ಗಿನ್ನೆಸ್‌ ದಾಖಲೆಯತ್ತ ತುಳು ಸಿನೆಮಾ ರಂಗ: ಭಂಡಾರಿ


Team Udayavani, Jun 24, 2018, 5:15 PM IST

2306mum06.jpg

ಮುಂಬಯಿ:  ತೌಳವರು ಎಲ್ಲರೂ ಒಂದೆನ್ನುವ ಒಗ್ಗಟ್ಟು ಸಿನೆಮಾ ಮುಖೇನ ತೋರ್ಪಡಿಸುವ ಉದ್ದೇಶ ಈ ಚಲನಚಿತ್ರ ನಿರ್ಮಾಣದ್ದಾಗಿದೆ.  ಅದರಲ್ಲೂ ಸರ್ವ ಕಲಾವಿದರ ಪ್ರತಿಭೆಗಳನ್ನು ಒಂದೇ ವೇದಿಕೆ ಯಡಿಯಲ್ಲಿ ಪ್ರದರ್ಶಿಸುವ ಕಾರ್ಯ ಇದಾಗಿದೆ. ತುಳುವಿನ ಒಗ್ಗಟ್ಟು ಪ್ರದರ್ಶನಕ್ಕೆ ಹೊಸ ವೇದಿಕೆಯೊಂದು ಸಿದ್ಧಗೊಂಡಿದ್ದು, ರಂಗ ಸಂಘಟನೆ ಮೂಲಕ ತುಳು ಭಾಷೆ, ಸಂಸ್ಕೃತಿಯನ್ನು ಜಾಗತಿಕ ವಾಗಿ ಪಸರಿಸುವ ಉದ್ದೇಶವೂ ನಮ್ಮದಾಗಿದೆ. ತುಳುನಾಡಿನ ಸಮಗ್ರ ಜನತೆ ಸ್ವೀಕರಿಸುವಂತಹ ಸಿನೆಮಾ ವಾಗಿ ಈ ಚಿತ್ರ ಮೂಡಿ ಬರುವ ಆಶಯ ನಮ್ಮದಾಗಿದೆ ಎಂದು ನಾಗೇಶ್ವರ ಸಿನಿ ಕಂಬೈನ್ಸ್‌  ಸಂಸ್ಥೆಯ ಆಡಳಿತ ನಿರ್ದೇಶಕ, ಅಂಬರ್‌ ಕ್ಯಾಟರರ್ ಸಿನೆಮಾ ನಿರ್ಮಾಪಕ, ಮುಂಬಯಿ ಉದ್ಯಮಿ  ಕಡಂದಲೆ ಸುರೇಶ್‌ ಭಂಡಾರಿ ತಿಳಿಸಿದರು.

ನಾಗೇಶ್ವರ ಸಿನಿ ಕಂಬೈನ್ಸ್‌ ಸಂಸ್ಥೆಯ ಬ್ಯಾನರ್‌ ಅಡಿಯಲ್ಲಿ  ತಮ್ಮ ನಿರ್ಮಾಪಕತ್ವದಲ್ಲಿ ನಿರ್ಮಾಣ ಗೊಳ್ಳುತ್ತಿರುವ ಅಪರೂಪದ ಹಾಗೂ ಗಿನ್ನೆಸ್‌ ದಾಖಲೆಗೆ ಪಾತ್ರವಾಗುವ ನೂತನ ತುಳು ಸಿನೆಮಾದ ನಿಮಿತ್ತ ಜೂ. 23ರಂದು ಪೂರ್ವಾಹ್ನ ಮಂಗಳೂರು ವುಡ್‌ಲ್ಯಾಂಡ್ಸ್‌ ಹೊಟೇಲ್‌ನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು,  ಇದೊಂದು ತುಳುಚಿತ್ರ ರಂಗದಲ್ಲಿ ಅಪರೂಪದ ದಾಖಲೆಯಾಗಿ ಉಳಿಯಲಿದ್ದು, ಸರ್ವರ ಸಹಕಾರ ಅಗತ್ಯವಾಗಿದೆ ಎಂದರು.

ನಾಗೇಶ್ವರ ಸಿನಿ ಕಂಬೈನ್ಸ್‌ ಅಂಬರ್‌ ಕ್ಯಾಟರರ್ ಎಂಬ ಚಿತ್ರವನ್ನು ನಿರ್ಮಿಸಿ ಭರ್ಜರಿ ಪ್ರದರ್ಶನದೊಂದಿಗೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ಇದೀಗ ದ್ವಿತೀಯ ಚಿತ್ರ ನಿರ್ಮಾಣವು ಸೆಪ್ಟಂಬರ್‌ನಲ್ಲಿ ಸೆಟ್ಟೇರಲಿದೆ. ಹರೀಶ್‌ ಕೊಟಾ³ಡಿ ಅವರ ಕಥೆ-ಚಿತ್ರಕಥೆ, ಸಂಭಾಷಣೆ ಮತ್ತು ಸಂಕಲನದಲ್ಲಿ ಚಿತ್ರ ನಿರ್ಮಿಸಲಾಗುತ್ತಿದೆ. ಈ ತುಳುಚಿತ್ರವನ್ನು ಗಿನ್ನೆಸ್‌ ದಾಖಲೆಗೆ ಕೊಂಡೊಯ್ಯುವ ದೃಷ್ಟಿ ಯನ್ನಿಟ್ಟುಕೊಂಡು 17 ಗಂಟೆಗಳಲ್ಲಿ ಚಿತ್ರ ನಿರ್ಮಾಣವಾಗಲಿದೆ.  10 ತುಳು ಚಿತ್ರರಂಗದ ಯಶಸ್ವಿ ಚಿತ್ರ ನೀಡಿದ ನಿರ್ದೇಶಕರು ಈ ಚಿತ್ರವನ್ನು ಏಕಕಾಲದಲ್ಲಿ 17 ಗಂಟೆಯ ಕಾಲ ನಿರ್ದೇಶಿಸಲಿದ್ದು, 10 ನಾಯಕ ನಟರು ಅಭಿನಯಿಸಲಿದ್ದಾರೆ.  ತುಳುವಿನ ಪ್ರಥಮ ಮಲ್ಟಿàಸ್ಟಾರ್‌ ಚಿತ್ರ ಇದಾಗಲಿದ್ದು, 10ಕ್ಕಿಂತಲೂ ಹೆಚ್ಚಿನ ಕೆಮರಾ ಬಳಕೆಯಾಗಲಿದೆ. 10ಕ್ಕಿಂತಲೂ ಮಿಕ್ಕಿದ ಲೊಕೇಶನ್‌ನಲ್ಲಿ ಚಿತ್ರೀಕರಿಸುವ ಯೋಜನೆ ಹಾಕಲಾಗಿದ್ದು, ತುಳು ರಂಗಭೂಮಿ ಹಾಗೂ ತುಳು ಚಿತ್ರರಂಗದ ಹೆಚ್ಚಿನ ನಟ-ನಟಿಯರು ಅಭಿನಯಿಸಲಿದ್ದಾರೆ. ವಿಭಿನ್ನ ಕಥಾ ಹಂದರವನ್ನು ಚಿತ್ರವು ಹೊಂದಿದೆ ಎಂದು ನಾಗೇಶ್ವರ ಸಿನಿ ಕಂಬೈನ್ಸ್‌ ನ ನಿರ್ದೇಶಕ, ನಟ ಸೌರಭ್‌ ಎಸ್‌. ಭಂಡಾರಿ ಅವರು  ನೂತನ ಚಿತ್ರದ ಬಗ್ಗೆ ಸ್ಥೂಲವಾದ ಮಾಹಿತಿ ನೀಡಿದರು.

ಪ್ರಸಿದ್ಧ ನಿರ್ದೇಶಕರಾದ ವಿಜಯ ಕುಮಾರ್‌ ಕೊಡಿಯಾಲ್‌ಬೈಲ್‌, ತೆಲಿಕೆದ ಬೊಳ್ಳಿ  ದೇವದಾಸ್‌ ಕಾಪಿಕಾಡ್‌, ಪ್ರಕಾಶ್‌ ಪಾಂಡೇಶ್ವರ್‌, ಮಯೂರ್‌ ಶೆಟ್ಟಿ, ರಂಜಿತ್‌ ಸುವರ್ಣ, ರಾಜ್‌ ಕಮಲ್‌, ರಿತೇಶ್‌ ಬಂಗೇರ, ರಘು ಶೆಟ್ಟಿ ಮೊದಲಾದ ನಿರ್ದೇಶಕರು ಚಿತ್ರವನ್ನು  ನಿರ್ದೇಶಿಸಲಿದ್ದು, ತುಳುನಾಡ ಚಕ್ರವರ್ತಿ ಅರ್ಜುನ್‌ ಕಾಪಿಕಾಡ್‌, ತೌಳವ ಸ್ಟಾರ್‌ ಸೌರಭ್‌ ಭಂಡಾರಿ, ರೂಪೇಶ್‌ ಶೆಟ್ಟಿ, ಪೃಥ್ವಿ ಅಂಬರ್‌, ಅಸ್ತಿಕ್‌ ಶೆಟ್ಟಿ, ನಾಯಕನಟರಾಗಿ ಅಭಿನಯಿಸಲಿದ್ದಾರೆ.

ಹೆಸರಾಂತ ಹಾಸ್ಯ ನಟರ ಸಮಾಗಮದೊಂದಿಗೆ ತಮಿಳು ಚಿತ್ರರಂಗದ ಧನುಷ್‌ ಅವರ ಪುಲಿಕುಟ್ಟಿ ಚಿತ್ರ ಖ್ಯಾತಿಯ ಸುಮಾರು 40 ಚಿತ್ರಗಳಲ್ಲಿ ಖಳನಾಯಕನಾಗಿ ಮಿಂಚಿದ ತಮಿಳು  ಚಿತ್ರನಟ ರಾಜುಸಿಂಹ ಹಾಗೂ ಚೇತನ್‌ ರೈ ಮಾಣಿ ಖಳ ನಾಯಕನ ಪಾತ್ರ ನಿರ್ವಹಿಸಲಿದ್ದಾರೆ. ಉಳಿದ ಅನೇಕ ನಿರ್ದೇಶಕರ ಹಾಗೂ ನಾಯಕ ನಟರ  ಮತ್ತು ಚಿತ್ರದ ಶೀರ್ಷಿಕೆಯ ವಿವರವನ್ನು ಶೀಘ್ರದಲ್ಲಿ ನೀಡಲಿದ್ದಾರೆ ಎಂದೂ ಸೌರಭ್‌ ಭಂಡಾರಿ ಇದೇ ಸಂದರ್ಭದಲ್ಲಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಧವ ಭಂಡಾರಿ ಕುಳೂರು, ಪಮ್ಮಿ ಕೊಡಿಯಾಲ್‌ಬೈಲ್‌, ರಾಜೇಶ್‌ ಬ್ರಹ್ಮವಾರ, ಪ್ರಕಾಶ್‌ ಪಾಂಡೇಶ್ವರ್‌, ಕೆ. ಅಶೋಕ್‌, ವಿಜಯಕುಮಾರ್‌ ಕೊಡಿಯಾಲ್‌ಬೈಲ್‌, ರಂಜಿತ್‌ ಸುವರ್ಣ, ಇಸ್ಮಾಯಿಲ್‌ ಮೂಡುಶೆಡ್ಡೆ, ಆದಿನಾಥ್‌ ಶೆಟ್ಟಿ, ಅರ್ಜುನ್‌ ಕಾಪಿಕಾಡ್‌, ಪೂಜಾ ಶೆಟ್ಟಿ, ಎಸ್‌. ಮಹೀರಾಜ್‌ ಮತ್ತಿತರರು ಉಪಸ್ಥಿತರಿದ್ದರು. 

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

PM-Nigirya

G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್‌, ಗಯಾನಾ ಪ್ರವಾಸ ಶುರು

Chattisgadh-Petrol

Chhattisgarh: ನೀರಿನ ಬಾವೀಲಿ ಪೆಟ್ರೋಲ್‌: ಸಂಗ್ರಹಕ್ಕೆ ಮುಗಿಬಿದ್ದ ಜನ

Manipu: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

Manipur: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

DK-Shivakumar

Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್‌

MNG-hosp

Mangaluru: ವೆನ್ಲಾಕ್‌ ಆಸ್ಪತ್ರೆ 10 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ: ಸಚಿವ ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

PM-Nigirya

G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್‌, ಗಯಾನಾ ಪ್ರವಾಸ ಶುರು

Chattisgadh-Petrol

Chhattisgarh: ನೀರಿನ ಬಾವೀಲಿ ಪೆಟ್ರೋಲ್‌: ಸಂಗ್ರಹಕ್ಕೆ ಮುಗಿಬಿದ್ದ ಜನ

Manipu: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

Manipur: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.