ತುಳುವ ಶಕ್ತಿ ಫೌಂಡೇಶನ್: ಅನಾಥಾಶ್ರಮಕ್ಕೆ ಕೊಡುಗೆ
Team Udayavani, Sep 4, 2018, 2:21 PM IST
ನವಿಮುಂಬಯಿ: ನವಿಮುಂಬಯಿ ಸೆಕ್ಟರ್ 12 ಶಿವಾಜಿಚೌಕ್ ಹತ್ತಿರ ವಸಂತ್ ಕುಂಜಾರು ಮತ್ತು ಅವರ ಪರಿವಾರದ ಮುಂದಾಳಕತ್ವದಲ್ಲಿ ಸಮಾಜಪರ ಕಾರ್ಯವೆಸಗುತ್ತಿರುವ ಸಮಾಜದಲ್ಲಿ ತೀರಾ ಬಡವರ ಕಣ್ಣೀರಿರೊರೆಸುವ ಜೊತೆಗೆ ಅನಾಥರ ಪಾಲಿಗೆ ಬಂಧುಗಳಾಗಿ ಸಂತೈಸಿ ಸೇವೆಗೈಯ್ಯುವ ಗಿರಿಜಾ ವೆಲ್ಫೆàರ್ ಅಸೋಸಿಯೇಶನ್ ಅನಾಥಾಶ್ರಮಕ್ಕೆ ತುಳುವ ಶಕ್ತಿ ಫೌಂಡೇಶನ್ ಬಳಗವು ಆ. 26 ರಂದು ರûಾಬಂಧನದ ದಿನದಂದು ಭೇಟಿಯಿತ್ತು ಅಲ್ಲಿರುವ ನಿರ್ಗತಿಕ ಅನಾಥರಿಗೆ ಒಪ್ಪೊತ್ತಿನ ಅನ್ನದಾನದ ವ್ಯವಸ್ಥೆಯನ್ನು ತಮ್ಮ ಸಂಸ್ಥೆಯ ಮುಖೇನ ನೀಡಿತು.
ತುಳುವ ಶಕ್ತಿಯ ಸಂಸ್ಥಾಪಕ ಸದಸ್ಯರಾದ ಮಹೇಶ್ ಶಾಂತಿ, ಶೇಖರ್ ಕರ್ಕೇರ, ಬೋಳ ರವಿ ಪೂಜಾರಿ, ಜಗದೀಶ್ ಸಾಲ್ಯಾನ್, ಸುಧೇಶ್ ಪೂಜಾರಿ, ರಂಜನ್ ಅಮೀನ್, ರವಿ ಬಂಗೇರ, ದಿನೇಶ್ ಪೂಜಾರಿ, ಮಹೇಶ್ ಪೂಜಾರಿ, ಪ್ರಭಾಕರ ಬೆಳುವಾಯಿ, ಲೋಕೇಶ್ ಕುಮಾರ್, ಸತೀಶ್ ಎರ್ಮಾಳ್ ಮತ್ತು ಮೋಹಿನಿ ರವಿ ಪೂಜಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಾತ್ರವಲ್ಲದೆ ಅವರಿಗೆ ಅಗತ್ಯತೆಯ ನಿತ್ಯ ಬಳಕೆಯ ಸಾಮಗ್ರಿಯ ಜೊತೆಗೆ ಬಟ್ಟೆ ಬರೆಗಳನ್ನಿತ್ತು ತಮ್ಮಿಂದಾದ ಕಿಂಚಿತ್ ಅಳಿಲ ಸೇವೆ ಸಲ್ಲಿಸಿದರು. ಮಾತ್ರವಲ್ಲದೆ ಅವರ ಕಷ್ಟ ದುಃಖಗಳನ್ನು ಆಲಿಸಿ ಅವರಿಗೆ ಸಾಂತ್ವಾನದ ನುಡಿಗಳಿಂದ ಖುಷಿ ಪಡಿಸಿ ಅವರಲ್ಲಿ ಆತ್ಮವಿಶ್ವಾಸ ಭರಿಸಿದರು. ಈ ಸಂದರ್ಭದಲ್ಲಿ ಗಿರಿಜಾ ವೆಲ್ಫೆàರ್ ಅಸೋಸಿಯೇಶನ್ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ವಸಂತ್ ಕುಂಜಾರು ಸೇರಿದಂತೆ ಸಂಸ್ಥೆಯ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನ್ಯಾಯಕ್ಕಾಗಿ ನಮ್ಮ ಹೋರಾಟ ಎಂಬ ಧ್ಯೇಯದೊಂದಿಗೆ ಕಡುಬಡತನ ರೇಖೆಯ ನ್ಯಾಯವಂಚಿತ ಪರಿವಾರಗಳಿಗೆ ಕಾನೂನುಬದ್ಧ ನ್ಯಾಯ ದೊರಕಿಸಿಕೊಡುವುದರ ಜೊತೆಗೆ ನಿರ್ಗತಿಕ ಧೀನರ ಸೇವೆಗೋಸ್ಕರ ಸದಾ ಸಿದ್ಧವಿರುವ ತುಳುವ ಶಕ್ತಿ ಫೌಂಡೇಶನ್ ಎÇÉಾ ಜಾತಿ ಧರ್ಮ ವರ್ಗವನ್ನು ಮೀರಿ ಸೇವೆಗೈಯ್ಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.