ತುಳು ಸಂಘ ಬರೋಡಾ: ದಸರಾ ಸಂಭ್ರಮಾಚರಣೆ
Team Udayavani, Oct 12, 2019, 5:10 PM IST
ಮುಂಬಯಿ, ಅ. 11: ತುಳು ಸಂಘ ಬರೋಡಾ ವತಿಯಿಂದ ವಾರ್ಷಿಕ ದರಸಾ ಸಂಭ್ರಮಾಚರಣೆಯು ಅ. 8ರಂದು ವಿಜಯದಶಮಿಯ ಶುಭದಿನದಂದು ಬರೋಡಾದ ಇಂಡಿಯನ್ ಬುಲ್ಸ್ ಮೆಘಾ ಮಾಲ್‌ನಲ್ಲಿರುವ ತುಳು ಚಾವಡಿ ಸಭಾಗೃಹದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ತುಳು ಸಂಘ ಬರೋಡಾ ಅಧ್ಯಕ್ಷ ಶಶಿಧರ್ ಬಿ. ಶೆಟ್ಟಿ ಬೆಳ್ತಂಗಡಿ ಅವರ ಅಧ್ಯಕ್ಷತೆಯಲ್ಲಿ ನೇರವೇರಿದ ಸಂಪ್ರಾದಾಯಿಕ ಕಾರ್ಯಕ್ರಮದಲ್ಲಿ ಪಾರುಲ್ ಆರ್ಯುವೇದಿಕ್ ಕಾಲೇಜ್‌ನ ಪಾಂಶುಪಾಲ ಡಾ| ಹೇಮಂತ್ ಟಿ. ಅವರು ಅತಿಥಿಯಾಗಿ ಪಾಲ್ಗೊಂಡು ತುಳುನಾಡ ಸಂಸ್ಕೃತಿಯನ್ನು ಸಾರುವ ಹಬ್ಬಕ್ಕೆ ಶುಭಹಾರೈಸಿದರು.
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ತುಳುವರು ಮತ್ತು ಸಂಘದ ಸದಸ್ಯರು ಕುರಾಲ್ ಪೂಜಾ, ಭಜನೆ ಮತ್ತು ಹಿತವಾಚನ ಕಾರ್ಯಕ್ರಮ ನೇರವೇರಿದರು. ಈ ಸಂದರ್ಭದಲ್ಲಿ ತುಳು ಸಂಘದ ಹಿರಿಯರೂ ಹಾಗೂ ಸಂಸ್ಥಾಪಕ ಸದಸ್ಯ ಕೊರಗಪ್ಪ ಶೆಟ್ಟಿ ಅವರ 75ನೇ ಜನ್ಮ ದಿನಾಚರಣೆ ಆಚರಿಸಿ ಮತ್ತೋರ್ವ ಹಿರಿಯ ಸದಸ್ಯ ರಾಮ್‌ದಾಸ್ ಶೆಟ್ಟಿ ದಂಪತಿಯನ್ನು ಸಮ್ಮಾನಿಸಿ ಅಭಿನಂದಿಸಲಾಯಿತು.
ತುಳು ಸಂಘ ಬರೋಡಾ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ, ಗೌರವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕೋಶಾಧಿಕಾರಿ ವಾಸು ವಿ. ಸುವರ್ಣ, ಮಹಿಳಾ ವಿಭಾಗಾಧ್ಯಕ್ಷೆ ಡಾ| ಶರ್ಮಿಳಾ ಜೈನ್ ಹಾಗೂ ಜಯರಾಮ್ ಶೆಟ್ಟಿ, ಕುಸುಮಾ ಜೆ. ಶೆಟ್ಟಿ, ಮಾಧವ ಶೆಟ್ಟಿ, ಸತೀಶ್ ಶೆಟ್ಟಿ, ದಿನೇಶ್ ಶೆಟ್ಟಿ, ವಿಶಾಲ್ ಶಾಂತಾ, ಯಶವಂತ್ ಶೆಟ್ಟಿ ಮದನ್ ಗೌಡ, ಚಂದ್ರ ಶೆಟ್ಟಿ, ಪ್ರಮೀಳಾ ಶೆಟ್ಟಿ, ಕಸ್ತೂರಿ ಶೆಟ್ಟಿ, ಮಂಜುಳಾ ಗೌಡ ಹಾಗೂ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸ್ಥಳೀಯ ತುಳು-ಕನ್ನಡಿಗರು, ವಿವಿಧ ಕ್ಷೇತ್ರಗಳ ಗಣ್ಯರು, ಸ್ಥಳೀಯ ಉದ್ಯಮಿಗಳು, ಸದಸ್ಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾಕ್ರಮದ ಯಶಸ್ಸಿಗೆ ಸಹಕರಿಸಿದರು.
ಚಿತ್ರ- ವರದಿ: ರೊನಿಡಾ ಮುಂಬಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.