ಕೋಸ್ಟಲ್‌ ಸಿನೆಮಾದಲ್ಲಿ ಏರಾ ಉಲ್ಲೆರ್‌ ! 


Team Udayavani, Apr 28, 2018, 2:53 PM IST

20112.jpg

ತುಳು ರಂಗಭೂಮಿ ಹಾಗೂ ಸಿನೆಮಾ ಅಂದಾಗ ಪಕ್ಕನೆ ಕೇಳಿ ಬರುವ ಹೆಸರು ದೇವದಾಸ್‌ ಕಾಪಿಕಾಡ್‌. ತುಳು ಸಾಂಸ್ಕೃತಿಕ ಲೋಕದ ಬೆಳವಣಿಗೆಯಲ್ಲಿ ಕಾಪಿಕಾಡ್‌ ಶ್ರಮ ಅಷ್ಟರ ಮಟ್ಟಿಗೆ ಉಲ್ಲೇಖನೀಯ. ತೆಲಿಕೆದ ಬೊಳ್ಳಿ, ಚಂಡಿ ಕೋರಿ, ಅರೆಮರ್ಲೆರ್‌ ಸಹಿತ ತುಳು ಸಿನೆಮಾ ಲೋಕದಲ್ಲಿ ಕಾಪಿಕಾಡ್‌ ಅವರದ್ದು ನಿರಂತರ ಕೊಡುಗೆ. ಅದೇ ಮೂಡ್‌ನ‌ಲ್ಲಿ ಈಗ ಸದ್ದಿಲ್ಲದೆ ಸಿನೆಮಾ ಮಾಡುವುದಕ್ಕೆ ಕಾಪಿಕಾಡ್‌ ಮುಂದಾಗಿದ್ದಾರೆ. 

ಈಗಾಗಲೇ ಚಿತ್ರದ ಹೆಸರನ್ನು ಪ್ರಕಟಿಸಿರುವ ಕಾಪಿಕಾಡ್‌, ಶೂಟಿಂಗ್‌ ಸಹಿತ ಇತರ ಮಾಹಿತಿಗಳನ್ನು ಸಸ್ಪೆನ್ಸ್‌ ಆಗಿ ಇಡಲು ವಿಶೇಷ ಕಾಳಜಿ ವಹಿಸಿದ್ದಾರೆ. ಹೀಗಾಗಿಯೇ ಚಿತ್ರದ ಮುಹೂರ್ತ ನಡೆದು ನಾಲ್ಕೈದು ದಿನದ ಶೂಟಿಂಗ್‌ ನಡೆದಿದ್ದರೂ, ಕಾಪಿಕಾಡ್‌ ಅವರು ತಾವು ಮಾಡುತ್ತಿರುವ ಸಿನೆಮಾದ ಬಗ್ಗೆ ಗುಟ್ಟುಬಿಟ್ಟುಕೊಟ್ಟಿಲ್ಲ. ಸಿನೆಮಾ ಶೂಟಿಂಗ್‌ ಎಲ್ಲ ಮುಗಿದ ಅನಂತರವೇ ಸಿನೆಮಾದ ಬಗ್ಗೆ ಪ್ರಚಾರ ಮಾಡುವ ಎಂಬ ಯೋಚನೆಯಲ್ಲಿ ಅವರಿದ್ದಾರೆ.

ಸಿನೆಮಾದ ಹೆಸರು “ಏರಾ ಉಲ್ಲೆರ್‌’. ಹೆಸರೇ ಸೂಚಿಸುವಂತೆ ಇಲ್ಲೊಂದು ಸಸ್ಪೆನ್ಸ್‌ನ ಸೂಚನೆ ಪಕ್ಕಾ ಆದಂತಾಗುತ್ತದೆ. ಹೀಗಾಗಿ ಈ ಸಿನೆಮಾ ಸಸ್ಪೆನ್ಸ್‌ ಎನ್ನುವುದು ದೃಢವಾಗುತ್ತದೆ. ತುಳುವಿನಲ್ಲಿ ಇಂತಹ ಪ್ರಯತ್ನ ಅಪರೂಪ. ಯಾಕೆಂದರೆ ಕಾಮಿಡಿ ಗಿಮಿಕ್‌ನಲ್ಲಿಯೇ ಸಿನೆಮಾ ಓಡುವುದು ಎಂದು ಈಗಾಗಲೇ ಫಿಕ್ಸ್‌ ಆಗಿರುವ ಕೋಸ್ಟಲ್‌ವುಡ್‌ನ‌ಲ್ಲಿ ಕಾಮಿಡಿ ಜತೆಗೆ ಇನ್ನೂ ಏನಾದರೂ ಬೇಕು ಎಂಬ ಕಳಕಳಿಗೆ ಕಾಪಿಕಾಡ್‌ ಸ್ಪಂದಿಸಿದ್ದಾರೆ. ಇದೇ ಕಾರಣಕ್ಕಾಗಿ ಸಸ್ಪೆನ್ಸ್‌ ಚಿತ್ರ ಮಾಡಲು ಮನಸ್ಸು ಮಾಡಿದ್ದಾರೆ. 

ಗುಟ್ಟು ಬಿಡದೆ, ಮಂಗಳೂರಿನಲ್ಲಿ ಶೂಟಿಂಗ್‌ ಕಾಣುತ್ತಿರುವ “ಏರಾ ಉಲ್ಲೆರ್‌’ನಲ್ಲಿ ಅರ್ಜುನ್‌ ಕಾಪಿಕಾಡ್‌ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈಗಾಗಲೇ “ಕರ್ಣೆ’ ಶೂಟಿಂಗ್‌ ಮುಗಿಸಿ ಬಂದಿರುವ ಅರ್ಜುನ್‌ “ಏರಾ ಉಲ್ಲೆರ್‌’ನಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ನಾಯಕಿಯಾಗಿ ರಶ್ಮಿತಾ ಚಂಗಪ್ಪ ಕಾಣಿಸಲಿದ್ದಾರೆ. ಉಳಿದಂತೆ ಯಾರಿದ್ದಾರೆ ಎಂಬುದು ಸದ್ಯದ ಕುತೂಹಲ. ಅಂದಹಾಗೆ, ತುಳುವಿನ ಕಾಮಿಡಿ ಸ್ಟಾರ್‌ಗಳು ಇದರಲ್ಲೂ ಇದ್ದಾರೆ ಹಾಗೂ ಹೊಸ ಮುಖಗಳಿಗೆ ವಿಶೇಷ ಒತ್ತು ನೀಡಲಾಗಿದೆ ಎಂಬ ಮಾಹಿತಿ ಇದೆ. 

ಈಗಾಗಲೇ ಕಾಪಿಕಾಡ್‌ “ಅರೆ ಮರ್ಲೆರ್‌’ ಮುಗಿಸಿದ ಅನಂತರ “ಪಿಸ್‌ಂಟೆ’ ಎಂಬ ಸಿನೆಮಾ ಮಾಡುವುದಿತ್ತು. ಜತೆಗೆ ಕನ್ನಡದಲ್ಲಿ “ಜಬರ್ದಸ್ತ್’ ಎಂಬ ಸಿನೆಮಾ ಮಾಡುವ ಬಗ್ಗೆಯೂ ಯೋಚಿಸಿದ್ದರು. ಆದರೆ, ಅದರ ಮಧ್ಯೆಯೇ ಈಗ ದಿಢೀರಾಗಿ “ಏರಾ ಉಲ್ಲೆರ್‌’ ಸಿನೆಮಾ ಮಾಡಲಾಗುತ್ತಿದೆ. ಬೊಳ್ಳಿ ಮೂವೀಸ್‌ ಲಾಂಛನದಲ್ಲಿ ಸಿನೆಮಾ ರೆಡಿಯಾಗುತ್ತಿದೆ. ಮುಂದಿನ 18 ದಿನದಲ್ಲಿ ಸಿನೆಮಾ ಶೂಟಿಂಗ್‌ ಪೂರ್ಣಗೊಳಿಸಲಿದೆ. 

ಕುಡ್ಲಕ್ಕೆ ಶಿಫ್ಟ್ ಆದ  “ಇಲ್ಲೊಕ್ಕೆಲ್‌’
 ಡಾ| ಸುರೇಶ್‌ ಚಿತ್ರಾಪು ನಿರ್ದೇಶನದಲ್ಲಿ ಸೆಟ್ಟೇರುತ್ತಿರುವ “ಇಲ್ಲೊಕೆೆRಲ್‌’ ಮೂರು ಹಂತದ ಚಿತ್ರೀಕರಣದ ಪ್ಲ್ರಾನ್‌ನಲ್ಲಿದೆ. ಈಗಾಗಲೇ ಬೆಂಗಳೂರಿನ ಪುಟ್ಟಣ್ಣ ಕಣಗಾಲ್‌ ಸ್ಟುಡಿಯೋ ಹಾಗೂ ಬೆಂಗಳೂರು ಮೂವೀಸ್‌ ಸ್ಟುಡಿಯೋದಲ್ಲಿ ಶೂಟಿಂಗ್‌ ಆಗಿದೆ. ಈಗ ಮೂರನೇ ಹಂತದಲ್ಲಿ ಚಿತ್ರತಂಡ ತವರಿನತ್ತ ಆಗಮಿಸಲಿದೆ. ಕೆಲವೇ ದಿನದಲ್ಲಿ ಮಂಗಳೂರು ಸಹಿತ ಕರಾವಳಿ ಭಾಗದಲ್ಲಿ ಅಂತಿಮ ಹಂತದ ಶೂಟಿಂಗ್‌ ನಡೆಯಲಿದೆ.
ಅದ್ವಿತಿ ಶೆಟ್ಟಿ ನಾಯಕಿಯ ಪಾತ್ರದಲ್ಲಿದ್ದು, ಕುಸಲ್ದರಸೆ ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು, ವಿಸ್ಮಯ ವಿನಾಯಕ್‌, ಪಿಲಿಬೈಲ್‌ ಯಮುನಕ್ಕ ಖ್ಯಾತಿಯ ಚಂದ್ರಕಲಾ ಮೋಹನ್‌, ಕುರಿಬಾಂಡ್‌ ರಂಗ ಅಭಿನಯಿಸಿದ್ದಾರೆ. ನಿತೇಶ್‌ ಸಾಗರ್‌ ಮತ್ತು ಪಿ.ಎಸ್‌. ಜಯಚಂದ್ರರಾಜು ನಿರ್ಮಾಪಕರು.

ರೆಡಿಯಾದ ಪತ್ತೀಸ್‌ ಗ್ಯಾಂಗ್‌!
ಮನೋಜ್‌ ಕುಮಾರ್‌ ಅರ್ಪಿಸುವ ಇನ್‌ಬಾಕ್ಸ್‌  ಕ್ರಿಯೇಟಿವ್ಸ್‌ನಲ್ಲಿ ಪ್ರೀತಮ್‌ ಎಂ.ಎನ್‌., ಸೂರಜ್‌ ಬೋಳಾರ್‌ ನಿರ್ಮಾಣ ಹಾಗೂ ಸೂರಜ್‌ ಬೋಳಾರ್‌ ನಿರ್ದೇಶನದ “ಪತ್ತೀಸ್‌ ಗ್ಯಾಂಗ್‌’ ಈಗಾಗಲೇ ಶೂಟಿಂಗ್‌ ಸಹಿತ ಎಲ್ಲ ತಯಾರಿಗಳನ್ನು ಪೂರ್ಣಗೊಳಿಸಿ ಬಿಡುಗಡೆಯ ತವಕದಲ್ಲಿದೆ. ಮೋಹನ್‌ ಶೇಣಿ (ನೀನಾಸಂ), ವಿಸ್ಮಯ ವಿನಾಯಕ್‌, ಅಜಯ್‌ ರಾಜ್‌ ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ನವ್ಯತಾ ರೈ, ಚಂದ್ರಹಾಸ್‌ ಉಳ್ಳಾಲ್‌, ಅರವಿಂದ ಬೋಳಾರ್‌, ಕಿಶೋರ್‌ ಡಿ. ಶೆಟ್ಟಿ, ವಿಜಯ ಕುಮಾರ್‌ ಕೊಡಿಯಾಲ್‌ಬೈಲ್‌, ದೀಪಕ್‌ ರೈ ಪಾಣಾಜೆ ಮುಂತಾದವರು ಚಿತ್ರದಲ್ಲಿದ್ದಾರೆ. ಕದ್ರಿ ಮಣಿಕಾಂತ್‌ ಸಂಗೀತ, ಸುರೇಶ್‌ ನಾಯಕ್‌ ಎಡಿಟಿಂಗ್‌ನಲ್ಲಿ ಕೈ ಜೋಡಿಸಿದ್ದಾರೆ. ಆಗಸ್ಟ್‌ ವೇಳೆಗೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. ಒಂದು ಪ್ರಮೋಶನಲ್‌ ಹಾಡು ಸಹಿ ತ ಒಟ್ಟು ಎರಡು ಹಾಡು ಇದ್ದು, ಜೂನ್‌, ಜುಲೈನಲ್ಲಿ ಆಡಿಯೋ ರಿಲೀಸ್‌ ಆಗುವ ಸಾಧ್ಯತೆ.

“ಕಟಪಾಡಿ ಕಟ್ಟಪ್ಪ’ನ ಹಾಡು ರಿಲೀಸ್‌ಗೆ ಸುದೀಪ್‌!
ತುಳು ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್‌ ಬ್ರಹ್ಮಾವರ ನಿರ್ಮಾಣದ “ಕಟಪಾಡಿ ಕಟ್ಟಪ್ಪ’ ಸಿನೆಮಾ ಈಗ ರಿಲೀಸ್‌ನ ಹೊಸ್ತಿಲಲ್ಲಿದೆ. ಇದರ ಪೂರ್ವಭಾವಿಯಾಗಿ ಚಿತ್ರದ ಆಡಿಯೋ ರಿಲೀಸ್‌ ಎ. 29ರಂದು ಬೆಳಗ್ಗೆ 10 ಗಂಟೆಗೆ ಮಂಗಳೂ ರು ಪುರಭವನದಲ್ಲಿ ನಡೆಯಲಿದೆ. ವಿಶೇಷವೆಂದರೆ ಅಭಿನಯ ಚಕ್ರವರ್ತಿ ಸುದೀಪ್‌ ಆಡಿಯೋ ರಿಲೀಸ್‌ಗಾಗಿ ಮಂಗಳೂರಿಗೆ ಆಗಮಿಸಲಿದ್ದಾರೆ. ತುಳು ಸಿನೆಮಾದ ಕಾರ್ಯಕ್ರಮದಲ್ಲಿ ಸುದೀಪ್‌ ಭಾಗವಹಿಸಲು ಒಪ್ಪಿಕೊಂಡಿರುವುದು ಕೋಸ್ಟಲ್‌ವುಡ್‌ನ‌ಲ್ಲಿ ಗರಿ ಮೂಡಿಸಿದಂತಾಗಿದೆ. ಹಲವಾರು ಸಿನೆಮಾ ಹಾಗೂ ರಾಷ್ಟ್ರೀಯ ಗೌರವ ಪಡೆಯುತ್ತಿರುವ ತುಳು ಸಿನೆಮಾ ರಂಗವನ್ನು  ಸ್ಯಾಂಡಲ್‌ವುಡ್‌ ಸಹಿತ ದೇಶದ ಎಲ್ಲ ಮೂಲೆಯಿಂದಲೂ ನೋಡುತ್ತಿರುವ ಸಂದರ್ಭದಲ್ಲಿಯೇ ಸುದೀಪ್‌ ತುಳು ಸಿನೆಮಾದ ಆಡಿಯೋ ರಿಲೀಸ್‌ಗೆ ಆಗಮಿಸಲು ಒಪ್ಪಿರುವುದು ವಿಶೇಷ. ಅಂದಹಾಗೆ, ಕಟಪಾಡಿ ಕಟ್ಟಪ್ಪ  ಸಿನೆಮಾ ಬಗ್ಗೆ ಹೇಳುವುದಾರೆ, ಖ್ಯಾತ ರಂಗಭೂಮಿ ಕಲಾವಿದ ಜೆ.ಪಿ. ತುಮಿನಾಡ್‌ ನಿರ್ದೇಶನದಲ್ಲಿ ಮೂಡಿಬಂದ ಈ ಸಿನೆಮಾದಲ್ಲಿ ಹಲವು ಖ್ಯಾತ ನಟರು ಅಭಿನಯಿಸಿದ್ದಾರೆ. ಪ್ರಕಾಶ್‌ ಸಂಗೀತ ಒದಗಿಸಿದ್ದಾರೆ.

ಟಾಪ್ ನ್ಯೂಸ್

BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ

BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ

G.parameshwar

C.T.Ravi issue: ಕೋರ್ಟ್‌ನಲ್ಲಿರುವ ವಿಚಾರದ ಬಗ್ಗೆ ಚರ್ಚಿಸುವುದು ಸರಿಯಲ್ಲ: ಜಿ.ಪರಮೇಶ್ವರ್‌

Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!

Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!

Sathish-jarakhoili

Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್‌ ಜಾರಕಿಹೊಳಿ

1-allu

Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು

1-modi-bg

Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ

1-mohali

Mohali; ಬಹುಮಹಡಿ ಕಟ್ಟಡ ಕುಸಿತ: ಹಲವರು ಸಿಲುಕಿರುವ ಶಂಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್‌ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ

ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್‌ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Pro Kabaddi: ಪಾಟ್ನಾ-ಗುಜರಾತ್‌ ಟೈ

Pro Kabaddi: ಪಾಟ್ನಾ-ಗುಜರಾತ್‌ ಟೈ

BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ

BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ

G.parameshwar

C.T.Ravi issue: ಕೋರ್ಟ್‌ನಲ್ಲಿರುವ ವಿಚಾರದ ಬಗ್ಗೆ ಚರ್ಚಿಸುವುದು ಸರಿಯಲ್ಲ: ಜಿ.ಪರಮೇಶ್ವರ್‌

death

Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು

Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!

Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.