರುವಂತೆ ವ್ಯವಸ್ಥೆ ಮಾಡೋಣ. ಕೊರೊನಾದಿಂದಾಗಿ ಈ ವರ್ಷ ಎಲ್ಲರಿಗೂ ತೊಂದರೆಯಾಯಿತು. ಎಲ್ಲ ಕಡೆಯಿಂದ ದುಃಖದ ಸಮಾಚಾರ ಕೇಳಿ ಬರುತ್ತಿತ್ತು. ಆದರೆ ಪರಿವಾರದಲ್ಲಿ ಎಲ್ಲರೂ ಪ್ರೀತಿ, ವಾತ್ಸಲದಿಂದ ಒಟ್ಟಿಗೆ ಇದ್ದುಕೊಂಡು ಸಮಯ ಕಳೆದರು. ಪರಸ್ಪರ ಸಹಾಯ ಮಾಡಿರುವರು. ಸಂಘ-ಸಂಸ್ಥೆಗಳು ಬಡವರಿಗೆ ಬೇಕಾದ ವಸ್ತುಗಳನ್ನು ನೀಡಿ ನೆರವು ಮಾಡಿದವು. ಸಂಕಷ್ಟದಲ್ಲೂ ಪರಿವಾರದ ಎಲ್ಲರ ಜತೆ ಇದ್ದು ಸಂತೋಷ ಪಟ್ಟಿರುವೆವು ಎಂಬುದರಲ್ಲಿ ಸಂಶಯವಿಲ್ಲ. ಮುಂದಿನ ವರ್ಷದಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ.

ಡಾ| ಪೂರ್ಣಿಮಾ ಶೆಟ್ಟಿ, ಮುಖ್ಯಸ್ಥೆ, ಕನ್ನಡ ಕಲಿಕಾ ವಿಭಾಗ, ಚಿಣ್ಣರ ಬಿಂಬ

ಟಾಪ್ ನ್ಯೂಸ್

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್‌ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ

Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್‌ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ

Dangerous Stunt: ಚಲಿಸುತ್ತಿರುವ ಕಾರಿನ ಬಾನೆಟ್ ಮೇಲೆ ಬಾಲಕನನ್ನು ಕೂರಿಸಿ ರೀಲ್ಸ್…

Dangerous Stunt: 5 ವರ್ಷದ ಬಾಲಕನನ್ನು ಕಾರಿನ ಬಾನೆಟ್ ಮೇಲೆ ಕೂರಿಸಿ ಸ್ಟಂಟ್

BBK11: ಕ್ಯಾಪ್ಟನ್‌ ಆಗುವ ಆತುರದಲ್ಲಿ ಗೇಮ್‌ನಲ್ಲಿ ಮೋಸ? – ಭವ್ಯ ವಿರುದ್ದ ಗಂಭೀರ ಆರೋಪ

BBK11: ಕ್ಯಾಪ್ಟನ್‌ ಆಗುವ ಆತುರದಲ್ಲಿ ಗೇಮ್‌ನಲ್ಲಿ ಮೋಸ? – ಭವ್ಯ ವಿರುದ್ದ ಗಂಭೀರ ಆರೋಪ

INDWvWIW: ದೀಪ್ತಿ ಶರ್ಮಾ ಆಲ್‌ ರೌಂಡ್‌ ಶೋ; ಏಕದಿನ ಕ್ಲೀನ್‌ಸ್ವೀಪ್‌ ಮಾಡಿದ ವನಿತೆಯರು

INDWvWIW: ದೀಪ್ತಿ ಶರ್ಮಾ ಆಲ್‌ ರೌಂಡ್‌ ಶೋ; ಸರಣಿ ಕ್ಲೀನ್‌ಸ್ವೀಪ್‌ ಮಾಡಿದ ವನಿತೆಯರು

‌Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’

‌Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’

Metro line will pass over 314 houses

Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್‌ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ

Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್‌ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ

saavu

New Delhi: ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾ*ವು

Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ

Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ

Kollegala: ಶಾಲಾ ಮಕ್ಕಳಿಗೆ ನೀಡುವ KMF ಹಾಲಿನ ಪುಡಿ ಅಕ್ರಮ ದಾಸ್ತಾನು… ಓರ್ವನ ಬಂಧನ

Kollegala: ಶಾಲಾ ಮಕ್ಕಳಿಗೆ ನೀಡುವ KMF ಹಾಲಿನ ಪುಡಿ ಅಕ್ರಮ ದಾಸ್ತಾನು… ಓರ್ವನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.