ತುಳುಕೂಟ ಐರೋಲಿ ಇದರ ರಂಗೋತ್ಸವ 2017 ಸಂಭ್ರಮಕ್ಕೆ ಚಾಲನೆ


Team Udayavani, Aug 22, 2017, 2:42 PM IST

25.jpg

ನವಿ ಮುಂಬಯಿ:ತುಳು ನಾಡಿನವರಾದ  ನಮಗೆ ಬೇಕಾದ  ಸಂಸ್ಥೆ ಈ ತುಳುಕೂಟ ಐರೋಲಿಯಾಗಿದೆ. ಹರೀಶ್‌ ಶೆಟ್ಟಿ ಪಡುಬಿದ್ರೆಯವರಿಗೆ ಮಹಾಲಿಂಗೇಶ್ವರ ಮಹಾಗಣಪತಿಯ ಅನುಗ್ರಹ ಸದಾ ಇರುವು ದರಿಂದ ಅವರ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗುವುದರಲ್ಲಿ  ಸಂಶಯವಿಲ್ಲ.  ನಾರಾಯಣ ಗುರುಗಳ ನುಡಿಯಂತೆ ವಿದ್ಯೆಯಿಂದ ಸ್ವತಂತ್ರರಾಗಿ ಎಂಬಂತೆ ತುಳುಕೂಟ ಐರೋಲಿ ವಿದ್ಯೆಗೆ ಹೆಚ್ಚಿನ ಮಹತ್ವ ನೀಡುತ್ತಿದೆ. ಇದರ ಪದಾಧಿಕಾರಿಗಳು ಒಗ್ಗಟ್ಟಿನಿಂದ ದುಡಿಯುವುದರಿಂದ ಈ ಸಂಸ್ಥೆ ಅಲ್ಪ ಸಮಯ ದಲ್ಲೇ ಹೆಸರುವಾಸಿಯಾಗಿದ್ದು, ಸಂಸ್ಥೆಯ ಕಾರ್ಯವೈಖರಿ ಅಭಿನಂದನೀಯ. ಸಂಸ್ಥೆಯ ಎಲ್ಲಕಾರ್ಯಕ್ರಮಗಳಿಗೆ ಸಹಕರಿಸುವ ದಾನಿಗಳಿಗೆ ನೆರೂಲ್‌ ಶ್ರೀ ಶನೀಶ್ವರ ದೇವರ ಅನುಗ್ರಹ ಸದಾಯಿರಲಿ ಎಂದು ನೆರೂಲ್‌ ಶ್ರೀ ಶನೀಶ್ವರ ಮಂದಿರದ ಅಧ್ಯಕ್ಷ, ಧರ್ಮದರ್ಶಿ ರಮೇಶ್‌ ಎಂ. ಪೂಜಾರಿ ಅವರು ನುಡಿದರು.

ಆ. 20 ರಂದು ಪೂರ್ವಾಹ್ನ ಐರೋಲಿಯ ಮೆಹ್ತಾ ಕಾಲೇಜಿನ ಅಡಿಟೋರಿಯಂನಲ್ಲಿ ನಡೆದ ತುಳುಕೂಟ ಐರೋಲಿ ಇದರ ರಂಗೋತ್ಸವ-2017 ಸಂಭ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ ಶುಭ ಹಾರೈಸಿದರು. ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಕಳತ್ತೂರು ಅಮರನಾಥ್‌ ಶೆಟ್ಟಿ ಅವರು ಮಾತನಾಡಿ, 2007ರಲ್ಲಿ ಹರೀಶ್‌ ಪಡುಬಿದ್ರೆ ಅವರ ನೇತೃತ್ವದಲ್ಲಿ ಕೆಲವು ಉತ್ಸಾಹಿ ತುಳು ಬಾಂಧವರ ಸಹಕಾರದಿಂದ ಸ್ಥಾಪನೆಗೊಂಡ ನಮ್ಮ ತುಳುಕೂಟವು ದಶಮಾನೋತ್ಸವ ಸಂಭ್ರಮವನ್ನು ಆಚರಿಸುತ್ತಿರುವುದು ಹೆಮ್ಮೆಯ

ವಿಷಯವಾಗಿದೆ. ಪರಿಸರದ ತುಳು-ಕನ್ನಡಿಗರಿಗೆ ನೆರಳಾಗಿರುವ ಈ ಸಂಸ್ಥೆ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ರಂಗದಲ್ಲಿ ಮಹತ್ತರ ಸಾಧನೆ ಮಾಡಿದೆ. ದಶಮಾನೋತ್ಸವ ನಿಮಿತ್ತ ವಿದ್ಯಾನಿಧಿ ಕುಂಭ ಯೋಜನೆಯನ್ನು ಸ್ಥಾಪಿಸಲಾಗಿದ್ದು, ಇದರ ಮುಖಾಂತರ ಆರ್ಥಿಕ ವಾಗಿ ಹಿಂದುಳಿದವರಿಗೆ ಶಿಕ್ಷಣಕ್ಕೆ ಸಹಕರಿಸ ಲಾಗುವುದು. ಮುಂಬರುವ ಜ.7ರಂದು ವಾಶಿಯ ಸಿಡ್ಕೊà ಸಭಾಂಗಣದಲ್ಲಿ ಸಂಸ್ಥೆಯ ದಶಮಾನೋತ್ಸವ ಸಂಭ್ರಮ ಜರಗಲಿದ್ದು, ಸಂಸ್ಥೆಯ ಎಲ್ಲ ಕಾರ್ಯಕ್ರಮಗಳಿಗೆ ತುಳು-ಕನ್ನಡಿಗರ ಪ್ರೋತ್ಸಾಹ, ಸಹಕಾರ ಸದಾಯಿರಲಿ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಹೆಗ್ಗಡೆ ಸೇವಾ ಸಂಘದ ಮಾಜಿ ಕಾರ್ಯದರ್ಶಿ ಪ್ರಭಾಕರ ಹೆಗ್ಡೆ ಅವರು ಮಾತನಾಡಿ, ಸಂಸ್ಥೆಯ ಪದಾಧಿಕಾರಿಗಳ ನಿಸ್ವಾರ್ಥ ಸೇವೆ ಹಾಗೂ ಅವಿರತ ದುಡಿಮೆಯಿಂದ ಸಂಸ್ಥೆಯ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರುತ್ತಿವೆ. ಹರೀಶ್‌ ಪಡುಬಿದ್ರೆ ಅವರ ಮಹತ್ವಾಕಾಂಕ್ಷೆಯ ವಿದ್ಯಾನಿಧಿ ಕುಂಭ ಯೋಜನೆ ಕೂಡಾ ಯಶಸ್ವಿ ಯಾಗುವುದರಲ್ಲಿ ಸಂಶಯವಿಲ್ಲ. ನಾವೆಲ್ಲರೂ ಅವರ ಯೋಜನೆಗಳಿಗೆ ಸಹಕಾರ ನೀಡೋಣ  ಎಂದು ನುಡಿದರು.
ಮತ್ತೋರ್ವ ಅತಿಥಿ ಐರೋಲಿಯ ದುರ್ಗಾಪರಮೇಶ್ವರಿ ಮಂದಿರದ ವಿಶ್ವಸ್ತ ಲಯನ್‌ ಸತೀಶ್‌ ಶೆಟ್ಟಿ ಮಾತನಾಡಿ, ತುಳುಕೂಟ ಐರೋಲಿಯ ಅಧ್ಯಕ್ಷ ಹರೀಶ್‌ ಪಡುಬಿದ್ರೆ ನೇತೃತ್ವದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ದಶಮಾನೋತ್ಸವವನ್ನು ಸ್ಮರಣೀಯವಾಗಿಸಲು ಪ್ರಯತ್ನಿಸಿದ್ದಾರೆ. ಅವರೆಲ್ಲ ಅಭಿ
ನಂದನೀಯರು. ಇವರ ಕಾರ್ಯಕ್ರಮಕ್ಕೆ ನಾವೆಲ್ಲರೂ ಪ್ರೋತ್ಸಾಹಿಸಬೇಕು ಎಂದರು.

ರಂಗಕರ್ಮಿ, ಸಾಹಿತಿ ನಾರಾಯಣ ಶೆಟ್ಟಿ ನಂದಳಿಕೆ ಅವರು ಮಾತನಾಡಿ, ನನಗೆ ಇಂದು ತುಂಬಾ ಸಂತೋಷವಾಗುತ್ತಿದೆ. ತುಳುಕೂಟದವರು ಇಂದು ನಾಟಕ ಸ್ಪರ್ಧೆ ಯನ್ನು ಆಯೋಜಿಸಿ ರಂಗಭೂಮಿಗೆ ನೂತನ ಕಳೆ ತಂದಿದ್ದಾರೆ. 

ಕಲಾವಿದರಾದ ನಮ್ಮನ್ನು ತುಳುಕೂಟದವರು ಸಮ್ಮಾನಿಸಿರುವುದು ಸಂತೋಷ ತಂದಿದೆ ಎಂದರು. ರಂಗಭೂಮಿ ಫೈನ್‌ಆರ್ಟ್ಸ್ ಇದರ ಮಾಜಿ ಅಧ್ಯಕ್ಷ ವಿ. ಕೆ. ಸುವರ್ಣ ಮಾತನಾಡಿ, ಹರೀಶ್‌ ಪಡುಬಿದ್ರಿ ಅವರ ನೇತೃತ್ವದಲ್ಲಿ ನಾಟಕ ಸ್ಪರ್ಧೆ ನಡೆಸಿ ನಾಟಕ ರಂಗಕ್ಕೆ ಪ್ರೋತ್ಸಾಹಿಸಿದ್ದಾರೆ. ಈ ಸ್ಪರ್ಧೆ ಯಶಸ್ವಿಯಾಗಲು ಇದರ ಹಿಂದೆ ದುಡಿದವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾ ಲಯದ ಉಪಾಧ್ಯಕ್ಷ ನಂದಿಕೂರು ಜಗದೀಶ್‌ ಶೆಟ್ಟಿ ಅವರು ಮಾತನಾಡಿ, ತುಳುಕೂಟ ಐರೋಲಿ ಸಾಂಸ್ಕೃತಿಕ, ಶೈಕ್ಷಣಿಕ, ಕ್ರೀಡಾಕೂಟಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವುದರ ಜತೆಗೆ ಯಕ್ಷಗಾನ, ನಾಟಕ, ಸಂಗೀತ ಇತ್ಯಾದಿ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದು, ಇಂದು ಮುಂಬಯಿಯ ಹೆಸರಾಂತ ಸಂಸ್ಥೆಯಾಗಿ ರೂಪುಗೊಂಡಿದೆ. ಅದಕ್ಕೆ ನಾವೆಲ್ಲರೂ ಸಹಕರಿಸಬೇಕು ಎಂದರು. ಬಂಟರ ಸಂಘ ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಸಮನ್ವಯಕ ತಾಳಿಪಾಡಿಗುತ್ತು ಭಾಸ್ಕರ ಎಂ.ಶೆಟ್ಟಿ ಮಾತನಾಡಿ, ಹರೀಶ್‌ ಪಡುಬಿದ್ರಿ ಅವರು ಆಯೋಜಿಸುವ ಎಲ್ಲ ಕಾರ್ಯಕ್ರಮಗಳೂ ಯಶಸ್ವಿ ಯಾಗುತ್ತದೆ. ಅವರ ಅಧ್ಯಕ್ಷತೆಯಲ್ಲಿ ಹಲವಾರು ಕಲಾಸ್ಪರ್ಧೆಗಳನ್ನು ಆಯೋಜಿಸಿದ್ದಾರೆ. ಇದರಿಂದ ಕೆಲವು ಹೊಸ ಕಲಾವಿದರಿಗೆ ವೇದಿಕೆ ಸಿಕ್ಕಿದಂತಾಗಿದೆ ಎಂದರು.

ರಂಗ ಕಲಾವಿದೆ ಜೂಲಿಯಟ್‌ ಪೆರೇರಾ ಅವರು ಮಾತನಾಡಿ, ತುಳುಕೂಟದ ಕಾರ್ಯಕ್ರಮಗಳು ಶ್ಲಾಘನೀಯವಾಗಿದೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲೇ ಇಷ್ಟೊಂದು ಸಾಧನೆಗಳನ್ನು ಮಾಡಿರುವ ಸಂಸ್ಥೆಯ ಸಮಾಜಪರ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರವಿರಲಿ ಎಂದರು. ಅಧ್ಯಕ್ಷತೆ ವಹಿಸಿದ್ದ ತುಳುಕೂಟ ಐರೋಲಿ ಅಧ್ಯಕ್ಷ ಹರೀಶ್‌ ಶೆಟ್ಟಿ ಪಡುಬಿದ್ರೆ ಅವರು ಮಾತನಾಡಿ, ರಂಗಭೂಮಿಗೆ ಪ್ರೋತ್ಸಾಹ ನೀಡುವ ಸಲುವಾಗಿ ದಶಮಾನೋತ್ಸವದ ಈ ಸಂದರ್ಭದಲ್ಲಿ ಈ ನಾಟಕ ಸ್ಪರ್ಧೆಯನ್ನು ಆಯೋಜಿಸಿದ್ದೇನೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ನಾನು ಚಿರಋಣಿಯಾಗಿದ್ದೇನೆ. ಇದೇ ರೀತಿ ಮುಂದೆಯೂ ನಮ್ಮ ಕಾರ್ಯಕ್ರಮಗಳಿಗೆ ಸಹಕರಿಸುವಿರಿ ಎಂದು ನಂಬುತ್ತೇನೆ ಎಂದರು.

ಜಗದೀಶ್‌ ಶೆಟ್ಟಿ ಕಟಪಾಡಿ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ತುಳುಕೂಟದ ಉಪಾಧ್ಯಕ್ಷರಾದ ಕೆ. ಕೆ. ಹೆಬ್ಟಾರ್‌, ನಾಗೇಶ್‌ ಶೆಟ್ಟಿ ಹೆದ್ದಾರಿ ಮನೆ ಬೈಕಾಡಿ, ಪ್ರಧಾನ ಕಾರ್ಯದರ್ಶಿ ರಾಜೇಶ್‌ ಬಿ. ಶೆಟ್ಟಿ, ಕೋಶಾಧಿಕಾರಿ ಗಂಗಾಧರ ಬಂಗೇರ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಅಮರ್‌ನಾಥ್‌ ಶೆಟ್ಟಿ ಕಳತ್ತೂರು, ರಂಗೋತ್ಸವದ ಕಾರ್ಯಾಧ್ಯಕ್ಷ ಸುಕೇಶ್‌ ಶೆಟ್ಟಿ ಇರ್ವತ್ತೂರು ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಾಗೇಶ್‌ ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಗಣ್ಯರನ್ನು ಪದಾಧಿಕಾರಿಗಳು ಗೌರವಿಸಿದರು.

ಅನಂತರ ಪರಕೆ ಕಲಾವಿದರು ಅಸಲ್ಪ ಕಲಾವಿದರಿಂದ ಬೀಡಿ, ಸಪ್ತಸ್ವರ ಕಲ್ಚರಲ್‌ ಅಸೋಸಿಯೇಶನ್‌ ಮುಂಬಯಿ ಕಲಾವಿದ ರಿಂದ ದೇಯಿಕ್ಕನ ದೈವದಿಲ್‌É, ರಂಗಭೂಮಿ ಫೈನ್‌ಆರ್ಟ್ಸ್ ಇವರಿಂದ ಏರೆಗ್ಲಾ ಪನೊಡಿj, ಬಿಲ್ಲವರ ಅಸೋಸಿಯೇಶನ್‌ ಮೀರಾರೋಡ್‌ ಸ್ಥಳೀಯ ಸಮಿತಿಯಿಂದ ಯಕ್ಷನಿಲಯ ಹಾಗೂ ಹೆಗ್ಗಡೆ ಸೇವಾ ಸಂಘ ಮುಂಬಯಿ ಕಲಾವಿದರಿಂದ ಡೋಲು ನಾಟಕ ಪ್ರದರ್ಶನಗೊಂಡವು. ತೀರ್ಪುಗಾರರಾಗಿ ದಿನೇಶ್‌ ಕುಡ್ವ, ಸುಧಾ ಶೆಟ್ಟಿ, ಪ್ರಫುಲ್‌ಚಂದ್ರ ರೈ ಕುಂಜಾಡಿ ಅವರು ಸಹಕರಿಸಿದರು. ಬಾಬಾ ಪ್ರಸಾದ್‌ ಅರಸ, ಜಗದೀಶ್‌ ರೈ ಕುಂಬ್ಳೆ, ರವಿ ಶೆಟ್ಟಿ, ಮನೋಹರ್‌ ನಂದಳಿಕೆ, ಅಶೋಕ್‌ ಪಕ್ಕಳ, ತುಳುಕೂಟದ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಟಾಪ್ ನ್ಯೂಸ್

ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ

Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ

Los Angeles: Another wildfire; More than 30,000 people displaced

Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ

Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ…

Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ

Karkala: Government bus collides with tempo in Sanoor

Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ

Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್‌

Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್‌

H1-B visa: ಭಾರತೀಯರ ದುಗುಡಕ್ಕೆ ಟ್ರಂಪ್‌ ತೆರೆ!

H1-B visa: ಭಾರತೀಯರ ದುಗುಡಕ್ಕೆ ಟ್ರಂಪ್‌ ತೆರೆ!

Mumbai: Third part of the knife used to attack Saif found near Bandra Lake

Mumbai: ಸೈಫ್ ಮೇಲೆ ಹಲ್ಲೆಗೆ ಬಳಸಿದ್ದ ಚಾಕುವಿನ ಮೂರನೇ ಭಾಗ ಬಾಂದ್ರಾ ಕೆರೆ ಬಳಿ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dr. Thumbay Moideen awarded with prestigious Global Visionary NRI Award

ಡಾ. ತುಂಬೆ ಮೊಯ್ದೀನ್ ಅವರಿಗೆ ಪ್ರತಿಷ್ಠಿತ ಗ್ಲೋಬಲ್ ವಿಷನರಿ ಎನ್‌ಆರ್‌ಐ ಪ್ರಶಸ್ತಿ

Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ

Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ

ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು

ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು

Jimmy Carter Life Journey: ಜಿಮ್ಮಿ ಕಾರ್ಟರ್‌- ಮಾನವೀಯತೆ, ಶಾಂತಿಯ ಶಿಲ್ಪಿ

Jimmy Carter Life Journey: ಜಿಮ್ಮಿ ಕಾರ್ಟರ್‌- ಮಾನವೀಯತೆ, ಶಾಂತಿಯ ಶಿಲ್ಪಿ

ವೈಕುಂಠ ಏಕಾದಶಿ: ಅಮೆರಿಕ ದೇವಸ್ಥಾನದಲ್ಲಿ ಆಚರಣೆಗಳು

ವೈಕುಂಠ ಏಕಾದಶಿ: ಅಮೆರಿಕ ದೇವಸ್ಥಾನದಲ್ಲಿ ಆಚರಣೆ

MUST WATCH

udayavani youtube

ಕಡಿಮೆ ಜಾಗದಲ್ಲಿ ಉತ್ತಮ ಅನಾನಸ್ ಕೃಷಿ ಮಾಡಲು ಇಲ್ಲಿದೆ ಮಾಹಿತಿ

udayavani youtube

ಮಂಗಳೂರು | ಸ್ಥಳೀಯ ಮನೆಯಂಗಳಕ್ಕೆ ಹರಿಯುತ್ತಿರುವ ಡ್ರೈನೇಜ್ ಕೊಳಚೆ

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

ಹೊಸ ಸೇರ್ಪಡೆ

ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ

Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ

Los Angeles: Another wildfire; More than 30,000 people displaced

Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ

Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ…

Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ

Karkala: Government bus collides with tempo in Sanoor

Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ

Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್‌

Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.