ಚಿನ್ನ-ವಜ್ರಾಭರಣಗಳ ಖರೀದಿಯಲ್ಲಿ ವಿಶೇಷ ಕೊಡುಗೆಗಳು

ಇಪ್ಪತ್ತರ ಸಂಭ್ರಮದಲ್ಲಿ "ಟಿಡಿಎಫ್‌- ದಿ ಡೈಮಂಡ್‌ ಫ್ಯಾಕ್ಟರಿ'

Team Udayavani, Jun 7, 2019, 2:41 PM IST

0606MUM01

ಮುಂಬಯಿ: ಚಿನ್ನ-ವಜ್ರಾಭರಣಗಳ ಉತ್ಪಾದನೆ ಮತ್ತು ವೈವಿಧ್ಯಮಯ ಶೈಲಿಗೆ ಹೆಸರಾಗಿರುವ ನಗರದ ಪ್ರಸಿದ್ಧ “ಟಿಡಿಎಫ್‌- ದಿ ಡೈಮಂಡ್‌ ಫ್ಯಾಕ್ಟರಿ’ ಇಪ್ಪತ್ತನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದು, ಜೂ. 6ರಿಂದ ಜೂ. 16ರ ವರೆಗೆ ಗ್ರಾಹಕರಿಗೆ ಹಲವಾರು ಭರ್ಜರಿ ಕೊಡುಗೆಗಳನ್ನು ಘೋಷಿಸಿದೆ.

ಚಿನ್ನ-ವಜ್ರಾಭರಣಗಳ ಉತ್ಪಾದನೆ ಮತ್ತು ವೈವಿಧ್ಯಮಯ ಶೈಲಿಗೆ ಹೆಸರಾಗಿರುವ ನಗರದ ಪ್ರಸಿದ್ಧ “ಟಿಡಿಎಫ್‌- ದಿ ಡೈಮಂಡ್‌ ಫ್ಯಾಕ್ಟರಿ’ ಹಬ್ಬಹರಿದಿನಗಳ ಶುಭ ಸಂದರ್ಭದಲ್ಲಿ ಮಹಿಳೆಯರಿಗಾಗಿ ಹೊಸತನದ ಆಭರಣಗಳನ್ನು ಸಂಸ್ಥೆಯ ಬಾಂದ್ರಾ, ಅಂಧೇರಿ ಮತ್ತು ವಾಶಿಯಲ್ಲಿರುವ ಸಂಸ್ಥೆಯ ಮಳಿಗೆಗಳಲ್ಲಿ ಪ್ರದರ್ಶನ ಮತ್ತು ಮಾರಾಟದ ಮೂಲಕ ಎಲ್ಲರ ಮನೆಮಾತಾಗಿ 20ನೇ ವರ್ಷದ ಸಂಭ್ರಮದಲ್ಲಿದೆ.
ಸಂಸ್ಥೆಯ ವಾರ್ಷಿಕ ಸಂಭ್ರಮದ ಅಂಗವಾಗಿ ವಿಶೇಷವಾಗಿ ಚಿನ್ನಾಭರಣ ಮತ್ತು ವಜ್ರಾಭರಣಗಳಲ್ಲಿ ಶೇ. 100ರಷ್ಟು ಮೇಕಿಂಗ್‌ ಚಾರ್ಜ್‌ ಉಚಿತವಾಗಿರಲಿದೆ. ಅಲ್ಲದೆ ಅನ್‌ಕಟ್‌, ಜಡಾವ್‌ ಚಿನ್ನಾಭರಣಗಳ ಖರೀದಿಯಲ್ಲಿ ಶೇ. 20ರಷ್ಟು ಕಡಿತಗೊಳಿಸಲಾಗಿದೆ. ಅಲ್ಲದೆ ಒಂದು ತಿಂಗಳವರೆಗೆ ಟಿಡಿಎಫ್‌ ಗ್ರಾಹಕರಿಗೆ ಮಾತ್ರ ಚಿನ್ನ-ವಜ್ರಾಭರಣಗಳ ಕ್ಲಿನಿಂಗ್‌, ಪೊಲಿಶಿಂಗ್‌, ಚೆಕ್ಕಿಂಗ್‌, ಸೆಟ್ಟಿಂಗ್‌, ರಿಪೇರಿಂಗ್‌ನ್ನು ಉಚಿತಗೊಳಿಸಲಾಗಿದೆ. ಇನ್ನೊಂದು ವಿಶೇಷತೆ ಎಂದರೆ ಗ್ರಾಹಕರು ತಮ್ಮ ಹಳೆಯ ಚಿನ್ನಾಭರಣಗಳನ್ನು ನೀಡಿ ಹೊಸ ಚಿನ್ನಾಭರಣಗಳನ್ನು ಖರೀದಿಸುವ ಅನುಕೂಲತೆಯನ್ನು ಮಾಡಿಕೊಡಲಾಗಿದ್ದು, ಹಳೆಯ ಚಿನ್ನಗಳಿಗೆ ಉತ್ತಮ ಮೌಲ್ಯವನ್ನು ನೀಡಲಾಗುವುದು.
ಹಬ್ಬ ಹರಿದಿನ, ಸಭೆ- ಸಮಾರಂಭಗಳು, ಮದುವೆ ಇನ್ನಿತರ ಕೌಟುಂಬಿಕ ಸಮಾರಂಭಗಳಿಗೆ ಪ್ರತಿಯೋರ್ವ ಮಹಿಳೆಯರು ತಮಗೊಪ್ಪುವ ಅತೀ ಸುಂದರವಾದ ಚಿನ್ನಾಭರಣಗಳನ್ನು ಕೊಂಡು ಕೊಳ್ಳುವ ವಿಶೇಷ ಸಮಯನ್ನು ಒದಗಿಸಲಾಗಿದ್ದು, ಗ್ರಾಹಕರು ಟಿಡಿಎಫ್‌ ಚಿಲ್ಲರೆ ಮಳಿಗೆಗಳಾದ ಟರ್ನರ್‌ರೋಡ್‌ ಬಾಂದ್ರಾ (9820558484), ಲೋಖಂಡ್‌ವಾಲ ಅಂಧೇರಿ (824050086), ಸತ್ರಾಪ್ಲಾಜಾ ವಾಶಿ (9920764212), ಪಳ್ನೀರ್‌ ಮಂಗಳೂರು (9972548543) ಇಲ್ಲಿಗೆ ಭೇಟಿ ನೀಡಬಹುದು.

ದೈನಂದಿನ ತೊಡುಗೆಯ ಆಭರಣಗಳ ಜೊತೆಗೆ ಮದು ಮಗಳಿಗೆ ಒಪ್ಪುವ ಡಿಸೈನ್‌ ಚಿನ್ನ-ವಜ್ರಾಭರಣಗಳು ಇಲ್ಲಿ ಲಭ್ಯವಿದ್ದು, ಗ್ರಾಹಕರ ನಂಬಿಕೆಗೆ ಪಾತ್ರವಾಗಿರುವ ಟಿಡಿಎಫ್‌ ಮಳಿಗೆಗೆಳಲ್ಲಿ ಉತ್ತಮ ಗುಣಮಟ್ಟ ಹೊಂದಿರುವ ಸೌತ್‌ ಇಂಡಿಯನ್‌ ಅದರಲ್ಲೂ ಮುಖ್ಯವಾಗಿ ಕರಾವಳಿ ಮಂಗಳೂರು ಶೈಲಿಯ ಆಭರಣಗಳು ಗ್ರಾಹಕರನ್ನು ಆಕರ್ಷಿಸುತ್ತಿದೆ. ಅತ್ಯಾಕರ್ಷಕ ಶೈಲಿ ಮತ್ತು ಉತ್ತಮ ಗುಣಮಟ್ಟದೊಂದಿಗೆ ಗ್ರಾಹಕರ ವಿಶ್ವಾಸಗಿಟ್ಟಿಸಿಕೊಂಡಿರುವ ಟಿಡಿಎಫ್‌ ಕಳೆದ 20 ವರ್ಷಗಳಲ್ಲಿ ಲಕ್ಷಾಂತರ ಗ್ರಾಹಕರನ್ನು ಆಕರ್ಷಿಸುವಲ್ಲಿ ಈಗಾಗಲೇ ಯಶಸ್ವಿಯಾಗಿದೆ.

ಟಿಡಿಎಫ್‌ನ ಬ್ರೈಡ್‌ ಪ್ರೈಡ್‌ ಕಲೆಕ್ಷನ್‌ ವಿಶೇಷವಾಗಿ ಮದುಮಗ ಳಿಗಾಗಿಯೇ ತಯಾರಿಸಲಾದ ಆಭರ ಣವಾಗಿದೆ. ರೋಜಾನಾ ಕಲೆಕ್ಷನ್‌ ಸಾಂಪ್ರದಾಯಿಕ ಸೊಬಗನ್ನು ಹೆಚ್ಚಿಸು ವಲ್ಲಿ ಯಶಸ್ವಿಯಾಗುತ್ತಿದೆ. ಜತೆಗೆ ಆಕರ್ಷಕ ಹಾಗೂ ವೈವಿಧ್ಯಮಯ ಮಂಗಲ ಸೂತ್ರ, ಪೆಂಡೆಂಟ್‌, ವಿ ರಿಂಗ್‌, ಬ್ರಾಸ್‌ಲೇಟ್‌, ಕಿವಿಯೋಲೆ, ನೆಕ್‌ಲೆಸ್‌, ಪಟ್ಟಿಗಳು, ಮುಂಡಲೆ, ಬಳೆಗಳು ಹೀಗೆ ವಿವಿಧ ಬಗೆಯ ಆಭರಣಗಳು ಜ್ಯೋತಿಶಾಸ್ತ್ರದ ಪ್ರಕಾರ ತಯಾರಿಸಲಾದ ವಜ್ರದ ಕಲ್ಲುಗಳು ಮೊದಲಾದವುಗಳು ಇಲ್ಲಿ ಲಭ್ಯವಿದೆ.

ವಿಶೇಷ ಆಕರ್ಷಣೆಯಾಗಿ ಟೆಂಪಲ್‌ ಜ್ಯುವೆಲ್ಲರಿ ಮತ್ತು ಅನ್‌ಕಟ್‌ ಜಡಾವು ಪೊಲ್ಕಿ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಪ್ರದರ್ಶನ ಮತ್ತು ಮಾರಾಟದಲ್ಲಿ ಇಡಲಾಗಿದೆ. ಟೆಂಪಲ್‌ ಜ್ಯುವೆಲ್ಲರಿಯನ್ನು ಪರಿಚ ಯಿಸಿದ ಟಿಡಿಎಫ್‌ ಸಂಸ್ಥೆಯು ಅತ್ಯಾಕರ್ಷಕ ಜುವೆಲ್ಲರಿ ಸಂಗ್ರಹದಿಂದ ಪ್ರಸಿದ್ಧಿಯನ್ನು ಪಡೆದಿದೆ. ಈ ವಿಭಾಗದಲ್ಲಿ ಮಹಿಳೆಯರ ಮೈ ನವಿರೇಳಿಸುವ ಜುಮ್ಕಿ, ಸ್ಟೇಟ್‌ಮೆಂಟ್‌ ನೆಕ್ಲೆಸ್‌, ಬಳೆಗಳು, ವಿಶೇಷವಾಗಿ ನಾಕ್ಷಿ ವರ್ಕ್‌ನಿಂದ ಕಂಗೊಳಿಸುತ್ತಿದೆ. ಅನ್‌ಕಟ್‌ ಜಡಾವು ಪೊಲ್ಕಿ ವಿಭಾಗದಲ್ಲಿ ಚಾಂದ್‌ಬಲೀಸ್‌, ರಾಣಿ ಹಾರಗಳು, ಕಢಾಗಳು, ಕೊಕ್‌ಟೈಲ್ಸ್‌ ರಿಂಗ್‌ಗಳು ಆಕರ್ಷಣೀಯವಾಗಿದೆ.

ಚಿನ್ನ ವಜ್ರಾಭರಣಗಳಿಗೆ ಹೆಸರಾದ ಟಿಡಿಎಫ್‌ ಸಂಸ್ಥೆಯು ಈಗಾಗಲೇ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಕಳೆದ 20 ವರ್ಷಗಳಿಂದ ಅತ್ಯುತ್ತಮ ರೀತಿಯಲ್ಲಿ ಗ್ರಾಹಕ ಸ್ನೇಹಿ ಸಂಸ್ಥೆಯಾಗಿ ಮುನ್ನಡೆಯುತ್ತಿದೆ. ಮಹಿಳೆಯರಿಗೆ ಒಪ್ಪುವ ಹಾಗೂ ಅವರ ಅಭಿರುಚಿಗೆ ತಕ್ಕಂತೆ ಚಿನ್ನವಜ್ರಾಭರಣಗಳು ಸಂಸ್ಥೆಯ ಸಂಗ್ರಹದಲ್ಲಿದೆ. ಸಂಸ್ಥೆಯು ಸ್ವಂತ ಉತ್ಪಾದನೆಯನ್ನು ಮುಂಬಯಿಯಲ್ಲಿ ಮಾಡುತ್ತಿರುವುದು ವಿಶೇಷತೆಯಾಗಿದೆ. ಇಲ್ಲಿನ ಎಲ್ಲಾ ಉತ್ಪಾದನೆಗಳು ಉತ್ತಮ ಗುಣಮಟ್ಟವನ್ನು ಹೊಂದಿದ್ದು, ಹಾಲ್‌ಮಾರ್ಕ್‌ ಪ್ರಮಾಣ ಪತ್ರವನ್ನು ಹೊಂದಿದೆ. ಪ್ರಸ್ತುತ ಸಂಸ್ಥೆಯು 20 ನೇ ವರ್ಷದ ಸಂಭ್ರಮದಲ್ಲಿದ್ದು, ಅದಕ್ಕಾಗಿ ಗ್ರಾಹಕರಿಗೆ ಹಲವಾರು ಕೊಡುಗೆಗಳನ್ನು ಘೋಷಿಸಲಾಗಿದೆ. ಇದರ ಸದುಪಯೋಗವನ್ನು ಎಲ್ಲಾ ಗ್ರಾಹಕರು ಪಡೆದುಕೊಳ್ಳಬೇಕು ಎಂದು ಟಿಡಿಎಫ್‌ನ ಆಡಳಿತ ನಿರ್ದೇಶಕರು ಮತ್ತು ಸಂಸ್ಥಾಪಕರಾದ ಗೌತಮ್‌ ಸಿಂಘಿÌ ಮತ್ತು ಪಸನ್ನ ಶೆಟ್ಟಿ ಅವರು ತಿಳಿಸಿದ್ದಾರೆ.

ಟಾಪ್ ನ್ಯೂಸ್

Parliament winter session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Parliament Winter Session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

3

Arrested: ಉಸಿರುಗಟ್ಟಿಸಿ ಪತ್ನಿಯ ಕೊಂದು ಮಗುವಿನ ಜೊತೆಗೆ ಪತಿ ಪರಾರಿ

2

Kadalekai Parishe: ಇಂದಿನಿಂದ ಬಸವನಗುಡಿ ಕಡಲೆಕಾಯಿ ಪರಿಷೆ

Parliament winter session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Parliament Winter Session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.