ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ :ಏಳು ಕೃತಿಗಳ ಬಿಡುಗಡೆ
Team Udayavani, Apr 4, 2017, 4:55 PM IST
ಮುಂಬಯಿ: ಕೃತಿಗಳು ಯಾವತ್ತಿಗೂ ಸ್ವತಂತ್ರವಾಗಿರುತ್ತದೆ. ಕೃತಿ ಬಿಡುಗಡೆ ಅಂದರೆ ಸಂಕಲನದ ಅನಾವರಣವಲ್ಲ, ಬದಲಾಗಿ ಕೃತಿಯನ್ನು ಓದುಗರಿಗೆ ಒದಗಿಸುವ ಪದ್ಧತಿಯಾಗಿದೆ ಎಂದು ನಗರದ ಕಲಾವಿದ, ಕವಿ ನಟೇಶ್ ಪೊಲೆಪಲ್ಲಿ ಅಹೋರಾತ್ರ ಅವರು ನುಡಿದರು.
ಎ. 1 ರಂದು ಸಾಂತಾಕ್ರೂಜ್ ಪೂರ್ವದ ಕಲಿನಾ ಕ್ಯಾಂಪಸ್‌ನ ಜೆಪಿ ನಾಯಕ್ ಭವನದಲ್ಲಿ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಆಯೋಜಿಸಿದ್ದ ಏಳು ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಕೃತಿಕಾರರು ಮತ್ತು ಕೃತಿ ಓದುಗರೆಲ್ಲರೂ ಅಭಿನಂದನೆಗೆ ಅರ್ಹರು.
ನೇಸರು ಮಾಸಿಕದ ಸಂಪಾದಕಿ ಡಾ| ಜ್ಯೋತಿ ಸತೀಶ್, ಬಿ. ಎಸ್. ಕುರ್ಕಾಲ್, ದೇವುದಾಸ್ ಶೆಟ್ಟಿ, ವಿದೂಷಿ ಶ್ಯಾಮಲಾ ಪ್ರಕಾಶ್, ಡಾ| ಜೀವಿ ಕುಲಕರ್ಣಿ, ಡಾ| ವಿಶ್ವನಾಥ ಕಾರ್ನಾಡ್, ಹಿರಿಯ ಸಂಶೋಧಕಿ ಡಾ| ಲೀಲಾ ಬಿ. ಅವರು ಕ್ರಮವಾಗಿ ಕೃತಿಗಳನ್ನು ಪರಿಚಯಿಸಿ ಅಭಿನಂದಿಸಿದರು.
ತನ್ನ ಸ್ವಂತ ಕೃತಿಯ ಕುರಿತು ಮಾತನಾಡಿದ ಅಂತಾರಾಷ್ಟ್ರೀಯ ಚಿತ್ರ ಕಲಾವಿದ ದೇವುದಾಸ್ ಶೆಟ್ಟಿ ಅವರು, ಬದುಕನ್ನೇ ಅವಚಿಕೊಂಡು ಕ್ಯಾನ್ವಸ್ ಮೂಲಕ ಕಲಾತ್ಮಕ ಜೀವನವನ್ನು ರೂಪಿಸಿಕೊಂಡಾವ ನಾನು. ನನ್ನ ಚಿತ್ರಗಳೇ ನನ್ನ ಸಾಹಿತ್ಯ. ಕಲೆಯೇ ನನ್ನ ಶ್ರೀಮಂತಿಕೆ. ಕಲೆ ನನ್ನ ಜೀವನದ ಪರಿವರ್ತನೆಗೆ ಪೂರಕವಾಗಿದೆ ಎಂದರು.
ಹಿರಿಯ ಸಾಹಿತಿ, ಕವಿ ಬಿ. ಎಸ್. ಕುರ್ಕಾಲ್ ಮಾತನಾಡಿ, ಅರವಿಂದ ಹೆಬ್ಟಾರ್ ಅವರೋರ್ವ ಓರ್ವ ಸರಳ ಸಚ್ಚನಿಕೆಯ ಮಿತಭಾಷಿ ವ್ಯಕ್ತಿತ್ವವುಳ್ಳವರು. ಕನ್ನಡದ ಮೇಲಿನ ಅವರ ಅಪಾರವಾದ ಒಲವು ಅವರ ಕೃತಿಯ ಮೂಲಕ ತಿಳಿಯಬಹುದು. ಇಂತಹ ಮೇಧಾವಿಗಳು ಆಧುನಿಕ ಬರವಣಿಗೆಯ ಜನತೆಗೆ ಆದರ್ಶನಿಯರು ಎಂದರು.
ಆತ್ಮಶ್ರದ್ಧೆಯಿಂದ ಮಾತ್ರ ಎಲ್ಲವೂ ಸಾಧ್ಯವಾಗುವುದು. ನನ್ನ ಬರವಣಿಗೆಗೂ ಇದೇ ಕಾರಣವಾಗಿದೆ. ಸಾಹಿತ್ಯ ಕ್ಷೇತ್ರಕ್ಕೆ ನನ್ನದು ಪವಾಡವೇ ಸರಿ ಎಂದು ಸಾಹಿತಿ ಅರವಿಂದ ಹೆಬ್ಟಾರ್ ನುಡಿದರು.
ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟÅ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಮಾತನಾಡಿ, ಗಾದೆಗಳು ಜಾನಪದವುಳ್ಳವುಗಳು. ಮಾನವ ಜೀವನಕ್ಕೆ ಅರ್ಥ ಕಲ್ಪಿಸುವ ಚಿಂತನೆಗಳು ಇದರಲ್ಲಿದೆ. ಗಾದೆಗಳು ವೇದಕ್ಕೆ ಸಮಾನವಾಗಿದ್ದು, ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎನ್ನುವ ಮಾತಿದೆ. ಇಂತಹ ಅರ್ಥಗರ್ಭಿತ ಗಾದೆಗಳ ಬಗ್ಗೆ ಅಧ್ಯಾಯನ ಸಂಕಲನ ರಚಿಸಿದ ಶಿವರಾಜ್ ಎಂ. ಜಿ. ಅವರ ಸಂಕಲನ ಜನಪರವಾಗಲಿ ಎಂದರು.
ಕೃತಿಗಳು ಸಾಹಿತ್ಯ ಲೋಕವನ್ನು ಬಲಾಡ್ಯ ಪಡಿಸಬಲ್ಲವು. ಸಾಹಿತ್ಯದಿಂದ ಸಮಾಜದ ತಿಳುವಳಿಕೆ ಸಾಧ್ಯ ಎಂದು ಹಿರಿಯ ರಂಗಕರ್ಮಿ ಸುಬ್ರಾಯ ಭಟ್ ತಿಳಿಸಿದರು. ಕಾರ್ಯಕ್ರಮದಲ್ಲಿ ಸುಗಮ ಸಂಗೀತ ಕಲಾವಿದ ಗಣೇಶ್ ಎರ್ಮಾಳ್, ಜಾದೂಗಾರ ಸೂರಪ್ಪ ಕುಂದರ್, ಚಿತ್ರ ಕಲಾವಿದ ಜಯ್ ಸಿ. ಸಾಲ್ಯಾನ್, ಎಂ. ಫಿಲ್ ಪದವಿ ಪಡೆದ ಉಮಾ ರಾಮರಾವ್ ಮತ್ತು ಖಾಜಪ್ಪ ಮದಾಳೆ, ಅರವಿಂದ ಹೆಬ್ಟಾರ್ ಅವರನ್ನು ಶಾಲು ಹೊದೆಸಿ, ಸ್ವರ್ಣ ಪದಕದೊಂದಿಗೆ ಗ್ರಂಥ ಗೌರವದೊಂದಿಗೆ ಸಮ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೊಲ್ಯಾರು ರಾಜು ಶೆಟ್ಟಿ, ರವಿ ರಾ ಅಂಚನ್, ಡಾ| ವಾಣಿ ಎನ್. ಉಚ್ಚಿಲ್ಕರ್, ದಯಾಮಣಿ ಎಸ್. ಶೆಟ್ಟಿ ಎಕ್ಕಾರು, ಅಶೋಕ್ ಎಸ್. ಸುವರ್ಣ, ಎಸ್. ಕೆ. ಸುಂದರ್, ಲತಾ ಸಂತೋಷ್ ಶೆಟ್ಟಿ, ರತ್ನಾಕರ್ ಆರ್. ಶೆಟ್ಟಿ, ಮೋಹನ್ ಮಾರ್ನಾಡ್, ಉಮೇಶ್ ಕುಮಾರ್ ಅಂಚನ್, ವಿಶಾಲ ಎಸ್. ಕುಂದರ್, ಸುರೇಖಾ ಎಸ್. ದೇವಾಡಿಗ, ಡಾ| ದಾûಾಯಿಣಿ ಯಡಹಳ್ಳಿ, ಸಾ. ದಯಾ, ಎಂ. ಶ್ರೀಕಾಂತ ಪ್ರಭು, ಡಾ| ಸುಮಾ ದ್ವಾರಕಾನಾಥ್, ನೀಲ ಸಿದ್ಧಲಿಂಗಪ್ಪ, ದಿನಕರ ಎನ್. ಚಂದನ್, ದುರ್ಗಪ್ಪ ಯು. ಕೋಟಿಯವರ್, ಚಂದ್ರಹಾಸ ಮೆಂಡನ್, ಎಚ್. ಪರಸಪ್ಪ, ಪದ್ಮನಾಭ ಸಸಿಹಿತ್ಲು ಮತ್ತಿತರ ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.
ಜ್ಯೋತಿ ಎನ್. ಶೆಟ್ಟಿ ಪ್ರಾರ್ಥನೆಗೈದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ. ಎನ್. ಉಪಾಧ್ಯ ಸ್ವಾಗತಿಸಿ ಪ್ರಸ್ತಾವನೆಗೈದರು. ರಮಾ ಉಡುಪ ಮತ್ತು ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿವರಾಜ್ ಎಂ. ಜಿ. ವಂದಿಸಿದರು.
ಕನ್ನಡ ವಿಭಾಗ ಮುಂಬಯಿ ಮುಖ್ಯಸ್ಥ ಡಾ| ಜಿ. ಎನ್. ಉಪಾಧ್ಯ ಅವರ 58 ನೇ “ವಿಚಾರ ಸಾಹಿತ್ಯದ ಅಗತ್ಯ, ಅರ್ಥ ಮತ್ತು ಮೌಲ್ಯ’, ಪ್ರಸಿದ್ಧ ಅನುವಾದಕ, ಸಾಹಿತಿ ಅರವಿಂದ ಹೆಬ್ಟಾರ್ ಅವರ “ಕರುಳಿನ ಕರೆ’, ಅಂತಾರಾಷ್ಟ್ರೀಯ ಚಿತ್ರ ಕಲಾವಿದ ದೇವುದಾಸ್ ಶೆಟ್ಟಿ ಅವರ “ಜೀವನದ ರೇಖೆಗಳು’, ರತ್ನಾ ಎಂ. ಎನ್. ಅವರ “ಚಾರುವಸಂತದ ಆಯಾಮ ಮತ್ತು ಅನನ್ಯತೆ’, ಶೈಲಜಾ ಹೆಗಡೆ ಅವರ “ಕಾಳಿದಾಸನ ಮೇಘದೂತ ಮತ್ತು ಕನ್ನಡ ರೂಪಾಂತರಗಳು’, ಶಿವರಾಜ್ ಎಂ. ಜಿ. ಅವರ “ಕನ್ನಡ ಗಾದೆಗಳ ಅಂತರಂಗ-ಬಹಿರಂಗ’ ಹಾಗೂ ಪ್ರಕಾಶ್ ಜಿ. ಬುರ್ಡೆ ಅವರ “ಸಂಗೀತಯಾನ, ಸಂಗೀತ ಸರಸಿ’ ಕೃತಿಗಳನ್ನು ಏಕಕಾಲಕ್ಕೆ ನಟೇಶ್ ಪೊಲೆಪಲ್ಲಿ ಅಹೋರಾತ್ರ, ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಂದರ್ಶಕ ಪ್ರಾಧ್ಯಾಪಕ ಡಾ| ವಿಶ್ವನಾಥ ಕಾರ್ನಾಡ್, ಹಿರಿಯ ಕವಿ ಬಿ. ಎಸ್. ಕುರ್ಕಾಲ್, ಹಿರಿಯ ಕವಿ, ಸಾಹಿತಿ ಡಾ| ಜೀವಿ ಕುಲಕರ್ಣಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಹೆಸರಾಂತ ಕಲಾವಿದ ಸುಬ್ರಾಯ ಭಟ್, ಡಾ| ಜಿ. ಎನ್. ಉಪಾಧ್ಯ ಅವರು ಏಕಕಾಲಕ್ಕೆ ಬಿಡುಗಡೆಗೊಳಿಸಿದರು.
ಚಿತ್ರ- ವರದಿ : ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.