ತುಳು ಪಾತೆರ್ಗ-ತುಳು ಒರಿಪಾಗ ಸಂಸ್ಥೆ: ವಾರ್ಷಿಕೋತ್ಸವ ಸಂಭ್ರಮ

Team Udayavani, Mar 22, 2019, 2:42 PM IST

97.jpg

ಮುಂಬಯಿ: ತುಳು ಪಾತೆರ್ಗ ತುಳು ಒರಿಪಾಗ ದುಬಾೖ  ಸಂಸ್ಥೆಯ  7ನೇ ವಾರ್ಷಿಕೋತ್ಸವದ ಅಂಗವಾಗಿ  ತುಳುನಾಡ ಗೊಬ್ಬುಲೆದ ಲೇಸ್‌ ಕಾರ್ಯಕ್ರಮವು ದುಬಾೖ ಯ ಝಬೀಲ್‌ ಪಾರ್ಕ್‌ ನಲ್ಲಿ ನಡೆಯಿತು.

ಮುಖ್ಯ ಅತಿಥಿಗಳನ್ನು  ಶೋಭಿತಾ ಪ್ರೇಮ್‌ ಜೀತ್‌ ಅವರು ಬೆಲ್ಲ ನೀರು ನೀಡುವುದರ ಮೂಲಕ ಕಾರ್ಯಕ್ರಮಕ್ಕೆ   ಸ್ವಾಗತಿಸಿದರು. ದುಬಾೖಯ ಖ್ಯಾತ ಉದ್ಯಮಿ, ಹಿರಿಯ ಸದಸ್ಯರಾದ    ಪ್ರಭಾಕರ ಶೆಟ್ಟಿ  ಅವರು ತುಳುನಾಡಿನ ಅಪ್ಪೆ ಭಾಷೆ    ತುಳು  ಲಿಪಿಯಿಂದ ತುಳು ಪಾರ್ತೆಗ ತುಳು ಒರಿಪಾಗ-ಗೌಜಿ ಗಮ್ಮತ್ತ್- 2019  ಎಂದು ಬರೆಯುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ತುಳುನಾಡಿನ ಕ್ರೀಡೆಗಳಿಗೆ  ಚಾಲನೆ ನೀಡಿ, ಮಾತನಾಡಿ, ಅಪ್ಪೆ ಭಾಷೆ  ತುಳು ಲಿಪಿಯನ್ನು  ಕಲಿತು  ಬೆಳೆಸಿ ಉಳಿಸಬೇಕು ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ  ನಮ ತುಳುವೆರ್‌ ದುಬೈ ಇದರ ಅಜ್ಮಲ್‌ ದುಬೈ, ಬಾಲಕೃಷ್ಣ ಸಾಲ್ಯಾನ್‌  ದುಬೈ, ತುಳುನಾಡ ರಕ್ಷಣಾ ವೇದಿಕೆಯ  ದುಬೈಯ  ಅಧ್ಯಕ್ಷರಾದ ಅಶೋಕ್‌ ಬೈಲೂರು, ಬಿಲ್ಲವಾಸ್‌ ದುಬಾೖಯ ಸತೀಶ್‌ ಪೂಜಾರಿ, ಕರ್ನಾಟಕ ಸಂಘ ದುಬಾೖಯ   ಅಧ್ಯಕ್ಷರಾದ  ಆನಂದ್‌ ಬೈಲೂರು,  ಬಿರುವೆರ್‌   ಕುಡ್ಲ  ದುಬಾೖಯ  ಸುರೇಶ್‌ ಪೂಜಾರಿ, ತುಳು ಚಲನಚಿತ್ರ ನಟಿ  ನವ್ಯತಾ  ರೈ ಅವರು ಭಾಗವಹಿಸಿ  ಕಾರ್ಯಕ್ರಮಕ್ಕೆ  ಶುಭಕೋರಿದರು.

ನಂತರ ತುಳುನಾಡಿನ ಕ್ರೀಡೆಗಳಾದ      ಕಬಡ್ಡಿ, ಲಗೋರಿ,  ಹಗ್ಗ ಜಗ್ಗಾಟ, ಸೈಕಲ್‌ ಚಕ್ರ ಓಟ, ರಸ ಪ್ರಶ್ನೆ ಚಿತ್ರದ ಆಟ, ಅಭಿನಯದ  ಆಟ  ಹೀಗೆ ಹಲವಾರು ಕ್ರೀಡೆಗಳನ್ನು ಕುಡ್ಲ, ಉಡುಪಿ,   ಬಾಕೂìರು,  ಕಾಸರಗೋಡು  ಎಂಬ ನಾಲ್ಕು ತಂಡಗಳಾಗಿ ವಿಂಗಡಿಸಿ   ನೊವೆಲ್‌ ಅಲ್ಮೇಡಾ ಮತ್ತು ಅಮರ್‌ ನಂತೂರ್‌ ಅವರು ನಡೆಸಿಕೊಟ್ಟರು. ವಿಶೇಷವಾಗಿ ನಾಲ್ಕು ತಂಡಗಳಿಗೆ ನೀಡಿದ ವಿಷಯಗಳಾದ   ಮದುವೆ, ಶಾಲೆ, ಕೃಷಿ, ಜಾತ್ರೆ ವಿಷಯದ ಬಗ್ಗೆ ತಂಡದ ಅಭಿನಯ ಎಲ್ಲರ ಮನ ಮೆಚ್ಚುಗೆಗೆ ಪಾತ್ರವಾಯಿತು. 

ಮಹಿಳೆಯರಿಗೆ ಮತ್ತು ಮಕ್ಕಳಿಗೆ ಹಮ್ಮಿಕೊಳ್ಳಲಾದ ಕ್ರೀಡೆಗಳನ್ನು ಸುಪ್ರಿಯಾ ಶೆಟ್ಟಿ ಅವರು ನಿರ್ವಹಿಸಿದರು. 300 ಕ್ಕಿಂತಲೂ ಹಿಚ್ಚಿನ ತುಳುವರು ಕಾರ್ಯಕ್ರಮದಲ್ಲಿ  ಉತ್ಸಾಹದಿಂದ   ಭಾಗವಹಿಸಿದ್ದರು.

ದುಬಾೖಯ ಧಾರ್ಮಿಕ ಮುಂದಾಳು, ಸಮಾಜ ಸೇವಕರಾದ  ಆನಂದ್‌ ಸಾಲ್ಯಾನ್‌, ಉಷಾ ಆನಂದ್‌ ಸಾಲ್ಯಾನ್‌ ದಂಪತಿ ಮತ್ತು ದುಬಾೖಯ  ಸಮಾಜ ಸೇವಕರಾದ   ನೋವೆಲ್‌ ಅಲ್ಮೇಡಾವರನ್ನು ಅಪ್ಪೆ  ಭಾಷೆ ತುಳುವ ತುಡರ್‌ ಎಂಬ   ಬಿರುದನ್ನು  ನೀಡಿ ಸಮ್ಮಾನಿಸಲಾಯಿತು. ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸಂಜೆ  ಚಾಹದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಬಂದು  ಸಹಕಾರ ನೀಡಿದ ಎÇÉಾ   ಮಹನೀಯರಿಗೆ ನೆನಪಿನ ಕಾಣಿಕೆ,  ವಿಜೇತ   ತಂಡಗಳಿಗೆ ಪ್ರಶಸ್ತಿ ಪತ್ರ ಮತ್ತು ಪದಕಗಳನ್ನು ನೀಡಿ ಅಭಿನಂದಿಸಲಾಯಿತು.

ತಂಡದ ಸಕ್ರಿಯ ಕಾರ್ಯಕರ್ತರಾದ ಸತೀಶ್‌ ಉಳ್ಳಾಲ್‌, ಸತೀಶ್‌  ಪೂಜಾರಿ, ಕವಿರಾಜ್‌ ಕುಂದರ್‌, ಮನೋಜ್‌  ಕುಲಾಲ್‌,  ಶೋಬಿತಾ ಪ್ರೇಮಜೀತ್‌, ಆಶ್ವಿ‌ನಿ ಸತೀಶ್‌, ದೀಪಕ್‌ ಸನಿಲ್‌,  ಪ್ರೇಮಶ್ರೀ ಸುವರ್ಣ ಮಾರ್ನಾಡ್‌,  ಭಾಸ್ಕರ್‌ ಅಂಚನ್‌, ಪುರಂದರ ಕುಲಾಲ್‌, ಪವನ್‌   ಪೂಜಾರಿ, ನವೀನ್‌   ಸರಪಾಡಿ, ರವೀಂದ್ರ ಪೂಜಾರಿ, ಸೂರಜ್‌,  ಪ್ರತಿಕ್‌ ಉಳ್ಳಾಲ್‌,  ಗುರುದತ್ತ್ ಬೆಲ್ಚಡ ಇವರುಗಳು ಉಪಸ್ಥಿತರಿದ್ದು  ಕಾರ್ಯಕ್ರಮ  ಯಶಸ್ವಿಯಾಗಿ ನಡೆಸಲು ಸಹಕರಿಸಿದರು. 

ತಂಡದ   ಪ್ರಧಾನ ಕಾರ್ಯದರ್ಶಿ  ರೀತು ಅಂಚನ್‌ ಕುಲಶೇಖರ ತಂಡದ ಸಾಧನೆಯನ್ನು ವಿವರಿಸಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

ಟಾಪ್ ನ್ಯೂಸ್

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-putthige-2

State Formation: ಶ್ರೀ ಕೃಷ್ಣ ಬೃಂದಾವನ ಹೂಸ್ಟನ್ ಶಾಖೆಯಲ್ಲಿ ಸಂಸ್ಥಾಪನಾ ದಿನಾಚರಣೆ

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.