ಬರೋಡಾದ ತುಳು ಚಾವಡಿ: ವಾರ್ಷಿಕ ತೆನೆ ಹಬ್ಬ ಸಂಭ್ರಮ

Team Udayavani, Oct 15, 2017, 4:33 PM IST

14-Mum04a.jpg

ಬರೋಡಾ: ಕರಾವಳಿ ಕನ್ನಡಿಗರು ಮೂಲತಃ ಪ್ರಕೃತಿ ಆರಾಧಕರು. ಪ್ರಕೃತಿ ಆರಾಧನೆ ಎಂಬುದು ವೈಚಾರಿಕವಾದುದು. ಭತ್ತದ ತೆನೆಯಿಂದ ಹಿಡಿದು ನಾಗರಾಧನೆಯವರೆಗೆ ಎಲ್ಲದರಲ್ಲೂ ದೇವರನ್ನು ಕಾಣುವ ಕರಾವಳಿಗರ  ಶಕ್ತಿ-ಭಕ್ತಿ ದೈವದತ್ತವಾದುದು. ಈ ಜಗತ್ತಿನಲ್ಲಿ ಎರಡು ಬಗೆಯ ಮನುಷ್ಯರಿಗೆ ಮಾತ್ರ ವಿಗ್ರಹ ಆರಾಧನೆ ನಿಷಿದ್ಧ. ಯಾವ ಧರ್ಮವನ್ನು ಆಲೋಚಿಸಲಾರದ ಮೃಗೀಯ ಮಾನವ, ಮತ್ತೂಬ್ಬ ಇವುಗಳೆಲ್ಲವನ್ನು ದಾಟಿ, ಪೂರ್ಣತೆಯನ್ನು ತಲುಪಿದ ಮುಕ್ತಾತ್ಮ ಇವರಿಗೆ ವಿಗ್ರಹ ಆರಾಧನೆ ಬೇಕಾಗಿಲ್ಲ. ಇವರಿಬ್ಬರ ಮಧ್ಯೆಯಿರುವ ನಮಗೆಲ್ಲಾ ಒಳಹೊರಗೂ ಯಾವುದಾದರೊಂದು ವಿಗ್ರಹ ಅವಶ್ಯ. ದೇವರನ್ನು ತಲುಪುವ ಸರಳ ಮಾರ್ಗವೇ ಪ್ರಕೃತಿ ಆರಾಧನೆಯಾಗಿದೆ ಎಂದು ಸ್ವಾಮಿ ವಿವೇಕಾನಂದರೇ ಹೇಳಿದ್ದಾರೆ. ಈ ದಿಸೆಯಲ್ಲಿ ತುಳು ಸಂಸ್ಕೃತಿ, ತುಳು ಪರಂಪರೆ, ದೇಶದಲ್ಲಿ ಇನ್ನೂ ಮುಂಚೂಣಿಯಲ್ಲಿದೆ ಎಂದು ಅಹ್ಮದಾಬಾದ್‌ನ ಆಧ್ಯಾತ್ಮಿಕ ಚಿಂತಕ, ಸಮಾಜ ಸೇವಕ ನಾರಾಯಣ ಎಂ. ರೈ ಅವರು ನುಡಿದರು.

ಸೆ. 30ರಂದು ಬರೋಡಾದ ತುಳು ಚಾವಡಿಯಲ್ಲಿ ಜರಗಿದ ವಾರ್ಷಿಕ ತೆನೆಹಬ್ಬ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ನಿಮ್ಮೆಲ್ಲರ ಉತ್ಸಾಹ, ಆನಂದ, ಶ್ರದ್ಧೆಯನ್ನು ಕಂಡಾಗ ಸಂತೋಷವಾಗುತ್ತಿದೆ. ಯುವ ಪೀಳಿಗೆಯನ್ನು ಇಂತಹ ಸಮಾರಂಭಗಳಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕಾದ ಅಗತ್ಯವಿದೆ ಎಂದು ನುಡಿದರು.

ಅತ್ಯಂತ ಸಂಭ್ರಮ, ಸಡಗರದೊಂದಿಗೆ ಜರಗಿದ ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ತುಳು ಸಂಘ ಬರೋಡಾದ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ ಅವರು ಮಾತನಾಡಿ, ಸ್ಥಳೀಯರಲ್ಲದೆ ರಾಜ್ಯದ ವಿಭಿನ್ನ ನಗರಗಳ ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿರುವುದು ಸಮಾರಂಭಕ್ಕೆ ಹೆಚ್ಚಿನ ಮೆರುಗು ತಂದಿದೆ ಎಂದು ನುಡಿದು ಶುಭ ಹಾರೈಸಿದರು.

ಆರಂಭದಲ್ಲಿ ತುಳುನಾಡಿನ ಪ್ರಾಚೀನ ಸಂಪ್ರದಾಯದಂತೆ ಚೆಂಡೆ-ಮದ್ದಳೆ, ಕೊಂಬು ವಾದ್ಯಗಳೊಂದಿಗೆ ಭತ್ತದ ತೆನೆಯನ್ನು ಮೆರವಣಿಗೆಯಲ್ಲಿ ವೇದಿಕೆಗೆ ತರಲಾಯಿತು. ಸಂಘದ ಹಿರಿಯರಾದ ರಾಮದಾಸ್‌ ಶೆಟ್ಟಿ ಅವರು ತೆನೆಗೆ ಹಾಲಿನ ಅಭಿಷೇಕಗೈದು, ಮಹಾಮಂಗಳಾರತಿ ಮಾಡಿ ವಿಧಿವತ್ತಾಗಿ ಭಕ್ತದ ತೆನೆಗಳನ್ನು ಎಲ್ಲರಿಗೂ ಹಂಚಿ ಶುಭ ಹಾರೈಸಿದರು.

ತುಳು ಸಂಘ ಬರೋಡಾ ಅಧ್ಯಕ್ಷ ಶಶಿಧರ್‌ ಬಿ. ಶೆಟ್ಟಿ ಬೆಳ್ತಂಗಡಿ ಅವರು ಸ್ವಾಗತಿಸಿ, ತೆನೆಹಬ್ಬದ ಮಹತ್ವವನ್ನು ವಿವರಿಸಿ, ತೆನೆಹಬ್ಬ ರೈತಾಪಿ ಕರಾವಳಿ ಕನ್ನಡಿಗರ ಮಹತ್ವದ ಅರ್ಥಪೂರ್ಣವಾದ ಪ್ರಕೃತಿ ಆರಾಧನೆಯ ಹಬ್ಬವಾಗಿದೆ. ತುಳುನಾಡಿನಲ್ಲಿ ಅದನ್ನು ದಶಕದ ಹಿಂದೆಯೇ ಮರೆತು ಬಿಡಲಾಗಿದ್ದರೂ, ಬರೋಡಾದ ತುಳು ಸಂಘ ಅದಕ್ಕೆ ಮರುಜೀವ ನೀಡಿ, ಸಾಮೂಹಿಕ ಮಟ್ಟದಲ್ಲಿ ಅದನ್ನು ಆಚರಿಸಿಕೊಂಡು ಬರುತ್ತಿದೆ. ಇದು ತುಳು ಸಂಘದ ಸಂಕಲ್ಪವೂ ಆಗಿದೆ ಎಂದು ನುಡಿದರು.

ಅಹ್ಮದಾಬಾದ್‌ನ ಬಂಟರ ಸಂಘದ ಅಧ್ಯಕ್ಷ ಅಪ್ಪು ಶೆಟ್ಟಿ ಅವರು ಮಾತನಾಡಿ, ತುಳು ಸಂಘ ಬರೋಡದ ಸಂಸ್ಕೃತಿ ಯಜ್ಞ ಶ್ಲಾಘನೀಯವಾಗಿದೆ. ಇವು ಸಮಸ್ತ ತುಳು-ಕನ್ನಡಿಗರಿಗೆ ಮಾದರಿಯಾಗಿದೆ ಎಂದರು. ಹಿರಿಯರಾದ ಎಸ್ಕೆ ಹಳೆಯಂಗಡಿ ಅವರು ಮಾತನಾಡಿ, ತುಳು ಚಾವಡಿ ಮೂವತ್ತು ವರ್ಷಗಳ ಪರಿಶ್ರಮದ ಚೊಚ್ಚಲ ಕೂಸು. ಮುಂದಿನ ತುಳು ಪೀಳಿಗೆಗೆ ತುಳು ಕಲಿಕೆಯ ಗುರುಕುಲ ಇದಾಗಿದೆ ಎಂದರು. ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಮಂಜುಳಾ ಗೌಡ ವಂದಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

Metro line will pass over 314 houses

Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ

Udupi: A car fell into a huge pothole near Ambalapadi Junction

Udupi: ಅಂಬಲಪಾಡಿ ಜಂಕ್ಷನ್‌ ಬಳಿ ಬೃಹತ್‌ ಹೊಂಡಕ್ಕೆ ಬಿದ್ದ ಕಾರು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

5-madikeri

ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು

4-ut-khader

Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್

26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು

26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Metro line will pass over 314 houses

Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ

Udupi: A car fell into a huge pothole near Ambalapadi Junction

Udupi: ಅಂಬಲಪಾಡಿ ಜಂಕ್ಷನ್‌ ಬಳಿ ಬೃಹತ್‌ ಹೊಂಡಕ್ಕೆ ಬಿದ್ದ ಕಾರು

watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?

watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.