ವಿಶ್ವವಿದ್ಯಾನಿಲಯದ ಗೌರವ ಎಲ್ಲ ಗೌರವಗಳಿಗಿಂತ ಶ್ರೇಷ್ಠ: ಕುಸುಮೋದರ ಡಿ. ಶೆಟ್ಟಿ
ಕನ್ನಡ ವಿಭಾಗ ಮುಂಬಯಿ ವಿವಿಯಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ಡಿ. ಶೆಟ್ಟಿ ಅವರಿಗೆ ಅಭಿನಂದನೆ
Team Udayavani, Sep 17, 2021, 2:25 PM IST
ಮುಂಬಯಿ: ಸಂಸ್ಕಾರ- ಸಂಸ್ಕೃತಿಯಿಂದಲೇ ಜೀವನದ ಯಶಸ್ಸು ಸಾಧ್ಯ. ಹಣ ಒಂದರಿಂದಲೇ ಏನೂ ಸಾಧಿಸಲಾಗದು. ಸಾಧನೆಗೆ ಹೃದಯ ಶ್ರೀಮಂತಿಕೆಯೇ ಮುಖ್ಯ ವಾಗಿದೆ. ಎಲ್ಲ ಸಾಧನೆಗೆ ಹೃದ ಯವಂತಿಕೆ ದೊಡ್ಡದಾಗಿರಬೇಕು. ಕಾಯಕವೇ ಕೈಲಾಸ ಎಂದು ತಿಳಿದು ಬಾಳಿದ ನನಗೆ ತವರೂರ ಕರ್ನಾಟಕ ಸರಕಾರ ಗುರುತಿಸಿ ಗೌರವಿಸಿದೆ. ಇದಕ್ಕೆಲ್ಲ ಪೂರಕವೆಂಬಂತೆ ವಿಶ್ವವಿ ದ್ಯಾನಿಲಯದ ಇಂದಿನ ಗೌರವ ನನಗೆ ಸಿಕ್ಕ ಎಲ್ಲ ಗೌರವಗಳಿಗಿಂತ ಶ್ರೇಷ್ಠವಾಗಿದೆ ಎಂದು ಭಾವಿಸಿದ್ದೇನೆ ಎಂದು ಭವಾನಿ ಫೌಂಡೇಶನ್ ಮುಂಬಯಿ ಸಂಸ್ಥಾಪಕ ಅಧ್ಯಕ ಕುಸುಮೋದರ ಡಿ. ಶೆಟ್ಟಿ ತಿಳಿಸಿದರು.
ಸೆ. 16ರಂದು ಸಾಂತಾಕ್ರೂಜ್ ಪೂರ್ವದ ವಿದ್ಯಾನಗರಿಯ ರಾನಡೆ ಭವನದಲ್ಲಿ ಕನ್ನಡ ವಿಭಾಗ ಮುಂಬಯಿ ವಿವಿ ಆಯೋಜಿಸಿದ್ದ ಸಾಧಕರಿಗೆ ಗೌರವ-ಅಭಿನಂದನೆ ಸಮಾರಂಭದಲ್ಲಿ ಕನ್ನಡ ವಿಭಾಗದ ಗೌರವ ಸ್ವೀಕರಿಸಿ ಮಾತನಾಡಿದ ಅವರು, ನಾನೂ ಬಂಟರ ಸಂಘದ ಸಹಕಾರದಿಂದ ಶಿಕ್ಷಣ ಪಡೆದವನು. ಬಂಟರ ಸಂಘದ ಕರ್ನಾಟಕ ಫ್ರೀ ನೈಟ್ ಹೈಸ್ಕೂಲ್ ಮತ್ತು ಶ್ರೀ ನಿತ್ಯಾನಂದ ಕನ್ನಡ ಫ್ರೀ ನೈಟ್ ಹೈಸ್ಕೂಲ್‌ನಲ್ಲಿ ಓದಿ ಈ ಮಟ್ಟಕ್ಕೆ ಬೆಳೆದಿದ್ದೇನೆ. ಕಲಿಕೆಗೆ ವಯಸ್ಸು ಅಡ್ಡಿಯಾಗುವುದಿಲ್ಲ. ನಮಗೆ ಆವಶ್ಯಕತೆಗಿಂತ ಕಲಿಯುವ ಉತ್ಸಾಹವೇ ಪ್ರಧಾನವಾಗಿದೆ. ಪ್ರಸ್ತುತ ಹಣ ಗಳಿಕೆಗಿಂತ ಜನರ ಪ್ರೀತಿಯನ್ನೇ ಮುಖ್ಯವಾಗಿಸಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಕೋಟ್ಯಂತರ ಕನ್ನಡಿಗರ ಮಧ್ಯೆ ನನಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ನನ್ನ ಭಾಗ್ಯವೇ ಸರಿ. ವಿಶ್ವವಿದ್ಯಾನಿಲಯದ ಈ ಆಹ್ವಾನದಿಂದ ಮತ್ತಷ್ಟು ಧನ್ಯನಾಗಿದ್ದೇನೆ ಎಂದು ತಿಳಿಸಿ ಕೃತಜ್ಞತೆ ಸಲ್ಲಿಸಿದರು.
ಮುಖ್ಯ ಅತಿಥಿಯಾಗಿದ್ದ ಶಿವಾಸ್ ಹೇರ್ ಡಿಝೈನರ್ ಪ್ರೈ. ಲಿ.ನ ಶಿವರಾಮ ಭಂಡಾರಿ ಮಾತನಾಡಿ, ಮೂರೂವರೆ ವರ್ಷದಲ್ಲೇ ತಂದೆಯನ್ನು ಕಳೆದುಕೊಂಡಿದ್ದು, ನನ್ನ ಸರ್ವಸ್ವವೇ ಮಾತೃಶ್ರೀ. ನಾನು ಕನ್ನಡ ಮಾಧ್ಯಮದಲ್ಲಿ ನಾಲ್ಕನೇ ತರಗತಿವರೆಗೆ ಮಾತ್ರ ಓದಿದವನು. ಆದರೆ ಅವಿರತ ಶ್ರಮ, ಸೇವಾ ನಿಷ್ಠೆ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ. ನನ್ನ ಬಾಲ್ಯವನ್ನು ತುಂಬಾ ಕಷ್ಟದಿಂದ ಕಳೆದಿದ್ದೇನೆ ಎಂದರು.
ಇದನ್ನೂ ಓದಿ:‘ಪುಕ್ಸಟ್ಟೆ ಲೈಫು’ ಇನ್‌ಸೈಡ್ ಸ್ಟೋರಿ: ಸಂಚಾರಿ ವಿಜಯ್ ಚಿತ್ರಕ್ಕೆ ಕಿಚ್ಚನ ಮೆಚ್ಚುಗೆ
ಮತ್ತೋರ್ವ ಮುಖ್ಯ ಅತಿಥಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಮಾತನಾಡಿ, ಮುಂಬಯಿಯಲ್ಲಿ ಕನ್ನಡದ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿದ್ದು, ಇದು ಜಗತ್ತಿಗೇ ತಿಳಿದ ವಿಚಾರ. ಇದಕ್ಕೆಲ್ಲ ಮೂಲ ಕಾರಣ ಕನ್ನಡಿಗರ ನಿಕಟವಾದ ಭಾಷಾ ಬಾಂಧವ್ಯ. ಮುಂಬಯಿ ಕನ್ನಡಿಗರು ಸದಾ ಸಾಮರಸ್ಯಕ್ಕೆ ಹೆಸರಾದವರು. ಹೊಂದಿಕೊಂಡು ಬಾಳುವ ಸದ್ಗುಣವೂ ನಮ್ಮಲ್ಲಿನ ದೊಡ್ಡತನ ಎಂದು ತಿಳಿಸಿ ಶುಭ ಹಾರೈಸಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ. ಎನ್. ಉಪಾಧ್ಯ ಅವರ ಅಧ್ಯಕ್ಷತೆ ಯಲ್ಲಿ ಜರಗಿದ ಸರಳ ಸಮಾರಂಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ಡಿ. ಶೆಟ್ಟಿ ಅವರನ್ನು ಶಾಲು ಹೊದೆಸಿ, ಸ್ವರ್ಣ ಪದಕ ಹಾಗೂ ಗ್ರಂಥ ಗೌರವವನ್ನಿತ್ತು ಅಭಿನಂದಿಸಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಮುಂಬಯಿ ವಿವಿ ಕನ್ನಡ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಗೌರವಿಸಲಾಯಿತು.
ಕಲಾ ಭಾಗÌತ್ ಸ್ವಾಗತ ಗೀತೆ ಹಾಡಿದರು. ಶಶಿಕಲಾ ಹೆಗ್ಡೆ, ರುದ್ರಮೂರ್ತಿ ಪ್ರಭು, ಶಾಲಿನಿ ಡಿ. ಕೆ., ಲಕ್ಷ್ಮೀ ಪೂಜಾರಿ, ಸುಧಾ ಶೆಟ್ಟಿ, ಕರ್ನೂರು ಮೋಹನ್ ರೈ, ರೇಶ್ಮಾ ಮಾನೆ, ಸುರೇಖಾ ಎಚ್. ದೇವಾಡಿಗ, ಜಯ ಸಿ. ಸಾಲ್ಯಾನ್, ಶ್ರೀನಿವಾಸ್ ಪದಕಿ, ಸತೀಶ್ ಎನ್. ಬಂಗೇರ, ದುರ್ಗಪ್ಪ ಕೋಟಿಯವರ್, ಮಧುಸೂದನ್ ರಾವ್ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಸಹಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಶಿಕಲಾ ಹೆಗಡೆ ವಂದಿಸಿದರು.
ಸಾಧಿಸಿ ತೋರಿಸಿದವರು
ಕುಸುಮೋದರ ಶೆಟ್ಟಿ ಅವರು ಮುಂಬಯಿ ಕನ್ನಡಿಗರು ಹೆಮ್ಮೆಪಡುವಂತಹ, ನಿತ್ಯ ಸ್ಮರಿಸುವಂತಹ ಸಾಧನೆ ಮಾಡಿದವರು. ಕಷ್ಟದಿಂದ ಬದುಕು ಕಟ್ಟಿಕೊಂಡವರು. ಸಾಧಿಸಿದರೆ ಸಬಳ ನುಂಗಬಹುದು ಎನ್ನುವುದಕ್ಕೆ ನಿದರ್ಶನವಾಗಿ ಇವತ್ತು ನಮ್ಮೊಂದಿಗೆ ಕುಸುಮೋದರ ಶೆಟ್ಟಿ ಮತ್ತು ಶಿವರಾಮ ಭಂಡಾರಿ ಅವರಿದ್ದಾರೆ. ಇವರು ಅಸಾಧ್ಯವಾದುದನ್ನು ಸಾಧಿಸಿ ತೋರಿಸಿದವರು.
–ಡಾ| ಜಿ. ಎನ್. ಉಪಾಧ್ಯ, ಮುಖ್ಯಸ್ಥರು,
ಕನ್ನಡ ವಿಭಾಗ ಮುಂಬಯಿ ವಿವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.