ತುಳು ಸೇವಾ ಸಂಘ ನಾಸಿಕ್ 29ನೇ ವಾರ್ಷಿಕ ಮಹಾಸಭೆ -ವಾರ್ಷಿಕೋತ್ಸವ
Team Udayavani, Feb 19, 2019, 6:06 PM IST
ನಾಸಿಕ್: ನಾಸಿಕ್‌ನಲ್ಲಿರುವ ತುಳುನಾಡ ಬಂಧುಗಳು ತಮ್ಮ ತಮ್ಮ ಉದ್ಯೋಗ ವ್ಯವಹಾರಗಳೊಂದಿಗೆ ಸಂಘಟನಾತ್ಮಕವಾಗಿ ಗುರುತಿಸಿಕೊಂಡು ತುಳುನಾಡ ಭಾಷೆ, ಸಂಸ್ಕೃತಿ ಸೇವೆಯೊಂದಿಗೆ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ತೊಡಗಿಸಿಕೊಂಡು ತುಳುನಾಡ ತಾಯಿಯ ತೇರನ್ನು ಎಳೆಯುತ್ತಿರುವುದು ಅಭಿನಂದನೀಯವಾಗಿದೆ. ನಮ್ಮ ತುಳುನಾಡ ಸಾಂಸ್ಕೃತಿಕ ಪರಂಪರೆಗಳು ಮೌಲ್ಯಯುತವಾಗಿದ್ದು ಇನ್ನೆಲ್ಲಿಯೂ ಇಂತಹ ಸಂಸ್ಕೃತಿಗಳನ್ನು ನಾವು ಕಾಣಲು ಸಾಧ್ಯವಿಲ್ಲ. ಆದುದರಿಂದ ನಮ್ಮ ಭಾಷೆಯನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದ್ದು ಇಂತಹ ಸಂಘ ಸಂಸ್ಥೆಗಳಿಂದ ತುಳುಭಾಷೆಗೆ ಆದ್ಯತೆ ನೀಡಿ ಉಳಿಸುವ ಪ್ರಯತ್ನ ನಡೆಯಬೇಕಾಗಿದೆ ಎಂದು ಪುಣೆ ತುಳುಕೂಟದ ಅಧ್ಯಕ್ಷ ಮೋಹನ್ ಶೆಟ್ಟಿ ಎಣ್ಣೆಹೊಳೆ ನುಡಿದರು.
ಫೆ. 16 ರಂದು ನಾಸಿಕ್‌ನ ಶಾಲಿಮಾರ್‌ನಲ್ಲಿರುವ ಪರಶುರಾಮ್ ಸಾಯಿ ಖೇಡ್ಕರ್ ಸಭಾಗಣದಲ್ಲಿ ನಡೆದ ತುಳುಸೇವಾ ಸಂಘ ನಾಸಿಕ್ ಇದರ 29 ನೇ ವಾರ್ಷಿಕ ಮಾಹಾಸಭೆ ಹಾಗೂ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಭವಿಷ್ಯದಲ್ಲಿ ನಮ್ಮ ಭಾಷೆಯ ಬೆಳವಣಿಗೆ ಹಾಗೂ ನಮ್ಮ ಆಚಾರ ವಿಚಾರಗಳು ನಮ್ಮ ಮಕ್ಕಳಿಗೂ ತಿಳಿಸುವಂತಾಗಲು ನಾವು ಪ್ರಯತ್ನಪಡಬೇಕಾಗಿದೆ. ಮಕ್ಕಳಿಗೆ ಬಾಲ್ಯದಲ್ಲಿ ಮನೆಯಲ್ಲಿ ತುಳು ಮಾತನಾಡುವ ಅಭ್ಯಾಸ ವನ್ನು ಮಾತನಾಡಬೇಕಾಗಿದೆ. ಮುಂದೆ ನಮ್ಮತನವೆಂಬುವುದು ಉಳಿಯುವಂತಾಗಲು ಭಾಷೆಯನ್ನೂ ಬೆಳೆಸುವ ಕಾರ್ಯ ಆಗಬೇಕಾಗಿದೆ ಎಂದರು.
ತುಳು ಸೇವಾ ಸಂಘ ನಾಸಿಕ್ ಅಧ್ಯಕ್ಷ ಉಡೆ¾àರು ಭಾಸ್ಕರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದ ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಭಾಸ್ಕರ ಶೆಟ್ಟಿ, ಮುಖ್ಯ ಅತಿಥಿ ಮೋಹನ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸಂಜೀವ ಕೆ. ಬಂಗೇರ, ಗೌರವ ಕೋಶಾಧಿಕಾರಿ ಹರೀಶ್ ವಿ. ಶೆಟ್ಟಿ, ಜನಸಂಪರ್ಕಾಧಿಕಾರಿ ರಾಜ್ ನರೇಶ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ಅಳಾಪೆ, ಸಲಹಾ ಸಮಿತಿಯ ಲಿಂಗಪ್ಪ ಶೆಟ್ಟಿ ಮತ್ತು ಗಂಗಾಧರ ಆಮೀನ್ ಮತ್ತು ಬಾಲಚಂದ್ರ ಕೋಟ್ಯಾನ್ ಉಪಸ್ಥಿತರಿದ್ದರು.
ಈ ಸಂದರ್ಭ ಮುಂದಿನ ಕಾರ್ಯಾವಧಿಗೆ ಸಂಘದ ನೂತನ ಅಧ್ಯಕ್ಷರನ್ನಾಗಿ ರಮಾನಂದ ಬಂಗೇರ ಇವರನ್ನು ಅವಿರೋಧವಾಗಿ ಆಯ್ಕೆಗೊಳಿಸಲಾಯಿತು. ಪ್ರಧಾನ ಕಾರ್ಯದರ್ಶಿಯನ್ನಾಗಿ ಶ್ರೀಧರ ವಿ. ಶೆಟ್ಟಿ ಹಾಗೂ ಯುವ ವಿಭಾಗದ ನೂತನ ಕಾರ್ಯಾಧ್ಯಕ್ಷರನ್ನಾಗಿ ಅನಿಲ್ ಕರ್ಕೇರ ಇವರನ್ನು ಆಯ್ಕೆಗೊಳಿಸಲಾಯಿತು. ಸಲಹಾ ಸಮಿತಿಯ ಲಿಂಗಪ್ಪ ಶೆಟ್ಟಿಯವರು ನೂತನ ಅಧ್ಯಕ್ಷರ ಹೆಸರನ್ನು ಘೋಷಿಸಿದರು.
ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಚಿತ್ರಶ್ರೀ ಕೃಷ್ಣ ಸಾಲ್ಯಾನ್ ಪ್ರಾರ್ಥಿಸಿದರು. ಮೊದಲಿಗೆ ಫೆ. 14 ರಂದು ಪುಲ್ವಾಮದಲ್ಲಿ ಹುತಾತ್ಮರಾದ ವೀರ ಯೋಧರ ಆತ್ಮಕ್ಕೆ ಶ್ರದ್ಧಾಂಜಲಿ ಕೋರಿ ಸಭಿಕರೆಲ್ಲರೂ ಎದ್ದು ನಿಂತು ಎರಡು ನಿಮಿಷಗಳ ಮೌನ ಪ್ರಾರ್ಥನೆ ಸಲ್ಲಿಸಿದರು. ಅಶಿತ್ ಟಿ. ಶೆಟ್ಟಿ ಅವರು ವೀರಯೋಧರ ಬಗ್ಗೆ ತಿಳಿಸಿ ಶ್ರದ್ಧಾಂಜಲಿ ಸಲ್ಲಿಸುವಂತೆ ಮನವಿ ಮಾಡಿದರು .
ಕಲ್ಪನಾ ಎಸ್. ಬಂಗೇರ ಸಂಘದ ವಾರ್ಷಿಕ ಕಾರ್ಯಚಟುವಟಿಕೆಗಳ ವರದಿಯನ್ನು ವಾಚಿಸಿದರು. ಗೌರವ ಕೋಶಾಧಿಕಾರಿ ಹರೀಶ್ ವಿ. ಶೆಟ್ಟಿ ಕಳೆದ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು. ಲಲಿತಾ ಕೆ. ಶೆಟ್ಟಿ, ಸುರೇಖಾ ಗಣೇಶ್ ಬಂಗೇರ, ಪ್ರಭಾ ಆರ್. ಶೆಟ್ಟಿ, ಜಯಂತಿ ಸುರೇಶ ದೇವಾಡಿಗ, ವಿಲಾಸಿನಿ ಪಿ. ಶೆಟ್ಟಿ, ದಾಮೋದರ ಪೂಜಾರಿ ಸಂಘವು ನಡೆಸಿದ ವಿವಿಧ ಸ್ಪರ್ಧೆಗಳ ಬಹುಮಾನಿತರ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಜೊತೆ ಕೋಶಾಧಿಕಾರಿ ಪ್ರದೀಪ್ ರೈ ಅತಿಥಿಗಳನ್ನು ಪರಿಚಯಿಸಿದರು. ಅತಿಥಿಗಳನ್ನು ಶಾಲು ಹೊದೆಸಿ ಸ್ಮರಣಿಕೆ ನೀಡಿ ಸಮ್ಮಾನಿಸಲಾಯಿತು. ಸಾಧು ಶೆಟ್ಟಿ ಪುಣೆ ಇವರನ್ನು ಸತ್ಕರಿಸಲಾಯಿತು. ಸಂಘದ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಗೌರವ ಪ್ರಧಾನ ಕಾರ್ಯದರ್ಶಿ ಸಂಜೀವ ಕೆ. ಬಂಗೇರ ಸ್ವಾಗತಿಸಿದರು. ಶರಣ್ಯಾ ಎಂ. ಶೆಟ್ಟಿ ಮತ್ತು ಜೊತೆ ಕಾರ್ಯದರ್ಶಿ ಮೊಹಮ್ಮದ್ ಶೇಖ್ ಸಾಹೇಬ್ ಕಾರ್ಯಕ್ರಮ ನಿರೂಪಿಸಿ ದರು. ಜನಸಂಪರ್ಕಾಧಿಕಾರಿ ರಾಜ್ ನರೇಶ್ ಶೆಟ್ಟಿ ವಂದಿಸಿದರು.
ಮಹೇಂದ್ರ ಕರ್ಕೇರ, ಶ್ರೀನಿವಾಸ್ ಕೋಟ್ಯಾನ್, ವೆಂಕಪ್ಪ ನಾಯ್ಕ, ಜಯರಾಮ್ ಬಂಗೇರ, ದಿನೇಶ್ ಕೋಟ್ಯಾನ್ ಮತ್ತು ಗೋಪಾಲ್ ಪೂಜಾರಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಮಹಿಳಾ ವಿಭಾಗದ ಕಲ್ಪನಾ ಎಸ್. ಬಂಗೇರ, ಮಮತಾ ಬಿ. ಶೆಟ್ಟಿ, ವಿಶಾಲ ಎಲ್. ಶೆಟ್ಟಿ, ಪ್ರಮೀಳಾ ಜಿ. ಅಮೀನ್, ಪ್ರಮೀಳಾ ಆರ್. ಶೆಟ್ಟಿ ಅವರು ನೇತೃತ್ವದಲ್ಲಿ ಅರಸಿನ ಕುಂಕುಮ ಕಾರ್ಯಕ್ರಮವನ್ನು ನೆರವೇರಿಸಿದರು.
ಪ್ರತಿಭಾವಂತರಿಗಾಗಿ ನೀಡಲಾಗುವ ಬಹುಮಾನದ ಪ್ರಾಯೋಜಕತ್ವವನ್ನು ಬಾಲಚಂದ್ರ ಕೋಟ್ಯಾನ್ ನೀಡಿದರು. ಶ್ರೀಧರ ವಿ. ಶೆಟ್ಟಿ, ರಾಮಚಂದ್ರ ಶೆಟ್ಟಿ, ಎಡೆ¾àರು ಭಾಸ್ಕರ ಶೆಟ್ಟಿ, ಸಂಜೀವ ಕೆ. ಬಂಗೇರ, ರಮಾನಂದ ಬಂಗೇರ, ಉದಯ್ ಶೆಟ್ಟಿ, ಪ್ರದೀಪ್ ಶೆಟ್ಟಿ ಮತ್ತು ಮೂರ್ತಿ ಶೇs… ಅವರ ಪ್ರಾಯೋಜಕತ್ವದಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಮನೋರಂಜನೆಯ ಅಂಗವಾಗಿ ಮುರಳಿ ಮಂಜಿತ್ತಾಯ ಮತ್ತು ಬಳಗ ನಾಸಿಕ್ ಇವರಿಂದ ಮಹಿಷಿ ಮರ್ದಿನಿ ಯಕ್ಷಗಾನ ರೂಪಕ ಹಾಗೂ ಅಭಿನಯ ಮಂಟಪ ಮುಂಬಯಿ ಕಲಾವಿದರಿಂದ ಒಯಿಕ್‌ಲಾ ದಿನ ಬರೊಡು ತುಳುನಾಟಕ ಪ್ರದರ್ಶನಗೊಂಡಿತು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತುಳು-ಕನ್ನಡಿಗರು ಉಪಸ್ಥಿತರಿದ್ದರು.
ಇಂದು ನಮ್ಮ ಸಂಘ 29 ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮವನ್ನು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಚರಿಸುತ್ತಿರುವುದಕ್ಕೆ ಅತೀವ ಆನಂದವಾಗುತ್ತಿದೆ. 29 ವರ್ಷಗಳ ಹಿಂದೆ ನಾಸಿಕ್ ನಲ್ಲಿರುವ ತುಳುನಾಡ ಬಾಂಧವರೆಲ್ಲ ಒಟ್ಟು ಸೇರಿ ನಮ್ಮವರ ಒಗ್ಗಟ್ಟಿಗೆ, ಸಾಂಸ್ಕೃತಿಕ ಪರಂಪರೆಗಳನ್ನು ಉಳಿಸುವಲ್ಲಿ, ಸಾಮಾಜಿಕ ಕಾರ್ಯಗಳನ್ನು ಮಾಡಲು ತುಳು ಭಾಷೆಯ ಅಭಿಮಾನದೊಂದಿಗೆ ನಮ್ಮ ಸಂಘವನ್ನು ಸದಾಶಯದ ಚಿಂತನೆಯೊಂದಿಗೆ ಆರಂಭಿಸಿದ್ದು ಇಂದು ಈ ಸಂಘ ಹೆಮ್ಮರವಾಗಿ ಬೆಳೆದಿದೆಯೆನ್ನಲು ಹೆಮ್ಮೆಯಾಗುತ್ತಿದೆ.
– ಎಡೆ¾àರು ಭಾಸ್ಕರ ಶೆಟ್ಟಿ ,ಅಧ್ಯಕ್ಷರು : ತುಳು ಸಂಘ ನಾಸಿಕ್
ಚಿತ್ರ-ವರದಿ :ಕಿರಣ್ ಬಿ. ರೈ ಕರ್ನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.