ವೈವಿಧ್ಯಕ್ಕೆ ಸಾಕ್ಷಿಯಾದ ತುಳು ಪರ್ಬ-2018
Team Udayavani, Apr 3, 2018, 12:31 PM IST
ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ತೋನ್ಸೆ ವಿಜಯ ಕುಮಾರ್ ಶೆಟ್ಟಿ ನೇತೃತ್ವದ ಕಲಾಜಗತ್ತು ಮುಂಬಯಿ ವತಿಯಿಂದ ಬೊಂಬಾಯಿಡ್ ತುಳು ಪರ್ಬ ಸಂಭ್ರಮವು ಮಾ. 29 ಮತ್ತು ಮಾ. 30 ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಎರಡು ದಿನಗಳ ಕಾಲ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾ ಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ನಡೆದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ಲಿಮ್ಕಾ ಬುಕ್ ಆಪ್ ರೆಕಾರ್ಡ್ ನಲ್ಲಿ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿರುವ ತೋನ್ಸೆ ವಿಜಯ ಕುಮಾರ್ ಶೆಟ್ಟಿ ಇವರು ಕಲಾಜಗತ್ತು ಕಲಾ ಸಂಸ್ಥೆಯ ಮುಖೇನ ಕಳೆದ ಹಲವಾರು ವರ್ಷಗಳಿಂದ ಮುಂಬಯಿಯಲ್ಲಿ ನಾಟಕೋತ್ಸವ, ತುಳುನಾಡ ಉತ್ಸವಗಳನ್ನು ಆಯೋಜಿಸುತ್ತಾ ಬಂದವರು. ತನ್ನದೇ ಆದ ವಿಶಿಷ್ಟ ರೀತಿಯ ಕಲಾ ಶ್ರೀಮಂತಿಕೆಯೊಂದಿಗೆ ತುಳುನಾಡ ಸಂಸ್ಕಾರ ಸಂಸ್ಕೃತಿಯ ಚಿತ್ರಣವನ್ನು ತನ್ನ ಅಮೋಘ ಪ್ರತಿಭೆಯ ಮುಖೇನ ಭಿತ್ತರಿಸಿದ ಶ್ರೇಯಸ್ಸು ವಿಜಯ ಕುಮಾರ್ ಶೆಟ್ಟಿ ಅವರಿಗೆ ಲಭಿಸುತ್ತದೆ.
ಪ್ರಸ್ತುತ ಡಾ| ವಿಜಯಕುಮಾರ್ ಶೆಟ್ಟಿ ಇವರು ನೂತನ ಪರಿಕಲ್ಪನೆ ಯೊಂದಿಗೆ ಬೊಂಬಾಯಿಡ್ ತುಳುಪರ್ಬ-2018 ಎಂಬ ವಿಭಿನ್ನ ಸಾಂಸ್ಕೃತಿಕ ಮನೋರಂಜನ ಕಾರ್ಯಕ್ರಮವನ್ನು ಆಯೋಜಿಸಿ ಕಲಾ ರಸಿಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎರಡು ದಿನಗಳ ಸಂಭ್ರಮದಲ್ಲಿ ಮುಂಬಯಿಯ ಸುಮಾರು 500 ಕ್ಕೂ ಹೆಚ್ಚಿನ ಕಲಾವಿದರು ಒಂದೇ ವೇದಿಕೆಯಡಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿರುವುದು ಮತ್ತು ಮಹಾನಗರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ, ಕಲಾಪೋಷಕರಿಗೆ, ಸಮಾಜಮುಖೀ ಚಿಂತಕರಿಗೆ, ಕಲಾ ಸಂಘಟರಿಗೆ ಸಮ್ಮಾನ, ಪುರಸ್ಕಾರಗಳನ್ನಿತ್ತು ಗೌರವಿಸಿರುವುದು ದಾಖಲಾರ್ಹವಾಗಿದೆ.
ಎರಡು ದಿನಗಳ ಸಂಭ್ರಮದಲ್ಲಿ ನಾಲ್ಕು ನಾಟಕ ತಂಡಗಳಿಂದ ವೈವಿಧ್ಯಮಯ ನಾಲ್ಕು ನಾಟಕಗಳು ಪ್ರದರ್ಶನಗೊಂಡು ಕಲಾಭಿಮಾನಿಗಳಿಗೆ ರಸದೌತಣವನ್ನು ನೀಡಿದಂತಾಗಿದೆ. ವಿಜಯ ಕುಮಾರ್ ಶೆಟ್ಟಿ ನಿರ್ದೇಶನದಲ್ಲಿ ಕಲಾಜಗತ್ತು ಮುಂಬಯಿ ಕಲಾವಿದರಿಂದ ಪಗರಿದ ಮಂಚವು, ಮಾತ್ರವಲ್ಲದೆ 1983 ರಲ್ಲಿ ಬಂಟರ ಭವನದಲ್ಲಿ ಸುಮಾರು 10 ಪ್ರದರ್ಶನಗಳನ್ನು ಕಂಡ ವಿಜಯಕುಮಾರ್ ಶೆಟ್ಟಿ ಇವರು ರಚಿಸಿ, ನಿರ್ದೇಶಿಸಿರುವ ಈ ನಲ್ಕೆ ದಾಯೆ ನಾಟಕವು ಹರೀಶ್ ಶೆಟ್ಟಿ ಇವರ ನಿರ್ದೇಶನದಲ್ಲಿ ತುಳುಕೂಟ ಡೊಂಬಿವಲಿ ಇದರ ಕಲಾವಿದರಿಂದ ಪ್ರದರ್ಶನಗೊಂಡು ಗತ ಕಾಲದ ನೆನಪುಗಳನ್ನು ಮತ್ತೆ ಮೆಲುಕುಹಾಕಿತು.
ಅಭಿನಯ ಮಂಟಪ ಮುಂಬಯಿ ಕಲಾವಿದರಿಂದ ರವಿ ಕುಮಾರ್ ಕಡೆಕಾರು ರಚಿಸಿ, ಕರುಣಾಕರ ಕೆ. ಕಾಪು ಇವರ ನಿರ್ದೇಶನದಲ್ಲಿ ಪುಸೋìತ್ತಿಜ್ಜಿ ಅಲ್ಲದೆ ವಿರಾಜ್ ನಂದಿಕೂರು ರಚಿಸಿ, ಮನೋಹರ್ ಶೆಟ್ಟಿ ನಂದಳಿಕೆ ನಿರ್ದೇಶನದ ಆಯಿನ ಆಂಡ್ ಬುಡ್ª ಬುಡ್ಲೆ ನಾಟಕವು ರಂಗಮಿಲನ ನಿರೆಕರೆ ಕಲಾವಿದರಿಂದ ಪ್ರದರ್ಶನಗೊಂಡು ಪ್ರಶಂಸೆಗೆ ಪಾತ್ರವಾಯಿತು. ಅಲ್ಲದೆ ನಗರದ ವಿವಿಧ ಭಜನ ಮಂಡಳಿಗೆ ಭಜನಾ ಸ್ಪರ್ಧೆ, ಸಮೂಹ ನೃತ್ಯ ಸ್ಪರ್ಧೆಯು ನಡೆಯಿತು. ಸಮಾರಂಭದಲ್ಲಿ 2018 ನೇ ಸಾಲಿನ ತುಳುವ ಸಿರಿ ಪ್ರಶಸ್ತಿ ಪ್ರದಾನ ನಡೆಯಿತು. ಒಟ್ಟಿನಲ್ಲಿ ತುಳು ನಾಟಕ, ತೆಲಿಕೆ-ನಲಿಕೆ, ಆಟ-ಕೂಟ, ನೃತ್ಯ-ವೈಭವ, ತುಳುವರ ಸಾಂಸ್ಕೃತಿಕ ಉತ್ಸವವನ್ನು ಸಾರಿದ ಈ ಎರಡು ದಿನಗಳ ಅಭೂತಪೂರ್ವ ಸಂಭ್ರಮಕ್ಕೆ ಸಾವಿರಾರು ಮಂದಿ ಕಲಾವಿದರು, ಕಲಾಭಿಮಾನಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಸಾಕ್ಷಿಯಾದರು.
ಇಂತಹ ಒಂದು ಅದ್ಭುತ ಪರಿಕಲ್ಪನೆಯ ಉತ್ಸವವನ್ನು ಆಯೋಜಿಸಿದ ಕಲಾಜಗತ್ತು ಸಂಸ್ಥೆಯ ಸರ್ವ ಸದಸ್ಯರು ಅಭಿನಂದನಾರ್ಹರು.
ಸುಭಾಷ್ ಶಿರಿಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ
MUST WATCH
ಹೊಸ ಸೇರ್ಪಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.