ತುಳುವರು ಭಾಷಾ ಸಂಸ್ಕೃತಿಯನ್ನು ಪ್ರೀತಿಸುವವರು

Team Udayavani, Feb 24, 2020, 6:25 PM IST

mumbai-tdy-1

ಮುಂಬಯಿ, ಫೆ. 23: ವೈಶಿಷ್ಟ್ಯ ಪೂರ್ಣ ಬದುಕಿನ ನಡುವೆಯೂ ಕರಾವಳಿಯ ಭಾಷೆ ಸಂಸ್ಕೃತಿಯನ್ನು ಪ್ರೀತಿಸುವ ತುಳುವರು ಸಂಘ ಜೀವಿ ಬದುಕನ್ನು ಕಟ್ಟಿಕೊಂಡವರು. ವೈಯಕ್ತಿಕವಾಗಿ ಸಮಾಜ ಬಾಂಧವರಿಗೆ ಸಹಕರಿಸುವ ದೃಷ್ಟಿಯಿಂದ ಹುಟ್ಟಿಕೊಂಡ ಜಾತಿಯ ಸಂಸ್ಥೆಗಳು ಯಶಸ್ವಿಯಾಗಿವೆ.

ಬೊರಿವಲಿ ಪರಿಸರದಲ್ಲಿ ತುಳು ಭಾಷೆ ಸಂಸ್ಕೃತಿಯನ್ನು ಹೊರನಾಡಿನಲ್ಲಿ ವಿಜೃಂಭಿಸುವ ಜಾತ್ಯತೀತ ಸಂಸ್ಥೆಯಾಗಿ ಸ್ಥಾಪನೆಗೊಂಡ ಬೊರಿವಲಿ ತುಳು ಸಂಘ ತುಳುವರ ಯೋಗ್ಯತೆಯ ಪ್ರತೀಕವಾಗಿದೆ. ಈ ಸಂಸ್ಥೆಯಲ್ಲಿ ಪ್ರಾರಂಭದ ದಿನದಿಂದಲೂ ಗೌರವ ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದರ ಜತೆಗೆ ಪರಿಸರದ ತುಳು ಕನ್ನಡಿಗರ ಅವಿನಾಭಾವ ಸಂಬಂಧ ಈ ಸಂಸ್ಥೆಯಿಂದ ಬೆಳೆದಿದೆ ಎಂದು ಡಾ| ವಿರಾರ್‌ ಶಂಕರ್‌ ಶೆಟ್ಟಿ ಅಭಿಪ್ರಾಯಿಸಿದರು.

ಫೆ. 22ರಂದು ಬೊರಿವಲಿಯ ಓಂ ಶಾಂತಿ ಪಾರ್ಕ್‌ ದೇವಿದಾಸ್‌ ಲೇನ್‌ ಇಲ್ಲಿನ ಗ್ಯಾನ್‌ ಸಾಗರ್‌ ಆ್ಯಂಪಿ ಥಿಯೇಟರ್‌ ಅಡಿಟೋರಿಯಂನಲ್ಲಿ ನಡೆದ ಬೊರಿವಿಲಿ ತುಳು ಸಂಘ ದಶಮಾನೋತ್ಸವ ಸಂಭ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೂದೋಟದಲ್ಲಿ ವಿವಿಧ ಜಾತಿಯ ಹೂವು, ವಿವಿಧ ಪಲ್ಯದ ಊಟದ ಸೊಗಸು ಇದ್ದಂತೆ, ವಿವಿಧ ಜಾತಿ ಪಂಗಡಗಳ ಒಂದು ಅಪೂರ್ವ ಮಿಲನ ಈ ಸಂಘದಲ್ಲಿ ಒಗ್ಗಟ್ಟಾಗಿದೆ ಎಂದು ಹೇಳಲು ಸಂತೋಷಪಡುತ್ತೇನೆ. ಆದರೆ ಈ ಸಂಘದಿಂದ ಯುವ ಸಂಘಟನೆಯ ಒಕ್ಕೂಟ ಪ್ರಾರಂಭಗೊಳ್ಳುವ ಮೂಲಕ ನಮ್ಮ ಯುವಶಕ್ತಿ ಈ ವೇದಿಕೆಯನ್ನು ಹಂಚಿಕೊಳ್ಳುವಂತಾಗಬೇಕು.

ಅದ್ದರಿಂದ ಈ ಸಂಸ್ಥೆಯ ಸ್ಥಾನಮಾನ ಬೆಳಗುವುದರ ಜತೆಗೆ ಯುವ ಸಮುದಾಯಕ್ಕೆ ತನ್ನ ವ್ಯಕ್ತಿತ್ವ ವಿಕಸನಕ್ಕೆ ಒಂದು ಉತ್ತಮ ವೇದಿಕೆ ಕಲ್ಪಿಸಿದಂತಾಗುತ್ತದೆ. ಭಾಗವಹಿಸಿದ ಮಕ್ಕಳ ಪಾಲಕರಿಗೂ ಸಂತೋಷವಾಗುತ್ತದೆ. ಆದ್ದರಿಂದ ಮಕ್ಕಳಿಗೆ, ಮಹಿಳೆಯರಿಗೆ ಹೆಚ್ಚು ಅವಕಾಶ ಕಲ್ಪಿಸುವ ಯೋಜನೆ ಈ ಸಂಘದಿಂದ ಪ್ರಾರಂಭಗೊಳ್ಳಲಿದೆ. ದಶ ವರ್ಷವನ್ನು ಪೂರೈಸಿದ ಈ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿ ಹಾಗೂ ಪ್ರಸಕ್ತ ದಶ ವರ್ಷದಲ್ಲಿಯೂ ಅಧ್ಯಕ್ಷರಾಗಿ ಕಾರ್ಯವೆಸಗುತ್ತಿರುವ ವಾಸು ಕೆ. ಪುತ್ರನ್‌ ಅನಂತರದ ಅಧ್ಯಕ್ಷರುಗಳ ಶ್ರಮದ ಫಲ ಈ ಸಂಘವು ಯೌವ್ವನಾವಸ್ಥೆಯತ್ತ ವೇಗವಾಗಿ ಸಾಗುವ ಈ ಸಂದರ್ಭದಲ್ಲಿ ಸ್ವಂತ ಕಚೇರಿಯನ್ನು ಹೊಂದುವಲ್ಲಿ ಯಶಸ್ಸು ಸಾಧಿಸಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದ ಸಂಘದ ಗೌರವ ಕಾರ್ಯದರ್ಶಿ ಕೃಷ್ಣರಾಜ್‌ ಸುವರ್ಣ ಅವರು ಮಾತನಾಡಿ, ಕಳೆದ ಹತ್ತು ವರ್ಷಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡುವುದರ ಜತೆಗೆ ಸಂಘವು ತನ್ನ ಸ್ವಂತ ಕಚೇರಿಯನ್ನು ಸ್ಥಾಪಿಸುವ ಒಂದು ದಿಟ್ಟ ನಿರ್ಧಾರ ಈ ಸಂಘದಿಂದ ಆಗಿದೆ ಎಂದು ಹೇಳಿದರು. ಅತಿಥಿ-ಗಣ್ಯರು ದೀಪ ಹೊಟ್ಟೆಪಾಡಿಗಾಗಿ ಕರ್ಮಭೂಮಿಯಲ್ಲಿ ಸೇರಿದ ತುಳು-ಕನ್ನಡಿಗರು ತಮ್ಮ ಜಾತೀಯ ಸಂಸ್ಥೆಗಳನ್ನು ಕಟ್ಟಿಕೊಳ್ಳುವ ಮೂಲಕ ಯಶಸ್ವಿ ಸಾಧಿಸುವುದರ ಜೊತೆಗೆ ತುಳು ಕನ್ನಡ ಸಂಸ್ಥೆಗಳನ್ನು ಸ್ಥಾಪಿಸುವ ಸಾಮರ್ಥ್ಯವನ್ನು ತೋರಿಸಿದ್ದಾರೆ. ಇಂತಹ ಸಂಸ್ಥೆಗಳಿಂದ ಸ್ಥಳೀಯ ಬಡವರಿಗೆ ಮಧ್ಯಮ ವರ್ಗದ ಜನರಿಗೆ ಹಲವು ರೀತಿಯ ಸಹಾಯವಾಗುವುದರ ಜೊತೆಗೆ ಸಾಂಘಿಕವಾಗಿ ಬೆಳೆಯುವ ಮೂಲಕ ಒಬ್ಬರಿಗೊಬ್ಬರು ಅಥೆìçಸಿ ಪರಿಸರದ ಜೊತೆಗೆ ಬೆಳೆಯುವ ಅವಕಾಶ ಇಂಥ ಸಂಘ ಸಂಸ್ಥೆಗಳಿಂದ ದೊರೆಯುತ್ತದೆ. ಭವಿಷ್ಯದಲ್ಲಿ ಈ ಸಂಸ್ಥೆ ಇನ್ನಷ್ಟು ವೈವಿಧ್ಯಪೂರ್ಣ ಕಾರ್ಯಕ್ರಮವನ್ನು ಕೈಗೊಳ್ಳಲಿ.

-ಕೃಷ್ಣಾನಂದ ಶೆಟ್ಟಿಗಾರ್‌, ಉದ್ಯಮಿ, ಸಮಾಜ ಸೇವಕ ಆಂಗ್ಲ ಭಾಷೆ ಮಾಧ್ಯಮವು ತುಳು ಭಾಷೆಯನ್ನು ಹತ್ತಿಕ್ಕುತ್ತ ಸಾಗುತ್ತಿದ್ದರೂ ತುಳುವರಾದ ನಾವು ಒಗ್ಗಟ್ಟು ಸಾಧಿಸುವ ಮೂಲಕ ಇಂತಹ ವೈವಿಧ್ಯಪೂರ್ಣ ಕಾರ್ಯಕ್ರಮ ಹಾಗು ಸ್ನೇಹ ಸಮ್ಮಿಲನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಬೊರಿವಲಿ ಪರಿಸರದಲ್ಲಿ ತುಳು ಭಾಷೆ ಸಂಸ್ಕೃತಿಯನ್ನು ಗಟ್ಟಿಗೊಳಿಸುವ ಸುದೀರ್ಘ‌ ಕೆಲಸ ಈ ಸಂಸ್ಥೆಯಿಂದ ಜರಗಲಿ. ಹಳೆ ತಲೆಮಾರುಗಳಿಂದ ತುಳು ಭಾಷೆಯನ್ನು ಉಳಿಸಲು ಸಾಧ್ಯವಿಲ್ಲ. ತುಳು ಭಾಷೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕಾದರೆ ಯುವ ಜನಾಂಗ ಮುಂದೆ ಬರಬೇಕು. -ಕಾರ್ನಾಡ್‌ ನಾರಾಯಣ ಸುವರ್ಣ, ಅಧ್ಯಕ್ಷರು, ಬ್ರಿಕ್ವರ್ಕ್‌ ರೇಟಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಪ್ರಜ್ವಲಿಸಿ ದಶಮಾನೋತ್ಸವಕ್ಕೆ ಚಾಲನೆ ನೀಡಿದರು.

ಅತಿಥಿ ಗಣ್ಯರನ್ನು ಸಂಘದ ಪದಾಧಿಕಾರಿಗಳು ಶಾಲು ಹೊದೆಸಿ, ಫಲಪುಷ್ಪ, ನೆನಪಿನ ಕಾಣಿಕೆಯನ್ನಿತ್ತು ಸಮ್ಮಾನಿಸಿದರು. ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ವಾಸು ಕೆ ಪುತ್ರನ್‌, ಉಪಾಧ್ಯಕ್ಷರಾದ ಕರುಣಾಕರ ಶೆಟ್ಟಿ, ಜತೆ ಕಾರ್ಯದರ್ಶಿ ದಿವಾಕರ ಕರ್ಕೇರ, ಜತೆ ಕೋಶಾಧಿಕಾರಿ ಟಿವಿ ಪೂಜಾರಿ, ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ಪ್ರಕಾಶ್‌ ಎ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸವಿತಾ ಸಿ. ಶೆಟ್ಟಿ, ಕಾರ್ಯದರ್ಶಿ ತಿಲೋತ್ತಮಾ ವೈದ್ಯ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರ ಫೌಂಡೇಷನ್‌ ಇವರಿಂದ ವೈವಿಧ್ಯಪೂರ್ಣ ತುಳು-ಕನ್ನಡ ಮತ್ತು ಹಿಂದಿ ಗೋಲ್ಡನ್‌ ಮೆಮೋರಿಸ್‌ ಸಂಗೀತ ರಸಮಂಜರಿ ಹಾಗೂ ಇನ್ನಿತರ ವಿವಿಧ ವಿನೋದಾವಳಿಗಳು ನಡೆಯಿತು.

ಕಾರ್ಯಕ್ರಮದಲ್ಲಿ ಸ್ಥಳೀಯ ಸಂಸದ ಗೋಪಾಲ್‌ ಸಿ, ಶೆಟ್ಟಿ ಅವರ ಧರ್ಮ ಪತ್ನಿ ಉಷಾ ಗೋಪಾಲ ಶೆಟ್ಟಿ, ಬಂಟ್ಸ್‌ ಸಂಘ ಮುಂಬಯಿ ಇದರ ನೂತನ ಶಿಕ್ಷಣ ಯೋಜನೆಯ ಕಾರ್ಯಾಧ್ಯಕ್ಷ ಮುಂಡಪ್ಪ ಎಸ್‌. ಪಯ್ಯಡೆ, ವಿಜಯ ಭಂಡಾರಿ, ದಹಿಸರ್‌ ಕರ್ನಾಟಕ ಸಂಘದ ಅಧ್ಯಕ್ಷ ಎಂ. ಜಿ. ಶೆಟ್ಟಿ, ಮಹಾರಾಷ್ಟ್ರ ಮಾನವ ಸೇವಾ ಸಂಘದ ಅಧ್ಯಕ್ಷ ಡಾ| ಹರೀಶ್‌ ಶೆಟ್ಟಿ, ಡಾ| ಸತೀಶ್‌ ಶೆಟ್ಟಿ, ಹಿರಿಯ ಲೇಖಕ ಬಾಬು ಶಿವ ಪೂಜಾರಿ, ಸುಧಾಕರ ಪೂಜಾರಿ, ವಿವಿಧ ಕ್ಷೇತ್ರಗಳ ಗಣ್ಯರು, ಹಿರಿಯ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಕೋರಿದರು.

ದಶಮಾನೋತ್ಸವ ಕಾರ್ಯ ಕ್ರಮದಲ್ಲಿ ಅಸಂಖ್ಯಾತ ತುಳು- ಕನ್ನಡಿಗರು ಉಪಸ್ಥಿತರಿದ್ದು ಮನೋ ರಂಜನ ಕಾರ್ಯಕ್ರಮದ ವಿಶೇಷ ಗಾನಲಹರಿ ಸವಿಯನ್ನು ಆನಂದಿ ಸಿದರು. ವಿವಿಧ ತುಳು-ಕನ್ನಡ-ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಕಲಾಭಿ ಮಾನಿಗಳು, ರಂಗನಟರು ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದರು. ಗೌರವ ಕೋಶಾಧಿಕಾರಿ ಹರೀಶ್‌ ಮೈಂದನ್‌ ವಂದಿಸಿದರು. ಗೌರವ ಕಾರ್ಯದರ್ಶಿ ಕೃಷ್ಣರಾಜ್‌ ಸುವರ್ಣ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು.

 ಚಿತ್ರ-ವರದಿ: ರಮೇಶ್‌ ಉದ್ಯಾವರ

ಟಾಪ್ ನ್ಯೂಸ್

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್‌ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ

ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್‌ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.