ಟಿಎಂಸಿ ಸಾವಿನ ಸಂಖ್ಯೆ ಮರೆಮಾಚಿದೆ: ಕಿರೀಟ್
Team Udayavani, Jun 25, 2020, 4:37 PM IST
ಥಾಣೆ, ಜೂ. 24: ರಾಜ್ಯ ಸರಕಾರದಂತೆ ಥಾಣೆ ಮುನ್ಸಿಪಲ್ ಕಾರ್ಪೊರೇಷನ್ (ಟಿಎಂಸಿ) ಕೂಡ ನಗರದಲ್ಲಿ ನಿಜವಾದ ಕೋವಿಡ್ -19 ಸಾವಿನ ಸಂಖ್ಯೆಯನ್ನು ಮರೆಮಾಚಿದೆ ಎಂದು ಮಾಜಿ ಸಂಸದ ಕಿರೀಟ್ ಸೋಮಯ್ಯ ಆರೋಪಿಸಿದ್ದಾರೆ.
ನಿಗಮವು ಕನಿಷ್ಠ 50ಕ್ಕೂ ಅಧಿಕ ಸಾವುಗಳನ್ನು ಬಹಿ ರಂಗ ಪಡಿಸುತ್ತಿಲ್ಲ, ಅದು ಅಂಕಿ ಅಂಶಗಳ ಸಮನ್ವಯದ ಸಮಯದಲ್ಲಿ ಹೊರಬರುತ್ತದೆ. ಈ ಅಂಕಿ ಅಂಶವನ್ನು ನಿಗಮವು ರಾಜ್ಯ ಸರಕಾರಕ್ಕೆ ಕಳುಹಿಸಿಲ್ಲ ಎಂದು ಸೋಮಯ್ಯ ಆರೋಪಿಸಿದ್ದಾರೆ. ಮುಂಬ್ರಾದಲ್ಲಿ ಟಿಎಂಸಿ ಕಡಿಮೆ ಸಾವಿನ ಅಂಕಿಅಂಶಗಳನ್ನು ತೋರಿಸಿದೆ. ಅಲ್ಲಿ ಸಾವಿನ ಸಂಖ್ಯೆ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ. ಮಂಗಳವಾರ ಮಧ್ಯಾಹ್ನ ಥಾಣೆ ನಗರದ ಪರಿಸ್ಥಿತಿಯನ್ನು ತಿಳಿಯಲು ನಾಗರಿಕ ಆಯುಕ್ತ ವಿಜಯ್ ಸಿಂಘಾಲ್ ಅವರನ್ನು ಭೇಟಿಯಾದ ಕಿರೀಟ್ ಅವರು. ಇತ್ತೀಚಿನ ವರದಿಯನು ನಾಗರಿಕ ಪ್ರಾಧಿಕಾರದಿಂದ ಪಡೆದಿದ್ದು ಅದರಲ್ಲಿರುವ ಅಂಕಿ ಅಂಶಗಳಿಂದ ನನಗೆ ತೃಪ್ತಿಯಿಲ್ಲ ಎಂದಿದ್ದಾರೆ. ಠಾಕ್ರೆ ಸರಕಾರವು 3,000 ಸಾವುಗಳನ್ನು ಮರೆಮಾಡಿದ್ದು, ಸೋಲಾಪುರ ಮುನ್ಸಿಪಲ್ ಕಾರ್ಪೊರೇಶನ್ ಸಹ ಸೋಮವಾರ 40 ಕಡಿಮೆ ಸಾವುಗಳನ್ನು ತೋರಿಸಲು ಪ್ರಯತ್ನಿಸಿದೆ. ಇವೆಲ್ಲವೂ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಹೆಚ್ಚಿನ ಸಮಸ್ಯೆಗೆ ಕಾರಣವಾಗುತ್ತವೆ. ಸರಕಾರ ಮರೆಮಾಡಿದ ಒಟ್ಟು ಸಾವುಗಳಲ್ಲಿ 2,000 ಮುಂಬಯಿ ಮತ್ತು ಕನಿಷ್ಠ 50 ಮಂದಿ ಥಾಣೆ ನಗರದವರಾಗಿದ್ದಾರೆ ಎಂದು ಅವರು ಹೇಳಿದರು.
ಮುಂಬ್ರಾದಲ್ಲಿ ಸಾವಿನ ಸಂಖ್ಯೆ ನಿಗಮ ತೋರಿಸಿದ್ದಕ್ಕಿಂತ ಹೆಚ್ಚಿದೆ. ನಿಗಮವು ಮುಂಬ್ರಾದಲ್ಲಿ ಸಂಭವಿಸಿದ ನೈಜ ಸಾವುಗಳಲ್ಲಿ ಕೇವಲ ಶೇ. 50ರಷ್ಟನ್ನು ತೋರಿಸಿದೆ. ಡೇಟಾದಲ್ಲಿನ ಈ ವ್ಯತ್ಯಾಸಗಳ ಬಗ್ಗೆ ತನಿಖೆಗೆ ನಾವು ಒತ್ತಾಯಿಸಿದ್ದೇವೆ. ಇದಲ್ಲದೆ ಖಾಸಗಿ ಆಸ್ಪತ್ರೆಗಳಿಗೆ ಲಾಭದಾಯಕವಾಗುವುದಕ್ಕಿಂತ ಹೆಚ್ಚಾಗಿ ಸರಕಾರಿ ಆಸ್ಪತ್ರೆಗಳ ಬದಲು ರೋಗಿಗಳನ್ನು ವೇಗವಾಗಿ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತದೆ. ಆಮ್ಲಜನಕದ ಪೂರೈಕೆಯ ಕೊರತೆ ಅಥವಾ ವೆಂಟಿಲೇಟರ್‌ಗಳಂತಹ ತಾಂತ್ರಿಕ ಸಮಸ್ಯೆಗಳೂ ಸಹ ಇವೆ. ಇಂತಹ ಸಮಸ್ಯೆ ಗಳತ್ತ ಹೆಚ್ಚಿನ ಗಮನಹರಿಸಬೇಕಾಗಿದೆ ಎಂದು ಅವರು ಹೇಳಿದರು.
ಮಹಾರಾಷ್ಟ್ರ ವಿಧಾನ ಪರಿಷತ್ತಿನ ವಿಪಕ್ಷದ ಮುಖಂಡ ಪ್ರವೀಣ್ ದಾರೇಕರ್ ಅವರು ಮಂಗಳವಾರ ಕಲ್ಯಾಣ್-ಡೊಂಬಿವಲಿ ಕಾರ್ಪೊರೇಶನ್‌ನ ಪುರಸಭೆ ಆಯುಕ್ತ ವಿಜಯ್ ಸೂರ್ಯವಂಶಿ ಅವರನ್ನು ಭೇಟಿಯಾದರು. ಮುಂಬಯಿ ಮತ್ತು ಹತ್ತಿರದ ಸ್ಥಳಗಳಿಗೆ ಅಗತ್ಯ ಸೇವೆಗಳ ಭಾಗವಾಗಿ ಕೆಡಿಎಂಸಿ ವ್ಯಾಪ್ತಿಯಲ್ಲಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಈ ಜನರು ತಮ್ಮ ಕುಟುಂಬಗಳು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಸೋಂಕಿನ ಸರಪಳಿಯನ್ನು ಮುರಿಯಲು ಕ್ರಮಗಳು ಅಥವಾ ಇತರ ನಿಬಂಧನೆಗಳನ್ನು ಅನುಸರಿಸಬೇಕಾಗಿದೆ ಎಂದು ದಾರೇಕರ್ ಹೇಳಿದರು.
ಆಚಾರ್ಯ ಅತ್ರೆ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿ, ಕಲ್ಯಾಣ್ ಮತ್ತು ಡೊಂಬಿವಲಿ ಪ್ರದೇಶಗಳಲ್ಲಿನ ಸಾಂಕ್ರಾಮಿಕ ರೋಗವನ್ನು ನಿಗ್ರಹಿಸಲು ಕೈಗೊಂಡ ಕ್ರಮಗಳು ಕುರಿತು ಚರ್ಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.