ತುಳು ಸಂಘ ಬರೋಡಾ: “ಓ ಮನಸೇ ತಲ್ಲಣಿಸದಿರು’ ಕೃತಿ ಬಿಡುಗಡೆ
Team Udayavani, Jun 26, 2018, 5:15 PM IST
ಬರೋಡಾ: ಹೊರನಾಡಿನ ಹಿರಿಯ ಕನ್ನಡ ಲೇಖಕರ ಲ್ಲೊಬ್ಬರಾದ ಎಸ್ಕೆ ಹಳೆಯಂಗಡಿ ಅವರನ್ನು ಕಳೆದ 3-4 ದಶಕಗಳಿಂದ ಅವರ ಪತ್ರಿಕಾ ಲೇಖನಗಳಿಂದ ಬಹಳಷ್ಟು ಸಮೀಪದಲ್ಲಿ ಬಲ್ಲವ ನಾಗಿದ್ದೇನೆ. ಪ್ರಸ್ತುತ ಅವರ ದ್ವಿತೀಯ ಆಯ್ದ ಲೇಖನಗಳ ವಿನೂತನ ಸಂಕಲನ “ಓ ಮನಸೆ ತಲ್ಲಣಿಸದಿರು’ ಕೃತಿ ಬಿಡುಗಡೆಗೊಳಿಸುವ ಅವಕಾಶ ದೊರಕಿರುವುದು ನನಗೆ ಸಂತೋಷ ತಂದಿದೆ. ಎಸ್ಕೆ ಹಳೆಯಂಗಡಿ ಅವರೋರ್ವ ಅಪ್ಪಟ ಕನ್ನಡ ಸಾಹಿತ್ಯಪ್ರೇಮಿ. 84 ರ ಹರೆಯದಲ್ಲೂ ಅವರ ನಿರಂತರವಾದ ಬರವಣಿಗೆಯ ತುಡಿತ ಎಲ್ಲರಿಗೂ ಸ್ಫೂರ್ತಿ ಹಾಗೂ ಪ್ರೇರಣದಾಯಕವಾಗಿದೆ. ಅವರ ಈ ವಿನೂತನ ಕೃತಿಯು ಓದುಗರ ಮನ ಸೂರೆಗೊಳ್ಳುತ್ತದೆ. ಅವರ ಎಲ್ಲ ಲೇಖನಗಳು ಮಾನವೀಯ ಮೌಲ್ಯಾಧಾರಿತ ವೈಚಾರಿಕ ನೆಲೆಗಟ್ಟಿ ನಿಂದ ಕೂಡಿವೆ. ಇಲ್ಲಿದ ಅವರ ಚಿಂತನ-ಮಂಥನಗಳು ಸಂಪೂರ್ಣ ವಾಗಿ ಲೋಕ ಕಲ್ಯಾಣ ಕಾರಕ ವಾದವುಗಳು. ಅವರ ಆಧ್ಯಾತ್ಮಿಕ ಚಿಂತನೆ ಅವರ ವೈಯಕ್ತಿಕವಾದುದು. ಎಸ್ಕೆಹಳೆಯಂಗಡಿ ಅವರು ಬಾಬಾರನ್ನು ನಂಬುವಂತೆ, ಸ್ವಾಮಿ ವಿವೇಕಾನಂದರ ವಿಚಾರ ಧಾರೆಗಳಿಗೂ ಮಾರು ಹೋದವರು. ಎಸ್ಕೆ ವಿಚಾರಧಾರೆ ವೈಚಾರಿಕೆಯಿಂದ ಕೂಡಿದ್ದು, ಅಂಧಶ್ರದ್ಧೆ, ಮೂಢನಂಬಿಕೆ, ಜನರ ಮೌಡ್ಯವನ್ನು ಅವರು ಬಲವಾಗಿ ಖಂಡಿಸುತ್ತಾರೆ ಎಂದು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅವರು ನುಡಿದರು.
ಜೂ. 23 ರಂದು ಸ್ಥಳೀಯ ಗುಜ ರಾತ್ ರಿಫೈನರಿಯ ಕಮ್ಯುನಿಟಿ ಸಭಾಗೃಹದಲ್ಲಿ ತುಳು ಸಂಘ ಬರೋಡಾ ನಿಯೋಜಿತ ಹಿರಿಯ ಲೇಖಕ, ಪತ್ರಕರ್ತ, ಉದ್ಯಮಿ ಎಸ್ಕೆ ಹಳೆಯಂಗಡಿ ಅವರ ‘ಓ ಮನಸೇ ತಲ್ಲಣಿಸದಿರು’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಂಕಲನದ ಶೀರ್ಷಿಕೆಯ ಲೇಖನದಲ್ಲೇ ಸಂಕಲ್ಪಗಳ ದೊಡ್ಡ ಸಮೂಹವೇ ಮನಸ್ಸು. ಆದ್ದರಿಂದ ಮನಸ್ಸಿನ ಚಲನವಲನಗಳ ಬಗ್ಗೆ ನಾವು ನಾವೇ ಎಚ್ಚರ ವಹಿಸುವುದು ನಮಗೂ, ಸಮಾಜಕ್ಕೂ ಶ್ರೇಯಸ್ಕರ ವಾಗಿದೆ. ಮಾನವ ಮನಸ್ಸಿನ ಬಗ್ಗೆ ಅರ್ಥವತ್ತಾಗಿ ಎಸ್ಕೆ ಹಳೆಯಂಗಡಿ ಬರೆದಿದ್ದಾರೆ. ಅವರ ವೈಚಾರಿಕ ಬರಹಗಳಿಗೆ ಅವರದ್ದೆ ಆದ ಭಾಷಾ ಶೈಲಿಯಿದ್ದು, ಇದು ಅವರ ಬರಹಗಳ ಮೌಲ್ಯವನ್ನು ಹೆಚ್ಚಿಸಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ತುಳು ಸಂಘದ ಅಧ್ಯಕ್ಷ ಶಶಿಧರ ಬಿ. ಶೆಟ್ಟಿ ಬೆಳ್ತಂಗಡಿ ಅವರು ವಹಿಸಿ ಆರಂಭದಲ್ಲಿ ಅತಿಥಿ-ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತ
ನಾಡಿದರು. ಗೌರವಾಧ್ಯಕ್ಷ ದಯಾ ನಂದ ಬೋಂಟ್ರಾ ಹಾಗೂ ಎಸ್. ಜಯರಾಮ ಶೆಟ್ಟಿ ಅವರು ಅತಿಥಿಗಳನ್ನು ಶಾಲು ಹೊದೆಸಿ, ಪುಷ್ಪಗುತ್ಛ, ಸ್ಮರಣಿಕೆಯನ್ನಿತ್ತು ಗೌರವಿಸಿದರು. ಸಾಹಿತಿ ಎಸ್ಕೆ ಹಳೆಯಂಗಡಿ ಅವರು ತನ್ನ ಕೃತಿ ಬೆಳಕು ಕಾಣುವಲ್ಲಿ ಸಹ
ಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ವಾಸು ಪೂಜಾರಿ, ಶಶಿಧರ ಬಿ. ಶೆಟ್ಟಿ, ದಯಾನಂದ ಬೋಂಟ್ರಾ, ಎಸ್. ಜಯರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಎಸ್. ಜಯರಾಮ ಶೆಟ್ಟಿ, ದಯಾನಂದ ಬೋಂಟ್ರಾ ಮತ್ತು ವಾಸು ಪೂಜಾರಿ ಮೊದಲಾದವರು ಲೇಖಕ ಎಸ್ಕೆ ಹಳೆಯಂಗಡಿ ಅವರ ಸುದೀರ್ಘ ಕಾಲದ ಸಾಹಿತ್ಯಕ ಚಟುವಟಿಕೆಗಳ ಬಗ್ಗೆ ಮಾತನಾಡಿ ಶುಭಹಾರೈಸಿದರು.
ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ವಿಶಾಲ್ ಶಾಂತಾ ಅವರು ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮಂಜೇಶ್ವರ ಶಾರದಾ ಆರ್ಟ್ಸ್ ತಂಡದವರಿಂದ ನಿತ್ಯೆ ಬನ್ನಗ ತುಳು ನಾಟಕ ಪ್ರದರ್ಶನಗೊಂಡಿತು. ತುಳು ಸಂಘ ಬರೋಡಾದ ಪದಾಧಿಕಾರಿ ಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದವರು, ಸಾಹಿತ್ಯಾ ಭಿಮಾನಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್ಗೆ ಬೆಂಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.